
ತಿರುಪತಿ (ಆಂಧ್ರಪ್ರದೇಶ) – ಇಲ್ಲಿಯ ತಿರುಪತಿ ದೇವಸ್ಥಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ೩ ಜುಲೈ ೨೦೨೩ ರಂದು ಅಂದರೆ ಗುರುಪೂರ್ಣಿಮೆಯ ದಿನದಂದು ಶ್ರೀ ಬಾಲಾಜಿಯ ದರ್ಶನ ಪಡೆದು ಕೃತಜ್ಞತಾಪುಷ್ಪ ಅರ್ಪಿಸಿದರು. ೧೧ ಮೇ ೨೦೨೩ ರಂದು ಸಪ್ತರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಬ್ರಹ್ಮೋತ್ಸವ ನಡೆಯಿತು. ಅನಂತರ ನಡೆದ ನಾಡಿಪಟ್ಟಿ ವಾಚನದಲ್ಲಿ ಸಪ್ತರ್ಷಿಗಳು ಮುಂದಿನಂತೆ ಹೇಳಿದರು, “ಗುರುಪೂರ್ಣಿಮೆಯ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಿರುಪತಿಗೆ ಹೋಗಿ ಬ್ರಹ್ಮೋತ್ಸವ ನಿರ್ವಿಘ್ನವಾಗಿ ನಡೆದಿರುವುದರಿಂದ ಕೃತಜ್ಞತೆ ವ್ಯಕ್ತಪಡಿಸಬೇಕು, ಎಂದಿದ್ದರು. ಅದಕ್ಕನುಸಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಗುರುಪೂರ್ಣಿಮೆಯ ದಿನದಂದು ಮಧ್ಯಾಹ್ನ ೪ ಗಂಟೆಗೆ ತಿರುಪತಿಗೆ ಹೋಗಿ ಶ್ರೀ ಬಾಲಾಜಿಯ ದರ್ಶನ ಪಡೆದು ಕೃತಜ್ಞತೆ ವ್ಯಕ್ತಪಡಿಸಿದರು.
ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ದೀರ್ಘಾಯುಷ್ಯಕ್ಕಾಗಿ, ಎಲ್ಲಾ ಸಾಧಕರ ಆರೋಗ್ಯಕ್ಕಾಗಿ ಮತ್ತು ಸಾಧಕರ ಸುತ್ತಲೂ ರಕ್ಷಣಾ ಕವಚ ನಿರ್ಮಾಣವಾಗುವುದಕ್ಕಾಗಿ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿನ ಸೂಕ್ಷ್ಮದಲ್ಲಿನ ತೊಂದರೆಗಳು ದೂರವಾಗುವುದಕ್ಕಾಗಿ ಶ್ರೀ ಬಾಲಾಜಿಯ ಚರಣಗಳಲ್ಲಿ ಪ್ರಾರ್ಥನೆ ಮಾಡಿದರು.
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಸಾಧನೆಯ ಅತ್ಯಾವಶ್ಯಕತೆ !
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena