ವಾಷಿಂಗ್ಟನ್ (ಅಮೇರಿಕಾ) – ಭಾರತ ಇದು ಒಂದು ಜೀವಂತ ಪ್ರಜಾಪ್ರಭುತ್ವವಾಗಿದ್ದು ನವದೆಹಲಿಗೆ ಹೋದರೆ ಅದರ ಅನುಭವ ಬರುವುದು, ಎಂದು ಅಮೇರಿಕಾದ ರಾಷ್ಟ್ರೀಯ ಸುರಕ್ಷಾ ಪರಿಷತ್ತಿನ ‘ ಸ್ಟೇಟೆಜಿಕ್ ಕಮ್ಯುನಿಕೇಷನ್’ ನ ಸಮನ್ವಯಕ ಜಾನ ಕಿರ್ಬಿ ಇವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಜೂನ್ ಕೊನೇಯ ವಾರದಲ್ಲಿ ಅಮೇರಿಕಾಗೆ ಹೋಗುವವರಿದ್ದಾರೆ. ಅದರ ಹಿನ್ನೆಲೆಯಲ್ಲಿ ಜಾನ್ ಕಿರ್ಬಿ ಇವರು ಈ ಹೇಳಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
#BreakingNews | “India is a vibrant democracy, go to Delhi and see for yourself, say White House officials ahead of PM Modi’s US visit @abhishekjha157 shares more details with @SakshiLitoriya_#UnitedStates #India #Democracy #WhiteHouse #PMModi #Delhi #JoeBiden pic.twitter.com/CZHWcznuDu
— News18 (@CNNnews18) June 6, 2023
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ಜಾನ್ ಕಿರ್ಬಿ ಇವರು, ನಮಗೆ ಆಸೆ ಇದೆ, ಎರಡು ದೇಶದಲ್ಲಿನ ಸ್ನೇಹ ಮತ್ತು ವ್ಯಾಪಾರ ದ ಪಾಲುದಾರಿಕೆ ಇನ್ನೂ ದೃಢವಾಗಲಿದೆ. ಎರಡು ದೇಶದಲ್ಲಿನ ಆರ್ಥಿಕ ವ್ಯಾಪಾರ ಹೆಚ್ಚು ಪ್ರಮಾಣದಲ್ಲಿ ಇದೆ. ಅನೇಕ ರೀತಿಯಲ್ಲಿ ಭಾರತಕ್ಕೆ ನಿಶ್ಚಿಯವಾಗಿ ಮಹತ್ವವಿದೆ. ಅದಕ್ಕಾಗಿ ವಿವಿಧ ಕಾರಣಗಳು ಕೂಡ ಇವೆ. ಈ ಎಲ್ಲಾ ಅಂಶಗಳ ಬಗ್ಗೆ ಮಾತನಾಡುವುದಕ್ಕಾಗಿ ಮತ್ತು ಸ್ನೇಹ ಹೆಚ್ಚಿಸುವುದಕ್ಕಾಗಿ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಸ್ವಾಗತಕ್ಕಾಗಿ ಕಾಯುತ್ತಿದ್ದೇವೆ, ಎಂದು ಹೇಳಿದರು.