ಅಮೇರಿಕಾದಲ್ಲಿನ ಅನೇಕ ಭಾರತೀಯ ಮೂಲದ ಸಂಸದರ ಸಹಭಾಗ
ವಾಷಿಂಗ್ಟನ್ (ಅಮೇರಿಕ) – ಅಮೇರಿಕಾದಲ್ಲಿ ಜೂನ್ ೧೪ ರಂದು ಮೊದಲ ಬಾರಿ ‘ಹಿಂದೂ ಅಮೆರಿಕಿ ಶೃಂಗಸಭೆ’ಯ ಆಯೋಜನೆ ಮಾಡಲಾಗಿದೆ. ಈ ಸಭೆಗೆ ಅಮೇರಿಕಾದ ಸಂಸತ್ತಿನ ಸಭಾಪತಿ ಕೆವಿನ್ ಮಕ್ಕರ್ಥಿ ಇವರು ಉದ್ದೇಶಿಸಿ ಮಾತನಾಡುವರು. ‘ಅಮೇರಿಕನ್ಸ್ ಫಾರ್ ಹಿಂದೂ ಪೊಲಿಟಿಕಲ್ ಆಕ್ಷನ್ ಕಮಿಟಿ’ಯು ಇದರ ಆಯೋಜನೆ ಮಾಡಿದೆ. ಈ ಸಭೆಯ ಉದ್ದೇಶ ಹಿಂದೂಗಳ ಸಮಸ್ಯೆಗೆ ಧ್ವನಿ ಎತ್ತುವುದಾಗಿದೆ. ಇದರಲ್ಲಿ ಅಮೇರಿಕಾದಲ್ಲಿನ ೧೩೦ ಭಾರತೀಯ ಮೂಲದ ಅಮೇರಿಕಿ ನಾಯಕರು ಸಹಭಾಗಿ ಆಗುವವರು.
अमेरिका के पहले हिंदू-अमेरिकन समिट में पहुंचेंगे दुनिया के 130 से ज्यादा लीडर्स, इन मुद्दों पर होगी चर्चा#hinduamericansummit #ussummit #worldnewshttps://t.co/AILhAK8WbD
— रिपब्लिक भारत (@Republic_Bharat) June 11, 2023
ಅಮೇರಿಕಾದಲ್ಲಿನ ಹೃದಯ ರೋಗ ತಜ್ಞರಾದ ಡಾ. ರೋಮೇಶ್ ಜಾಪರಾ ಇವರು ಮಾತನಾಡುತ್ತಾ, ಅಮೇರಿಕಾದಲ್ಲಿನ ಹಿಂದೂಗಳು ದೇಶಾದ್ಯಂತ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ; ಆದರೆ ರಾಜಕೀಯ ಮಟ್ಟದಲ್ಲಿ ಅವರು ಬಹಳ ಹಿಂದೆ ಇದ್ದಾರೆ. ‘ಇಕ್ವಾಲಿಟಿ ಲ್ಯಾಬ್ಸ್’ ಮತ್ತು ‘ಕೇರ್’ ನಂತಹ ಸಂಘಟನೆಗಳು ಅಮೇರಿಕಾದಲ್ಲಿ ಹಿಂದೂ ಧರ್ಮವನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿವೆ. ದೇಶದಲ್ಲಿನ ಡೆಮಾಕ್ರೋಟಿಕ್ ಮತ್ತು ರಿಪಬ್ಲಿಕ್ ಈ ಎರಡು ಪಕ್ಷದ ಕೆಲವು ಸಂಸದರು ಈ ಸಭೆಯನ್ನು ಉದ್ದೇಶಿಸಿ ಮಾತನಾಡುವರು, ಎಂದು ಆಸೆ ಇದೆ. ಇದರಲ್ಲಿ ಭಾರತೀಯ ಮೂಲದ ಸಂಸದರ ಸಮಾವೇಶ ಕೂಡ ಇದೆ. ಹಿಂದೂಗಳನ್ನು ಸಂಘಟಿತಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಸಹಭಾಗಿ ಆಗುವ ಸಂಘಟನೆಅಮೇರಿಕನ್ ಹಿಂದೂ ಕೊಯೆಲಿಶನ್, ಅಮೆರಿಕನ್ ಹಿಂದೂ ಫೆಡರೇಶನ್ , ಅಮೇರಿಕನ್ಸ್ ಫಾರ್ ಎಕ್ವಾಲಿಟಿ ಪಿಎಸಿ, ಏಕಲ್ ವಿದ್ಯಾಲಯ, ಫೆಡರೇಶನ್ ಆಫ್ ಇಂಡಿಯನ್ ಅಮೆರಿಕನ್ಸ್, ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡೈಸ್ಪೋರ ಸ್ಟಡೀಸ್, ಹಿಂದೂ ಆಕ್ಷನ್, ಹಿಂದೂ ಆಕ್ಷನ್ ಪಿಎಸಿ ಆಫ್ ಫ್ಲೋರಿಡಾ, ಹಿಂದೂ ಪಿ.ಎ.ಸಿ.ಆರ್., ಹಿಂದೂ ಸ್ವಯಂಸೇವಕ ಸಂಘ, ಹಿಂದೂ ವಿಶ್ವವಿದ್ಯಾಲಯ, ಕಾಶ್ಮೀರಿ ಹಿಂದೂ ಫೌಂಡೇಶನ್, ಪೆಟ್ರಿಯೇಟ್ ಅಮೆರಿಕ, ಸೇವಾ ಇಂಟರ್ನ್ಯಾಷನಲ್, ಯುಎಸ್ ಇಂಡಿಯಾ ರಿಲೇಶನ್ಶಿಪ್ ಕೌನ್ಸಿಲ್ ಮತ್ತು ಅಮೆರಿಕ ಇವುಗಳು ಭಾಗವಹಿಸಲಿವೆ. |