ಪರಾತ್ಪರ ಗುರು ಡಾ. ಆಠವಲೆಯವರ ದೇಹದಲ್ಲಿ ಕಾಲಾನುಸಾರ ಅನೇಕ ಬುದ್ಧಿಅಗಮ್ಯ ಬದಲಾವಣೆಗಳು ಆಗುತ್ತಿರುತ್ತವೆ. ಸಾಧನೆ ಯಿಂದ ವ್ಯಕ್ತಿಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ, ಎಂಬುದು ಅಖಿಲ ಮನುಕುಲಕ್ಕೆ ತಿಳಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಈ ಬದಲಾವಣೆಗಳ ಚಿತ್ರೀಕರಣ ಮಾಡಿಡಲು ಹೇಳುತ್ತಾರೆ. ಹಾಗೆಯೇ ಈ ಬದಲಾವಣೆಗಳ ಛಾಯಾಚಿತ್ರಗಳನ್ನೂ ತೆಗೆಯಲಾಗುತ್ತದೆ. ವಾಸ್ತವದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಶಾರೀರಿಕ ಕ್ಷಮತೆ ತುಂಬಾ ಕಡಿಮೆ ಆಗಿದೆ. ಈಗ ಅವರಿಗೆ ೮೦ ವರ್ಷಗಳಾಗಿವೆ. ಈ ವಯಸ್ಸಿನಲ್ಲಿ ಮತ್ತು ಅತ್ಯಂತ ಶಾರೀರಿಕ ತೊಂದರೆಗಳು ಆಗುತ್ತಿದ್ದರೂ, ಅವರು ಮುಂದಿನ ಪೀಳಿಗೆಗಳಿಗೆ ಈ ಬುದ್ಧಿಅಗಮ್ಯ ಸಂಶೋಧನೆಗಳ ಲಾಭವಾಗಬೇಕೆಂದು ವಿಶಿಷ್ಟ ‘ಪೋಸ್ (ಛಾಯಾಚಿತ್ರಗಳಿಗಾಗಿ ವಿಶಿಷ್ಟ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು) ಕೊಟ್ಟು ಗಂಟೆಗಟ್ಟಲೆ ಕುಳಿತು ಕೊಂಡು ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುತ್ತಾರೆ, ಹಾಗೆಯೇ ಆವಶ್ಯಕವಿದ್ದಲ್ಲಿ ಇವೆಲ್ಲ ಘಟನೆಗಳ ಚಿತ್ರೀಕರಣವನ್ನೂ ಮಾಡಿಸಿ ಕೊಳ್ಳುತ್ತಾರೆ. ಅವರ ಸಂಶೋಧಕ ವೃತ್ತಿ, ಪ್ರಯೋಗಶೀಲತೆ ಮತ್ತು ಸಮಷ್ಟಿಗೆ ಈ ಅಮೂಲ್ಯ ಜ್ಞಾನವನ್ನು ನೀಡುವ ತಳಮಳದಿಂದಾಗಿ ಅವರು ಛಾಯಾಚಿತ್ರಗಳು ಮತ್ತು ಚಿತ್ರೀಕರಣ ಅಪೇಕ್ಷೆಗನುಸಾರ ಆಗುವ ವರೆಗೆ ಪ್ರಯತ್ನಿಸುತ್ತಾರೆ. ಈ ರೀತಿ ಅಖಿಲ ಮನುಕುಲಕ್ಕಾಗಿ ಗಂಧದ ಕೊರಡಿನಂತೆ ದೇಹವನ್ನು ಸವೆಸುವ ಪರಾತ್ಪರ ಗುರು ಡಾ. ಆಠವಲೆಯವರ ಕುರಿತು ಸಾಧಕರು ಮಾತ್ರ ಅಲ್ಲ, ಅಖಿಲ ಮನುಕುಲದ ಮುಂದಿನ ಪೀಳಿಗೆಗಳು ಕೃತಜ್ಞವಾಗಿರುವವು ! – ಶ್ರೀ. ಅತುಲ ಬಧಾಲೆ, ಗೋವಾ. (೪.೬.೨೦೨೨)