ನವದೆಹಲಿ – ‘ಎಸ್ & ಪಿ’ ಮೌಲ್ಯಾಪನ ಮಾಡುವ ಸಂಸ್ಥೆಯು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ದರ ಶೇ. 6 ರಷ್ಟು ಇರಲಿದೆ ಎಂದು ತನ್ನ ವೀಕ್ಷಣೆಯನ್ನು ಶಾಶ್ವತಗೊಳಿಸಿಸಿದೆ. ಈ ಹಿಂದೆ, ಮಾರ್ಚ್ ತಿಂಗಳಲ್ಲಿ ಇದೇ ರೀತಿಯ ವೀಕ್ಷಣೆ ನೊಂದಾಯಿಸಲಾಗಿತ್ತು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಅತ್ಯಧಿಕ ದರವನ್ನು ಹೊಂದಿರುತ್ತದೆ. ಈ ದರ ಚೀನಾಕ್ಕಿಂತ ಹೆಚ್ಚಾಗಿರುತ್ತದೆ ಎಂದೂ ಸಹ ಈ ಸಂಸ್ಥೆಯು ಹೇಳಿದೆ ಮತ್ತು ಭಾರತದೊಂದಿಗೆ, ವ್ಹಿಎತನಾಮ ಮತ್ತು ಫಿಲಿಪೈನ್ಸ್‌ನ ಒಟ್ಟು ರಾಷ್ಟ್ರೀಯ ಆದಾಯದ ದರವೂ ಶೇ.6ರಲ್ಲೇ ಉಳಿಯಲಿದೆ ಎಂದು ಕೂಡ ಹೇಳಿದೆ.