Delhi Police Loudspeaker Rules : ದೆಹಲಿಯಲ್ಲಿ ಯಾವುದೇ ಧಾರ್ಮಿಕ ಸ್ಥಳದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದದ ಧ್ವನಿವರ್ಧಕಗಳನ್ನು ಬಳಸುವುದರ ಮೇಲೆ ನಿಷೇಧ!

ನವದೆಹಲಿ – ದೆಹಲಿ ಪೊಲೀಸರು ಧ್ವನಿವರ್ಧಕಗಳ ಬಗ್ಗೆ ಹೊಸ ಸೂಚನೆಗಳನ್ನು (ನಿಯಮಗಳನ್ನು) ಪ್ರಸಾರ ಮಾಡಿದ್ದಾರೆ. ಈಗ, ಯಾವುದೇ ಧಾರ್ಮಿಕ ಸ್ಥಳದಲ್ಲಿ ನಿಗದಿತ ಮಾನದಂಡಗಳಿಗಿಂತ ದೊಡ್ಡ ಧ್ವನಿಗಳಲ್ಲಿ ಶಬ್ದ ನುಡಿಸಬಾರದು. ಯಾವುದೇ ಸ್ಥಳದಲ್ಲಿ ಧ್ವನಿವರ್ಧಕ ಅಳವಡಿಸಲು ಪೊಲೀಸರ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ಭಾಷಣದ ಪ್ರಣಾಳಿಕೆಗಳನ್ನು (ವ್ಯವಸ್ಥೆಗಳನ್ನು) ಬಳಸುವಂತಿಲ್ಲ. ಟೆಂಟ್ ಮನೆಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಪೊಲೀಸರ ಅನುಮತಿ ಅವಶ್ಯಕವಾಗಿರುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ 10 ಸಾವಿರ ರೂಪಾಯಿ ದಂಡ ಮತ್ತು ಉಪಕರಣಗಳನ್ನು ವಶಕ್ಕೆ ಪಡೆದು ಕೊಳ್ಳಲಾಗುತ್ತದೆ.

ಪೊಲೀಸರು ನೀಡಿದ ಸೂಚನೆ

1. ಕೈಗಾರಿಕಾ ಪ್ರದೇಶಗಳಲ್ಲಿ, ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯ ವರೆಗೆ 75 ಡೆಸಿಬಲ್‌ ಮಿತಿಯನ್ನು ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ 70 ಡೆಸಿಬಲ್‌ಗಳ ಶಬ್ಧದ ನಿಯಮವನ್ನು ಮಾಡಲಾಗಿದೆ.

2. ವಸತಿ ಪ್ರದೇಶಗಳಲ್ಲಿ, ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಶಬ್ದ ಮಿತಿಯನ್ನು 55 ಡೆಸಿಬಲ್‌ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ 45 ಡೆಸಿಬಲ್‌ಗಳ ಶಬ್ದದ ನಿಯಮವನ್ನು ಮಾಡಲಾಗಿದೆ.

3. ನಿಶ್ಯಬ್ದ ವಲಯದಲ್ಲಿ ಶಬ್ದ ಮಿತಿಯನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ 50 ಡೆಸಿಬಲ್‌ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ 40 ಡೆಸಿಬಲ್‌ಗಳಿಗೆ ನಿಗದಿಪಡಿಸಲಾಗಿದೆ.

ಸಂಪಾದಕೀಯ ನಿಲುವು

ಪೊಲೀಸರು ಮತ್ತು ಆಡಳಿತವು ನಿಯಮಗಳನ್ನು ರೂಪಿಸುತ್ತದೆ; ಆದರೆ, ಅದಕ್ಕನುಸಾರ, ಧಾರ್ಮಿಕ ಸ್ಥಳಗಳಲ್ಲಿ ಕೃತಿ ಮಾಡಲಾಗುತ್ತದೆಯೇ ಅಥವಾ ಉಲ್ಲಂಘಿಸಲಾಗುತ್ತದೆಯೇ?, ಇದರ ಪರಿಶೀಲನೆ ಮಾಡುವುದಿಲ್ಲ ಅಥವಾ ಮಸೀದಿಗಳ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ ಮಾಡಲಾಗುತ್ತದೆ, ಹೀಗೆಯೇ ಕಂಡು ಬರುತ್ತದೆ!