ಚೀನಾ ಮೊಬೈಲ್ ಕಂಪನಿಯಿಂದ 9 ಸಾವಿರ ಕೋಟಿ ರೂಪಾಯಿಯ ತೆರಿಗೆ ವಂಚನೆ

ಒಪ್ಪೋ, ವಿವೋ, ಶಾಒಮಿ ಮತ್ತು ಟ್ರಾನ್ಸೆಷನ್ ಇಂಥ ದೊಡ್ಡ ಕಂಪನಿಗಳ ಸಮಾವೇಶ !

ನವದೆಹಲಿ – ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡುವಾಗ, ಮೊಬೈಲ್ ನಿರ್ಮಾಣ ಮಾಡುವ ಚೀನಾ ಕಂಪನಿಗಳು ಕಳೆದ ೫ ವರ್ಷಗಳಲ್ಲಿ ೮ ಸಾವಿರ ಕೋಟಿ ರೂಪಾಯಿಯ ಕಸ್ಟಮ್ಸ್ ಸುಂಕ ಮತ್ತು ವಸ್ತು ಮತ್ತು ಸೇವಾ ತೆರಿಗೆ ವಂಚಿಸಿದ್ದಾರೆ. ಈ ಕಂಪನಿಗಳಲ್ಲಿ ಒಪ್ಪೋ, ವಿವೋ, ಶಾಒಮಿ ಮತ್ತು ಟ್ರಾನ್ಸೆಷನ್ ಇಂತಹ ದೊಡ್ಡ ಕಂಪನಿಗಳ ಸಮಾವೇಶವಿದೆ. ಭಾರತದಲ್ಲಿನ ಚೀನಾ ಮೊಬೈಲ್ ಕಂಪನಿಗಳ ವಾರ್ಷಿಕ ವಹಿವಾಟು ಒಂದುವರೆ ಲಕ್ಷ ಕೋಟಿಗಿಂತಲೂ ಹೆಚ್ಚಿದೆ ಎಂದು ಹೇಳಿದ್ದಾರೆ.
ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ೨೦೧೮ ರಿಂದ ೨೦೨೩ ಈ ಸಮಯದಲ್ಲಿ ಚೀನಾ ಕಂಪನಿಗಳಿಂದ ೭ ಸಾವಿರದ ೯೬೫ ಕೋಟಿ ರೂಪಾಯಿ ಕಸ್ಟಮ್ಸ್ ಸುಂಕವನ್ನು ವಂಚಿಸಿದೆ. ಅದರಿಂದ ಇಲ್ಲಿಯವರೆಗೆ ಕೇವಲ ೬೦೪ ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಅವರಿಗೆ ‘ಕಾರಣ ನೀಡಿ’ ನೋಟಿಸ್ ಜಾರಿಗೊಳಿಸಲಾಗಿದೆ. ವಸ್ತು ಮತ್ತು ಸೇವಾ ತೆರಿಗೆ ವಂಚನೆ ಪ್ರಕರಣದಲ್ಲಿ ಈ ಹಣ ೧ ಸಾವಿರ ೧೦೮ ಕೋಟಿ ರೂಪಾಯಿ ಇತ್ತು. ಅದರಲ್ಲಿ ೧ ಸಾವಿರ ೨೬ ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ.

ಸಂಪಾದಕೀಯ ನಿಲುವು

ತೆರಿಗೆ ವಂಚನೆ ಮಾಡುವ ಇಂತಹ ಭಾರತ ದ್ರೋಹಿ ಚೀನಾ ಮೊಬೈಲ್ ಕಂಪನಿಗಳ ಮೇಲೆ ಭಾರತೀಯರು ಬಹಿಷ್ಕಾರ ಹಾಕಿ ಅವರ ಮೊಬೈಲ್ ಗಳನ್ನು ಖರೀದಿ ಮಾಡದೆ, ಈ ಕಂಪನಿಗಳಿಗೆ ಪಾಠ ಕಲಿಸಬೇಕು ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?