ಸಾಧನೆಯಿಂದ ಆಧ್ಯಾತ್ಮಿಕ ಸ್ತರದಲಾಭವಾಗುವುದು,ಇದು ವ್ಯಕ್ತಿಯು ಸ್ತ್ರೀ ಅಥವಾ ಪುರುಷನಾಗಿರುವುದನ್ನು ಅವಲಂಬಿಸಿಲ್ಲ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆಧ್ಯಾತ್ಮಿಕ ಉನ್ನತಿಗೆ ಸಂಬಂಧಿಸಿದ ಲಿಂಗದ ಆಧಾರದ ತಾರತಮ್ಯಕ್ಕೆ ಸವಾಲು ಎಂಬ ಸಂಶೋಧನಾ ಪ್ರಬಂಧ ಮಂಡಣೆ !

ಶ್ರೀ. ಶಾನ್ ಕ್ಲಾರ್ಕ್

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಶಾನ್ ಕ್ಲಾರ್ಕ ಇವರು ‘ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ’ಆಧ್ಯಾತ್ಮಿಕ ಉನ್ನತಿಗೆ ಸಂಬಂಧಿಸಿದ ಲಿಂಗದ ಆಧಾರದ ತಾರತಮ್ಯಕ್ಕೆ ಸವಾಲು’ (ಆವಾಹನ) ಎಂಬ ಸಂಶೋಧನಾ ಪ್ರಬಂಧವನ್ನು ೧೪ ಮೇ ೨೦೨೨ ರಂದು ಶ್ರೀಲಂಕಾದಲ್ಲಿ ಆಯೋಜಿಸಿದ ‘ದ ಏಟ್ಥ್ ವರ್ಡ ಕಾನ್ಫರೆನ್ಸ್ ಆನ್ ಉಮೆನ್ಸ್ ಸ್ಟಡೀಜ್’ (The 8th World Conference on women’s Studies(WCWS 2022)) ಈ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಆನ್‌ಲೈನ್’ ಮೂಲಕ ಸಾದರಪಡಿಸಿದರು. ಈ ಪರಿಷತ್ತನ್ನು ‘ದ ಇಂಟರ್‌ನ್ಯಾಶನಲ್ ಇಂಸ್ಟ್ಯೂಟ್ ಆಫ್ ನಾಲೇಜ್ ಮ್ಯಾನೆಜಮೆಂಟ್’ (The International Institute of Knowledge Management) ಇವರು ಆಯೋಜಿಸಿದ್ದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ ಇವರು ಸಹಲೇಖಕರಾಗಿದ್ದಾರೆ. ಈ ಸಂಶೋಧನಾ ಪ್ರಬಂಧಕ್ಕೆ ಪರಿಷತ್ತಿನಲ್ಲಿ ‘ಉತ್ಕೃಷ್ಟ (ಅತ್ಯುತ್ತಮ) ಪ್ರಸ್ತುತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಸಾಧನೆ ಮಾಡುವ ವ್ಯಕ್ತಿಯು ಸ್ತ್ರೀ ಅಥವಾ ಪುರುಷ ಇರುವುದರಿಂದ, ಅಂದರೆ ಅವರ ಕೇವಲ ಲಿಂಗಭೇದದಿಂದ ಅವರಿಗೆ ಸಾಧನೆಯಿಂದಾಗುವ ಆಧ್ಯಾತ್ಮಿಕ ಸ್ತರದ ಲಾಭದಲ್ಲಿ ವ್ಯತ್ಯಾಸವಿರುತ್ತದೆಯೇ ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ೨೭ ಏಪ್ರಿಲ್ ೨೦೨೨ ರಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರು ಸ್ತ್ರೀಯರು (ಸಾಧಕಿಯರು) ಮತ್ತು ಇಬ್ಬರು ಪುರುಷರು (ಸಾಧಕರು), ಹೀಗೆ ಒಟ್ಟು ೪ ಜನರನ್ನು ಆಯ್ಕೆ ಮಾಡಲಾಗಿತ್ತು. ಅವರ ‘ಆಧ್ಯಾತ್ಮಿಕ ಮಟ್ಟ (ಟಿಪ್ಪಣಿ ೧) ಶೇ. ೬೦ ಕ್ಕಿಂತ ಕಡಿಮೆ ಅಥವಾ ಹೆಚ್ಚು ಇರುವುದು, ಈ ಘಟಕಗಳ ವಿಚಾರವನ್ನು ಮಾಡಿ ಎರಡು ಸಮಾನ ಗುಂಪು ಮಾಡಿದೆವು. ಪ್ರತಿಯೊಂದು ಗುಂಪಿನಲ್ಲಿ ‘ಒಬ್ಬ ಸ್ತ್ರೀ ಮತ್ತು ಒಬ್ಬ ಪುರುಷ, ಹೀಗೆ ಇಬ್ಬರಿದ್ದರು. ಅವರಿಗೆ ‘ಓಂ ನಮೋ ಭಗವತೆ ವಾಸುದೇವಾಯ ಈ ನಾಮಜಪವನ್ನು ೩೦ ನಿಮಿಷಗಳವರೆಗೆ ಏಕಾಗ್ರತೆಯಿಂದ ಮಾಡಲು ಹೇಳಲಾಯಿತು. ನಾಮಜಪ ಮಾಡುವ ಮೊದಲು ಮತ್ತು ಮಾಡಿದ ನಂತರ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಅವರ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಗಮನಕ್ಕೆ ಬಂದ ಅಂಶಗಳನ್ನು ಮುಂದೆ ಕೊಡಲಾಗಿದೆ.

ಶ್ರೀ. ರೂಪೇಶ ರೇಡಕರ

ಟಿಪ್ಪಣಿ ೧ – ಆಧ್ಯಾತ್ಮಿಕ ಮಟ್ಟ : ಈಶ್ವರನ ಆಧ್ಯಾತ್ಮಿಕ ಮಟ್ಟವು ಶೇ. ೧೦೦ ರಷ್ಟು ಮತ್ತು ನಿರ್ಜೀವ ವಸ್ತುಗಳ ಶೇ. ೧ ರಷ್ಟು ಎಂದು ಪರಿಗಣಿಸಿದರೆ, ಸಾಮಾನ್ಯ ಮನುಷ್ಯನ ಆಧ್ಯಾತ್ಮಿಕ ಮಟ್ಟವು ಶೇ. ೨೦ ರಷ್ಟಿರುತ್ತದೆ. ಸಾಧನೆಯಿಂದ ಆಧ್ಯಾತ್ಮಿಕ ಮಟ್ಟವು ಯಾವಾಗ ಶೇ. ೬೦ ರಷ್ಟಾಗುತ್ತದೆಯೋ, ಆಗ ಆ ವ್ಯಕ್ತಿಯು ಮಾಯೆಯಿಂದ ಅಲಿಪ್ತನಾಗತೊಡಗುತ್ತಾನೆ. ಮೃತ್ಯುವಿನ ನಂತರ ಅವನು ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗಿ ಅವನಿಗೆ ಮಹರ್ಲೋಕದಲ್ಲಿ ಸ್ಥಾನ ಸಿಗುತ್ತದೆ. ಆಧ್ಯಾತ್ಮಿಕ ಮಟ್ಟವು ಶೇ. ೭೦ ಕ್ಕಿಂತಲೂ ಹೆಚ್ಚು ಇರುವವರಿಗೆ ‘ಸಂತರು ಎನ್ನುತ್ತಾರೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳು

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಕೋಷ್ಟಕದ ನಿರೀಕ್ಷಣೆಗಳಿಂದ ಗಮನಕ್ಕೆ ಬಂದ ಅಂಶಗಳು

೨ ಅ. ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಕಡಿಮೆ ಇರುವವರ ನಕಾರಾತ್ಮಕ ಊರ್ಜೆ ನಾಮಜಪದ ನಂತರ ಕಡಿಮೆ ಆಗುವುದು : ‘ಗುಂಪು ೧’ರಲ್ಲಿನ ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಕಡಿಮೆ ಇರುವವರ ನಿರೀಕ್ಷಣೆಗಳನ್ನು ನೋಡಿದಾಗ ನಾಮಜಪದ ಮೊದಲು ಸ್ತ್ರೀಯ ನಕಾರಾತ್ಮಕ ಊರ್ಜೆ ಪುರುಷನಿಗಿಂತ ಸ್ವಲ್ಪ ಹೆಚ್ಚು ಇತ್ತು ಮತ್ತು ಇಬ್ಬರ ಸಕಾರಾತ್ಮಕ ಊರ್ಜೆ ಸಾಮಾನ್ಯವಾಗಿ ಒಂದೇ ತರಹ ಇದ್ದವು. ನಾಮಜಪದ ನಂತರ ಸ್ತ್ರೀ ಮತ್ತು ಪುರುಷ ಇವರಿಬ್ಬ ರಲ್ಲಿಯೂ ನಕಾರಾತ್ಮಕ ಊರ್ಜೆ ಕಡಿಮೆ ಆಯಿತು ಮತ್ತು ಸಕಾರಾತ್ಮಕ ಊರ್ಜೆ ಬಹಳಷ್ಟು ಹೆಚ್ಚಳವಾಯಿತು. ಸ್ತ್ರೀಯ ನಕಾರಾತ್ಮಕ ಊರ್ಜೆಯಲ್ಲಿ ಕಡಿಮೆಯಾಗಿರುವ ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ಆದ ಹೆಚ್ಚಳವು ಪುರುಷನ ತುಲನೆಯಲ್ಲಿ ಸ್ವಲ್ಪ ಹೆಚ್ಚು ಇತ್ತು.

೨ ಆ. ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಹೆಚ್ಚಿರುವವರ ನಕಾರಾತ್ಮಕ ಊರ್ಜೆ ನಾಮಜಪದ ನಂತರ ಸಂಪೂರ್ಣ ಕಡಿಮೆಯಾಗುವುದು : ‘ಗುಂಪು ೨’ ರಲ್ಲಿನ ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕಿಂತ ಹೆಚ್ಚು ಇರುವವರ ನಿರೀಕ್ಷಣೆಯನ್ನು ನೋಡಿದರೆ ನಾಮಜಪ ಮಾಡುವ ಮೊದಲು ಸ್ತ್ರೀಯ ನಕಾರಾತ್ಮಕ ಊರ್ಜೆ ಪುರುಷನಿಗಿಂತ ಸ್ವಲ್ಪ ಕಡಿಮೆ ಮತ್ತು ಸಕಾರಾತ್ಮಕ ಊರ್ಜೆ ಸ್ವಲ್ಪ ಹೆಚ್ಚು ಇತ್ತು. ನಾಮಜಪದ ನಂತರ ಸ್ತ್ರೀ ಮತ್ತು ಪುರುಷ ಇವರಿಬ್ಬರಲ್ಲಿಯೂ ನಕಾರಾತ್ಮಕ ಊರ್ಜೆ ಇಲ್ಲವಾಯಿತು ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು. ಪುರುಷನ ತುಲನೆಯಲ್ಲಿ ಸ್ತ್ರೀಯಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಿತ್ತು.

೨ ಇ. ಆಧ್ಯಾತ್ಮಿಕ ಸ್ತರದ ಸಾಧನೆಯ ಲಾಭವು ಲಿಂಗಭೇದದ ಮೇಲೆ ಅವಲಂಬಿಸಿಲ್ಲ : ಪರೀಕ್ಷಣೆಯ ನಾಲ್ಕೂ ಘಟಕಗಳ ನಿರೀಕ್ಷಣೆಗಳನ್ನು ನೋಡಿದರೆ ಕೇವಲ ಲಿಂಗಭೇದದಿಂದ ಸ್ತ್ರೀ ಮತ್ತು ಪುರುಷರಲ್ಲಿನ ನಕಾರಾತ್ಮಕ ಅಥವಾ ಸಕಾರಾತ್ಮಕ ಊರ್ಜೆಗಳ ಪ್ರಮಾಣಗಳಲ್ಲಿ ವ್ಯತ್ಯಾಸವು ಕಂಡುಬರುವುದಿಲ್ಲ.

೩. ವ್ಯಕ್ತಿಯ ಲಿಂಗಭೇದದಿಂದ ಅವರಿಗೆ ಸಾಧನೆಯಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭದಲ್ಲಿ ವ್ಯತ್ಯಾಸವಿಲ್ಲ

ಸಾಧನೆ ಮಾಡುವ ವ್ಯಕ್ತಿಯು ಸ್ತ್ರೀ ಅಥವಾ ಪುರುಷ ಇರುವುದರಿಂದ, ಎಂದರೆ ಅವರ ಕೇವಲ ಲಿಂಗಭೇದದಿಂದ ಅವರಿಗೆ ಸಾಧನೆಯಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ಲಾಭದಲ್ಲಿ ವ್ಯತ್ಯಾಸವಿರುವುದಿಲ್ಲ. ಸ್ವಭಾವದೋಷ (ಉದಾ. ಚಂಚಲತೆ) ಕಡಿಮೆ ಇರುವ ಮತ್ತು ಸಾಧನೆಗಾಗಿ ಪೂರಕವಾಗಿರುವ ಗುಣ (ಉದಾ. ಏಕಾಗ್ರತೆ) ಹೆಚ್ಚಿರುವ, ಎಂದರೆ ಆಧ್ಯಾತ್ಮಿಕ ಮಟ್ಟವು ಹೆಚ್ಚಿರುವ ವ್ಯಕ್ತಿಗಳಿಗೆ ಸಾಧನೆಯ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಲಾಭವಾಗುತ್ತದೆ. ಇದೇ ಈ ಪರೀಕ್ಷಣೆಯಲ್ಲಿ ಕಂಡುಬಂದಿತು.’

– ಶ್ರೀ. ರೂಪೇಶ ಲಕ್ಷ್ಮಣ ರೆಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೪.೨೦೨೩)

ವಿ-ಅಂಚೆ : [email protected]