ಅಮೇರಿಕಾದ ಖ್ಯಾತ ಹಾಸ್ಯ ಕಲಾವಿದೆ ಸೌ. ಜರನಾ ಗರ್ಗ ಇವರ ‘ಹಿಂದೂಗಳಲ್ಲಿ ಎತ್ತರ (ಹೈಟ್) ಹೆಚ್ಚಿಸಬಲ್ಲ ಒಬ್ಬನೇ ಒಬ್ಬ ದೇವರಿಲ್ಲ !, ಎಂಬ ಹಿಂದೂದ್ರೊಹಿ ಹೇಳಿಕೆಯ ಖಂಡನೆ !

ಕು. ಮಧುರಾ ಭೋಸಲೆ

‘೨೩ ಮೇ ೨೦೨೩ ರ ದೈನಿಕ ‘ಸನಾತನ ಪ್ರಭಾತದ ಮೊದಲ ಪುಟದಲ್ಲಿ ಒಂದು ವಾರ್ತೆ ಮುದ್ರಿಸಲಾಗಿತ್ತು. ಈ ವಾರ್ತೆಯಲ್ಲಿ ‘ಹಿಂದೂಗಳಲ್ಲಿ ಎತ್ತರವನ್ನು ಹೆಚ್ಚಿಸಬಲ್ಲ ಒಬ್ಬನೇ ಒಬ್ಬ ದೇವರೂ ಇಲ್ಲ !, ಎಂದು ಭಾರತೀಯ ಮೂಲದ ಅಮೇರಿಕಾ ನಿವಾಸಿ ಖ್ಯಾತ ಹಾಸ್ಯ ಕಲಾವಿದೆ ಸೌ. ಜರನಾ ಗರ್ಗ ಇವರು ಹಿಂದೂದ್ರೋಹಿ ಹೇಳಿಕೆಯನ್ನು ನೀಡಿದ್ದರು. ಈಶ್ವರನ ಕೃಪೆಯಿಂದ ಈ ಹಿಂದೂದ್ರೋಹಿ ಮತ್ತು ಆಕ್ರೋಶಕಾರಿ ಹೇಳಿಕೆಯನ್ನು ಖಂಡಿಸಲು ಹೊಳೆದಂತಹ ದೈವೀ ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಹಿಂದೂಗಳಲ್ಲಿ ೩೩ ಕೋಟಿ ದೇವತೆಗಳಿದ್ದಾರೆ. ೩೩ ಕೋಟಿ ದೇವತೆಗಳು ತಮ್ಮಲ್ಲಿನ ಅಪಾರ ದೈವೀ ಸಾಮರ್ಥ್ಯದಿಂದ ಅನೇಕ ಜೀವಗಳನ್ನು ಉದ್ಧರಿಸುತ್ತಾರೆ ಮತ್ತು ಈಗಲೂ ಉದ್ಧರಿಸುತ್ತಿದ್ದಾರೆ. ಅದಕ್ಕಾಗಿ ಭಕ್ತರು ಕೇವಲ ಭಾವಪೂರ್ಣವಾಗಿ ದೇವತೆಗಳ ಭಕ್ತಿಯನ್ನು ಮಾಡುವುದು ಆವಶ್ಯಕವಾಗಿದೆ. ಅದರ ಕೆಲವು ಉದಾಹರಣೆಗಳು ಈ ಮುಂದಿನಂತಿವೆ.

ಸೌ. ಜರನಾ ಗರ್ಗ

೧. ಶಿವನ ಕೃಪೆಯಿಂದ ವಿಂಧ್ಯಾಚಲ ಪರ್ವತದ ಎತ್ತರ ಮೊದಲು ಹೆಚ್ಚಾಗುವುದು ಮತ್ತು ನಂತರ ಅದು ಕಡಿಮೆಯಾಗುವುದು

ಒಮ್ಮೆ ವಿಂಧ್ಯಾಚಲ ಪರ್ವತಕ್ಕೆ ತಾನು ಮೇರೂ ಪರ್ವತಕ್ಕಿಂತ ಎತ್ತರ ಆಗಬೇಕೆಂದು ಅನಿಸಿತು. ಎತ್ತರವನ್ನು ಹೆಚ್ಚಿಸುವ ಈ ಪೈಪೋಟಿಯಲ್ಲಿ ವಿಂಧ್ಯಾಚಲ ಪರ್ವತವು ಶಿವನನ್ನು ಆರಾಧಿಸತೊಡಗಿತು. ಶಿವನು ಅದರ ಮೇಲೆ ಪ್ರಸನ್ನನಾಗಿ ಅದಕ್ಕೆ ವರ ನೀಡಿದನು. ಅದರಿಂದ ವಿಂಧ್ಯಾಚಲ ಪರ್ವತ ಎಷ್ಟು ಎತ್ತರಕ್ಕೆ ಬೆಳೆಯಿತೆಂದರೆ ಅದನ್ನು ಏರಲು ಇಳಿಯಲು ಜನರಿಗೆ ಕಠಿಣವಾಗತೊಡಗಿತು ಮತ್ತು ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಸಂಪರ್ಕ ಕಡಿದು ಹೋಯಿತು. ಈ ಸಂಕಟದಿಂದ ಹೊರಗೆ ಬರಲು ಶಿವನ ಆಜ್ಞೆಯಿಂದ ಅಗಸ್ತ್ಯ ಋಷಿಗಳು ವಿಂಧ್ಯಾಚಲ ಪರ್ವತವನ್ನು ದಾಟಿ ಹೋಗಲು ಅದಕ್ಕೆ ಬಗ್ಗಲು ಹೇಳುತ್ತಾರೆ. ಅದಕ್ಕನುಸಾರ ವಿಂಧ್ಯಾಚಲ ಪರ್ವತವು ಅಗಸ್ತ್ಯ ಋಷಿಗಳ ಗೌರವವನ್ನು ಕಾಪಾಡಲು ಕೆಳಗೆ ಬಾಗುತ್ತದೆ. ಇದರಿಂದ ಅದರ ಮಹಾಕಾಯ ಎತ್ತರ ಕಡಿಮೆಯಾಗುತ್ತದೆ ಮತ್ತು ಅಗಸ್ತ್ಯ ಋಷಿಗಳಿಗೆ ವಿಂಧ್ಯಾಚಲ ಪರ್ವತವನ್ನು ದಾಟಿ ಹೋಗಲು ಸಾಧ್ಯವಾಗುತ್ತದೆ. ಅನಂತರ ದೇವರ್ಷಿ ನಾರದರು ವಿಂಧ್ಯಾಚಲಕ್ಕೆ, “ಅರೆ, ಅಗಸ್ತ್ಯ ಋಷಿಗಳು ನಿನ್ನ ಎತ್ತರವನ್ನು ಕಡಿಮೆ ಮಾಡಲು, ಅಂದರೆ ನಿನ್ನಲ್ಲಿನ ಅಹಂಕಾರವನ್ನು ಕಡಿಮೆ ಮಾಡಲು ಹೇಳಿದ್ದಾರೆ. ಆದ್ದರಿಂದ ನೀನು ಈಗ ಪುನಃ ಶಿವನ ಆರಾಧನೆ ಮಾಡು ಮತ್ತು ನಿನ್ನ ಎತ್ತರವನ್ನು ಮೊದಲಿನಂತೆ ಮಾಡಲು ಆಶೀರ್ವಾದವನ್ನು ಬೇಡು ಎಂದು ಹೇಳುತ್ತಾರೆ. ದೇವರ್ಷಿ ನಾರದರು ಮಾಡಿದ ಪ್ರಬೋಧನೆಯಿಂದ ಪ್ರಭಾವಿತವಾಗಿ ವಿಂಧ್ಯಾಚಲ ಪರ್ವತವು ಪುನಃ ಶಿವನ ಆರಾಧನೆಯನ್ನು ಮಾಡಿ ಅವನನ್ನು ಪುನಃ ಪ್ರಸನ್ನಗೊಳಿಸಿಕೊಳ್ಳುತ್ತದೆ. ಅದರಿಂದ ಶಿವನು ಪ್ರಸನ್ನನಾಗಿ ಅದರ ಹೆಚ್ಚಾದ ಎತ್ತರವನ್ನು ಕಡಿಮೆ ಮಾಡಿ ಅದನ್ನು ಮೊದಲಿನಂತೆಯೆ ಮಾಡುತ್ತಾನೆ. ಇದರಿಂದ ‘ಶಿವನಲ್ಲಿ ಎತ್ತರವನ್ನು ಹೆಚ್ಚಿಸುವ ಮತ್ತು ಅದನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ, ಎಂಬುದು ದೃಢವಾಗತ್ತದೆ.

೨. ಭಗವಾನ ಶ್ರೀಕೃಷ್ಣನ ಆಜ್ಞೆಗನುಸಾರ ಬಲರಾಮನು ಜ್ಯೋತಿಷ್ಮತಿಯ ಎತ್ತರವನ್ನು ಕಡಿಮೆ ಮಾಡಿ ನಂತರ ಅವಳೊಂದಿಗೆ ವಿವಾಹವಾಗುವುದು

ಸತ್ಯಯುಗದಲ್ಲಿ ರಾಜಾ ಕುಕುದ್ಮಿಗೆ ಯಜ್ಞಕುಂಡದಿಂದ ‘ಜ್ಯೋತಿಷ್ಮತಿ ಎಂಬ ದಿವ್ಯ ಪುತ್ರಿ ಪ್ರಾಪ್ತವಾಗುತ್ತಾಳೆ. ಅವಳು ವಿವಾಹಯೋಗ್ಯಳಾದಾಗ ಅವಳಿಗಾಗಿ ಸಂಪೂರ್ಣ ಪೃಥ್ವಿಯಲ್ಲಿ ಹುಡುಕಾಡಿದರೂ ಯೋಗ್ಯ ವರ ಸಿಗುವುದಿಲ್ಲ. ಆದ್ದರಿಂದ ಅವರು ಜ್ಯೋತಿಷ್ಮತಿಯೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಅಲ್ಲಿ ಬ್ರಹ್ಮದೇವರು ಧ್ಯಾನದಲ್ಲಿದ್ದ ಕಾರಣ ಅವರಿಗೆ ಕೆಲವು ಕ್ಷಣ ಕಾಯಬೇಕಾಗುತ್ತದೆ. ಬ್ರಹ್ಮದೇವರು ಧ್ಯಾನದಿಂದ ಹೊರಗೆ ಬಂದಾಗ ರಾಜಾ ಕುಕುದ್ಮಿ ತನ್ನ ಸಮಸ್ಯೆಯನ್ನು ಹೇಳುತ್ತಾನೆ. ಆಗ ಬ್ರಹ್ಮದೇವರು, ಬ್ರಹ್ಮಲೋಕದ ಕಾಲಗಣನೆ ಮತ್ತು ಪೃಥ್ವಿಯ ಕಾಲಗಣನೆ ಭಿನ್ನವಾಗಿರುವುದರಿಂದ ಆ ಕೆಲವೇ ಕ್ಷಣಗಳಲ್ಲಿ ಪೃಥ್ವಿಯಲ್ಲಿ ಸತ್ಯಯುಗ ಮತ್ತು ತ್ರೇತಾಯುಗ ಮುಗಿದು ಈಗ ದ್ವಾಪರಯುಗ ಆರಂಭವಾಗಿರುವುದರಿಂದ ರಾಜಾ ಕುಕುದ್ಮಿಯು ತಕ್ಷಣ ಪುತ್ರಿ ಯೊಂದಿಗೆ ಪೃಥ್ವಿಗೆ ಹೋಗಿ ಶ್ರೀಕೃಷ್ಣನ ಅಣ್ಣ ‘ಸಂಕರ್ಷಣ ಅಥವಾ ‘ಶೇಷನಾಗ ಬಲರಾಮನೊಂದಿಗೆ ಅವಳ ವಿವಾಹ ಮಾಡಿಕೊಡಲು ಹೇಳುತ್ತಾರೆ. ಬ್ರಹ್ಮದೇವರ ಆಜ್ಞೆಗನುಸಾರ ರಾಜಾ ಕುಕುದ್ಮಿ ರಾಜಕುಮಾರಿಯೊಂದಿಗೆ ದ್ವಾರಕಾ ನಗರಕ್ಕೆ ಬಂದು ಶ್ರೀಕೃಷ್ಣ ಮತ್ತು ಬಲರಾಮರನ್ನು ಭೇಟಿಯಾಗುತ್ತಾರೆ. ಸತ್ಯಯುಗದಲ್ಲಿ ಮನುಷ್ಯ, ಮರ-ಗಿಡಗಳು, ಪಶು-ಪಕ್ಷಿ ಇತ್ಯಾದಿಗಳ ಕಾಯಾ ಅಂದರೆ ಶರೀರದ ಗಾತ್ರ ಮತ್ತು ಎತ್ತರವೂ ತುಂಬಾ ಹೆಚ್ಚಿತ್ತು. ಯುಗ ಬದಲಾದಂತೆ ಅವರ ಶರೀರ ಮತ್ತು ಎತ್ತರ ಚಿಕ್ಕದಾಗುತ್ತಾ ಹೋಯಿತು. ಆದ್ದರಿಂದ ಸತ್ಯಯುಗದ ರಾಜಾ ಕುಕುದ್ಮಿ ಮತ್ತು ಜ್ಯೋತಿಷ್ಮತಿ ಇವರ ಶರೀರ ಮತ್ತು ಎತ್ತರ ದ್ವಾಪರಯುಗದ ಶ್ರೀಕೃಷ್ಣ ಮತ್ತು ಬಲರಾಮರ ಎತ್ತರಕ್ಕಿಂತ ಅನೇಕ ಪಟ್ಟು ಜಾಸ್ತಿಯಿತ್ತು. ಆದ್ದರಿಂದ ರಾಜಾ ಕುಕುದ್ಮಿಗೆ ಚಿಂತೆ ಕಾಡುತ್ತಿತ್ತು. ಅಂತರ್ಯಾಮಿ ಶ್ರೀಕೃಷ್ಣನು ರಾಜನ ಚಿಂತೆಯನ್ನು ಗುರುತಿಸಿ ಬಲರಾಮನಿಗೆ ದೈವೀಶಕ್ತಿಯಿಂದ ಜ್ಯೋತಿಷ್ಮತಿಯ ಎತ್ತರವನ್ನು ಕಡಿಮೆ ಮಾಡಲು ಹೇಳಿದಾಗ ಬಲರಾಮನು ದಿವ್ಯ ನೇಗಿಲಿನ ಶಕ್ತಿಯನ್ನು ಪ್ರಯೋಗಿಸಿ ಜ್ಯೋತಿಷ್ಮತಿಯ ಎತ್ತರವನ್ನು ಕಡಿಮೆ ಮಾಡಿ ಅವಳೊಂದಿಗೆ ವಿವಾಹವಾದನು. ಅನಂತರ ಜ್ಯೋತಿಷ್ಮತಿಗೆ ‘ರೇವತಿ ಎಂದು ನಾಮಕರಣ ಮಾಡಲಾಯಿತು.

೩. ಅನೇಕ ದೇವತೆಗಳು ಮತ್ತು ಸಂತರು ತಮ್ಮ ಅಪಾರ ಕೃಪೆಯಿಂದ ಅನೇಕ ವ್ಯಥಿತ ಭಕ್ತರನ್ನು ಉದ್ಧರಿಸುವುದು

ಈ ರೀತಿ ಹಿಂದೂ ದೇವತೆಗಳು ಕೇವಲ ಭಕ್ತರ ಎತ್ತರವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದಕ್ಕಷ್ಟೆ ತಮ್ಮ ಕಾರ್ಯವನ್ನು ಸೀಮಿತವಾಗಿಡದೆ, ಅನೇಕ ದೈವೀ ಕಾರ್ಯಗಳನ್ನು ಮಾಡಿದ್ದಾರೆ. ಕೇವಲ ೧೬ ವರ್ಷಗಳ ಅಲ್ಪಾಯುಷ್ಯವಿದ್ದ ಬಾಲ ಮಾರ್ಕಾಂಡೇಯನ ಭಕ್ತಿಗೆ ಪ್ರಸನ್ನನಾದ ಶಿವನು ಅವನಿಗೆ ೭ ಕಲ್ಪಾಂತ್ಯದ ವರೆಗಿನ (೪ ಯುಗಗಳು ಕೂಡಿ ಒಂದು ಕಲ್ಪವಾಗುತ್ತದೆ, ಅಂತಹ ೭ ಕಲ್ಪ) ಆಯುಷ್ಯವನ್ನು ನೀಡಿ ಆಶೀರ್ವದಿಸಿದನು. ಅದೇ ರೀತಿ ಭಗವಾನ ಶ್ರೀಕೃಷ್ಣನು ಗೂನು ಬೆನ್ನಿನ ಮತ್ತು ಕುರೂಪಿ ಕುಬ್ಜೆಯನ್ನು ಉದ್ಧರಿಸಿ ಅವಳ ಗೂನನ್ನು ದೂರ ಮಾಡಿ ಅವಳನ್ನು ಸುಂದರ ಯುವತಿಯನ್ನಾಗಿಸಿದನು. ಶಿವನು ಯಕ್ಷ ಕುಬೇರನಿಗೆ ಧನವನ್ನು ನೀಡಿ ಧನವನ್ನು ಸಂಗ್ರಹ ಮಾಡುವ ‘ಯಕ್ಷರಾಜನನ್ನಾಗಿ ಮಾಡಿದನು, ಮತ್ತು ಭಗವಾನ ಶ್ರೀಕೃಷ್ಣನು ನಿರ್ಗತಿಕ ಸುದಾಮನಿಗೆ ಬಹಳಷ್ಟು ಧನ ಮತ್ತು ವೈಭವವನ್ನು ನೀಡಿ ಸುದಾಮನಗರಿಯನ್ನು ನಿರ್ಮಿಸಿದನು. ಕ್ಷಯರೋಗ ಪೀಡಿತ ಚಂದ್ರ ಮತ್ತು ಕುಷ್ಠರೋಗ ಮತ್ತು ಕಳಂಕಿತನಾಗಿದ್ದ ಇಂದ್ರನನ್ನು ಶಿವನು ಉದರಿಸಿದನು. ಕಲಿಯುಗದಲ್ಲಿ ಸಂತ ನಾಮದೇವರ ಪ್ರಾರ್ಥನೆಯಿಂದ ಶ್ರೀ ವಿಠ್ಠಲನ ಕೃಪೆಯಿಂದ ಸಂತ ಗೋರಾಕುಂಬಾರರ ತುಂಡಾದ ಎರಡೂ ಕೈಗಳು ಪುನಃ ಬಂದವು ಮತ್ತು ಶ್ರೀನೃಸಿಂಹ ಸರಸ್ವತಿ ಇವರ ಕೃಪೆಯಿಂದ ಒಬ್ಬ ಬ್ರಾಹ್ಮಣ ಬಾಲಕನ ತುಂಡಾದ ನಾಲಿಗೆ ಪುನಃ ಬಂದು ಅವನು ವೇದಶಾಸ್ತ್ರಸಂಪನ್ನ ಮಹಾಪಂಡಿತನಾದನು.

೪. ದೇವತೆಗಳಲ್ಲಿ ಅಷ್ಟಮಹಾಸಿದ್ಧಿಗಳು ಇರುವುದರಿಂದ ಅವರು ಸಿದ್ಧಿಗಳ ಬಲದಿಂದ ತಮ್ಮ ಶರೀರವನ್ನು ಚಿಕ್ಕದು ಅಥವಾ ದೊಡ್ಡದು ಮಾಡಲು ಬರುತ್ತದೆ

ಹಿಂದೂಗಳ ಅನೇಕ ದೇವತೆಗಳಲ್ಲಿ ಅಷ್ಟಮಹಾಸಿದ್ಧಿ, ಅಂದರೆ ದಿವ್ಯ ಮತ್ತು ಗೂಢ ಶಕ್ತಿಗಳಿವೆ. ಅವುಗಳ ಮೂಲಕ ಅವರು ತಮ್ಮ ಶರೀರವನ್ನು ದೊಡ್ಡದು ಅಥವಾ ಚಿಕ್ಕದು ಮಾಡಿ, ಚಿಕ್ಕದು ಅಥವಾ ವಿರಾಟ ರೂಪ ಧಾರಣೆ ಮಾಡಿ ದೈವೀ ಕಾರ್ಯವನ್ನು ಮಾಡಬಹುದು. ಅಷ್ಟಮಹಾಸಿದ್ಧಿಯ ಸವಿಸ್ತಾರ ಮಾಹಿತಿ ಮುಂದಿನಂತಿದೆ.

೪ ಅ. ಮತ್ಸ್ಯಾವತಾರವು ಲಘುರೂಪವನ್ನು ತ್ಯಜಿಸಿ ವಿರಾಟ ರೂಪವನ್ನು ತಾಳುವುದು : ‘ಅಣಿಮಾ ಮತ್ತು ‘ಮಹಿಮಾ ಈ ಸಿದ್ಧಿಯಿಂದ ಸ್ವಯಂಭೂ ಮನುವಿನ ಕಮಂಡಲದಲ್ಲಿದ್ದ ಚಿಕ್ಕ ಮೀನಿನ ಆಕಾರ ಉತ್ತರೋತ್ತರ ಬೆಳೆಯುತ್ತಾ ಹೋದಂತೆ ಅದನ್ನು ಅನುಕ್ರಮವಾಗಿ ಹೊಂಡ, ಕೆರೆ, ನದಿ ಮತ್ತು ಕೊನೆಗೆ ಸಮುದ್ರದಲ್ಲಿ ಬಿಡಬೇಕಾಯಿತು. ಸಮುದ್ರಕ್ಕೆ ಹೋದಾಗ ಸಣ್ಣ ಮೀನಿನ ರೂಪದಲ್ಲಿ ಅವತರಿಸಿದ ಶ್ರೀವಿಷ್ಣುವಿನ ಮೊದಲ ಅವತಾರ ‘ಮತ್ಸ್ಯಾವತಾರ ಪ್ರಕಟವಾಯಿತು.

೪ ಆ. ವಾಮನನು ಕುಳ್ಳವಟುವಿನ ರೂಪವನ್ನು ತ್ಯಜಿಸಿ ವಿಶ್ವವ್ಯಾಪಿ ವಿರಾಟ ರೂಪವನ್ನು ಧರಿಸುವುದು : ಅದೇ ರೀತಿ ಕುಳ್ಳ ವಟುವಿನ ರೂಪದಲ್ಲಿನ ಶ್ರೀವಿಷ್ಣು ಬಲಿರಾಜನಿಂದ ೩ ಹೆಜ್ಜೆ ಭೂಮಿ ಕೇಳಿ, ಅವನು ವಿಶಾಲಕಾಯ ರೂಪವನ್ನು ಧರಿಸಿ ತ್ರಿಲೋಕವನ್ನು ವ್ಯಾಪಿಸಿ ‘ವಾಮನಾವತಾರವನ್ನು ಪ್ರಕಟಿಸಿದನು.

೪ ಇ. ಹನುಮಂತನು ಅವಶ್ಯಕತೆಗನುಸಾರ ವಿರಾಟ ಮತ್ತು ಕಿರು ರೂಪವನ್ನು ತಾಳುವುದು : ಅದೇ ರೀತಿ ಸೀತಾಮಾತೆಯನ್ನು ಹುಡುಕಲು ವಾನರರು ಭಾರತದ ದಕ್ಷಿಣದ ದಂಡೆಯ ಮೇಲೆ ಬಂದಾಗ ಹನುಮಂತನು ಮಹಾಕಾಯ ರೂಪವನ್ನು ತಾಳಿ ೧೦೦ ಯೋಜನೆ (ಅಂದಾಜು ೪೦೦ ಕಿ.ಮೀ.) ಸಮುದ್ರ ದಾಟಿ ಲಂಕೆಯೊಳಗೆ ಪ್ರವೇಶಿಸಿದನು ಮತ್ತು ಅಶೋಕವನದಲ್ಲಿದ್ದ ಸೀತಾಮಾತೆಯ ಮುಂದೆ ಕಿರುರೂಪದಲ್ಲಿ ಪ್ರಕಟವಾಗಿದ್ದನು.

೫. ಭಾರತೀಯ ಸಂಸ್ಕೃತಿ ‘ಮೂರ್ತಿ ಚಿಕ್ಕದು; ಆದರೆ ಕೀರ್ತಿ ದೊಡ್ಡದು !, ಎಂಬ ತತ್ತ್ವವನ್ನು ನಂಬುತ್ತದೆ

ಭಾರತೀಯ ಸಂಸ್ಕೃತಿಯು ‘ಮೂರ್ತಿ ಚಿಕ್ಕದು; ಆದರೆ ಕೀರ್ತಿ ದೊಡ್ಡದು !, ಎಂಬ ತತ್ತ್ವದ ಮೇಲೆ ವಿಶ್ವಾಸವಿಟ್ಟಿದೆ.

೫ ಅ. ಗದರಿಸುತ್ತಿದ್ದ ಮೌಲಾನಾ ಶೌಕತ್ ಅಲಿಗೆ ‘ಅಫಝಲಖಾನನ ವಧೆಯನ್ನು ನೆನಪಿಸಿ ನಿರುತ್ತರಗೊಳಿಸಿದ ಸ್ವಾ. ಸಾವರಕರ !

ಯಾವಾಗ ಸ್ವಾತಂತ್ರ್ಯವೀರ ಸಾವರಕರರು ಮುಸಲ್ಮಾನರಿಂದ ಆಗುತ್ತಿದ್ದ ಹಿಂದೂಗಳ ಮತಾಂತರವನ್ನು ವಿರೋಧಿಸುತ್ತಿದ್ದರೋ, ಆಗ ಮೌಲಾನಾ ಶೌಕತ ಅಲೀ ಇವರು ಸ್ವಾತಂತ್ರ್ಯವೀರ ಸಾವರಕರರ ಮೇಲೆ ಬಹಳಷ್ಟು ಕೋಪಿಸಿಕೊಂಡು, “ನೀವು ನನಗಿಂತ ಕುಳ್ಳರಾಗಿದ್ದೀರಿ. ನಾನು ನಿಮ್ಮನ್ನು ಹಿಸುಕಿ ಹಾಕುವೆನು ಎಂದು ಹೇಳಿದರು ಆಗ ಸ್ವಾತಂತ್ರ್ಯವೀರ ಸಾವರಕರರು, “ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ; ಆದರೆ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಅಫಝಲಖಾನನ ಮುಂದೆ ತುಂಬಾ ಕುಳ್ಳರಾಗಿದ್ದರು, ಆದರೂ ಈ ಕಡಿಮೆ ಎತ್ತರವಿರುವ ಮರಾಠಾ ರಾಜರು ಮಹಾಕಾಯ ಮತ್ತು ದೊಡ್ಡದಾಗಿ ಕಾಣಿಸುವ ಪಠಾಣನ ಹೊಟ್ಟೆಯನ್ನು ಬಗೆದಿದ್ದರು. ಇದು ನಿಮಗೆ ನೆನಪಿಲ್ಲವೇ ? ಎಂದು ಉತ್ತರಿಸಿ ಸ್ವಾತಂತ್ರ್ಯವೀರ ಸಾವರಕರರು ಮೌಲಾನಾನ ಬಾಯಿ ಮುಚ್ಚಿಸಿದ್ದರು. (ಆಧಾರ : ೨೪ ಮೇ ೨೦೨೩ ದೈನಿಕ ‘ಸನಾತನ ಪ್ರಭಾತದಲ್ಲಿನ ಪುಟ ೫ ರಲ್ಲಿನ ‘ಸ್ವಾತಂತ್ರ್ಯವೀರ ಸಾವರ್ಕರರ ರಾಷ್ಟ್ರವಾದ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಚಾರ ಈ ಲೇಖನದಿಂದ)

೫ ಆ. ಮೂಲ ‘ಅರ್ಜೆಂಟಿನಾ ರಾಷ್ಟ್ರದ ಬಡ ನಾಗರಿಕ ಮತ್ತು ಕುಳ್ಳ (ಗಿಡ್ಡ) ಫುಟ್‌ಬಾಲ್ ಆಟಗಾರನಾಗಿದ್ದ ‘ಲಿಯೋನೆಲ್ ಮೆಸ್ಸೀ ಇವನು ಜಗತ್ಪ್ರಸಿದ್ಧ ‘ಸಾಕರ್ ವಿಜೇತನಾಗಿ ಕೋಟ್ಯಾಧೀಶ ನಾಗುವುದು : ‘ಅರ್ಜೆಂಟಿನಾ ರಾಷ್ಟ್ರದಲ್ಲಿನ ಬಡ ಕುಟುಂಬದಲ್ಲಿ ಜನಿಸಿದ ಮತ್ತು ಸದ್ಯ ‘ಬಾರ್ಸಿಲೋನಾ ಎಫ್.ಸಿ. ಈ ಫುಟ್‌ಬಾಲ್ ತಂಡದ ಅಗ್ರಗಣ್ಯ ಫುಟ್‌ಬಾಲ್‌ಪಟು ‘ಲಿಯೋನೇನ್ ಮೆಸ್ಸೀ ಇವನ ಬಾಲ್ಯದಲ್ಲಿ ಅವನಲ್ಲಿ ‘ಗ್ರೋಥ್ ಹಾರ್ಮೋನ್ಸ್‌ನ ಅಭಾವ (growth hormone deficiency), ಅಂದರೆ ‘ಶರೀರದ ಬೆಳವಣಿಗೆ ಬೇಕಾಗುವ ಅಂತಃಸ್ರಾವದ (ಹಾರ್ಮೋನಿನ) ಕೊರತೆ ಇತ್ತು. ಆದ್ದರಿಂದ ಚಿಕ್ಕಂದಿನಲ್ಲಿ ಅವನ ಶರೀರದ ಬೆಳವಣಿಗೆ ಕಡಿಮೆ ಆಗಿತ್ತು. ಅದಕ್ಕಾಗಿ ಅವನ ೧೧ ನೇ ವಯಸ್ಸಿನಿಂದ ಪ್ರತಿದಿನ ಕಾಲುಗಳ ಸ್ನಾಯುಗಳಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತಿತ್ತು. ಅವನ ಎತ್ತರ ಸಾಮಾನ್ಯ ಮಕ್ಕಳಿಗಿಂತ ಕಡಿಮೆಯಿದ್ದ ಕಾರಣ, ಅಂದರೆ ಅವನು ಕುಳ್ಳನಾಗಿದ್ದ ಕಾರಣ ಆಟದಲ್ಲಿ ಅವನನ್ನು ಯಾವಾಗಲೂ ಬದಿಗಿರಿಸಲಾಗುತ್ತಿತ್ತು. ಹೀಗಿದ್ದರೂ ಅವನು ಎದೆಗುಂದದೆ ಕೌಶಲ್ಯದಿಂದ ಫುಟ್‌ಬಾಲ್ ಆಡುವುದನ್ನು ಮುಂದುವರಿಸಿದನು. ಕೊನೆಗೆ ‘ಬಾರ್ಸಿಲೋನಾ ಎಫ್.ಸಿ ಈ ತಂಡದ ಆಯೋಜಕರು ಅವನ ಕೌಶಲ್ಯವನ್ನು ಗಮನಿಸಿ ಅವನನ್ನು ‘ಬಾರ್ಸಿಲೋನಾ ಎಫ್.ಸಿ. ಎಂಬ ಸುಪ್ರಸಿದ್ಧ ಫುಟ್‌ಬಾಲ್ ತಂಡದಲ್ಲಿ ಸೇರಿಸಿಕೊಂಡರು. ಈ ತಂಡದ ಮೂಲಕ ಅವನು ‘ಸಾಕರ್ ಈ ಜಾಗತಿಕ ಫುಟ್‌ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ ನಿರಂತರ ೫ ಬಾರಿ ‘ಉತ್ಕೃಷ್ಟ ಆಟಗಾರನೆಂದು ಬಹುಮಾನವನ್ನು ಗಳಿಸಿದನು. ಈಗ ಲಿಯೋನೆಲ್ ಮೆಸ್ಸೀ ಜಗತ್ಪ್ರಸಿದ್ಧ ಫುಟ್‌ಬಾಲ್ ಪಟು ಆಗಿದ್ದು ಅವನು ‘ಯುನಿಸೆಫ್ ಈ ಜಾಗತಿಕ ಸಂಘಟನೆಯ ಪ್ರತಿನಿಧಿಯಾಗಿದ್ದಾನೆ. ಅದೇ ರೀತಿ ಅವನು ಅನಾಥ ಮಕ್ಕಳಿಗಾಗಿ ಒಂದು ಸಂಘಟನೆಯನ್ನು ನಡೆಸುತ್ತಾ ಆ ಮಕ್ಕಳಿಗೆ ಆಟದ ತರಬೇತಿಯನ್ನೂ ನೀಡುತ್ತಿದ್ದಾನೆ.

ತಾತ್ಪರ್ಯ

ಈ ರೀತಿ ಛತ್ರಪತಿ ಶಿವಾಜಿ ಮಹಾರಾಜರಿರಲಿ ಆಥವಾ ಫುಟ್‌ಬಾಲ್ ಪಟು ಲಿಯೋನಿಲ್ ಮೆಸ್ಸೀ ಇರಲಿ, ಅವರು ಯಾವತ್ತೂ ತಮ್ಮ ಕೊರತೆಗಾಗಿ ದೈವ (ಅಂದರೆ ಪ್ರಾರಬ್ಧ ಅಥವಾ ಹಣೆಬರಹ) ಕಾರಣವೆಂದು ಹೇಳಿ ದೇವರ ಮೇಲೆ ಆರೋಪ ಮಾಡಲಿಲ್ಲ. ಅವರು ತಮ್ಮ ಆತ್ಮವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಲಿಲ್ಲ; ಏಕೆಂದರೆ ಪರಾಕ್ರಮ ತೋರಿಸಲು ಶರೀರದ ಎತ್ತರದಂತಹ ಬಾಹ್ಯ ವಿಷಯಗಳದ್ದಲ್ಲ; ಪುರುಷಾರ್ಥವನ್ನು ಮಾಡುವ ಮತ್ತು ಕರ್ತೃತ್ವದ ಅವಶ್ಯಕತೆಯಿರುತ್ತದೆ. ದೇಹದ ಎತ್ತರವನ್ನು ಹೆಚ್ಚಿಸುವುದಕ್ಕಿಂತ ಮನಸ್ಸಿನ ಎತ್ತರ, ಅಂದರೆ ವೈಚಾರಿಕ ಸ್ತರ ಮತ್ತು ಆಧ್ಯಾತ್ಮಿಕ ಎತ್ತರ, ಅಂದರೆ ಆಧ್ಯಾತ್ಮಿಕ ಮಟ್ಟ ಹೆಚ್ಚಾದರೆ, ಜೀವನದ ಉತ್ಕರ್ಷವಾಗುತ್ತದೆ. ಈ ಮೇಲಿನ ಎಲ್ಲ ಉದಾಹರಣೆಗಳು ಮತ್ತು ತಾತ್ಪರ್ಯದಿಂದ ಏನು ಸಿದ್ಧವಾಗುತ್ತದೆ, ಎಂದರೆ, ಸೌ. ಜರನಾ ಗರ್ಗ ಇವರು ಹಿಂದೂದ್ರೋಹದಿಂದ ಮಾಡಿದ ಮೇಲಿನ ಹೇಳಿಕೆಯು ಹಿಂದೂ ಧರ್ಮಶಾಸ್ತ್ರದ ಬಗ್ಗೆ ಇರುವ ಅವರ ಅಜ್ಞಾನ ತೋರಿಸುತ್ತದೆ. ಅವರು ದೇವರಿಗೆ ದೋಷ ನೀಡದೆ ಹಿಂದೂ ಧರ್ಮಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿ ಭಗವಂತನ ಮನಃಪೂರ್ವಕ ಭಕ್ತಿಯನ್ನು ಮಾಡಿದರೆ ದೇವರು ಕೇವಲ ಅವರ ಶಾರೀರಿಕ ಎತ್ತರವನ್ನಷ್ಟೆ ಅಲ್ಲ, ಮಾನಸಿಕ ಮತ್ತು ಆಧ್ಯಾತ್ಮಿಕ ಎತ್ತರವನ್ನೂ ಹೆಚ್ಚಿಸಬಲ್ಲನು ಎಂಬುದನ್ನು ಗಮನದಲ್ಲಿಡಬೇಕು.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ ಗೋವಾ. (೨೬.೫.೨೦೨೩)