ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕಾ) ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ಪುನಃ ಖಲಿಸ್ತಾನಿಯರಿಂದ ದಾಳಿ !

ಮಾರ್ಚ್‌ನಲ್ಲಿಯೂ ನಡೆದಿತ್ತು ದಾಳಿ !

ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕಾ) – ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಲಿಲ್ಲ. ಮಾರ್ಚ್ ೨೦೨೩ ರಲ್ಲಿಯೂ, ಖಲಿಸ್ತಾನಿಯವರು ಇದೇ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದ್ದರು. ಮತ್ತೆ ದಾಳಿ ನಡೆಸಿದಕ್ಕಾಗಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಈ ಕುರಿತು ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯು ಮಿಲರ್ ಇವರು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಧ್ವಂಸಗೊಳಿಸಲು ಮತ್ತು ಬೆಂಕಿ ಹಚ್ಚಲು ಪ್ರಯತ್ನಿಸಲಾಗಿದೆ. ಇದನ್ನು ಅಮೆರಿಕಾ ತೀವ್ರವಾಗಿ ಖಂಡಿಸುತ್ತದೆ. ಅಮೇರಿಕಾದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳ ಧ್ವಂಸ ಮತ್ತು ಹಿಂಸಾಚಾರ ಮಡುವುದು ಅಪರಾಧವಾಗಿದೆ. (ಸಂಬಂಧಿತ ಖಲಿಸ್ತಾನಿಗಳ ವಿರುದ್ಧ ಅಮೇರಿಕಾ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು, ಆದ್ದರಿಂದ ಅವರು ಮತ್ತೆ ಅಂತಹ ಕೃತ್ಯವನ್ನು ಮಾಡಲು ಧೈರ್ಯ ಮಾಡುವುದಿಲ್ಲ ! – ಸಂಪಾದಕರು)

ಸಂಪಾದಕರ ನಿಲುವು

ಬಲಿಷ್ಠ ಅಮೇರಿಕಾದಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದು ಅಮೆರಿಕಾಗೆ ನಾಚಿಕೆಗೇಡು ! ಭಾರತವು ತನ್ನ ಸಂಪತ್ತನ್ನು ರಕ್ಷಿಸಲು ಅಮೆರಿಕದ ಮೇಲೆ ಒತ್ತಡ ಹೇರಬೇಕು !