ಹೊಸ ಸಂಸತ್ ಭವನದ ಉದ್ಘಾಟನೆ, 19 ರಾಜಕೀಯ ಪಕ್ಷಗಳ ಬಹಿಷ್ಕಾರ

ಪ್ರಧಾನಮಂತ್ರಿಯ ಬದಲಾಗಿ ರಾಷ್ಟ್ರಪತಿಯವರ ಹಸ್ತದಿಂದ ಉದ್ಘಾಟಿಸುವಂತೆ ಆಗ್ರಹ

ಹೊಸ ಸಂಸತ್ ಭವನ

ನವ ದೆಹಲಿ – ಪ್ರಧಾನಮಂತ್ರಿ ಮೋದಿಯವರು ಮೇ 28 ರಂದು ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯನ್ನು ಮಾಡುವವರಿದ್ದಾರೆ; ಆದರೆ ಈ ಕಟ್ಟಡದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಹಸ್ತದಿಂದ ನಡೆಯಬೇಕೆಂದು ಆಗ್ರಹಿಸುತ್ತಾ ದೇಶದ 19 ವಿರೋಧಿ ಪಕ್ಷಗಳು ಉದ್ಘಾಟನೆಯ ಕಾರ್ಯಕ್ರಮದ ಮೇಲೆ ಬಹಿಷ್ಕಾರ ಹಾಕಲು ನಿರ್ಣಯಿಸಿದ್ದಾರೆ. ಅವರು ಸಂಯುಕ್ತ ಮನವಿಯ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ದ್ರವಿಡ ಮುನ್ನೇತ್ರ ಕಳಘಂ (ದ್ರವಿಡ ಪ್ರಗತಿ ಸಂಘ), ರಾಷ್ಟ್ರೀಯ ಜನತಾ ದಳ, ಜನತಾ ದಳ(ಸಂಯುಕ್ತ), ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ, ಸಮಾಜವಾದಿ ಪಕ್ಷ, ಉದ್ಧವ ಠಾಕರೆಯವರ ಶಿವಸೇನಾ ಗುಂಪು, ಭಾರತೀಯ ಕಮ್ಯುನಿಸ್ಟ ಪಕ್ಷ, ಝಾರಖಂಡ ಮುಕ್ತಿ ಮೋರ್ಚಾ, ಕೇರಳಾ ಕಾಂಗ್ರೆಸ್ ಮಣಿ, ವಿದುಥಲಾಯಿ ಚಿರುಥಾಯಿಗಲ ಕಚ್ಛಿ, ರಾಷ್ಟ್ರೀಯ ಲೋಕ ದಳ, ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷ, ನ್ಯಾಶನಲ್ ಕಾನ್ಫರೆನ್ಸ ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಮಾರುಮಲಾರ್ಚಿ ದ್ರವಿಡ ಮುನ್ನೇತ್ರ ಕಳಗಂ ಮುಂತಾದ ಪಕ್ಷಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿವೆ.

ಈ ಸಂದರ್ಭದಲ್ಲಿ ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರು ಮಾತನಾಡುತ್ತಾ, ಈ ಸಂದರ್ಭದಲ್ಲಿ ವಿರೋಧಪಕ್ಷಗಳು ರಾಜಕೀಯ ಮಾಡಲಿದ್ದಾರೆಂದು ತಿಳಿದೇ ಇತ್ತು; ಆದರೆ ನಾವು ಎಲ್ಲರನ್ನೂ ಆಮಂತ್ರಿಸಿದ್ದೇವೆ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆನ್ನುವುದು ನಮ್ಮ ಇಚ್ಛೆಯಿದೆ ಎಂದು ಹೇಳಿದರು.

ಹೊಸ ಸಂಸತ್ ಭವನದಲ್ಲಿ ರಾಜದಂಡವನ್ನು ಇಡಲಾಗುವುದು

ಅಮಿತ ಶಹಾ ಮಾತನ್ನು ಮುಂದುವರೆಸುತ್ತಾ, ಹೊಸ ಸಂಸತ್ತಿನಲ್ಲಿ ರಾಜದಂಡವನ್ನು ಇಡಲಾಗುವುದು. ಯಾವ ದಿನ ಸಂಸತ್ತು ರಾಷ್ಟ್ರಕ್ಕೆ ಸಮರ್ಪಿಸಲಾಗುವುದೋ, ಆ ದಿನ ತಮಿಳುನಾಡಿನಿಂದ ಬಂದಿರುವ ವಿದ್ವಾನರು ಈ ರಾಜದಂಡವನ್ನು ಪ್ರಧಾನಮಂತ್ರಿಗಳಿಗೆ ಒಪ್ಪಿಸುವರು. ಅದನ್ನು ಸಂಸತ್ತಿನಲ್ಲಿ ಇಡಲಾಗುವುದು. ಈ ಹಿಂದೆ ಈ ರಾಜದಂಡವನ್ನು ಪ್ರಯಾಗರಾಜದ ಸಂಗ್ರಹಾಲಯದಲ್ಲಿ ಇಡಲಾಗಿತ್ತು.

ಹೊಸ ಸಂಸತ್ತಿಗಾಗಿ 862 ಕೋಟಿ ರೂಪಾಯಿಗಳ ವೆಚ್ಚ

ಸಂಸತ್ತಿನ ಹಳೆಯ ಕಟ್ಟಡ 47 ಸಾವಿರ 500 ಚೌರಸ ಮೀಟರ ವಿಸ್ತೀರ್ಣದಲ್ಲಿದ್ದೂ ಹೊಸ ಕಟ್ಟಡವನ್ನು 64 ಸಾವಿರ 500 ಚೌರಸ ಮೀಟರನಲ್ಲಿ ಕಟ್ಟಲಾಗಿದೆ ಹೊಸ ಸಂಸತ್ ಭವನ 4 ಮಹಡಿಗಳಿವೆ. ಅದಕ್ಕೆ 3 ಪ್ರವೇಶದ್ವಾರಗಳಿವೆ. ಅದಕ್ಕೆ `ಜ್ಞಾನ ದ್ವಾರ’, `ಶಕ್ತಿದ್ವಾರ’ ಮತ್ತು `ಕರ್ಮ ದ್ವಾರ’ ಈ ಹೆಸರನ್ನು ಇಡಲಾಗಿದೆ. ಸಂಸದರು ಮತ್ತು ಅತಿಗಣ್ಯ ವ್ಯಕ್ತಿಗಳಿಗಾಗಿ ಪ್ರತ್ಯೇಕ ಪ್ರವೇಶದ್ವಾರವಿದೆ. ಈ ಕಟ್ಟಡದ ಮೇಲೆ ಭೂಕಂಪದ ಪರಿಣಾಮವಾಗುವುದಿಲ್ಲ ಈ ಕಟ್ಟಡದ ಶಿಲ್ಪಕಾರ ಬಿಮಲ ಪಟೇಲರಾಗಿದ್ದಾರೆ. ಈ ಕಟ್ಟಡದ ನಿರ್ಮಾಣಕ್ಕಾಗಿ 862 ಕೋಟಿ ರೂಪಾಯಿಗಳ ವೆಚ್ಚವಾಗಿದೆ. ಕೇವಲ 28 ತಿಂಗಳುಗಳಲ್ಲಿ ಈ ಕಟ್ಟಡವನ್ನು ಕಟ್ಟಲಾಗಿದೆ. ಈ ಸಂಸತ್ತಿನಲ್ಲಿ ಆಸನಗಳ ಕ್ಷಮತೆ ಹಳೆಯ ಸಂಸತ್ ಭವನಕ್ಕಿಂತ ಅಧಿಕವಿದೆ. ಸಧ್ಯ ಲೋಕಸಭೆಯ ಆಸನಗಳ ಕ್ಷಮತೆ 590 ಇದೆ ಆದರೆ ಹೊಸ ಲೋಕಸಭೆಯಲ್ಲಿ 888 ಸ್ಥಾನಗಳಿವೆ ಮತ್ತು 336 ಕ್ಕಿಂತ ಅಧಿಕ ಜನರು ವೀಕ್ಷಕರು ಕುಳಿತುಕೊಳ್ಳಬಹುದಾಗಿದೆ ಸಧ್ಯಕ್ಕೆ ರಾಜ್ಯಸಭೆಯ ಆಸನ ಕ್ಷಮತೆ 280 ಇದೆ. ಹೊಸ ರಾಜ್ಯಸಭೆಯಲ್ಲಿ 384 ಸ್ಥಳಗಳಿವೆ ಮತ್ತು ವೀಕ್ಷಕರಿಗಾಗಿ 336ಕ್ಕಿಂತ ಅಧಿಕ ಆಸನಗಳಿವೆ.
ಸದ್ಯದ ಸಂಸತ ಭವನ 96 ವರ್ಷಗಳ ಮೊದಲು ಅಂದರೆ 1927ರಲ್ಲಿ ಕಟ್ಟಲಾಗಿತ್ತು. ಮಾರ್ಚ 2020 ರಲ್ಲಿ ಸರಕಾರವು ಸಂಸತ್ತಿನಲ್ಲಿ, ಹಳೆಯ ಕಟ್ಟಡವನ್ನು ಅಧಿಕ ಉಪಯೋಗಿಸಲಾಗಿತ್ತು ಮತ್ತು ಅದು ಹಾಳಾಗುತ್ತಿದೆ. ಇದರೊಂದಿಗೆ ಲೋಕಸಭೆಯ ಹೆಚ್ಚುತ್ತಿರುವ ಸಂಸದರು ಕುಳಿತುಕೊಳ್ಳಲು ಹಳೆಯ ಕಟ್ಟಡದಲ್ಲಿ ಸಾಕಾಗುವಷ್ಟು ಸ್ಥಳಾವಕಾಶವಿಲ್ಲ. ಇದಕ್ಕಾಗಿ ಹೊಸ ಕಟ್ಟಡವನ್ನು ಕಟ್ಟಲಾಗುವುದು ಎಂದು ಹೇಳಿದ್ದರು.