ಕಥಕ್‌ ನೃತ್ಯ….ದೈವೀ ನೃತ್ಯವೇ ಆಗಿದೆ !

ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜಿಕರ

ಸದ್ಯ ಬಹಳ ಪ್ರಸಿದ್ಧಿಯನ್ನು ಪಡೆದಿರುವ ‘ಛಾವಾ’ ಹಿಂದಿ ಚಲನಚಿತ್ರವನ್ನು ವೀಕ್ಷಿಸಲಾಯಿತು. ಅದರಲ್ಲಿ ನಟ ಅಕ್ಷಯ ಖನ್ನಾ ಇವರು ನಿಭಾಯಿಸಿದ ಔರಂಗಜೇಬ್‌ನ ಅತ್ಯಂತ ಕ್ರೂರತನದ ಕ್ಷಣದರ್ಶನ ದೇಶವಾಸಿಗಳಿಗೆ ನೋಡಲು ಸಿಕ್ಕಿತು. ಔರಂಗಜೇಬನು ಪ್ರಜೆಗಳ ಮೇಲೆ ಮಿತಿಮೀರಿ ದೌರ್ಜನ್ಯವನ್ನು ಎಸಗಿದನು ಮಾತ್ರವಲ್ಲ, ಹಿಂದೂಗಳ ದೇವಸ್ಥಾನಗಳನ್ನು ನಾಶ ಮಾಡುವುದರಿಂದ ಹಿಡಿದು ಕಲೆ-ಸಂಸ್ಕೃತಿಯನ್ನು ಬೇರುಸಹಿತ ನಾಶ ಮಾಡಲು ಪೂರ್ಣ ಪ್ರಯತ್ನಿಸಿದನು. ಅವನು ಭಾರತೀಯರನ್ನು ಬಲವಂತವಾಗಿ ಮತಾಂತರಿಸಿ ಹಿಂದೂ ಧರ್ಮಾಚರಣೆಯನ್ನೇ ನಿಲ್ಲಿಸಿದನು. ಹಿಂದೂಗಳ ಕಲೆಗಳ ಮೇಲೆಯೂ ಮೊಗಲರು ದಾಳಿ ಮಾಡಿದರು. ಆ ಕಾಲದಲ್ಲಿ ಗುರುಕುಲ ಪದ್ಧತಿಯಿಂದ ರೂಪುಗೊಳ್ಳುತ್ತಿದ್ದ ವಿದ್ಯಾರ್ಥಿಗಳು ವಿವಿಧ ಕಲೆ ಮತ್ತು ವಿದ್ಯೆಗಳಲ್ಲಿ ಪಾರಂಗತ ರಾಗುತ್ತಿದ್ದರು. ಮೊಗಲ ಆಡಳಿತಗಾರರು ಇಂತಹ ಶೈಕ್ಷಣಿಕ ಪದ್ಧತಿಯ ಮೇಲೆ ದಾಳಿ ಮಾಡಿ ಆ ಕಲೆಗಳನ್ನೂ ನಾಶ ಮಾಡಲು ಪ್ರಯತ್ನಿಸಿದರು. ಔರಂಗಜೇಬನು ರಾಜರನ್ನು ಉಪಸಂಸ್ಥಾನಿಕರನ್ನಾಗಿ ಮಾಡಿದನು, ಕಲಾವಿದರನ್ನೂ ಗುಲಾಮರನ್ನಾಗಿ ಮಾಡಿದನು. ದರಬಾರಿ ಕಲಾವಿದರನ್ನಾಗಿ ಮಾಡಿದನು. ಆದುದರಿಂದ ಹೆಚ್ಚಿನ ಜನರಿಗೆ, ಕಥಕ್‌ ಇದು ಮೊಗಲರ ಕಾಲದ ಕಲೆಯಾಗಿದೆ ಎಂದು ಅನಿಸು ತ್ತದೆ. ನನ್ನನ್ನು ಭೇಟಿಯಾದ ಬಹಳಷ್ಟು ಜನರು ಕಥಕ್‌ ಇದು ‘ದರಬಾರಿ ಕಲೆ’ಯಾಗಿರುವ ಬಗ್ಗೆ ಕೇಳುತ್ತಾರೆ; ಆದರೆ ‘ಕಥಕ್’ ಇದು ಕೇವಲ ‘ದರಬಾರಿ’ ಅಲ್ಲ,  ಅದು ‘ದೈವೀ’ ಆಗಿದೆ.

ನಿಜ ಹೇಳಬೇಕೆಂದರೆ ಶ್ರೀ ಗಣೇಶನು ೧೪ ವಿದ್ಯೆ ಮತ್ತು ೬೪ ಕಲೆಗಳ ದೇವತೆಯಾಗಿದ್ದಾನೆ. ಪ್ರತ್ಯಕ್ಷ ಭಗವಾನ ಶಿವನು ಮಾಡಿದ ತಾಂಡವ ನೃತ್ಯವನ್ನು ಇಂದಿಗೂ ಕಥಕ್‌ನಲ್ಲಿ ಮಾಡಲಾಗುತ್ತದೆ. ನೃತ್ಯದ ಅಧ್ಯಯನದಿಂದ ‘ಅದು ಕುಶೀಲವ’ ಆಗಿದೆ; ಅಂದರೆ ಅದು ರಾಮಾಯಣಕಾಲದಲ್ಲಿ ಉಗಮ ಆಗಿದೆ’, ಎಂಬುದು ಗಮನಕ್ಕೆ ಬರುತ್ತದೆ. ‘ಶ್ರೀಕೃಷ್ಣ ಮತ್ತು ರಾಧೆ’ ಈ ವಿಷಯವಂತೂ ಕಥಕ್‌ ನೃತ್ಯದ ಪ್ರಾಣವಾಗಿದೆ. ಪ್ರಾಚೀನ ಕಾಲದಿಂದ ‘ಈಶ್ವರಪ್ರಾಪ್ತಿ’ಯ ಉದ್ದೇಶವನ್ನಿಟ್ಟುಕೊಂಡು ಈ ಕಲೆಯನ್ನು ದೇವಸ್ಥಾನಗಳಲ್ಲಿ ಪ್ರಸ್ತುತ ಪಡಿಸಲಾಗುತ್ತಿತ್ತು; ಆದರೆ ಅದು ಮೊಗಲರ ಕಾಲದಲ್ಲಿ ‘ದರಬಾರಿ ಕಲೆ’ ಎಂದು ಹೆಚ್ಚು ಹೆಸರುವಾಸಿಯಾಯಿತು. ಮೊಗಲರ ಈ ದಾಳಿಯಿಂದ ಅದರ ಸ್ವರೂಪ ‘ಮೊಗಲರ ಮನೋರಂಜನೆಗಾಗಿ’ ಎಂಬಂತಾಯಿತು. ಇದರಿಂದ ಮೊಗಲರ ದರಬಾರದಲ್ಲಿ ಅಥವಾ ಅವರ ಸರದಾರರ ಮನೋರಂಜನೆಗಾಗಿ ಈ ನೃತ್ಯದಲ್ಲಿ ಕಾಮಪ್ರಚೋದಕ ಭಾವದ ನೃತ್ಯಗಳು ಹೆಚ್ಚಾಗಿ ಸೃಷ್ಟಿಯಾದವು ಮತ್ತು ಈಶ್ವರಪ್ರಾಪ್ತಿಯ ಮೂಲ ಉದ್ದೇಶವು ಮಸುಕಾಗತೊಡಗಿತು. ಸಂಗೀತದ ಮೇಲೆಯೂ ಮೊಗಲ ಆಕ್ರಮಣಕಾರರ ಪ್ರಭಾವ ಬಿದ್ದಿತು. ಆದುದರಿಂದ ಇಂದಿಗೂ ಮುಸಲ್ಮಾನರ ಪ್ರಭಾವಕ್ಕೆ ಒಳಗಾದ ಹಿಂದಿ ಚಲನಚಿತ್ರೋದ್ಯಮವೂ ಕಥಕವನ್ನು ‘ದರಬಾರಿ ನೃತ್ಯ’ ಎಂದು ಪ್ರಸ್ತುತಪಡಿಸಿತು. ನಮ್ಮ ಕಲೆಗಳ ಅಸ್ತಿತ್ವ, ಅವುಗಳ ಮೂಲ ಉಗಮ ಮತ್ತು ಅವುಗಳ ಉದ್ದೇಶ ನಿಶ್ಚಿತವಾಗಿಯೂ ಮನೋರಂಜನೆಗಾಗಿ ಅಲ್ಲ. ಇದಕ್ಕಾಗಿ ಅದರ ಆಳವಾದ ಅಧ್ಯಯನವೂ ಆವಶ್ಯಕವಾಗಿದೆ. ಕಲಾಪ್ರೇಮಿಗಳು, ಕಲೆಯ ವಿದ್ಯಾರ್ಥಿಗಳು, ಕಲೆಯ ಶಿಕ್ಷಕರು, ರಸಿಕ ಪ್ರೇಕ್ಷಕರು ಇವರೆಲ್ಲರೂ ಇದನ್ನು ಅರ್ಥಮಾಡಿಕೊಂಡು ಈ ಕಲೆಗಳ ‘ಈಶ್ವರಪ್ರಾಪ್ತಿಗಾಗಿ ಕಲೆ’, ಅಂದರೆ ಸಾಧನೆಯೆಂದು ಪುನರುತ್ಥಾನಗೊಳಿಸಬೇಕಾದ ಸಮಯವು ಸಮೀಪಿಸಿದೆ !

– ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜೀಕರ, ನೃತ್ಯ ಅಧ್ಯಯನಕಾರರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.