ಮಾನಸಪೂಜೆ ಮಾಡುವಾಗ ಆಧುನಿಕ ವೈದ್ಯೆ (ಸೌ.) ಮಧುವಂತಿ ಚಾರುದತ್ತ ಪಿಂಗಳೆ ಇವರಿಗೆ ಬಂದಿರುವ ವಿವಿಧ ಅನುಭೂತಿಗಳು

‘ಸನಾತನದ ೭೫ ನೇ ಸಂತ ಪೂ. ರಮಾನಂದ ಗೌಡ (ಪೂ. ಅಣ್ಣಾ) ಇವರು ಹೇಳಿದಂತೆ ನಾನು ನಿಯಮಿತವಾಗಿ ಮಾನಸ ಪೂಜೆಯನ್ನು ಆರಂಭಿಸಿದ ನಂತರ ನನಗೆ ಬಂದಿರುವ ಅನುಭೂತಿಗಳನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಪೂ. ರಮಾನಂದಣ್ಣ ಇವರ ಚರಣಗಳಲ್ಲಿ ಕೃತಜ್ಞತಾಪೂರ್ವಕ ಅರ್ಪಿಸುತ್ತಿದ್ದೇನೆ.

ಪೂ. ರಮಾನಂದ ಗೌಡ
(ಸೌ.) ಮಧುವಂತಿ ಚಾರುದತ್ತ ಪಿಂಗಳೆ

೧. ಮಾನಸಪೂಜೆಯನ್ನು ಮಾಡುವಾಗ ಸೂಕ್ಷ್ಮದಿಂದ ಪೂ. ರಮಾನಂದಣ್ಣನವರ ಧ್ವನಿ ಕೇಳಿಸುವುದು ಮತ್ತು ಮಾನಸಪೂಜೆಯೂ ಮುಂದುವರಿಯುವುದು 

ಒಂದು ದಿನ ನಾನು ಮಾನಸಪೂಜೆಯನ್ನು ಆರಂಭಿಸಿದೆ. ಆಗ ನನಗೆ ಸೂಕ್ಷ್ಮದಿಂದ ಪೂ. ರಮಾನಂದಣ್ಣನವರ ಧ್ವನಿ ಕೇಳಿಸಿತು. ಪೂ. ಅಣ್ಣ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ‘ಅವರು ಪ್ರಾರ್ಥನೆಯನ್ನು ಹೇಳುತ್ತಿದ್ದರು, ಆ ಸಮಯದಲ್ಲಿ ನನ್ನ ಮಾನಸಪೂಜೆಯೂ ನಡೆದಿತ್ತು.

೨. ಮಾನಸಪೂಜೆಯಲ್ಲಿ ಪರಾತ್ಪರ ಗುರು ಡಾಕ್ಟರರಿಂದ ಸೂಕ್ಷ್ಮದಿಂದ ಗುರುಪಾದುಕೆಗಳ ಮಹತ್ವ ಕೇಳಿಸುವುದು

೨ ಅ. ಗುರುದೇವರಲ್ಲಿ ‘ನಿಮ್ಮ ಯಾವ ರೂಪದ ಪೂಜೆಯನ್ನು ಮಾಡಲಿ ?, ಎಂದು ಕೇಳಿದಾಗ ಅವರು ತಮ್ಮ ನಿರ್ಗುಣ ತತ್ತ್ವದ, ಅಂದರೆ ಗುರುಪಾದುಕೆಗಳ ಪೂಜೆಯನ್ನು ಮಾಡಲು ಹೇಳುವುದು ಮತ್ತು ಹೃದಯಮಂದಿರದಲ್ಲಿ ಗುರುಪಾದುಕೆಗಳ ಸ್ಥಾಪನೆಯಾಗುತ್ತಿರುವುದರ ಅರಿವಾಗುವುದು : ಒಂದು ದಿನ ನಾನು ಮಾನಸಪೂಜೆಯನ್ನು ಮಾಡುತ್ತಿರುವಾಗ ಗುರುದೇವರಿಗೆ, ‘ಇಂದು ನಾನು ಕೃಷ್ಣ, ರಾಮ ಮತ್ತು ವಿಷ್ಣು ಇವರ ಪೈಕಿ ಯಾವ ರೂಪದ ಪೂಜೆಯನ್ನು ಮಾಡಲಿ ?, ಎಂದು ಕೇಳಿದಾಗ ಗುರುದೇವರು ನನಗೆ ಸೂಕ್ಷ್ಮದಿಂದ, ‘ನಾನು ನಿರ್ಗುಣ ನಿರಾಕಾರನಾಗಿದ್ದೇನೆ. ಇಂದು ನೀನು ನನ್ನ ನಿರ್ಗುಣ ತತ್ತ್ವದ, ಅಂದರೆ ಗುರುಪಾದುಕೆಗಳ ಪೂಜೆ ಮಾಡು, ಎಂದರು. ಅನಂತರ ‘ನನ್ನ ಹೃದಯಮಂದಿರಲ್ಲಿ ಗುರುಪಾದುಕೆಗಳ ಸ್ಥಾಪನೆಯಾಗುತ್ತಿದೆ, ಎಂದು ನನಗೆ ಅನಿಸಿತು.

೨ ಆ. ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಗುರುಪಾದುಕೆಗಳ ಸ್ಥಾಪನೆ ಆಗಿದ್ದರಿಂದ ಆ ಕ್ಷೇತ್ರದಲ್ಲಿನ ಎಲ್ಲ ಸಾಧಕರಿಗೆ ಗುರುಪಾದುಕೆಗಳ ಮಾಧ್ಯಮದಿಂದ ಊರ್ಜೆ ಸಿಗುತ್ತಿದೆ ಎಂದು ಗುರುದೇವರು ಹೇಳುವುದು : ಆ ಸಮಯದಲ್ಲಿ ಗುರುದೇವರು ನನಗೆ ಸೂಕ್ಷ್ಮದಿಂದ, ‘ಈ ಗುರುಪಾದುಕೆಗಳ ಮಾಧ್ಯಮದಿಂದ ನನ್ನ ನಿರ್ಗುಣ ತತ್ತ್ವ ಕಾರ್ಯನಿರತವಾಗಿದೆ. ಎಲ್ಲೆಡೆಯ ಸಾಧಕರಿಗೆ ಈ ಮಾಧ್ಯಮದಿಂದ ಸಾಧನೆ ಮತ್ತು ಸೇವೆಯನ್ನು ಮಾಡಲು ಊರ್ಜೆ ಸಿಗುತ್ತದೆ. ಯಾವ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಗುರುಪಾದುಕೆಗಳ ಸ್ಥಾಪನೆಯಾಗಿದೆಯೋ, ಆ ಕ್ಷೇತ್ರದಲ್ಲಿನ ಎಲ್ಲ ಸಾಧಕರಿಗೆ ಈ ಗುರುಪಾದುಕೆಗಳ ಮಾಧ್ಯಮದಿಂದ ಊರ್ಜೆ ಸಿಗುತ್ತಿದೆ, ಎಂದು ಹೇಳಿದರು. ಆ ಸಮಯದಲ್ಲಿ ಒಂದು ಕಡೆ ನನ್ನ ಮಾನಸಪೂಜೆ ನಡೆದಿತ್ತು ಮತ್ತು ಇನ್ನೊಂದೆಡೆ ಗುರುದೇವರ ಬಾಯಿಯಿಂದ ಗುರುಪಾದುಕೆಗಳ ಮಹತ್ವ ಕೇಳಿಬರುತ್ತಿತ್ತು. ಆಗ ನನಗೆ ಗುರುದೇವರ ಬಗ್ಗೆ ಬಹಳ ಕೃತಜ್ಞತೆ ಅನಿಸಿ ನನ್ನ ಭಾವಜಾಗೃತಿ ಆಯಿತು.

೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಸಭಾಗೃಹಕ್ಕೆ ಬರದೇ ಅಲ್ಲಿಯೇ ಇರುವ ಪೂ. ಅಣ್ಣಾ ಇವರ ಕೋಣೆಯ ಕಡೆಗೆ ಹೋಗುತ್ತಿರುವುದು ಕಾಣಿಸುವುದು

ಒಂದು ಬಾರಿ ನಾನು ಬೆಳಗ್ಗೆ ಮಾನಸಪೂಜೆಗಾಗಿ ಪ್ರಾರ್ಥನೆಯನ್ನು ಮಾಡಿದಾಗ ನನಗೆ ಮುಂದಿನ ದೃಶ್ಯ ಕಾಣಿಸಿತು – ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಮೂವರೂ ರಥದಲ್ಲಿ ಕುಳಿತು ಮಂಗಳೂರು ಸೇವಾಕೇಂದ್ರಕ್ಕೆ ಬರುತ್ತಿದ್ದಾರೆ; ಸಭಾಗೃಹದಲ್ಲಿ ಮೋಕ್ಷಗುರುಗಳ ಪೂಜೆಯ ಸಿದ್ಧತೆಯನ್ನು ಮಾಡಲಾಗಿದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕ ಇವರಿಬ್ಬರೂ ಪ್ರವೇಶ ದ್ವಾರದಿಂದ ಒಳಗೆ ಬಂದರು ಮತ್ತು ಅವರು ಸಭಾಗೃಹಕ್ಕೆ ಬರದೇ ಅಲ್ಲಿಯೇ ಇರುವ ಪೂ. ಅಣ್ಣಾ ಇವರ ಕೋಣೆಯ ಕಡೆಗೆ ಹೋಗುತ್ತಿದ್ದಾರೆ. ‘ಪೂ. ಅಣ್ಣಾ ಇವರ ಕೋಣೆ ಎಂದರೆ ನಿರಂತರವಾಗಿ ಗುರುಕಾರ್ಯ ಮತ್ತು ಸಾಧಕರ ಸಾಧನೆಗಾಗಿ ಊರ್ಜೆಯ ಸ್ರೋತ, ಎಂದು ನನಗನಿಸುತ್ತದೆ.

೪. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ ಸೌ. ಬಿಂದಾ ಅಕ್ಕ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕ ಇವರಿಗೆ ಸಾಷ್ಟಾಂಗ ನಮಸ್ಕಾರ ಮಾಡೋಣ, ಎಂದು ಮನಸ್ಸಿನಲ್ಲಿ ವಿಚಾರ ಬರುತ್ತಲೇ ಆ ಮೂವರ ಚರಣಗಳು ಏಕರೂಪವಾಗಿ ಆ ಸ್ಥಳದಲ್ಲಿ ಶಿವಲಿಂಗ ಕಾಣಿಸುವುದು ಮತ್ತು ಗುರುದೇವರ ನಿರ್ಗುಣ ನಿರಾಕಾರ ರೂಪದ ದರ್ಶನದಿಂದ ಕೃತಜ್ಞತಾಭಾವ ಉಮ್ಮಳಿಸಿ ಭಾವ ಜಾಗೃತಿಯಾಗುವುದು : ಸ್ವಲ್ಪ ಸಮಯದ ನಂತರ ಶ್ರೀಸತ್‌ಶಕ್ತಿ ಸೌ. ಬಿಂದಾ ಅಕ್ಕ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕ ಸಭಾಗೃಹಕ್ಕೆ ಬಂದು ಆಸನಸ್ಥರಾದರು. ಮೊದಲು ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾನಸ ಪೂಜೆಯನ್ನು ಆರಂಭಿಸಿದೆ. ಆಗ ಅವರ ಚರಣಗಳ ಸ್ಥಳದಲ್ಲಿ ನನಗೆ ಶಿವಲಿಂಗ ಕಾಣಿಸತೊಡಗಿತು ಮತ್ತು ಆ ಶಿವಲಿಂಗದ ಮೇಲೆ ಅಭಿಷೇಕವಾಗತೊಡಗಿತು. ಅನಂತರ ಶ್ರೀಸತ್‌ಶಕ್ತಿ ಸೌ. ಬಿಂದಾ ಅಕ್ಕನವರ ಚರಣಗಳ ಪೂಜೆಯನ್ನು ಮಾಡುತ್ತಿರುವಾಗ ಆ ಸ್ಥಳದಲ್ಲಿ ನನಗೆ ಅಕಸ್ಮಾತ್ ಕೊಲ್ಹಾಪುರದ ಅಂಬಾಬಾಯಿಯ ಚರಣಗಳ ದರ್ಶನವಾಯಿತು. ಕಿರಣೋತ್ಸವದ ಸಮಯದಲ್ಲಿ ಸೂರ್ಯಕಿರಣಗಳು ಮಹಾಲಕ್ಷ್ಮೀಯ ಚರಣಗಳನ್ನು ಸ್ಪರ್ಶಿಸಿದಾಗ ಅವಳ ಚರಣಗಳು ಹೇಗೆ ಪ್ರಕಾಶಮಾನವಾಗಿ ಕಾಣಿಸು ತ್ತವೆಯೋ, ಹಾಗೆ ಅವರ ಚರಣಗಳು ನನಗೆ ಪ್ರಕಾಶಮಾನವಾಗಿ ಕಾಣಿಸತೊಡಗಿದವು. ಅನಂತರ ನಾನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕನವರ ಚರಣಗಳ ಪೂಜೆಯನ್ನು ಮಾಡಿದೆನು. ಆಗ ‘ಮೂರು ಜನ ಮೋಕ್ಷಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡೋಣ, ಎಂದು ನನ್ನ ಮನಸ್ಸಿನಲ್ಲಿ ವಿಚಾರ ಬಂದಿತು ಮತ್ತು ಎಲ್ಲಕ್ಕಿಂತ ಮೊದಲು ಯಾರಿಗೆ ನಮಸ್ಕಾರ ಮಾಡಲಿ ?, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುತ್ತಲೇ ಮೂವರ ಚರಣಗಳು ಏಕರೂಪವಾದವು ಮತ್ತು ನನಗೆ ಪುನಃ ಆ ಸ್ಥಳದಲ್ಲಿ ಶಿವಲಿಂಗದ ದರ್ಶನವಾಯಿತು. ನಾನು ಆ ಶಿವಲಿಂಗಕ್ಕೆ ಭಾವಪೂರ್ಣ ಸಾಷ್ಟಾಂಗ ನಮಸ್ಕಾರ ಮಾಡಿದೆ. ಗುರುದೇವರ ನಿರ್ಗುಣ ನಿರಾಕಾರ ರೂಪದ ದರ್ಶನದಿಂದ ನನ್ನ ಮನಸ್ಸಿನಲ್ಲಿ ಕೃತಜ್ಞತಾಭಾವ ಮೂಡಿ ನನ್ನ ಭಾವಜಾಗೃತವಾಯಿತು.

‘ಗುರುದೇವರೇ, ನನ್ನಲ್ಲಿ ಯಾವುದೇ ಅರ್ಹತೆ ಇಲ್ಲದಿರುವಾಗಲೂ ತಾವು ಈ ಅಜ್ಞಾನಿ ಜೀವಕ್ಕೆ ತಮ್ಮ ಅಸ್ತಿತ್ವದ ಅನುಭೂತಿಯನ್ನು ನೀಡಿದಿರಿ, ಅದಕ್ಕಾಗಿ ನಾನು ತಮ್ಮ ಚರಣಗಳಲ್ಲಿ  ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಆಧುನಿಕ ವೈದ್ಯೆ (ಸೌ.) ಮಧುವಂತಿ ಚಾರುದತ್ತ ಪಿಂಗಳೆ, ಮಂಗಳೂರು ಸೇವಾಕೇಂದ್ರ. (೧೫.೧೨.೨೦೨೨)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.