ಬಾಂಗ್ಲಾದೇಶದಲ್ಲಿ ಮತಾಂಧನಿಂದ ದುರ್ಗಾದೇವಿಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಗಳ ಧ್ವಂಸ !

ಢಾಕಾ (ಬಾಂಗ್ಲಾದೇಶ) – ಬ್ರಹ್ಮಣವಾರಿಯಾ ಜಿಲ್ಲೆಯ ನಿಯಾಮತಪುರ ಗ್ರಾಮದಲ್ಲಿ ಜುಲೈ ೨೦ ರಂದು ರಾತ್ರಿ ೯.೩೦ ಕ್ಕೆ ಖಲೀಲ ಮಿಯ್ಯಾ ಎಂಬ ಮತಾಂಧನು ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ. ಈ ವಿಗ್ರಹಗಳನ್ನು ಒಡೆಯುವಾಗ ಖಲೀಲ ಮಿಯ್ಯಾ ‘ಅಲ್ಲಾ-ಹು-ಅಕ್ಬರ್’ (ಅಲ್ಲಾ ಮಹಾನ್) ಎಂಬ ಘೋಷಣೆ ಕೂಗುತ್ತಿದ್ದ. ಈ ಮಾಹಿತಿ ಸಿಕ್ಕಿದ ತಕ್ಷಣ ಹಿಂದೂಗಳು ದೇವಸ್ಥಾನದಲ್ಲಿ ಒಟ್ಟುಗೂಡಿದರು. ಈ ವೇಳೆ ಖಲೀಲನು ಓಡಿ ಹೋಗಲು ಯತ್ನಿಸುತ್ತಿರುವಾಗ ಹಿಂದೂಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

೧. ಪೊಲೀಸ್ ಅಧಿಕ್ಷಕ ಮಹಮ್ಮದ ಶೇಖಾವತ ಹುಸೇನ್ ಇವರು, ”ಖಲೀಲನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

೨. ಖಲೀಲ ತನ್ನ ಸಹೋದರಿಯನ್ನು ಭೇಟಿಯಾಗಲು ನಿಯಮತಪುರಕ್ಕೆ ಬಂದಿದ್ದ. ಈ ವೇಳೆ ಸ್ಥಳೀಯರೊಂದಿಗೆ ವಾಗ್ವಾದ ನಡೆದಿದೆ. ಇದರಿಂದಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

೩. ಈ ವೇಳೆ ಶ್ರೀ ದುರ್ಗಾದೇವಿ ದೇವಸ್ಥಾನದ ಅಧ್ಯಕ್ಷ ಜಗದೀಶ ದಾಸ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ಖಲೀಲನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ‘ಈ ಘಟನೆಯಿಂದ ಹಿಂದೂಗಳಲ್ಲಿ ಅಸಮಾಧಾನದ ಭಾವನೆ ಮೂಡಿಸಿದೆ’, ಎಂದು ದಾಸ ಅವರು ಹೇಳಿದ್ದಾರೆ.

ಈ ಮೇಲೆ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸಂಗತಿಯನ್ನು ತಿಳಿಸುವುದಾಗಿದೆ

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಪಾಯದಲ್ಲಿದ್ದಾಗ, ಅವರ ಸುರಕ್ಷತೆಗಾಗಿ ಭಾರತ ಸರಕಾರ ಕ್ರಮಕೈಗೊಳ್ಳುವುದೇ ?