‘ಲವ್ ಜಿಹಾದ್ ಬಗ್ಗೆ ಹಿಂದೂಗಳು ಜಾಗೃತರಾಗುವರೆಂಬ ಭಯದಿಂದ ‘ದಿ ಕೇರಳ ಸ್ಟೋರಿ ಚಿತ್ರಕ್ಕೆ ವಿರೋಧ ! – ವಕೀಲೆ ಮಣಿ ಮಿತ್ತಲ್

ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಆನ್‌ಲೈನ್ ವಿಶೇಷ ಸಂವಾದ : ‘ದಿ ಕೇರಳ ಸ್ಟೋರಿ : ನಿಷೇಧ ಚಿತ್ರದ ಮೇಲೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೋ ?’

ಮುಂಬೈ – ‘ಲವ್ ಜಿಹಾದ್’ ಎಂಬ ಸೂಕ್ಷ್ಮ ವಿಷಯದ ಮೇಲೆ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಿದ್ದಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಅಭಿನಂದಿಸಲೇಬೇಕು. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರಕಾರಗಳು ‘ದಿ ಕೇರಳ ಸ್ಟೋರಿ’ ಯನ್ನು ನಿಷೇಧಿಸಿದವು. ಕಮ್ಯುನಿಸ್ಟರು ಮತ್ತು ಮುಸ್ಲಿಮರನ್ನು ಓಲೈಸುವ ಈ ರಾಜ್ಯ ಸರಕಾರಗಳಿಗೆ ನ್ಯಾಯಾಲಯ ಛೀಮಾರಿ ಹಾಕಿದ ನಂತರವೂ ಹಿಂದೂಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಈ ರಾಜ್ಯಗಳಲ್ಲಿ ಚಿತ್ರಕ್ಕೆ ನಿಷೇಧ ಹೇರಲಾಗಿದ್ದರೂ ಇದೀಗ ಈ ಚಿತ್ರ ಭಾರತ ಮಾತ್ರವಲ್ಲ ವಿದೇಶಗಳಲ್ಲೂ ಹಲವು ದೇಶಗಳಲ್ಲಿ ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಲವ್ ಜಿಹಾದ್’ ಮಾಡುವವರ ಹುನ್ನಾರ ಈಗ ಬಯಲಾಗಿದ್ದು, ‘ದಿ ಕೇರಳ ಸ್ಟೋರಿ’ಯಂತಹ ಚಿತ್ರಗಳನ್ನು ನೋಡಿ ಹಿಂದೂಗಳು ಎಚ್ಚೆತ್ತುಕೊಳ್ಳುತ್ತಾರೆ, ಈ ಭಯದಿಂದ ‘ದಿ ಕೇರಳ ಸ್ಟೋರಿ’ಗೆ ವಿರೋಧವಾಗುತ್ತಿದೆ.

ಹಿಂದೂಗಳು ‘ದಿ ಕೇರಳ ಸ್ಟೋರಿ ಈ ಚಲನಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಬೇಕು ! – ವಕೀಲೆ ಮಣಿ ಮಿತ್ತಲ್

ವಕೀಲೆ ಮಣಿ ಮಿತ್ತಲ್

ವಾಸ್ತವದಲ್ಲಿ, ‘ದಿ ಕೇರಳ ಸ್ಟೋರಿಯಲ್ಲಿ ‘ಲವ್ ಜಿಹಾದ್ ಬಗ್ಗೆ ಸ್ವಲ್ಪವೇ ತೋರಿಸಲಾಗಿದೆ, ಪ್ರತ್ಯಕ್ಷದಲ್ಲಿ ಅದು ತುಂಬಾ ಭಯಾನಕವಾಗಿದೆ. ‘ಓ ಮೈ ಗಾಡ್, ‘ಪಿಕೆಯಂತಹ ಅನೇಕ ಹಿಂದೂವಿರೋಧಿ ಚಿತ್ರಗಳು ಬಿಡುಗಡೆಯಾಗಿವೆ ಮತ್ತು ‘ಆಶ್ರಮದಂತಹ ವೆಬ್‌ಸೀರೀಸ್‌ಗಳು ಹಿಂದೂ ಧರ್ಮ ಮತ್ತು ಋಷಿಗಳನ್ನು ಅವಮಾನಿಸಿದವು. ‘ದಿ ಕೇರಳ ಸ್ಟೋರಿಯನ್ನು ವಿರೋಧಿಸುವವರು ಆಗ ಸುಮ್ಮನಿದ್ದರು. ‘ದಿ ಕೇರಳ ಸ್ಟೋರಿ ಚಿತ್ರವನ್ನು ಹಿಂದೂಗಳು ದೊಡ್ಡ ಮಟ್ಟದಲ್ಲಿ ಬೆಂಬಲಿಸಬೇಕು.

ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವೇ ? – ಶ್ರೀ. ಸುನೀಲ ಘನವಟ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಸುನೀಲ ಘನವಟ

‘ದಿ ಕೇರಳ ಸ್ಟೋರಿ ಈ ಸಿನಿಮಾ ಕತೆಯು ಕೇರಳಕ್ಕೆ ಮಾತ್ರ ಸೀಮಿತವಲ್ಲ; ದೇಶ ವಿದೇಶಗಳಲ್ಲಿ ‘ಲವ್ ಜಿಹಾದ್ ಸಂಚು ನಡೆಯುತ್ತಿದೆ ! ಎಂಬುದರ ವಾಸ್ತವವನ್ನು ತೋರಿಸುವಂತಹ ಕನ್ನಡಿಯಾಗಿದೆ. ಈ ಚಿತ್ರದ ಮೂಲಕ ಭಯೋತ್ಪಾದಕ ಸಂಘಟನೆ ‘ಐಸಿಸ್ನ ನಿಜಸ್ವರೂಪ ಬೆಳಕಿಗೆ ಬಂದಿದೆ. ಕೆಲವು ಪಕ್ಷಗಳ ರಾಜಕೀಯ ಮುಖಂಡರು ಈ ಚಿತ್ರವನ್ನು ವಿರೋಧಿಸುತಿದ್ದಾರೆ, ಅಲ್ಪಸಂಖ್ಯಾತರಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ ? ‘ಲವ್ ಜಿಹಾದ್ ಮತ್ತು ‘ಭಯೋತ್ಪಾದನೆಯ ವಾಸ್ತವವನ್ನು ಒಪ್ಪಿಕೊಳ್ಳದೆ, ‘ಈ ಸಿನಿಮಾ ಮುಸ್ಲಿಮರ ವಿರುದ್ಧವಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಚಿತ್ರವನ್ನು ಮಾಡುವವರು ಮತ್ತು ನಿರ್ಮಾಪಕರು ತೋರಿದ ಧೈರ್ಯಕ್ಕೆ ಎಲ್ಲರನ್ನು ಹಿಂದೂ ಜನಜಾಗೃತಿ ಸಮಿತಿ ಅಭಿನಂದಿಸುತ್ತದೆ. ಹಿಂದೂ ಸಮಾಜ ಈಗ ಎಚ್ಚೆತ್ತು ಕೊಂಡಿದ್ದು, ಹೆಚ್ಚಿನ ಜನರು ‘ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಲು ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ, ಅವರಿಗೂ ಅಭಿನಂದನೆ ತಿಳಿಸಬೇಕಿದೆ. ‘ದಿ ಕಾಶ್ಮೀರ್ ಫೈಲ್ಸ್, ‘ದಿ ಕೇರಳ ಸ್ಟೋರಿ ಇಂತಹ ಹಿಂದೂಗಳನ್ನು ಜಾಗೃತಗೊಳಿಸುವ ಸಿನಿಮಾಗಳನ್ನು ಮಾಡಬೇಕಿದೆ.

ಸಂಘಟಿತ ಶಕ್ತಿಯ ಮಹತ್ವವನ್ನು ಹಿಂದೂಗಳು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ?

ಮುಸ್ಲಿಮರು ಮತ್ತು ಕ್ರೈಸ್ತರು ಹಿಂದೂಗಳಿಗಿಂತ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ, ಅವರ ಧರ್ಮಶ್ರದ್ಧೆಗಳ ಬಗ್ಗೆ ಪ್ರಶ್ನೆಯನ್ನು ಎತ್ತಿದಾಗ, ಅವರು ಹಿಂದೂಗಳಿಗಿಂತ ಅನೇಕ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟಿಸುತ್ತಾರೆ! ಆದ್ದರಿಂದ ಆಡಳಿತಗಾರರು ಅವರ ಧರ್ಮವನ್ನು ಕಾಪಾಡಲು ಜಾಗೃತರಾಗಿರುತ್ತಾರೆ. ಮುಸ್ಲಿಮರು ಮತ್ತು ಕ್ರೈಸ್ತರು ಅರ್ಥಮಾಡಿಕೊಂಡಂತೆ ಸಂಘಟಿತ ಶಕ್ತಿಯ ಮಹತ್ವವನ್ನು ಹಿಂದೂಗಳು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ?