ಮೂಲ ಸಮಸ್ಯೆ ಮತ್ತು ಅಂತಿಮ ಉಪಾಯ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಸಾಗರ (ಮಧ್ಯಪ್ರದೇಶ)ದಲ್ಲಿ ಮಾತನಾಡುವಾಗ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡಬೇಕೆಂದು ಉದ್ಗಾರ ತೆಗೆದರು. ‘ಎಲ್ಲಿಯ ತನಕ ದೇವಸ್ಥಾನಗಳಲ್ಲಿ ಸನಾತನ ಎಂದರೇನು ? ಹಿಂದೂ ಧರ್ಮ ಎಂದರೇನು ? ಎಂಬುದು ಕಲಿಸುವುದಿಲ್ಲವೋ, ಅಲ್ಲಿಯ ತನಕ ಮತಾಂತರವಾಗುತ್ತಲೇ ಇರುವುದು’, ಎಂದು ಹೇಳಿದರು. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಬಹಳಷ್ಟು ಬಾರಿ ಹಿಂದೂಗಳ ಕುರಿತು ಅತ್ಯಂತ ಸತ್ಯ ವಿಷಯವನ್ನು ಹೇಳುತ್ತಾರೆ. ಅವರ ಹೇಳಿಕೆಗಳು ಹಿಂದೂಗಳ ಮೂಲ ಸಮಸ್ಯೆ ಹಾಗೂ ಅವುಗಳ ನಿವಾರಣೋಪಾಯವಾಗಿರುತ್ತವೆ. ಆದ್ದರಿಂದ ಶ್ರದ್ಧಾವಂತ ಸನಾತನ ಹಿಂದೂಗಳನ್ನು ನಿರಂತರ ಟೀಕಿಸುವ ಮಾಧ್ಯಮಗಳು, ಪ್ರಗತಿಪರರೆಂದು ಹೇಳಿಸಿಕೊಳ್ಳುವ ಹಿಂದೂದ್ವೇಷಿಗಳು ಹಾಗೂ ಹಿಂದೂಗಳನ್ನು ನಾಶಗೊಳಿಸುವ ಪಣತೊಟ್ಟಿರುವ ಇತರ ಧರ್ಮೀಯರಿಗೆ ಇಂದು ಧರ್ಮದಿಂದ ನಿಜವಾಗಿ ದೂರವಾಗಿರುವ ಬಹುಸಂಖ್ಯಾತ ಹಿಂದೂಗಳು ಚರ್ಚೆಯ ವಿಷಯವಾಗುತ್ತಾರೆ. ‘ಹಿಂದೂಗಳ ಸದ್ಯಸ್ಥಿತಿ ದಯನೀಯವಾಗಿರುವುದೇಕೆ ?’, ಇತ್ಯಾದಿ ವಿಷಯಗಳಿಗೆ ಅವರ ಹೇಳಿಕೆಗಳಿಂದ ಸಾಕಷ್ಟು ಉತ್ತರಗಳು ಸಿಗುತ್ತವೆ. ಇಲ್ಲಿ ಕೂಡ ಅವರು ಈ ಮೇಲಿನ ಹೇಳಿಕೆಯನ್ನು ನೀಡಿ ಹಿಂದೂಗಳ ನಿಜವಾದ ಸಮಸ್ಯೆಗಳನ್ನು ಎತ್ತಿ ಹಿಡಿದಿದ್ದಾರೆ. ಪೂರ್ಣ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಾಗುತ್ತಿರುವ ಹಿಂದೂಗಳ ಮತಾಂತರಗಳು ಆಮಿಷ ಅಥವಾ ಮೋಸದಿಂದ ಅಥವಾ ಇವೆರಡೂ ಕಾರಣಗಳಿಂದ ಆಗುತ್ತಿದ್ದರೂ, ಹಿಂದೂಗಳಿಗೆ ಮೂಲತಃ ತಮ್ಮ ಸನಾತನ, ಅಂದರೆ ವೈದಿಕ ಹಿಂದೂ ಧರ್ಮದ ಶಿಕ್ಷಣವಿದ್ದರೆ ಅವರು ಆಮಿಷಕ್ಕೆ ಬಲಿಯಾಗಲಾರರು ಅಥವಾ ಮೋಸ ಹೋಗಲಾರರು. ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದೇ ಮತಾಂತರವನ್ನು ತಡೆಗಟ್ಟುವ ಏಕೈಕ ಮಾರ್ಗವಾಗಿದೆ. ಎಂಬುದನ್ನೇ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಸರಿಯಾಗಿ ಪತ್ತೆಹಚ್ಚಿದ್ದಾರೆ. ಧರ್ಮ ಮತ್ತು ಅಧ್ಯಾತ್ಮದ ಜ್ಞಾನವಿರುವ ಮತ್ತು ಸ್ವತಃ ಸಾಧನೆ ಮಾಡುವವರೇ ಈ ರೀತಿ ಹಿಂದೂಗಳ ಸಮಸ್ಯೆಗಳಿಗೆ ಪರಿಹಾರೋಪಾಯ ಹೇಳಬಲ್ಲರು. ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರದ ನಿಮಿತ್ತದಲ್ಲಿ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡುವಾಗ ಅವರು ನೇರವಾಗಿ ಶ್ರೀಕೃಷ್ಣನ ವಚನದ ಉದಾಹರಣೆಯನ್ನೇ ನೀಡಿದ್ದಾರೆ. ‘ಇತರ ಧರ್ಮದ ವಿಚಾರಕ್ಕಿಂತ ಸ್ವಧರ್ಮದಲ್ಲಿನ ಮರಣವೇ ಉತ್ತಮ’, ಎಂದು ಹೇಳಿ ಅವರು ಮತಾಂತರಕ್ಕೆ ಬಲಿಯಾಗುವವರಿಗೆ ‘ಧರ್ಮಶಾಸ್ತ್ರ’ವನ್ನು ತಿಳಿಸಿ ಹೇಳಿದ್ದಾರೆ. ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ನಡುನಡುವೆ ‘ಘರ್‌ವಾಪಸಿ’ಯ ಉಪಕ್ರಮವನ್ನು ಕೂಡ ತಮ್ಮ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹಮ್ಮಿಕೊಂಡು ಮತಾಂತರಿಸುವವರ ಬಣ್ಣ ಬಯಲು ಮಾಡುತ್ತಾರೆ; ಆದರೆ ಈ ಸಂದರ್ಭದಲ್ಲಿ ಅವರು ಮತಾಂತರವನ್ನು ತಡೆಗಟ್ಟಲು ನೇರ ಉಪಾಯವನ್ನು ಹೇಳಿದ್ದಾರೆ. ಈ ಮಾರ್ಗದಲ್ಲಿ ಮುಂದುವರಿಯಬೇಕಾಗಿದೆ. ರಾಜಕಾರಣಿಗಳೂ ಅವರು ಹೇಳಿದ ಮಾರ್ಗವನ್ನು ಅನುಸರಿಸಿದರೆ, ನಿಜವಾಗಿಯೂ ರಾಜ್ಯಾಡಳಿತ ಧರ್ಮಾಡಳಿತಕ್ಕೆ ಮನ್ನಣೆ ನೀಡುತ್ತದೆ’, ಎನ್ನಬಹುದು ಹಾಗೂ ಅದರಿಂದ ಮುಂದಿನ ದಶಕಗಳಲ್ಲಿ ಮತಾಂತರದ ಸಮಸ್ಯೆಯೂ ನಾಶವಾಗಬಹುದು; ಏಕೆಂದರೆ ಧರ್ಮಶಿಕ್ಷಣದಿಂದ ನಿರ್ಮಾಣ ವಾಗುವ ಧರ್ಮಾಭಿಮಾನವೇ ತೀರಾ ಬಡ ಹಿಂದೂಗಳನ್ನು ಮತ್ತು ಲವ್ ಜಿಹಾದ್‌ಗೆ ಬಲಿಯಾಗುವ ಪ್ರತಿಯೊಂದು ಹುಡುಗಿ ಯನ್ನೂ ರಕ್ಷಿಸಬಲ್ಲದು. ಧರ್ಮಶಿಕ್ಷಣ ನೀಡುವ ಸೌಲಭ್ಯ ಸದ್ಯ ಶೈಕ್ಷಣಿಕ ಪಠ್ಯಕ್ರಮದಲ್ಲಿಲ್ಲದ ಕಾರಣ ಸಾತ್ತ್ವಿಕ ಸ್ಥಳವಾಗಿರುವ ದೇವಸ್ಥಾನಗಳೇ ಅದಕ್ಕೆ ಉತ್ತಮ ಮಾಧ್ಯಮಗಳಾಗಿವೆ. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಕಳೆದ ಅನೇಕ ವರ್ಷ ಗಳಿಂದ ಈ ವಿಷಯವನ್ನೇ ಸಮಾಜಕ್ಕೆ ತಲುಪಿಸಲು ವಿವಿಧ ಉಪಕ್ರಮ ಗಳನ್ನು ಮತ್ತು ದೇವಸ್ಥಾನಗಳಲ್ಲಿ ಧರ್ಮಶಿಕ್ಷಣದ ಫಲಕಗಳಿಂದ ಸಮಾಜವನ್ನು ಧರ್ಮಾಚರಣಿಯನ್ನಾಗಿಸಲು ಪ್ರಯತ್ನಿಸುತ್ತಿವೆ.

ಹಿಂದೂ ರಾಷ್ಟ್ರದ ಅಂಶವನ್ನು ಮಂಡಿಸುವ ಧೈರ್ಯ !

ಇಂದು ಎಲ್ಲ ಅಧಿಕಾರ ಕೈಯಲ್ಲಿರುವ ರಾಜಕಾರಣಿಗಳೂ ‘ಹಿಂದೂ ರಾಷ್ಟ್ರ’ದ ವಿಷಯವನ್ನು ಮಂಡಿಸಲು ಹಿಂಜರಿಯುತ್ತಾರೆ; ಏಕೆಂದರೆ ಭಾರತೀಯರಲ್ಲಿ ಆಳವಾಗಿ ಜಾತ್ಯತೀತತೆಯ ಕುಸಂಸ್ಕಾರ ಮಾಡಲಾಗಿದೆ. ಹಿಂದೂಗಳಿಗೂ ‘ಜಾತ್ಯತೀತರಾಗಿರುವುದೇ ಯೋಗ್ಯ’ ಎಂದು ಬೋಧನೆ ನೀಡಿರುವುದರಿಂದ ಎಲ್ಲ ಸ್ತರಗಳಲ್ಲಿ ಅವರ ಮೇಲಾಗುವ ಆಘಾತಗಳ ಬಗ್ಗೆ ಅನೇಕ ದಶಕಗಳಿಂದ ಅವರು ನಿದ್ರಾವಸ್ಥೆಯಲ್ಲಿದ್ದರು. ‘ಹಿಂದೂಗಳ ಮತಾಂತರ’ವೂ ಅದರ ಪರಿಣಾಮವಾಗಿದೆ. ಈಗ ‘ಹಿಂದೂ ರಾಷ್ಟ್ರ’ದ ವಿಷಯದಲ್ಲಿ ಚರ್ಚೆ ಆರಂಭವಾಗಿದೆ, ಆದರೆ ಅದನ್ನು ದೃಢವಾಗಿ ಅತ್ಯಂತ ಆತ್ಮ ವಿಶ್ವಾಸದಿಂದ ಹಾಗೂ ಸಂಪೂರ್ಣ ದೃಢತೆಯಿಂದ ಲಕ್ಷಗಟ್ಟಲೆ ಭಕ್ತರ ಮುಂದೆ ಬೇಡಿಕೆಯನ್ನಿಡುವ ಧೈರ್ಯ ಪಂಡಿತ ಧೀರೇಂದ್ರ ಶಾಸ್ತ್ರೀಯವರಲ್ಲಿ ಇದ್ದ ಕಾರಣ ಅವರು ನಿಜವಾಗಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಲಕ್ಷಗಟ್ಟಲೆ ಹಿಂದೂಗಳಿಗೆ ಹಿಂದೂ ರಾಷ್ಟ್ರದ ಮಹತ್ವವನ್ನು ವಿವರಿಸಿ ಹೇಳುತ್ತಿರುವುದರಿಂದ ನಿಜವಾಗಿಯೂ ಅವರು ಈಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಅವರಲ್ಲಿರುವ ಸಾಧನೆ ಮತ್ತು ಧರ್ಮಶಿಕ್ಷಣದಿಂದಾಗಿಯೇ ಅವರಲ್ಲಿ ಇಂತಹ ಧೈರ್ಯ ಮತ್ತು ಆತ್ಮಬಲ ಉಂಟಾಗಿದೆ. ಹಿಂದೂ ರಾಷ್ಟ್ರದ ಅಂಶವನ್ನು ಎತ್ತಿ ಹಿಡಿದಿರುವುದರಿಂದ ಹಾಗೂ ‘ಘರ್‌ವಾಪಸಿ’ಯ ಉಪಕ್ರಮದಿಂದ ಮೂಲಭೂತವಾದಿ ಮುಸಲ್ಮಾನರು ಅವರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅವರ ಈ ಮೇಲಿನ ಬೇಡಿಕೆಯಿಂದ ‘ಜಮಿಯತ್ ಉಲೇಮಾ ಹಿಂದ್’ ನಂತಹ ಮೂಲಭೂತವಾದಿ ಸಂಘಟನೆಗಳು ಎಂದಿನಂತೆ ‘ಹಿಂದೂ ರಾಷ್ಟ್ರದ ಬೇಡಿಕೆ ಮಾಡಬಹುದಾದರೆ ಇಸ್ಲಾಮೀ ರಾಷ್ಟ್ರ ಹಾಗೂ ಖಲಿಸ್ತಾನದ ಬೇಡಿಕೆ ಮಾಡುವವರು ಹೇಗೆ ದೇಶದ್ರೋಹಿಗಳಾಗುತ್ತಾರೆ ?’, ಎಂದು ಬೊಬ್ಬೆ ಹೊಡೆಯುತ್ತಿವೆ. ಆದ್ದರಿಂದ ‘ನಮ್ಮ ಮೂಲ ಹಿಂದೂ ರಾಷ್ಟ್ರದಲ್ಲಿ ಉದ್ದಟ ಇಸ್ಲಾಮೀ ರಾಷ್ಟ್ರದ ಬೇಡಿಕೆಯನ್ನಿಡುವ ‘ದೇಶದ್ರೋಹಿ’ಗಳನ್ನು ಎದುರಿಸಲು ‘ಬಾಬಾ ಬಾಗೇಶ್ವರ ಧಾಮ’ ಇವರಂತಹ ಸಾಮರ್ಥ್ಯಶಾಲಿ ಹಾಗೂ ಧೈರ್ಯಶಾಲಿ ನೇತೃತ್ವವೇ ಬೇಕು’, ಎಂಬ ವಿಚಾರ ಹಿಂದೂಗಳ ಮನಸ್ಸಿನಲ್ಲಿ ಬಂದರೆ ಅದರಲ್ಲಿ ತಪ್ಪೇನಿದೆ ? ಇಂದು ಚಲನಚಿತ್ರ ನಟರು ಮತ್ತು ರಾಜಕಾರಣಿಗಳಿಗೂ ಸಾಧ್ಯವಾಗದಷ್ಟು ಜನಸಂದಣಿಯನ್ನು ಅವರು ಆಕರ್ಷಿಸುತ್ತಾರೆ, ಅದು ಅವರಿಗೆ ದೇವರ ಮತ್ತು ಧರ್ಮದ ಮೇಲಿನ ಶ್ರದ್ದೆಯಿಂದ ಎನ್ನಬಹುದು ! ಇದೇ ‘ದೇವರು ಮತ್ತು ಧರ್ಮದ ಶಿಕ್ಷಣ ಎಲ್ಲರಿಗೂ ಸಿಗಬೇಕು’, ಎಂಬುದು ಅವರ ತಳಮಳವಾಗಿದೆ. ಅವರ ಹಾಗೆಯೇ ‘ನರನಾಡಿಗಳಲ್ಲಿ ಧರ್ಮಾಭಿಮಾನ ಹಾಗೂ ಸನಾತನ ಧರ್ಮದ ಮೇಲಿನ ಭಕ್ತಿ ಹಿಂದೂಗಳಲ್ಲಿ ಉತ್ಪನ್ನವಾಗಬೇಕು’, ಎಂಬುದು ಅವರ ಇಚ್ಛೆಯಾಗಿದೆ. ಮುಂಬಯಿಯಲ್ಲಿನ ಅವರ ಪ್ರವಚನದಲ್ಲಿ ಅವರು ‘ಪೂರ್ಣ ಭಾರತವನ್ನು ರಾಮಮಯ ಮಾಡುವುದೇ ನನ್ನ ಅಂತಿಮ ಉದ್ದೇಶವಾಗಿದೆ’, ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರು ಸ್ವತಃ ವೈದಿಕ ಅಧ್ಯಯನ ಹಾಗೂ ಸಂಸ್ಕೃತದ ಪ್ರಚಾರಕ್ಕಾಗಿ ಒಂದು ಗುರುಕುಲವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ‘ಹಿಂದೂ ರಾಷ್ಟ್ರ ಒಂದು ಕಲ್ಪವೃಕ್ಷದಂತಿದೆ. ಇದರ ನೆರಳು ಎಲ್ಲರಿಗೂ (ಎಲ್ಲ ಧರ್ಮದವರಿಗೂ) ಸಿಗುವುದು. ಜಾತಿವಾದ ನಶಿಸಿ ಸಾಮಾಜಿಕ ಸೌಹಾರ್ದ ಮೂಡುವುದು. ಭಾರತದ ಸಂವಿಧಾನದಲ್ಲಿ ೧೨೫ ಬಾರಿ ಬದಲಾವಣೆ ಮಾಡಲಾಗಿದೆ, ಆದ್ದರಿಂದ ‘ಹಿಂದೂ ರಾಷ್ಟ್ರಕ್ಕಾಗಿ ಇನ್ನೊಂದು ಬಾರಿ ಅದನ್ನು ಬದಲಾಯಿಸಬಹುದು’, ಎಂದು ಶಾಸ್ತ್ರಿಯವರು ಹೇಳಿಯೇ ಬಿಟ್ಟರು. ‘ಭಾರತ ಹಿಂದೂ ರಾಷ್ಟ್ರ ಆಗಿಯೇ ಆಗುವುದು. ನಮ್ಮ ಮುಂದಿನ ಪೀಳಿಗೆಗಾಗಿ ಜಾಗೃತರಾಗಿರಿ. ನೀವು ನನ್ನನ್ನು ಸಮರ್ಥಿಸಿರಿ, ನಾನು ನಿಮಗೆ ಹಿಂದೂ ರಾಷ್ಟ್ರವನ್ನು ಕೊಡುವೆನು !’, ಎಂದು ನೇತಾಜಿ ಬೋಸ್ ಇವರ ಹಾಗೆಯೇ ಘೋಷಣೆ ನೀಡುವ ಧೈರ್ಯವಿರುವ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಗೆ ಈಗ ಸರಕಾರ ಮತ್ತು ಹಿಂದೂಗಳು ನಿಜವಾಗಿಯೂ ಸಹಕರಿಸಬೇಕು. ಅವರು ಹೇಳಿರುವಂತೆ ಸರಕಾರ ಹಾಗೂ ಹಿಂದೂಗಳು ಧರ್ಮಶಿಕ್ಷಣದ ಪ್ರಸಾರ ಮಾಡಿದರೆ ನಿಜವಾಗಿಯೂ ಹಿಂದೂ ರಾಷ್ಟ್ರ ದೂರವಿಲ್ಲ !