
ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿನ ಸಾಧಕ ಶ್ರೀ. ರಾಮಾನಂದ ಪರಬ (ವಯಸ್ಸು ೪೧ ವರ್ಷಗಳು, ಆಧ್ಯಾತ್ಮಿಕ ಮಟ್ಟ ಶೇ. ೬೮) ಇವರಿಗೆ ಒಂದು ಜಿಲ್ಲೆಯಲ್ಲಿ ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುವ ಓರ್ವ ಸಾಧಕಿಯು ‘ಸತ್ಸಂಗದಲ್ಲಿ ‘ಸತ್ಸೇವೆ’ ಈ ವಿಷಯವನ್ನು ಹೇಗೆ ಕಲಿಸಬೇಕು ? ಎಂಬುದರ ಬಗ್ಗೆ ಕೇಳಿದ್ದಳು. ಆ ಸಮಯದಲ್ಲಿ ದೇವರು ಶ್ರೀ. ರಾಮಾನಂದ ಇವರಿಗೆ ‘ಅಧ್ಯಾತ್ಮದಲ್ಲಿ ಗುರುಗಳ ವ್ಯಷ್ಟಿ ಮತ್ತು ಸಮಷ್ಟಿ ರೂಪದ ಸೇವೆಯನ್ನು ಮಾಡುವಾಗ ತಳಮಳದಿಂದ ಭಾವಪೂರ್ಣವಾಗಿ ಮತ್ತು ಪರಿಪೂರ್ಣವಾಗಿ ಸೇವೆಯನ್ನು ಮಾಡುವುದರಿಂದ ಯಾವ ಲಾಭಗಳಾಗುತ್ತವೆ ?’, ಎಂಬುದರ ಬಗ್ಗೆ ಕೆಲವು ಅಂಶಗಳನ್ನು ಸೂಚಿಸಿದರು. ಆ ಅಂಶಗಳು ಎಲ್ಲ ಸಾಧಕರ ಸಾಧನೆಗೆ ಉಪಯುಕ್ತವಾಗಿರುವುದರಿಂದ ಇಲ್ಲಿ ಪ್ರಕಟಿಸುತ್ತಿದ್ದೇವೆ. – ಸಂಕಲನಕಾರರು
೧. ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವುದು
‘ನಾವು ಗುರುಗಳ ಸೇವೆಯನ್ನು ಮಾಡುತ್ತಿದ್ದೇವೆ’, ಎಂಬ ಭಾವವನ್ನಿಟ್ಟು ಸೇವೆಯನ್ನು ಮಾಡಿದರೆ, ಅದು ಭಾವಪೂರ್ಣ ಮತ್ತು ಪರಿಪೂರ್ಣವಾಗುತ್ತದೆ. ಇದರಿಂದ ನಮ್ಮ ಆಧ್ಯಾತ್ಮಿಕ ಪ್ರಗತಿ ಬೇಗನೆ ಆಗುತ್ತದೆ.
೨. ಸದ್ಯದ ಪ್ರತಿಕೂಲ ಕಾಲದಲ್ಲಿ ದೊರಕಿದ ಪ್ರತಿಯೊಂದು ಸತ್ಸೇವೆಯನ್ನು ಮನಃಪೂರ್ವಕವಾಗಿ ಮಾಡಿದರೆ ಆ ಸೇವೆಯ ಫಲವು ನಮಗೆ ಹೆಚ್ಚು ಸಿಗುತ್ತದೆ.
೩. ನಾವು ಸತ್ಸೇವೆ ಮಾಡುವಾಗ ಗಮನಕ್ಕೆ ಬಂದ ನಮ್ಮ ಸ್ವಭಾವ ದೋಷಗಳ ನಿರ್ಮೂಲನೆಯಾಗಬೇಕೆಂದು ಪ್ರಯತ್ನಿಸಿದರೆ, ನಮಗೆ ಆನಂದ ಸಿಗುತ್ತದೆ.
೪. ಜನ್ಮ-ಮೃತ್ಯುವಿನ ಚಕ್ರದಿಂದ ಶೀಘ್ರ ಬಿಡುಗಡೆ
ನಾವು ದೇಹಬುದ್ಧಿಯನ್ನು ಮರೆತು ಸತ್ಸೇವೆಯನ್ನು ಮಾಡಿ ದರೆ, ನಮಗೆ ಸೇವೆಯಲ್ಲಿನ ಚೈತನ್ಯವು ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ. ಇದರಿಂದ ನಮ್ಮ ಪ್ರಾರಬ್ಧ ಕಡಿಮೆಯಾಗಲು ಸಹಾಯ ವಾಗುತ್ತದೆ ಮತ್ತು ನಾವು ಜನ್ಮ-ಮೃತ್ಯುವಿನ ಚಕ್ರದಿಂದ ಬೇಗನೆ ಮುಕ್ತರಾಗುತ್ತೇವೆ.
೫. ಗುರುಗಳ ಕೃಪೆ ಹೆಚ್ಚಾಗುವುದು
ಸತ್ಸೇವೆಯಲ್ಲಿ ಶ್ರೇಷ್ಠ-ಕನಿಷ್ಠ ಹೀಗೆ ಏನೂ ಇರುವುದಿಲ್ಲ. ಸಣ್ಣ-ದೊಡ್ಡ ಸೇವೆಗೆ ಮಹತ್ವ ಇರುವುದಿಲ್ಲ, ಇಲ್ಲಿ ತಳಮಳದಿಂದ ಸೇವೆಯನ್ನು ಮಾಡುವುದಕ್ಕೆ ಮಹತ್ವ ಇರುತ್ತದೆ. ನಾವು ತಳಮಳ ದಿಂದ ಸತ್ಸೇವೆಯನ್ನು ಮಾಡಿದರೆ ನಮ್ಮ ಮೇಲೆ ಗುರುಗಳ ಕೃಪೆ ಹೆಚ್ಚಾಗುತ್ತದೆ. ಸತ್ಸೇವೆಯನ್ನು ಮಾಡುವಾಗ ಬರುವ ಅಡಚಣೆಗಳೂ ಗುರುಗಳ ಕೃಪೆಯಿಂದ ದೂರವಾಗುತ್ತವೆ.
೬. ಪ್ರಾರ್ಥನೆಯಿಂದ ಕರ್ತೃತ್ವದ ವಿಚಾರ ಬಾರದಿರುವುದು
ಸತ್ಸೇವೆಯನ್ನು ಮಾಡುವಾಗ ಹೆಚ್ಚೆಚ್ಚು ಪ್ರಾರ್ಥನೆಯನ್ನು ಮಾಡುವುದರಿಂದ ದೇವರು ನಮ್ಮನ್ನು ಯಾವಾಗಲೂ ಭಾವದ ಸ್ಥಿತಿಯಲ್ಲಿಡುತ್ತಾನೆ. ಪ್ರಾರ್ಥನೆಯನ್ನು ಮಾಡುವುದರಿಂದ ನಮ್ಮ ಭಾವದ ಸ್ಥಿತಿ ಶೇ. ೩೦ ರಷ್ಟು ಹೆಚ್ಚಾಗುತ್ತದೆ ಮತ್ತು ಸೇವೆಯಲ್ಲಿ ದೇವರ ಸಹಾಯ ಹೆಚ್ಚು ಸಿಗುತ್ತದೆ. ನಮ್ಮ ಮನಸ್ಸಿನಲ್ಲಿ ಕರ್ತೃತ್ವದ ವಿಚಾರ ಬರುವುದಿಲ್ಲ.
೭. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಅಸ್ತಿತ್ವವನ್ನು ಅನುಭವಿಸಲು ಸಾಧ್ಯವಾಗುವುದು
ಭಾವದ ಸ್ಥಿತಿಯಲ್ಲಿ ಸತ್ಸೇವೆ ಆಗಿ ನಮಗೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಅಸ್ತಿತ್ವವನ್ನು ಅನುಭವಿಸಲು ಬರುತ್ತದೆ.
೮. ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ
ದೇವರಿಗೆ ಭಾವದ ಹಸಿವಿರುತ್ತದೆ. ನಮ್ಮ ಸೇವೆ ಭಾವ ಪೂರ್ಣವಾಗಿ ಆದರೆ, ದೇವರು ನಮ್ಮ ಮೇಲೆ ಪ್ರಸನ್ನನಾಗುತ್ತಾನೆ ಮತ್ತು ನಮ್ಮ ಪ್ರತಿಯೊಂದು ಇಚ್ಛೆಯನ್ನು ಪೂರ್ಣಗೊಳಿಸುತ್ತಾನೆ. ‘ಈಶ್ವರಪ್ರಾಪ್ತಿಯು ಆದಷ್ಟು ಬೇಗನೆ ಆಗಬೇಕು’, ಇದು ನಮ್ಮ ಏಕೈಕ ಇಚ್ಛೆಯಾಗಿರಬೇಕು. ಸತ್ಸೇವೆಯಿಂದಲೇ ನಾವು ಇದನ್ನು ಸಾಧ್ಯಮಾಡಬಹುದು.
೯. ‘ಸಾಧಕನಿಂದ ಶಿಷ್ಯ’ ಹೀಗೆ ಸಾಧನೆಯ ಪ್ರವಾಸವಾಗುತ್ತದೆ
ನಮಗೆ ‘ಸಾಧಕನಿಂದ ಶಿಷ್ಯ’ ಹೀಗೆ ಸಾಧನೆಯ ಪ್ರವಾಸ ಮಾಡಬೇಕಾಗಿದೆ. ‘ದೊರಕಿದ ಸತ್ಸೇವೆಯನ್ನು ಮನಃಪೂರ್ವಕ ಸ್ವೀಕರಿಸುವುದು, ದೇವರಲ್ಲಿ ಮೊರೆಯಿಡುವುದು ಮತ್ತು ಪರಿಪೂರ್ಣ ಸೇವೆಯಾಗಲು ತಳಮಳದಿಂದ ಪ್ರಯತ್ನಿಸುವುದು’, ಈ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಸತ್ಸೇವೆಯನ್ನು ಮಾಡಿದರೆ ನಮ್ಮ ಧ್ಯೇಯ ಸಾಧ್ಯವಾಗುತ್ತದೆ.’
– ಶ್ರೀ. ರಾಮಾನಂದ ಪರಬ (ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೧ ವರ್ಷಗಳು), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೮.೨೦೨೪)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !