ಸ್ವೀಡನ್ ನಲ್ಲಿ ಪದೇ ಪದೇ ಕುರಾನ ಸುಡುವುದರ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮಂಡಿಸಿರುವ ಪ್ರಸ್ತಾವನೆಗೆ ಭಾರತದಿಂದ ಬೆಂಬಲ

ನ್ಯೂಯಾರ್ಕ (ಅಮೇರಿಕಾ) – ಸ್ವೀಡನ್ ನಲ್ಲಿ ಪದೇ ಪದೇ ಕುರಾನ್ ಸುಡುವ ವಿರುದ್ಧ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಶತ್ತಿನಲ್ಲಿ ಪಾಕಿಸ್ತಾನ ಮಂಡಿಸಿದ ಪ್ರಸ್ತಾವನೆಗೆ ಭಾರತ ಬೆಂಬಲಿಸಿದೆ. ಈ ಪ್ರಸ್ತಾವನೆಯಲ್ಲಿ ಪಾಕಿಸ್ತಾನ ಕುರಾನ ಸುಟ್ಟವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿದೆ. ಈ ಸಮಯದಲ್ಲಿ ಅಮೇರಿಕಾ, ಬ್ರಿಟನ್, ಬೆಲ್ಜಿಯಂ, ಜರ್ಮನಿ, ರೊಮಾನಿಯಾ, ಲಿಥುಏನಿಯಾ, ಕೋಸ್ಟಾರಿಕಾ, ಫಿನ್ ಲ್ಯಾಂಡ, ಯುರೋಪಿಯನ್ ಯೂನಿಯನ್ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳು ವಾಕ್ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ಪ್ರಸ್ತಾಪದ ವಿರುದ್ಧ ಮತ ಚಲಾಯಿಸಿದವು.

ಮಾನವ ಹಕ್ಕುಗಳ ಪರಿಶತ್ತು ಒಟ್ಟು 47 ಸದಸ್ಯರನ್ನು ಹೊಂದಿದೆ. ಇವುಗಳನ್ನು ಇಸ್ಲಾಮಿಕ್ ದೇಶಗಳ ಸಂಘಟನೆಗೆ ಸೇರಿದ `ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಶನ್’ ಗೆ ಸಂಬಂಧಿಸಿದ ಕೇವಲ 19 ದೇಶಗಳು ಮಾತ್ರ ಸೇರಿವೆ. ಇವರೆಲ್ಲರೂ ಪಾಕಿಸ್ತಾನದ ಪ್ರಸ್ತಾವನೆಯನ್ನು ಬೆಂಬಲಿಸಿದರು. ಚೀನಾ ಕೂಡ ಪಾಕಿಸ್ತಾನವನ್ನು ಬೆಂಬಲಿಸಿ ಮತ ಹಾಕಿದೆ. ಅದೇ ಸಮಯದಲ್ಲಿ ನೇಪಾಳ ಸೇರಿದಂತೆ 7 ದೇಶಗಳು ಮತದಾನ ಮಾಡಲಿಲ್ಲ.

ಸಂಪಾದಕೀಯ ನಿಲುವು

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿಕ್ ದೇಶಗಳಲ್ಲಿ ನಿರಂತರವಾಗಿ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ನಡೆಯುತ್ತಿರುವ ದಾಳಿ, ಹಿಂದೂಗಳ ಮೇಲಿನ ಅತ್ಯಾಚಾರ ಮುಂತಾದವುಗಳ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಏಕೆ ಪ್ರಸ್ತಾವನೆಯನ್ನು ಮಂಡಿಸುವುದಿಲ್ಲ ?