ಕಾರ್ಯತಂತದಲ್ಲಿ ಮುಂದಿರುವ ಚೀನಾ !
ನವ ದೆಹಲಿ – ದೇಶದಾದ್ಯಂತ ಟೊಮ್ಯಾಟೊದ ಬೆಲೆ ಗಗನಕ್ಕೇರಿದೆ. ಇದನ್ನು ಚೀನಾ ದುರುಪಯೋಗ ಪಡಿಸಿಕೊಳ್ಳುತ್ತಾ ನೇಪಾಳದ ಮೂಲಕ ಭಾರತಕ್ಕೆ ಅಕ್ರಮಮವಾಗಿ ಟೊಮ್ಯಾಟೊ ಕಳುಹಿಸಲು ಆರಂಭಿಸಿದೆ. ನೇಪಾಳ ಮತ್ತು ಬಿಹಾರದ ನಡುವಿನ ಮಾನವರಹಿತ ಗಡಿಯ ಮೂಲಕ ಟೊಮ್ಯಾಟೊ ಕಳ್ಳ ಸಾಗಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೊ ಕಳ್ಳಸಾಗಣೆ ತಡೆಯಲು ಸಶಸ್ತ್ರ ಪಡೆಗಳು ಗಸ್ತು ತೀವ್ರ ಗೊಳಿಸಿವೆ.
Hindustan Special: चाइनीज टमाटर की भारतीय बाजार में एंट्री, नेपाल से हो रही तस्करी#TomatoPrice https://t.co/2MKQ5C0Ekd
— Hindustan (@Live_Hindustan) July 14, 2023
ಭಾರತದಲ್ಲಿ ಟೊಮ್ಯಾಟೊ ಬೆಲೆ ಹೆಚ್ಚಾದ ಕಾರಣ ಚೀನಾ ನೇಪಾಳಕ್ಕೆ ಟೊಮ್ಯಾಟೊ ಸಾಗಣೆಯನ್ನು ಹೆಚ್ಚಿಸಿದೆ. ನೇಪಾಳ ಗಡಿ ಪ್ರದೇಶದ ನಿವಾಸಿಗಳು, ನೇಪಾಳದಲ್ಲಿ ಟೊಮ್ಯಾಟೊ ಕೆಜಿಗೆ ೫ ರೂಪಾಯಿ ದರದಲ್ಲಿ ಸಿಗುತ್ತಿದೆ ಎಂದರು; ಆದರೆ ಭಾರತದಲ್ಲಿ ಕಳ್ಳಸಾಗಣೆ ಆರಂಭ ಆದಾಗಿನಿಂದ ನೇಪಾಳದಲ್ಲೂ ಟೊಮ್ಯಾಟೊ ಬೆಲೆ ಹೆಚ್ಚಾಗತೊಡಗಿದೆ ಎಂದು ಹೇಳಿದರು.