`ಬಂಧಿತರನ್ನು ಈಗಲೇ ಉಗ್ರರು ಎನ್ನಲಾಗದು’ : ಗೃಹ ಸಚಿವ ಪರಮೇಶ್ವರ

ಭಾಜಪದಿಂದ `ಓಲೈಕೆಯ ರಾಜಕಾರಣ’ ಎಂದು ಕಾಂಗ್ರೆಸ್ಸಿನ ಟೀಕೆ

ಗೃಹ ಸಚಿವ ಪರಮೇಶ್ವರ

ಬೆಂಗಳೂರು – ಇತ್ತೀಚೆಗೆ ಬಂಧಿಸಲಾಗಿರುವ ಐವರು ಜಿಹಾದಿ ಭಯೋತ್ಪಾದಕರ ಸಂದರ್ಭದಲ್ಲಿ ಗೃಹಸಚಿವ ಜಿ. ಪರಮೇಶ್ವರ್ ಅವರು ಮಾತನಾಡುತ್ತಾ, ಬಂಧಿತರನ್ನು ಈಗಲೇ ಉಗ್ರರು ಎನ್ನಲಾಗದು, ಎನ್ನುವ ಖೇದಕರ ಹೇಳಿಕೆಯನ್ನು ನೀಡಿದ್ದಾರೆ. ಈ ಭಯೋತ್ಪಾದಕರಿಂದ ಸ್ಫೋಟಕಗಳು, 7 ನಾಡ ಬಂದೂಕುಗಳು, 42 ಜೀವಂತ ಕಾಟ್ರಿಜ್, 2 ಚಾಕು, 4 ಗ್ರೆನೆಡ ಮುಂತಾದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಜಪ್ತಿ ಮಾಡಿಕೊಳ್ಳಲಾದ ಬಳಿಕವೂ ಜಿ. ಪರಮೇಶ್ವರ ಇವರು ಈ ರೀತಿ ಹೇಳಿಕೆ ನೀಡಿದ್ದರಿಂದ ಭಾಜಪ ಅವರನ್ನು ಟೀಕಿಸಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು `ಕಾಂಗ್ರೆಸ್ ಓಲೈಕೆಯ ರಾಜಕಾರಣವನ್ನು ಮಾಡುತ್ತಿದ್ದು, ಭಯೋತ್ಪಾದಕ ಘಟನೆಯ ಸಂದರ್ಭದಲ್ಲಿ ಗಂಭೀರವಾಗಿಲ್ಲ’ ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ ಆರೋಗ್ಯ ಸಚಿವ ದಿನೇಶ ಗುಂಡೂರಾವ ಇವರು ಘಟನೆಯ ತನಿಖೆ ನಡೆಯುತ್ತಿದ್ದು, ಎಲ್ಲರೂ ಈ ಬಗ್ಗೆ ಸವಿಸ್ತಾರವಾದ ಮಾಹಿತಿ ಹೊರಬರುವವರೆಗೆ ಕಾಯಬೇಕು. ಎಂದು ಹೇಳಿದರು. ನಮ್ಮ ಪೊಲೀಸರು ಇತ್ತೀಚೆಗೆ ಸೈಯದ ಸುಹೇಲ, ಉಮರ, ಜುನೈದ, ಮುದಾಸಿರ ಮತ್ತು ಜಾಹಿದ ಈ 5 ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಕನಕನಗರದ ಒಂದು ಧಾರ್ಮಿಕ ಸ್ಥಳದ ಹತ್ತಿರ ದೊಡ್ಡ ಷಡ್ಯಂತ್ರವನ್ನು ರಚಿಸುತ್ತಿರುವಾಗ ಬಂಧಿಸಲಾಗಿದೆಯೆಂದು ಪೊಲಿಸ್ ಮೂಲಗಳು ತಿಳಿಸಿವೆ.