‘ನಾನು ರಾಮ, ಕೃಷ್ಣ ಮತ್ತು ವಿಷ್ಣು ಇವರ ವೇಷಭೂಷಗಳನ್ನು ಧರಿಸಿದ ನಂತರ ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ‘ಡಾಕ್ಟರರು ತಮ್ಮನ್ನು ರಾಮ, ಕೃಷ್ಣ ಮತ್ತು ವಿಷ್ಣು ಎಂದು ತಿಳಿಯುತ್ತಾರೆ, ಎಂದು ಮಾತನಾಡುತ್ತಾರೆ ! ಕೇವಲ ಮಹರ್ಷಿಗಳ ಆಜ್ಞಾಪಾಲನೆ ಎಂದು ನಾನು ಈ ವೇಷಭೂಷಗಳನ್ನು ಧರಿಸುತ್ತೇನೆ, ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅದರ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.
‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ, ಹೀಗೆ ಅಧ್ಯಾತ್ಮದಲ್ಲಿ ಒಂದು ಸಿದ್ಧಾಂತವಿದೆ. ಈ ಸಿದ್ಧಾಂತಕ್ಕನುಸಾರ ನಾವು ಯಾವಾಗ ಯಾವುದಾದರೊಂದು ದೇವತೆಯ ಹೆಸರನ್ನು ಉಚ್ಚರಿಸುತ್ತೇವೆಯೋ, ಆಗ ಆ ದೇವತೆಯ ತತ್ತ್ವವು ಅಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ ಮತ್ತು ನಮಗೆ ಅದರ ಲಾಭವಾಗುತ್ತದೆ. ಇದೇ ಉದ್ದೇಶದಿಂದ ಮಕ್ಕಳಿಗೆ ದೇವತೆ ಗಳ ಹೆಸರುಗಳನ್ನು ಇಡುವ ಪದ್ಧತಿಯಿದೆ. ಅದೇ ರೀತಿ ಯಾವುದಾದರೊಂದು ದೇವತೆಯಂತೆ ಉಡುಪುಗಳನ್ನು ಧರಿಸಿದಾಗಲೂ ಆ ದೇವತೆಯ ತತ್ತ್ವದ ಲಾಭವಾಗುತ್ತದೆ. ಇದೇ ಉದ್ದೇಶದಿಂದ ಮಹರ್ಷಿಗಳು ನನಗೆ ವಿವಿಧ ದೇವತೆಗಳ ಉಡುಪುಗಳನ್ನು ಧರಿಸಲು ಆಜ್ಞೆಯನ್ನು ಮಾಡಿದರು.
ಇದರಲ್ಲಿ ಗಮನದಲ್ಲಿಡುವ ಮಹತ್ವದ ಅಂಶವೆಂದರೆ, ಆಧ್ಯಾತ್ಮಿಕ ಮಟ್ಟ ಕಡಿಮೆ ಇದ್ದಾಗ ಯಾರಾದರೊಬ್ಬರು ಉಚ್ಚ ದೇವತೆಯ ಹೆಸರಿನ ಜಪವನ್ನು ಮಾಡಿದರೆ ಅಥವಾ ಆ ದೇವತೆಯ ಉಡುಪುಗಳನ್ನು ಧರಿಸಿದರೆ ಅವರಿಗೆ ಆ ಶಕ್ತಿ ಸಹನೆಯಾಗದೇ ಅದರ ತೊಂದರೆಯೂ ಆಗಬಹುದು. ಸಂತರ, ಉನ್ನತರ ಆಜ್ಞೆಯೆಂದು ಹಾಗೆ ಮಾಡಿದರೆ ಅವರ ಸಂಕಲ್ಪಶಕ್ತಿಯಿಂದ ಸಂಬಂಧಪಟ್ಟ ದೇವತೆಯ ಶಕ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭವೂ ಆಗುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೨.೫.೨೦೨೩)