ಇಸ್ಲಾಂ ಮದುವೆಯ ಮೊದಲು ದೈಹಿಕ ಸಂಬಂಧಕ್ಕೆ ಅನುಮತಿಸುವುದಿಲ್ಲ !

‘ಲಿವ್ ಇನ್ ರಿಲೇಶನ್ ಶಿಪ್ ‘ ಕುರಿತಾದ ಅರ್ಜಿಯ ಬಗ್ಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠದ ಅಭಿಪ್ರಾಯ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಕೆಲವು ದಿನಗಳ ಹಿಂದೆ ‘ಲಿವ್ ಇನ್ ರಿಲೇಶನ್ ಶಿಪ್’ನ ಕುರಿತು ಒಂದು ಅರ್ಜಿಯ ಬಗ್ಗೆ ವಿಚಾರಣೆ ನಡೆಸುವಾಗ ಸಂಬಂಧಿತ ಮುಸಲ್ಮಾನ ಯುವಕ ಮತ್ತು ಯುವತಿಗೆ ಸಹಾಯ ಮಾಡಲು ಇಸ್ಲಾಂನ ನಿಯಮದ ಆಧಾರದಲ್ಲಿ ನಿರಾಕರಿಸಿದ್ದರು. ನ್ಯಾಯಾಲಯವು, ಇಸ್ಲಾಂನಲ್ಲಿ ಮದುವೆಯ ಮೊದಲು ದೈಹಿಕ ಸಂಬಂಧ ಇಡಲು ಅನುಮತಿಸುವುದಿಲ್ಲ. ಮದುವೆಯ ಮೊದಲು ಪ್ರೀತಿ ವ್ಯಕ್ತಪಡಿಸುವ ಯಾವುದೇ ಕೃತಿಗೆ ಎಂದರೆ ಸ್ಪರ್ಶ, ಮುತ್ತು ಮುಂತಾದಕ್ಕೆ ಅನುಮತಿಸುವುದಿಲ್ಲ.

ಈ ಯುವಕ ಮತ್ತು ಯುವತಿಯರಿಗೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿರುವ ದಾವೆ ಮಾಡುತ್ತಾ ಸಹಾಯಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮೇಲಿನ ಆದೇಶದ ನಂತರ ಈಗ ವಿವಾದ ಆರಂಭವಾಗಿದೆ.

ಸಂಪಾದಕರ ನಿಲುವು

‘ಲಿವ್ ಇನ್ ರಿಲೇಶನ್ ಶಿಪ್’ಗೆ ಬೆಂಬಲ ನೀಡಿ ಹಿಂದು ಧರ್ಮದ ಬಗ್ಗೆ ಟೀಕಿಸುವ ಪ್ರಗತಿಪರರು ಈ ಬಗ್ಗೆ ಏನು ಹೇಳುವರು ?