ಇಂದಿನಿಂದ ಒಂದು ವಿಶೇಷ ಲೇಖನ !
ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದವಿ ಸ್ವರಾಜ್ಯಕ್ಕಾಗಿ ಸೈನಿಕರು ಮತ್ತು ಅಶ್ವಾರೂಢ ಸೈನಿಕರು ಮಾಡಿದ ತ್ಯಾಗ ಎಷ್ಟು ಶ್ರೇಷ್ಠವೋ, ಅದೇ ರೀತಿ ಇಂದಿಗೂ ಅನೇಕ ಹಿಂದುತ್ವನಿಷ್ಠ ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಹಿಂದೂ ಧರ್ಮ ಮತ್ತು ರಾಷ್ಟ್ರಗಳ ರಕ್ಷಣೆಗಾಗಿ ‘ಅಶ್ವಾರೂಢ ಸೈನಿಕ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾತ್ಯತೀತ ಸರಕಾರ, ಆಡಳಿತ ಮತ್ತು ಪೊಲೀಸರಿಂದ ಎದುರಾಗುವ ತೊಂದರೆಗಳನ್ನು ಸಹಿಸಿಕೊಂಡು ನಿಸ್ವಾರ್ಥ ಭಾವದಿಂದ ಅವರು ಕೇವಲ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಹಗಲಿರುಳು ಹೋರಾಡುತ್ತಿದ್ದಾರೆ.
ಇಂದು, ಜಾತ್ಯತೀತರ ಬೆಂಬಲದೊಂದಿಗೆ ರಾಷ್ಟ್ರವಿರೋಧಿ ಶಕ್ತಿಗಳು ಬಲಗೊಳ್ಳುತ್ತಿರುವಾಗ ಮತ್ತು ಹಿಂದೂ ವಿರೋಧಿ, ರಾಷ್ಟ್ರವಿರೋಧಿ ಪಿತೂರಿಗಳನ್ನು ರೂಪಿಸುತ್ತಿರುವಾಗ, ನಮ್ಮ ಮನದಲ್ಲಿ ‘ಹಿಂದೂಗಳ ಮತ್ತು ರಾಷ್ಟ್ರದ ಭವಿಷ್ಯವೇನು?’ ಎಂಬ ಚಿಂತೆ ಕಾಡುತ್ತದೆ. ಆಗ ಹಿಂದುತ್ವ ಮತ್ತು ರಾಷ್ಟ್ರಗಳ ರಕ್ಷಣೆಗಾಗಿ ಹೋರಾಡುವ ಈ ಸೈನಿಕರ ಮತ್ತು ಯೋಧರ ಹೋರಾಟದ ಉದಾಹರಣೆಗಳನ್ನು ಓದಿದರೆ ಖಂಡಿತವಾಗಿಯೂ ನಮ್ಮ ಮನಸ್ಸಿನ ಆ ಚಿಂತೆ ದೂರವಾಗಿ ಉತ್ಸಾಹ ಮೂಡುತ್ತದೆ. ಅದಕ್ಕಾಗಿಯೇ ಅಂತಹ ಸೈನಿಕರ ಮತ್ತು ಅವರ ಹಿಂದೂ ಧರ್ಮ ರಕ್ಷಣೆಯ ಹೋರಾಟದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಯೋಧ’ ಎಂಬ ವಿಶೇಷ ಲೇಖನವನ್ನು ಇಂದಿನಿಂದ ಪ್ರಾರಂಭಿಸುತ್ತಿದ್ದೇವೆ. ಈ ಮೂಲಕ ಭಾರತದಲ್ಲಿ ಸುರಾಜ್ಯವನ್ನು ನಿರ್ಮಿಸಲು ಪ್ರಯತ್ನಿಸುವವರ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಪ್ರೇರಣೆಯೂ ಸಿಗಲಿದೆ ! – ಸಂಪಾದಕರು.
ಪುಣೆಯ ಲೆಫ್ಟಿನೆಂಟ್ ಜನರಲ್ (ಡಾ.) ಡಿ.ಬಿ. ಶೆಕಟಕರ್ (ನಿವೃತ್ತ) (ವಯಸ್ಸು 82 ವರ್ಷ) ಅವರು ಅತ್ಯಂತ ಗೌರವಾನ್ವಿತ ಮತ್ತು ಅನುಭವಿ ಮಿಲಿಟರಿ ಅಧಿಕಾರಿ, ವಿಜ್ಞಾನಿ ಮತ್ತು ನೀತಿ ವಿಶೇಷಜ್ಞರಾಗಿದ್ದಾರೆ. ಅವರು 4 ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ರಾಷ್ಟ್ರೀಯ ಭದ್ರತೆ, ರಕ್ಷಣಾ ಯೋಜನೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಂದಿಗೂ ಸಹ ಶೆಕಟಕರ್ ಅವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಕ್ಷ ಸ್ಥಾನಗಳನ್ನು ಹೊಂದಿದ್ದು, ಯುವಕರನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇಂದು ಅವರ ಕುರಿತಾದ ಮಹತ್ವದ ಮಾಹಿತಿಯನ್ನು ತಿಳಿಯೋಣ.

1. ಲೆಫ್ಟಿನೆಂಟ್ ಜನರಲ್ (ಡಾ.) ಡಿ.ಬಿ. ಶೆಕಟಕರ್ (ನಿವೃತ್ತ) ಅವರ ವೃತ್ತಿ ಜೀವನದ ಪ್ರಮುಖ ಹಂತಗಳು
ಅ. ಮಿಲಿಟರಿ ಸೇವೆ: 1965 ರ ಭಾರತ-ಪಾಕಿಸ್ತಾನ ಯುದ್ಧ, 1971 ರಲ್ಲಿ ನಡೆದ ಯುದ್ಧ ಮತ್ತು 1999 ರ ಕಾರ್ಗಿಲ್ ಯುದ್ಧ ಹಾಗೂ ಅರುಣಾಚಲ-ಚೀನಾ ಗಡಿ ಭಾಗದಲ್ಲಿ ಭದ್ರತೆಗೆ ಸಂಬಂಧಿಸಿದ ನಿರ್ವಹಣೆಯ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದರು.
ಆ. ಗಡಿ ಭದ್ರತೆ: ಅರುಣಾಚಲ ಪ್ರದೇಶ, ಮ್ಯಾನ್ಮಾರ, ಭೂತಾನ ಮತ್ತು ಬಾಂಗ್ಲಾದೇಶ ಈ ದೇಶಗಳ ಗಡಿಯ ಕೆಲವು ಭಾಗಗಳ ಗಡಿ ಭದ್ರತಾ ನಿರ್ವಹಣೆಯ ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದಾರೆ.
ಇ. ದೇಶವಿರೋಧಿ ಉಗ್ರಗಾಮಿ ಗುಂಪುಗಳ ವಿರುದ್ಧ ಕಾರ್ಯಾಚರಣೆ: ಅಸ್ಸಾಂ, ನಾಗಾಲ್ಯಾಂಡ, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಈಶಾನ್ಯ ಭಾರತದ ಇತರ ಭಾಗಗಳಲ್ಲಿ ಬಂಡುಕೋರರ ವಿರುದ್ಧ ಹೋರಾಡಲು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಗುಜರಾತ ಮತ್ತು ಉತ್ತರ ಪ್ರದೇಶದಲ್ಲಿ ಜಾತಿ ಹಿಂಸಾಚಾರವನ್ನು ನಿಯಂತ್ರಿಸಿದ ಅನುಭವವಿದೆ.
ಈ. ‘ಆಪರೇಷನ ಬ್ಲೂ ಸ್ಟಾರ್’ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ: ಅವರು ಪಂಜಾಬಿನ ‘ಆಪರೇಷನ್ ಬ್ಲೂ ಸ್ಟಾರ್’ನಲ್ಲಿ (‘ಆಪರೇಷನ್ ಬ್ಲೂ ಸ್ಟಾರ್’ ಎಂದರೆ ಖಲಿಸ್ತಾನ್ ಚಳವಳಿಯ ವಿರುದ್ಧ ನಡೆಸಲಾದ ಮಿಲಿಟರಿ ಕಾರ್ಯಾಚರಣೆ) ಭಾಗವಹಿಸಿದ್ದರು. ನಂತರ ಪಂಜಾಬಿನಲ್ಲಿ ‘ಬ್ರಿಗೇಡಿಯರ’ ಹುದ್ದೆಯಲ್ಲಿ, ಕಾಶ್ಮೀರದಲ್ಲಿ ‘ಮೇಜರ್ ಜನರಲ್’ ಹುದ್ದೆಯಲ್ಲಿ ಮತ್ತು ಆಸ್ಸಾಂ ಹಾಗೂ ಈಶಾನ್ಯ ಭಾರತದ ಇತರ ಭಾಗಗಳಲ್ಲಿ ‘ಲೆಫ್ಟಿನೆಂಟ್ ಜನರಲ್’ ಆಗಿದ್ದಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಿದರು.
ನವದೆಹಲಿಯ ಸೇನಾ ಮುಖ್ಯ ಕಚೇರಿಯಲ್ಲಿ ಅವರು ಮಿಲಿಟರಿ ಕಾರ್ಯಾಚರಣೆಗಳ (ಚೀನಾ ಮತ್ತು ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ) ಉಪ ಮಹಾನಿರ್ದೇಶಕ, ಹೆಚ್ಚುವರಿ ಮಹಾನಿರ್ದೇಶಕ ಮತ್ತು ಕಾರ್ಯತಂತ್ರದ ಯೋಜನೆಯ ಮಹಾನಿರ್ದೇಶಕರಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಉ. ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನಗಳ ನಡುವಿನ ಗಡಿ ವಿವಾದಗಳ ಕುರಿತು ಚರ್ಚೆ: ಭಾರತ-ಚೀನಾ ಗಡಿ ವಿವಾದದ ಕುರಿತು ಜಂಟಿ ಕಾರ್ಯಗುಂಪು ಮತ್ತು ತಜ್ಞರ ಗುಂಪುಗಳ ಸದಸ್ಯರಾಗಿದ್ದರು. ಕಾಂಗ್ರೆಸ್ಸಿನ ಅಂದಿನ ಪ್ರಧಾನಮಂತ್ರಿ ನರಸಿಂಹ ರಾವ್ ಅವರ ಆಡಳಿತದ ಅವಧಿಯಲ್ಲಿ ನಡೆದ ‘ಶಾಂತಿ ಒಪ್ಪಂದ’ದ ಕರಡು ಸಮಿತಿಯ ಸದಸ್ಯರಾಗಿದ್ದರು. ಗಡಿ ವಿಷಯಗಳ ಕುರಿತು ಚೀನಾ ಸೇರಿದಂತೆ ಅನ್ಯ ಮಾತುಕತೆಗಳಲ್ಲಿ ಅವರು ಭಾಗವಹಿಸಿದ್ದಾರೆ, ಹಾಗೂ ಸಿಯಾಚಿನ್-ಗ್ಲೇಸಿಯರ್ ವಿವಾದದ ಕುರಿತು ಪಾಕಿಸ್ತಾನದೊಂದಿಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.
ಊ. ರಕ್ಷಣಾ ನೀತಿ ಮತ್ತು ಅಂತರಾಷ್ಟ್ರೀಯ ಸಹಕಾರ: ಲೆಫ್ಟಿನೆಂಟ್ ಜನರಲ್ (ಡಾ.) ಡಿ.ಬಿ. ಶೆಕಟಕರ್ (ನಿವೃತ್ತ) ಅವರು ಭಾರತ-ಅಮೇರಿಕ ರಕ್ಷಣಾ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಕಾರ್ಯಕ್ರಮಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಎ. ಭಯೋತ್ಪಾದನೆ ನಿರ್ಮೂಲನೆ: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತರಬೇತಿ ಪಡೆದ 1,256 ಭಯೋತ್ಪಾದಕರನ್ನು ಹಿಂಸೆ ತೊರೆದು ಸಾಮಾನ್ಯ ಜೀವನ ನಡೆಸಲು ಪ್ರೇರೇಪಿಸಿದರು. ಎರಡನೇ ಮಹಾಯುದ್ಧದ ನಂತರ ಭಯೋತ್ಪಾದನೆಯನ್ನು ಬಿಟ್ಟಂತಹ ಬಹುಶಃ ಇದು ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯಾಗಿರಬಹುದು. ಧಾರ್ಮಿಕ ಮೂಲಭೂತವಾದದ ಬೋಧನೆಗಳನ್ನು ಹೊಂದಿದ್ದ ಭಯೋತ್ಪಾದಕರು ಹಿಂಸೆಯನ್ನು ತ್ಯಜಿಸಿದರು.
ಯುವಕರು ವಿವಿಧ ವಿಷಯಗಳನ್ನು ಅಧ್ಯಯನ ಮಾಡಿ ಅವಕಾಶಗಳನ್ನು ದೇಶಸೇವೆಗಾಗಿ ಪರಿವರ್ತಿಸಬೇಕು
ರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯಲ್ಲಿ ಯುವಕರ ಮಹತ್ವ ಅಪಾರವಾಗಿದೆ. ಇಂದು ನಮ್ಮ ದೇಶದ ಯುವ ಪೀಳಿಗೆಗೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಯುವಕರು ವಿವಿಧ ಶೈಕ್ಷಣಿಕ ಉಪಕ್ರಮಗಳನ್ನು ಕಲಿತು ಅಧ್ಯಯನ ಮಾಡಬೇಕು. ಇಂದು ಕಾಲೇಜು ಶಿಕ್ಷಣ ಪಡೆಯುತ್ತಿರುವಾಗ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಷಯಗಳ ಮೇಲೆ ಗಮನವಿಡಬೇಕು ಮತ್ತು ಅದರಿಂದ ಕಲಿಯಬೇಕು. ಕಲಿಕೆಯ ಮೂಲಕ ಪಡೆದ ಅವಕಾಶಗಳನ್ನು ಅವರು ದೇಶಸೇವೆಗಾಗಿ ಪರಿವರ್ತಿಸಬೇಕು. ಜಗತ್ತಿನಲ್ಲಿ ಇಂದು ಅತಿ ಹೆಚ್ಚು ವಿಶ್ವವಿದ್ಯಾಲಯಗಳು ಭಾರತದಲ್ಲಿವೆ ಮತ್ತು ಅದರಲ್ಲಿಯೂ ಪುಣೆಯಲ್ಲಿ ಅತಿ ಹೆಚ್ಚಿವೆ. ಪುಣೆ ವಿದ್ಯೆಯ ಮತ್ತು ಸಂಸ್ಕೃತಿಯ ತವರುಮನೆಯಾಗಿದೆ. ಪುಣೆಯಲ್ಲಿ ಶಿಕ್ಷಣದ ವಿವಿಧ ಅವಕಾಶಗಳು ಮತ್ತು ವಿವಿಧ ರೀತಿಯ ಕಾಲೇಜುಗಳು, ಹಾಗೂ ವಿಶ್ವವಿದ್ಯಾಲಯಗಳಿವೆ, ಅದಕ್ಕಾಗಿಯೇ ಪುಣೆಯನ್ನು ‘ಸಾಂಸ್ಕೃತಿಕ ಮತ್ತು ವಿದ್ಯೆಯ ನಗರಿ’ ಎಂದು ಕರೆಯುತ್ತಾರೆ. ಪುಣೆಯಂತೆಯೇ ಇದೇ ರೀತಿಯ ಕಾಲೇಜುಗಳು ಇಂದು ಗೋವಾ, ಕೇರಳ, ಕರ್ನಾಟಕ, ಒಡಿಶಾ, ಉತ್ತರ ಭಾರತ, ಹೀಗೆ ವಿವಿಧ ಕಡೆಗಳಲ್ಲಿ ನಿರ್ಮಾಣವಾಗುವುದು ಅವಶ್ಯಕವಾಗಿದೆ. ನಾನು ಇಂದಿಗೂ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಕ್ಷನಾಗಿದ್ದೇನೆ. ನಾನು ಯುವಜನರಿಗೆ ಶಿಕ್ಷಣ ನೀಡುವುದರಲ್ಲಿ ನನ್ನ ಸಮಯವನ್ನು ನೀಡುತ್ತಿದ್ದೇನೆ ಮತ್ತು ಮುಂದೆಯೂ ನೀಡುತ್ತೇನೆ. ನಾವೆಲ್ಲರೂ ನಮ್ಮ ರಾಷ್ಟ್ರವನ್ನು ಉಜ್ವಲಗೊಳಿಸಲು ಶ್ರಮಿಸೋಣ! – ಲೆಫ್ಟಿನೆಂಟ್ ಜನರಲ್ (ಡಾ.) ಡಿ.ಬಿ. ಶೆಕಟಕರ್ (ನಿವೃತ್ತ)
2. ಲೆಫ್ಟಿನೆಂಟ್ ಜನರಲ್ (ಡಾ.) ಡಿ.ಬಿ. ಶೆಕಟಕರ್ (ನಿವೃತ್ತ) ಅವರಿಗೆ ದೊರೆತ ಪ್ರಶಸ್ತಿಗಳು ಮತ್ತು ಗೌರವಗಳು
ಅ. ಭಾರತೀಯ ಸೇನೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅವರಿಗೆ ಭಾರತದ ಅಂದಿನ ರಾಷ್ಟ್ರಪತಿಗಳಿಂದ 1981 ರಲ್ಲಿ ‘ವಿಶಿಷ್ಟ ಸೇವಾ ಪದಕ (ವಿ.ಎಸ್.ಎಂ.)’, 1997 ರಲ್ಲಿ ‘ಅತಿ ವಿಶಿಷ್ಟ ಸೇವಾ ಪದಕ (ಎ.ವಿ.ಎಸ್.ಎಂ.)’ ಮತ್ತು 2002 ರಲ್ಲಿ ‘ಪರಮ ವಿಶಿಷ್ಟ ಸೇವಾ ಪದಕ (ಪಿ.ವಿ.ಎಸ್.ಎಂ.)’ ಈ ಪ್ರಶಸ್ತಿಗಳಿಂದ ಗೌರವಿಸಲಾಗಿದೆ.
ಆ. ಅವರಿಗೆ ಕೆಲವು ವಿಶ್ವವಿದ್ಯಾಲಯಗಳಿಂದ ‘ಡಾಕ್ಟರೇಟ್’ (ವಿದ್ಯಾವಾಚಸ್ಪತಿ) ಪದವಿಯಿಂದಲೂ ಸನ್ಮಾನಿಸಲಾಗಿದೆ. ಅವರು ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದು, ರಕ್ಷಣಾ ವಿಷಯದಲ್ಲಿ ‘ಎಂ.ಎಸ್ಸಿ.’ ಮತ್ತು ‘ಎಂ.ಫಿಲ್.’ ಪದವಿಗಳನ್ನು ಪಡೆದಿದ್ದಾರೆ.
ಆ 1. ಇದರೊಂದಿಗೆ ಪುಣೆಯ ‘ಸಿಂಬಯೋಸಿಸ್ ವಿಶ್ವವಿದ್ಯಾಲಯ’ದಿಂದ ಅವರು ನಿರ್ವಹಣಾ ಶಾಸ್ತ್ರದಲ್ಲಿ ’21 ನೇ ಶತಮಾನದಲ್ಲಿ ಯಶಸ್ವಿಯಾಗಲು ಅಗತ್ಯವಾದ ನಾಯಕತ್ವ ಗುಣಗಳು’ ಎಂಬ ವಿಷಯದ ಮೇಲೆ ಮೊದಲ ‘ಡಾಕ್ಟರೇಟ್’ ಪದವಿ ಪಡೆದರು.
ಆ 2. ತದ ನಂತರ ಅವರು ‘ರಕ್ಷಣೆ ಮತ್ತು ಕಾರ್ಯತಂತ್ರ ಅಧ್ಯಯನ’ದ ಅಡಿಯಲ್ಲಿ ‘ಸಾಮ್ಯವಾದಿ ಒಕ್ಕೂಟದ ಭಯೋತ್ಪಾದನೆ ಮತ್ತು ಅದರ ಭಾರತದ ಭದ್ರತೆಯ ಮೇಲಿನ ಪರಿಣಾಮ’ ಎಂಬ ವಿಷಯದ ಮೇಲೆ ಎರಡನೇ ‘ಡಾಕ್ಟರೇಟ್’ ಪದವಿ ಪಡೆದರು. ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ‘ರಕ್ಷಣೆ ಮತ್ತು ಕಾರ್ಯತಂತ್ರ ಅಧ್ಯಯನ’ ವಿಭಾಗದ ಮುಖ್ಯಸ್ಥರಾದ ಪ್ರಾ. ವಿಜಯ ಎಸ್. ಖರೆ ಅವರು ಈ ವಿಷಯದಲ್ಲಿ ಶೆಕಟಕರ್ ಅವರಿಗೆ ಮಾರ್ಗದರ್ಶನ ಮಾಡಿದರು.
ಆ 3. ನಂತರ ‘ಸಾಮಾಜಿಕ ಮಾಧ್ಯಮಗಳ ಹಿನ್ನೆಲೆಯಲ್ಲಿ 21 ನೇ ಶತಮಾನದ ಮಾನಸಿಕ ಯುದ್ಧ’ ಎಂಬ ವಿಷಯದಲ್ಲಿ ಮೂರನೇ ‘ಡಾಕ್ಟರೇಟ್’ ಪದವಿ ಪಡೆದಿದ್ದಾರೆ. ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯವು ಅವರಿಗೆ ಈ ಪದವಿಯನ್ನು ನೀಡಿದೆ. 3 ಡಾಕ್ಟರೇಟ್ ಪದವಿಗಳನ್ನು ಪಡೆದ ಬಹುಶಃ ಮೊದಲ ಮಿಲಿಟರಿ ಅಧಿಕಾರಿ ಅವರಾಗಿರಬಹುದು.
ಆ 4. ‘ಪರಿಸರ ವಿಜ್ಞಾನ ಮತ್ತು ಪರಿಸರ ಹಾಗೂ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು’ ಎಂಬ ವಿಷಯದಲ್ಲಿ ಅವರು ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ.
3. ಶೈಕ್ಷಣಿಕ ಮತ್ತು ಬೌದ್ಧಿಕ ಕೊಡುಗೆ
ಅ. ಅವರು ಭದ್ರತೆ, ಭಯೋತ್ಪಾದನೆ, ಆಂತರಿಕ ಭದ್ರತೆ ಮತ್ತು ಗುಪ್ತಚರ ವಿಷಯಗಳ ಕುರಿತು 17 ಪುಸ್ತಕಗಳನ್ನು ಸಹ-ಬರೆದಿದ್ದಾರೆ. ಬ್ಲೂಮಿಂಗ್ಟನ್ನ ‘ಇಂಡಿಯಾನಾ ವಿಶ್ವವಿದ್ಯಾಲಯ’ದ ‘ಸೆಂಟರ್ ಫಾರ್ ಅಮೇರಿಕನ್ ಅಂಡ್ ಗ್ಲೋಬಲ್ ಸೆಕ್ಯುರಿಟಿ’ ಯು ಅಮೇರಿಕಾದಲ್ಲಿ ಒಂದು ಪುಸ್ತಕವನ್ನು ಪ್ರಕಟಿಸಿದೆ.
ಆ. ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಶೆಕಟಕರ್ ಅವರು ‘ರಕ್ಷಣೆ ಮತ್ತು ಕಾರ್ಯತಂತ್ರ ಅಧ್ಯಯನ’ ವಿಭಾಗದ ‘ಛತ್ರಪತಿ ಶಿವಾಜಿ ಅಧ್ಯಯನ ಪೀಠ’ದ ಅಧ್ಯಕ್ಷರು ಮತ್ತು ಮುಖ್ಯ ಪ್ರಾಧ್ಯಾಪಕರಾಗಿದ್ದರು.
ಇ. ‘ಸಿಂಬಯೋಸಿಸ್ ವಿಶ್ವವಿದ್ಯಾಲಯ’ದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಸಲಹೆಗಾರರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಪುಣೆ ವಿಶ್ವವಿದ್ಯಾಲಯದ ರಕ್ಷಣೆ ಮತ್ತು ಕಾರ್ಯತಂತ್ರ ಅಧ್ಯಯನ ವಿಭಾಗದಲ್ಲಿ ಅವರು ಅಧ್ಯಕ್ಷರು, ಪ್ರಾಧ್ಯಾಪಕರಾಗಿದ್ದರು ಮತ್ತು ಅವರು ಸಿಂಬಯೋಸಿಸ್ ವಿಶ್ವವಿದ್ಯಾಲಯದ ಸಲಹೆಗಾರರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.
ಈ. ಇಂದಿಗೂ ಅವರು ಭಾರತದ ಅನೇಕ ಶೈಕ್ಷಣಿಕ ಸಂಸ್ಥೆಗಳ ಸಲಹಾ ಸಮಿತಿಗಳು ಮತ್ತು ಆಡಳಿತ ಮಂಡಳಿಗಳೊಂದಿಗೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಅವರು ಭಾರತದ ‘ಏಕಾತ್ಮಕ ಭದ್ರತಾ ವೇದಿಕೆ’ಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ನವದೆಹಲಿಯ ಜಂಟಿ ಯುದ್ಧ ಕೇಂದ್ರದ ಪ್ರತಿಷ್ಠಿತ ಸದಸ್ಯರಾಗಿದ್ದಾರೆ. ಅವರು 2016 ರಿಂದ 2024 ರವರೆಗೆ ‘ಸಿಕ್ಕಿಂ ಕೇಂದ್ರೀಯ ವಿಶ್ವವಿದ್ಯಾಲಯ’ದ ‘ಕುಲಾಧಿಪತಿ’ಗಳಾಗಿದ್ದರು.
ಉ. ಅವರು ಭಾರತ ಸರಕಾರದ ತಜ್ಞರ ಸಮಿತಿಯ (ಇದನ್ನು ‘ಶೆಕಟಕರ್ ಸಮಿತಿ’ ಎಂದೂ ಕರೆಯುತ್ತಾರೆ) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸಮಿತಿಯ ಮೂಲಕ ಅವರು ‘ರಕ್ಷಣಾ ನಿರ್ವಹಣಾ ಸುಧಾರಣೆ ಮತ್ತು ರಕ್ಷಣಾ ಬಜೆಟ್ ಸಮತೋಲನ’ ಕುರಿತು ಶಿಫಾರಸುಗಳನ್ನು ನೀಡಿದ್ದಾರೆ.
ಊ. ಅವರು ‘ಫೋರಂ ಫಾರ್ ಇಂಟಿಗ್ರೇಟೆಡ್ ಸೆಕ್ಯುರಿಟಿ ಆಫ್ ಇಂಡಿಯಾ (ಫಿನ್ಸ್)’ ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರು ‘ಸೆಂಟರ್ ಫಾರ್ ಜಾಯಿಂಟ್ ವಾರ್ಫೇರ್, ನವದೆಹಲಿ’ ಯಲ್ಲಿ ಪ್ರತಿಷ್ಠಿತ ‘ಫೆಲೋ’ ಆಗಿದ್ದಾರೆ. ಅವರು ಸಲಹಾ ಮಂಡಳಿ ಮತ್ತು ‘ಗವರ್ನಿಂಗ್ ಕೌನ್ಸಿಲ್’ ನಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
82 ನೇ ವಯಸ್ಸಿನಲ್ಲಿಯೂ ಅವರು ತಮ್ಮ ಶಕ್ತಿ ಮತ್ತು ಸಮಯವನ್ನು ಯುವ ಪೀಳಿಗೆಯನ್ನು 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಲು ನೀಡುತ್ತಿರುವುದು ಶ್ಲಾಘನೀಯವಾಗಿದೆ !