Supreme Court On Waqf Bill : ಕಾಯ್ದೆಯಲ್ಲಿನ 2 ಕಲಂಗಳು ಕೇಂದ್ರ ಸರಕಾರದಿಂದ ಸ್ಥಗಿತ

  • ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

  • ಕೇಂದ್ರ ಸರಕಾರಕ್ಕೆ ಉತ್ತರ ನೀಡಲು 7 ದಿನಗಳ ಗಡುವು

ನವದೆಹಲಿ – ಏಪ್ರಿಲ್ 17 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ಸಂದರ್ಭದಲ್ಲಿ ನಡೆದ ವಿಚಾರಣೆಯ ನಂತರ, ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಉತ್ತರ ನೀಡುವುದಕ್ಕಾಗಿ 7 ದಿನಗಳ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆಯನ್ನು ಮೇ 5 ಕ್ಕೆ ಮುಂದೂಡಿದೆ. ಸರಕಾರದ ಉತ್ತರದ ನಂತರ ಮುಂದಿನ 5 ದಿನಗಳಲ್ಲಿ ಅರ್ಜಿದಾರರು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಈ ಸಮಯದಲ್ಲಿ ಹೇಳಿದೆ.

ಕೇಂದ್ರ ಸರಕಾರವು 2 ವಿಧಿಗಳಿಗೆ ತಡೆ ನೀಡುವುದಾಗಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ಅದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಹೊಸ ಕಾನೂನಿನ ಪ್ರಕಾರ, ಮುಂದಿನ ವಿಚಾರಣೆ ಆಗುವವರೆಗೆ ವಕ್ಫ್ ಮಂಡಳಿಗೆ ಯಾವುದೇ ಹೊರಗಿನ ಸದಸ್ಯರನ್ನು ನೇಮಿಸಬಾರದು, ಹಾಗೆಯೇ ವಕ್ಫ್ ಮಂಡಳಿಯು ಒಂದು ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಘೋಷಿಸಿದ್ದರೆ, ಅದರಲ್ಲಿ ಮುಂದಿನ ವಿಚಾರಣೆಯವರೆಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

ನ್ಯಾಯಾಲಯವು 5 ಪ್ರಮುಖ ಅರ್ಜಿಗಳ ವಿಚಾರಣೆ ಮಾಡಲಿದೆ!

ಈ ಕಾನೂನಿಗೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದ್ದರಿಂದ, ಈ ಅರ್ಜಿಗಳಲ್ಲಿ ಪ್ರಮುಖ 5 ಅರ್ಜಿಗಳ ವಿಚಾರಣೆ ಮಾಡುವುದಾಗಿ ನ್ಯಾಯಾಲಯವು ಘೋಷಿಸಿದೆ.