ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳ ಮೇಲಿನ ಚಿನ್ನ ಹಿತ್ತಾಳೆಯಾಗಿ ಮಾರ್ಪಟ್ಟಿದೆ ಎಂದು ಅರ್ಚಕರ ಆರೋಪ !

ಕೇದಾರನಾಥ (ಉತ್ತರಾಖಂಡ) – ಕಳೆದ ವರ್ಷ ಅರ್ಪಣೆದಾರರೊಬ್ಬರು ನೀಡಿದ ಅರ್ಪಣೆಯಿಂದ ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಗಳನ್ನು ಚಿನ್ನದಿಂದ ಲೇಪಿಸಲಾಗಿತ್ತು. ಈಗ ದೇವಾಲಯದ ಅರ್ಚಕರು ಈ ಚಿನ್ನದ ಗೋಡೆಗಳು ಹಿತ್ತಾಳೆಯ ಗೋಡೆಗಳಾಗಿ ಮಾರ್ಪಟ್ಟಿವೆ ಎಂದು ಹೇಳಿದ್ದಾರೆ. ಚಾರಧಾಮ್ ಮಹಾಪಂಚಾಯತ್‌ನ ಉಪಾಧ್ಯಕ್ಷ ಮತ್ತು ಕೇದಾರನಾಥದ ಹಿರಿಯ ಅರ್ಚಕ ಆಚಾರ್ಯ ಸಂತೋಷ್ ತ್ರಿವೇದಿ ಅವರು ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಅವರು ಇದರಲ್ಲಿ ೧೨೫ ಕೋಟಿ ರೂಪಾಯಿಗಳ ಹಗರಣವಾಗಿರುದಾಗಿ ಆರೋಪಿಸಿದ್ದಾರೆ ಇದಕ್ಕೆ ಬದರಿನಾಥ-ಕೆದಾರನಾಥ ದೇವಾಲಯ ಸಮಿತಿ, ಉತ್ತರಾಖಂಡ ಸರಕಾರ ಮತ್ತು ಆಡಳಿತವೇ ಹೊಣೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅರ್ಚಕ ಸಂತೋಷ ತ್ರಿವೆದಿಯವರು, ದೇವಾಲಯದ ಸಮಿತಿಯು ಗೋಡೆಗಳನ್ನು ಚಿನ್ನದಿಂದ ಲೇಪಿಸುವ ಮೊದಲು ಚಿನ್ನವನ್ನು ಏಕೆ ಪರಿಶೀಲಿಸಲಿಲ್ಲ ? ಎಂದು ಕೇಳಿದ್ದಾರೆ. ನಾವೇಲ್ಲಾ ಅರ್ಚಕರು ಈ ಗೋಡೆಗಳನ್ನು ಲೇಪಿಸುವುದಕ್ಕೆ ನಿರಂತರವಾಗಿ ವಿರೋಧಿಸುತ್ತಿದ್ದೆವು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದಲ್ಲಿ ನಾವೆಲ್ಲರೂ ಅರ್ಚಕರು ಸೇರಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬದ್ರಿನಾಥ್-ಕೇದಾರನಾಥ ದೇವಾಲಯ ಸಮಿತಿಯಿಂದ ಆರೋಪ ನಿರಾಕರಣೆ !

ಅರ್ಚಕರ ಈ ಆರೋಪವನ್ನು ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ತಿವಾರಿ ಅವರು ತಳ್ಳಿ ಹಾಕಿದ್ದಾರೆ. ಅವರು, ದೇವಾಲಯದ ಗೋಡೆಗಳು ರತ್ನಖಚಿತ ಚಿನ್ನದೊಂದಿಗೆ ಲೇಪಿಸುವ ಕಾರ್ಯ ಅರ್ಪಣೆದಾರರ ಸಹಾಯದಿಂದ ಮಾಡಲಾಗಿದೆ. ಇದಕ್ಕಾಗಿ ೧೫ ಕೋಟಿ ರೂಪಾಯಿಗಳ ಖರ್ಚು ಮಾಡಲಾಗಿದೆ. ಯಾವುದೇ ಮಾಹಿತಿ ತೆಗೆದುಕೊಳ್ಳದೆ ಸುಳ್ಳು ಮಾಹಿತಿ ಹರಡುವ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಡೆಯುತ್ತಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಎಂದು ತಿವಾರಿ ಅವರು ವಿಡಿಯೋ ಪ್ರಸಾರ ಮಾಡುವ ಮೂಲಕ ಹೇಳಿದ್ದಾರೆ.