|
ಬರೇಲಿ (ಉತ್ತರಪ್ರದೇಶ) – ಅಪರಿಚಿತರು ನಗರದಲ್ಲಿ ಪ್ರಾಚೀನ ದುರ್ಗಾದೇವಿಯ ದೇವಸ್ಥಾನದಲ್ಲಿ ‘೭೮೬’ ಮತ್ತು ‘ಅಲ್ಲಾಹ’ ಎಂದು ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಹಿಂದೂಗಳು ಇದರಿಂದ ಆಕ್ರೋಶ ವ್ಯಕ್ತಪಡಿಸುತ್ತಾ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ ನಂತರ ಅವರು ಅಪರಿಚಿತರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಈ ದೇವಸ್ಥಾನ ಬಿಹಾರಿಪುರ ಪ್ರದೇಶದ ಆಲಾ ಹಜರತ ದರ್ಗಾದ ಎದುರಿಗೆ ಇರುವುದು. ಪೊಲೀಸರು ದೂರು ದಾಖಲಿಸಿ ಕೊಂಡು ಹಿಂದೂಗಳಿಗೆ ಶಾಂತಗೊಳಿಸಿದ್ದಾರೆ.
ಪೊಲೀಸರು, ಈ ಕೃತ್ಯ ಮಾಡುವವರನ್ನು ಪತ್ತೆ ಹಚ್ಚುವುದಕ್ಕಾಗಿ ಈ ಸಂಪೂರ್ಣ ಪರಿಸರದಲ್ಲಿ ಮತ್ತು ದೇವಸ್ಥಾನದ ಅಕ್ಕಪಕ್ಕದ ‘ಸಿಸಿಟಿವಿ’ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಕ್ಷೆಪಾರ್ಹ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಪೊಲೀಸರು ಆಶ್ವಾಸನೆ ನೀಡಿದ್ದಾರೆ.
Bareilly (Uttar Pradesh): Anger among Hindus over ‘Allah’ and ‘786’ written on a Durga temple!
– It is the truth that, if someone had written sacred symbols like ‘Om’ or ‘Shree’ on a mosque or a dargah, then instead of expressing anger, there would have been calls for “Sar Tan… pic.twitter.com/Tp3EP26z0e
— Sanatan Prabhat (@SanatanPrabhat) January 2, 2025
ಸಂಪಾದಕೀಯ ನಿಲುವುಇದೇ ಯಾವುದಾದರೂ ಮಸೀದಿಯ ಮೇಲೆ ಅಥವಾ ದರ್ಗಾದ ಮೇಲೆ ಯಾರಾದರೂ ‘ಓಂ’ ಅಥವಾ ‘ಶ್ರೀ’ ಇವುಗಳಂತಹ ಪವಿತ್ರ ಚಿಹ್ನೆಗಳು ಬರೆದಿದ್ದರೆ, ಅಸಮಾಧಾನ ವ್ಯಕ್ತಪಡಿಸುವ ಬದಲು ‘ಸರ್ ತನ ಸೇ ಜುದಾ’ ದ ಘೋಷಣೆ ನೀಡಲಾಗುತ್ತಿದ್ದವು ಮತ್ತು ಕೇವಲ ಬರೇಲಿ ಅಥವಾ ಉತ್ತರಪ್ರದೇಶ ರಾಜ್ಯ ಅಷ್ಟೇ ಅಲ್ಲದೆ ಸಂಪೂರ್ಣ ದೇಶ ಹೊತ್ತಿ ಉರಿಯುತ್ತಿತ್ತು, ಇದೇ ಸತ್ಯ ! |