ಮುಂದಿನ ೫ ವರ್ಷದಲ್ಲಿ ಅರುಣಾಚಲ ಪ್ರದೇಶದಲ್ಲಿ ಕ್ರೈಸ್ತರಿಂದಾಗುವ ಮತಾಂತರದ ಸಮಸ್ಯೆ ಪರಿಹರಿಸೋಣ ! – ಶ್ರೀ. ಕುರು ತಾಯಿ , ಉಪಾಧ್ಯಕ್ಷರು, ಬಂಬೂ(ಬಿದಿರು) ಸಂಸಾಧನ ಮತ್ತು ವಿಕಾಸ ಏಜೆನ್ಸಿ, ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ ಬಂಬೂ(ಬಿದಿರು) ಸಂಸಾಧನ ಮತ್ತು ವಿಕಾಸ ಏಜೆನ್ಸಿಯ ಉಪಾಧ್ಯಕ್ಷ ಶ್ರೀ. ಕುರು ತಾಯಿ

ವಿದ್ಯಾಥಿರಾಜ ಸಭಾಗೃಹ , ಜೂನ್ ೧೯ (ವಾರ್ತೆ) – ಮತಾಂತರಗೊಂಡಿರುವ ಹಿಂದೂಗಳಿಗೆ ಹಿಂದುಳಿದ ಜಾತಿ ಯ ಸೌಲಭ್ಯ ನೀಡುವುದರ ಬಗ್ಗೆ ಒಂದು ಮನವಿಯ ವಿಚಾರಣೆಯು ಕೇರಳ ಉಚ್ಚ ನ್ಯಾಯಾಲಯದಲ್ಲಿ ೨೦೦೬ ರಲ್ಲಿ ನಡೆಯಿತು. ಅದರ ಚರ್ಚೆಯನ್ನು ಅರುಣಾಚಲ ಪ್ರದೇಶದ ಹಿಂದೂಗಳಾದ ನಾವೂ ಮಾಡಿದೆವು. ಇದರಿಂದ ಪ್ರಸ್ತುತ ಅಲ್ಲಿಯ ವಾತಾವರಣ ಕದಡಿ ಹೋಗಿದೆ. ನಾವು ಇಲ್ಲಿ ಮತಾಂತರದ ಸಮಸ್ಯೆಯ ನಿವಾರಣೆಯ ಬಗ್ಗೆ ಉಪಾಯ ಹುಡುಕಿದ್ದೇವೆ. ಯಾವ ಹಿಂದೂ ವ್ಯಕ್ತಿ ಇತರ ಧರ್ಮದಲ್ಲಿನ ವ್ಯಕ್ತಿಯ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾಳೆಯೋ ಆಕೆಗೆ ಆಕೆಯ ಕುಟುಂಬದ ಸಂಪತ್ತು ದೊರೆಯುವುದಿಲ್ಲ ಮತ್ತು ಆಕೆಗೆ ಆಕೆಯ ಮಕ್ಕಳನ್ನು ಕೂಡ ಸ್ವತಹ ಅವಳೇ ಸಾಕಬೇಕು. ಅರುಣಾಚಲ ಪ್ರದೇಶದಲ್ಲಿ ನಾವು ಹಿಂದೂಗಳು ಸಂಘಟಿತರಾಗಿದ್ದೇವೆ. ಆದ್ದರಿಂದ ಅಲ್ಲಿಯ ಸಮಸ್ಯೆಯ ಕಾಳಜಿ ಮಾಡುವ ಅಗತ್ಯ ಇಲ್ಲ. ಮುಂದಿನ ೫ ವರ್ಷಗಳಲ್ಲಿ ಅರುಣಾಚಲ ಪ್ರದೇಶದ ಕ್ರೈಸ್ತರಿಂದಾಗುವ ಮತಾಂತರದ ಸಮಸ್ಯೆಯನ್ನು ಬಗೆಹರಿಸುವೆವು ಎಂದು ಅರುಣಾಚಲ ಪ್ರದೇಶ ಬಂಬೂ(ಬಿದಿರು) ಸಂಸಾಧನ ಮತ್ತು ವಿಕಾಸ ಏಜೆನ್ಸಿಯ ಉಪಾಧ್ಯಕ್ಷ ಶ್ರೀ. ಕುರು ತಾಯಿ ಇವರು ಪ್ರತಿಪಾದಿಸಿದರು.

ಶ್ರೀ.ಕುರು ತಾಯಿ ಇವರು ಹೇಳಿರುವ ಇತರ ಮಹತ್ವಪೂರ್ಣ ಅಂಶಗಳು

೧. ಅರುಣಾಚಲ ಪ್ರದೇಶದ ಪ್ರತಿಯೊಂದು ಕುಟುಂಬದಲ್ಲಿ ೧ ಸದಸ್ಯನು ಮತಾಂತರಗೊಂಡಿದ್ದಾನೆ. ಒಬ್ಬ ಸದಸ್ಯನಿಂದ ಸಂಪೂರ್ಣ ಹಿಂದೂ ಕುಟುಂಬ ಕ್ರೈಸ್ತ ವಾಗುತ್ತದೆ.

೨. ಮಧ್ಯಂತರ ಕಾಲದಲ್ಲಿ ಒಂದು ಹೀಲಿಂಗ್ (ಚಿಕಿತ್ಸೆ) ಕಾರ್ಯಕ್ರಮಕ್ಕಾಗಿ ಬಿಹಾರದಿಂದ ೨ ಪಾದ್ರಿಗಳು ಮತ್ತು ಅರುಣಾಚಲ ಪ್ರದೇಶದ ೧ ಪಾದ್ರಿ ಬಂದಿದ್ದರು. ಅವರು ಗುಣವಾಗದ ರೋಗಗಳನ್ನು ವಾಸಿ ಮಾಡುವ ದಾವೆ ಮಾಡಿದರು. ಅದು ನಮಗೆ ತಿಳಿದ ನಂತರ ನಾವು ಅವರಿಗೆ ಅಲ್ಲಿಯ ಆರ್ ಕೆ ಮಿಷನ್ ಆಸ್ಪತ್ರೆಗೆ ಕ್ಯಾನ್ಸರ್ ರೋಗದ ರೋಗಿಗಳನ್ನು ವಾಸಿ ಮಾಡುವಂತೆ ಪ್ರಸಾರ ಮಾಧ್ಯಮದೆದುರು ಕರೆ ನೀಡಿದೆವು. ಆಗ ಪಾದ್ರಿಗಳು ನಿರಾಕರಿಸಿದರು, ಈ ರೀತಿ ಹಿಂದೂಗಳನ್ನು ಮತಾಂತರಿಸುವ ಪ್ರಯತ್ನ ಮಾಡುವ ಕ್ರೈಸ್ತರ ಷಡ್ಯಂತ್ರ ನಾವು ಬಯಲಿಗೆಳೆದೆವು.

ಶ್ರೀ. ಕುರು ತಾಯಿ ಇವರ ಧರ್ಮ ಕಾರ್ಯದ ತಳಮಳ !

ಧರ್ಮ ಕಾರ್ಯದ ಬಗ್ಗೆ ಶ್ರೀ. ಕುರು ತಾಯಿಯವರಲ್ಲಿರುವ ತಳಮಳದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಇವರು ಹೇಳಿದ ಅಂಶಗಳು

೧. ಶ್ರೀ. ಕುರು ತಾಯಿ ಇವರು ಅರುಣಾಚಲ ಪ್ರದೇಶದ ಅತ್ಯಂತ ದುರ್ಗಮ ಪ್ರದೇಶದ ಗುಡ್ಡಗಾಡುಪ್ರದೇಶದಲ್ಲಿ ವಾಸಿಸುತ್ತಾರೆ. ಅಲ್ಲಿ ಬರುವುದು ಹೋಗುವುದು ಅತ್ಯಂತ ಕಠಿಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀ. ತಾಯಿ ಇವರು ಅಲ್ಲಿಯ ೨೬ ಹಿಂದೂ ಪಂಗಡಗಳನ್ನು ಸಂಘಟಿತಗೊಳಿಸಿ ಹಿಂದೂಗಳ ಮತಾಂತರವನ್ನು ತಡೆಯುವ ಕಾರ್ಯ ಮಾಡುತ್ತಿದ್ದಾರೆ. ಈ ರೀತಿಯ ಕಾರ್ಯ ಮಾಡುವುದು ಅಲ್ಲಿ ಅತ್ಯಂತ ಕಠಿಣವಾಗಿದೆ. ಅವರಲ್ಲಿ ಸಂಘಟನೆ ಮಾಡುವುದು ಮತ್ತು ಇತರರ ಬಗ್ಗೆ ಪ್ರೇಮ ಭಾವ ಎಂಬ ಗುಣಗಳಿವೆ.

೨. ಶ್ರೀ. ತಾಯಿ ಇವರಲ್ಲಿ ರಾಷ್ಟ್ರಧರ್ಮದ ಕಾರ್ಯದ ಬಗ್ಗೆ ಇರುವ ತಳಮಳದಿಂದ ಅರುಣಾಚಲ ಪ್ರದೇಶದಿಂದ ೪ ವಿಮಾನಗಳನ್ನು ಬದಲಾಯಿಸಿ ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕಾಗಿ ಉಪಸ್ಥಿತರಾಗಿದ್ದಾರೆ.

೩. ಶ್ರೀ ತಾಯಿ ಅವರ ಮೂಲ ಭಾಷೆ ಬೇರೆ ಇದೆ. ಅವರಿಗೆ ಹಿಂದಿ ಭಾಷೆಯಲ್ಲಿ ಮಾತನಾಡಲು ಅಡಚಣೆ ಇದೆ. ಆದರೂ ಕೂಡ ಹಿಂದುತ್ವದ ಕಾರ್ಯದ ಕುರಿತು ಇರುವ ತಳಮಳದಿಂದ ಮತ್ತು ಮಹೋತ್ಸವಕ್ಕೆ ಬಂದಿರುವ ಹಿಂದುತ್ವನಿಷ್ಠರಿಗೆ ಕಾರ್ಯ ತಿಳಿಯಬೇಕೆಂದು ಅವರು ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

೪. ಅರುಣಾಚಲ ಪ್ರದೇಶದ ಹಿಂದುಗಳ ಸಮಸ್ಯೆಯ ಬಗ್ಗೆ ಅವರು ಒಳ್ಳೆಯ ರೀತಿ ಅಭ್ಯಾಸ ಮಾಡಿದ್ದಾರೆ, ಅದಕ್ಕಾಗಿ ಅವರು ಒಳ್ಳೆಯ ಉಪಾಯ ಯೋಜನೆ ಮಾಡಿ ಅದರ ಪ್ರಕಾರ ಕೃತಿ ಕೂಡ ಮಾಡುತ್ತಾ ಅಲ್ಲಿಯ ಹಿಂದುಗಳನ್ನು ಚಿಂತೆಯಿಂದ ಮುಕ್ತ ಗೊಳಿಸಿದ್ದಾರೆ.

೫. ಶ್ರೀ ಕುರು ತಾಯಿ ಇವರಲ್ಲಿ ಧರ್ಮ ಕಾರ್ಯದ ತಳಮಳ ಇದ್ದು ಅವರಲ್ಲಿ ಸಚ್ಚಿದಾನಂದ ಪರಬ್ರಂಹ ಡಾ. ಅಠವಲೆ ಇವರ ಬಗ್ಗೆ ಅತ್ಯಂತ ಭಾವ ಮತ್ತು ಧರ್ಮನಿಷ್ಠೆ ಇದೆ.

(ಸೌಜನ್ಯ:  ಹಿಂದೂ ಜನಜಾಗೃತಿ ಸಮಿತಿ)