ಬಾಂಗ್ಲಾದೇಶವು ಭಾರತೀಯ ಆಡಳಿತಾಧಿಕಾರಿಗಳ ಹೆಚ್ಚುವರಿ ಭದ್ರತೆಯನ್ನು ತೆಗೆದುಹಾಕಿತು !

ಬಾಂಗ್ಲಾದೇಶದ ಧ್ವಜ

ಢಾಕಾ (ಬಾಂಗ್ಲಾದೇಶ) – ಭಾರತೀಯ ರಾಯಭಾರ ಕಚೇರಿ ಮತ್ತು ಹಿರಿಯ ಆಡಳಿತಾಧಿಕಾರಿಗಳಿಗೆ ಒದಗಿಸಲಾಗಿದ್ದ ಹೆಚ್ಚುವರಿ ಭದ್ರತೆಯನ್ನು ಇನ್ನು ಮುಂದೆ ನೀಡಲಾಗುವುದಿಲ್ಲವೆಂದು ಬಾಂಗ್ಲಾದೇಶ ಸರಕಾರ ನಿರ್ಣಯಿಸಿದೆ. ವಿದೇಶಾಂಗ ಸಚಿವ ಡಾ. ಅಬ್ದುಲ್ ಮೊಮೆನ ಇವರು ಈ ಘೋಷಣೆಯನ್ನು ಮಾಡುತ್ತಾ, ನಾವು ನಮ್ಮ ತೆರಿಗೆದಾರರ ಹಣವನ್ನು ರಾಯಭಾರಿಗಳಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲು ವೆಚ್ಚಮಾಡಲು ಸಾಧ್ಯವಿಲ್ಲ. ಭಾರತವಲ್ಲದೇ ಅಮೇರಿಕಾ, ಸೌದಿ ಅರೇಬಿಯಾ ಮತ್ತು ಬ್ರಿಟನ ರಾಯಭಾರಿಗಳ ಹೆಚ್ಚುವರಿ ಭದ್ರತೆಯನ್ನು ಹಿಂಪಡೆಯಲಿದ್ದೇವೆ ಎಂದು ಹೇಳಿದರು. ಢಾಕಾದ ಭಾರತೀಯ ರಾಯಭಾರ ಕಚೇರಿಯು ಈ ವಿಷಯದ ಬಗ್ಗೆ ಇದುವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.

1. ಢಾಕಾ ಪೊಲೀಸ ಆಯುಕ್ತರ ಹೇಳಿಕೆಯಂತೆ, ನಾಲ್ಕು ದೇಶಗಳಲ್ಲದೇ ಇನ್ನಿತರೆ ರಾಯಭಾರಿಗಳಿಗೂ ಹೆಚ್ಚುವರಿ ಭದ್ರತೆಯನ್ನು ಒದಗಿಸುವಂತೆ ಮನವಿ ಮಾಡಿದ್ದವು.

2. ಇನ್ನೊಂದೆಡೆ `ಪಿ.ಟಿ.ಐ’ ಸುದ್ದಿಸಂಸ್ಥೆಯನುಸಾರ ಢಾಕಾ ಪೊಲೀಸರ ಬಳಿ ಮಾನವಸಂಪನ್ಮೂಲ ಕೊರತೆಯ ಕಾರಣದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

3. ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಹೇಳಿಕೆಯಂತೆ, ಒಂದು ವೇಳೆ ಯಾವುದೇ ರಾಯಭಾರಿಗೆ ಹೆಚ್ಚುವರಿ ಭದ್ರತೆಯ ಅವಶ್ಯಕತೆಯಿದ್ದರೆ, ಅವರು ಖಾಸಗಿ ಸಂಸ್ಥೆಗಳಿಂದ ಹಣ ನೀಡಿ ಇಂತಹ ಸೇವೆಯನ್ನು ಪಡೆಯಬಹುದಾಗಿದೆ.

4. 2016 ರಲ್ಲಿ ಢಾಕಾದ ಒಂದು ರೆಸ್ಟೊರೆಂಟ ಮೇಲೆ ನಡೆದ ಜಿಹಾದಿ ದಾಳಿಯಲ್ಲಿ ಒಬ್ಬ ಭಾರತೀಯ ಯುವಕ ಸಹಿತ 16 ವಿದೇಶಿ ನಾಗರಿಕರೂ ಸಾವನ್ನಪ್ಪಿದ್ದರು. ತದನಂತರ ಈ ಹೆಚ್ಚುವರಿ ಭದ್ರತೆಯ ವ್ಯವಸ್ಥೆಯನ್ನು ಪೂರೈಸಲಾಗಿತ್ತು.

ಸಂಪಾದಕರ ನಿಲುವು

ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅವರಿಗೆ ಭದ್ರತೆಯನ್ನು ಒದಗಿಸುವುದಿಲ್ಲ, ಇದು ಬಾಂಗ್ಲಾದೇಶದ ಹಿಂದೂ ವಿರೋಧಿ ಧೋರಣೆಯಾಗಿದೆ !