ಅಮೇರಿಕಾದ ‘ಜಿಈ ಏರೋಸ್ಪೇಸ್’ ಮತ್ತು ‘ಹಿಂದೂಸ್ತಾನ್ ಏರೋನಾಟಿಕ್ಸ್’ ಈ ಸಂಸ್ಥೆಗಳಲ್ಲಿ ಒಪ್ಪಂದ !

ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಪ್ರವಾಸ !

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ಸಂರಕ್ಷಣೆಗೆ ಸಂಬಂಧಿಸಿದ ಮಹತ್ವದ ಒಪ್ಪಂದವಾಗಿದೆ. ಜೂನ್ ೨೨ ರಂದು ಅಮೇರಿಕಾದ ‘ಜಿಈ ಏರೋಸ್ಪೇಸ್’ ಮತ್ತು ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ ಇವುಗಳ ನಡುವೆ ಈ ಒಪ್ಪಂದವಾಗಿದೆ. ಇದರ ಅಡಿಯಲ್ಲಿ, ಭಾರತೀಯ ವಾಯುಪಡೆ ಮತ್ತು ನೌಕಾಪಡೆಯ ಯುದ್ಧ ವಿಮಾನಗಳ ಇಂಜಿನ್‌ಗಳನ್ನು ಇನ್ನು ಮುಂದೆ ಭಾರತದಲ್ಲಿಯೇ ತಯಾರಿಸಲಾಗುವುದು.

ಈ ಒಪ್ಪಂದದ ಅಡಿಯಲ್ಲಿ, ‘ಎಫ್೪೧೪’ ಹೆಸರಿನ ಇಂಜಿನ್ ಅನ್ನು ಸೇರಿಸಲಾಗಿದೆ ಮತ್ತು ಇದು ಭಾರತೀಯ ವಾಯುಪಡೆಯ ‘ಎಮ್.ಕೆ.೨’ ಈ ವಿಮಾನದ ಭಾಗವಾಗಿದೆ. ‘ಜಿಈ ಏರೋಸ್ಪೇಸ್‌ನ’ ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಚ್. ಲಾರೆನ್ಸ್ ಕಲ್ಪ್ ಜೂನಿಯರ್ ಅವರು, “ಈ ಒಪ್ಪಂದವು ಉಭಯ ದೇಶಗಳ ನಡುವಿನ ಆರ್ಥಿಕ ವಿನಿಮಯವನ್ನು ವೇಗಗೊಳಿಸುತ್ತದೆ. ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಬಾಯಡೆನ್ ಅವರ ಎರಡೂ ದೇಶಗಳ ನಡುವೆ ಆತ್ಮೀಯತೆಯನ್ನು ಬೆಳೆಸುವ ಕನಸನ್ನು ನನಸಾಗಿಸಲು ಈ ಒಪ್ಪಂದದಿಂದ ಸುಲಭವಾಗುವುದು.” ಎಂದು ಹೇಳಿದರು.