ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿ ೨ ದಿನದ ಫ್ರಾನ್ಸ್ ಪ್ರವಾಸದ ನಂತರ ಸಂಯುಕ್ತ ಅರಬ್ ಅಮೀರತ್ ಗೆ ತಲುಪಿದ್ದಾರೆ. ಅದಕ್ಕೂ ಮೊದಲು ಪ್ರಧಾನಮಂತ್ರಿ ಮೋದಿ ಇವರು ಭಾರತದ ನೌಕಾದಳಕ್ಕಾಗಿ ಫ್ರಾನ್ಸ್ ನ ಡಸಾಟ್ಲ್ ಎವ್ಹಿಎಶನನಿಂದ ೨೬ ಹೊಸ ಅತ್ಯಾಧುನಿಕ ರಾಫೆಲ್ ಯುದ್ಧ ವಿಮಾನ ಖರೀದಿಯ ಒಪ್ಪಂದ ಮಾಡಿದೆ. ಈ ವಿಮಾನಗಳು ವಿಶೇಷವಾಗಿ ಭಾರತೀಯ ನೌಕಾದಳದ ಆವಶ್ಯಕತೆಯ ಪ್ರಕಾರ ತಯಾರಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ನ ರಾಷ್ಟ್ರಾಧ್ಯಕ್ಷ ಇಮಾನ್ಯಯೇಲ್ ಮಾಕ್ರಾನ್ ಇವರ ಭೇಟಿಯಲ್ಲಿ ಈ ಒಪ್ಪಂದ ನಡೆದಿದೆ. ಹಾಗೂ ಭಾರತೀಯ ವಾಯು ಸೇನೆಗಾಗಿ ಫ್ರಾನ್ಸ್ ನಿಂದ ಈ ಹಿಂದೆಯೇ ೩೬ ರಾಫೆಲ್ ಖರೀದಿ ಮಾಡಲಾಗಿದೆ. ಈ ರಕ್ಷಣಾ ಒಪ್ಪಂದದಲ್ಲಿ ಭಾರತಕ್ಕೆ ೨೨ ರಾಫೆಲ್-ಎಂ ಮರಿನ್ ಯುದ್ಧವಿಮಾನಗಳು ಸಿಗಲಿದೆ. ಈ ಯುದ್ಧ ವಿಮಾನಗಳು ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯ ಮೇಲೆ ನೇಮಿಸಲಾಗುವುದು. ಇದರ ಜೊತೆಗೆ ೪ ಟ್ರೇನರ್ ರಾಫೆಲ್ ಮರಿನ್ ವಿಮಾನಗಳು ಲಭ್ಯವಾಗಲಿದೆ. ರಾಫೆಲ್-ಎಂ ಇದು ಫ್ರಾನ್ಸ್ ನ ರಾಫೆಲ್ ಯುದ್ಧವಿಮಾನದ ನೌಕಾದಳದ ಆವೃತ್ತಿ ಆಗಿದೆ. ಚೀನಾ ಹಿಂದ ಮಹಾಸಾಗರದಲ್ಲಿ ಅದರ ಪ್ರಭಾವವನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ನೌಕಾದಳವು ಸಮುದ್ರದಲ್ಲಿ ತನ್ನ ಶಕ್ತಿ ಹೆಚ್ಚಿಸಿ ಸಮರ್ಥವಾಗಿ ಇರುವುದು ಆವಶ್ಯಕವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಯುದ್ಧವಿಮಾನದ ಖರೀದಿ ಮಾಡಲಾಗಿದೆ.
As #PMModi started his #France visit, the Defence Acquisition Council approved procurement of 26 #Rafale-M fighters to operate off the aircraft carriers and three additional Scorpene-class diesel-electric submarines from France, reports @dperi84.https://t.co/sRJXYDsT1l.
— The Hindu (@the_hindu) July 14, 2023