ಓರ್ವ ಧರ್ಮಪ್ರೇಮಿಗಳು, ‘ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ ಆಗುವುದು ?, ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಕೇಳಿದ ಪ್ರಶ್ನೆ ಮತ್ತು ಅವರು ಅದಕ್ಕೆ ನೀಡಿದ ಉತ್ತರ ಮತ್ತು ಆ ಬಗ್ಗೆ ನಡೆದ ಅವರ ವಿಚಾರಪ್ರಕ್ರಿಯೆ

ಶ್ರೀ. ರಾಮ ಹೊನಪ

‘ಒಂದು ಸಲ ಓರ್ವ ಧರ್ಮಪ್ರೇಮಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಮುಂದಿನ ಪ್ರಶ್ನೆಯನ್ನು ಕೇಳಿದರು, “ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು; ಆದರೆ ಆ ದೃಷ್ಟಿಯಿಂದ ನಮ್ಮ ಸಿದ್ಧತೆ ಕಡಿಮೆ ಇದೆ. ‘ನಮ್ಮ ಬಳಿ ಆವಶ್ಯಕ ಸಾತ್ತ್ವಿಕ ಜನರ ಸಂಖ್ಯಾಬಲವಿಲ್ಲ, ಹಣವಿಲ್ಲ ಮತ್ತು ಧರ್ಮದ ಪ್ರಸಾರಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ ಸಾಧ್ಯ ? ಅದಕ್ಕೆ ಪರಾತ್ಪರ ಗುರು ಡಾಕ್ಟರರು “ನಮ್ಮ ಪಕ್ಷದಲ್ಲಿ ಭಗವಾನ ಶ್ರೀಕೃಷ್ಣನಿದ್ದಾನೆ. ಆದುದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು, ಎಂದು ಹೇಳಿದರು.

ಈ ಪ್ರಸಂಗದಿಂದ ಪರಾತ್ಪರ ಗುರು ಡಾಕ್ಟರರಿಗೆ ಶ್ರೀಕೃಷ್ಣನ ಮೇಲಿನ ‘ಪೂರ್ಣ ಶ್ರದ್ಧೆ ಮತ್ತು ಭಕ್ತಿ ಕಂಡು ಬರುತ್ತದೆ. ಈ ಪ್ರಸಂಗದಲ್ಲಿ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರ ಬಂದಿತು, ‘ಮಹಾಭಾರತದ ಯುದ್ಧದಲ್ಲಿ ದುರ್ಯೋಧನನ ಬಳಿ ಅಪಾರ ಸೈನ್ಯವಿತ್ತು ಮತ್ತು ಪಾಂಡವರ ಪಕ್ಷದಲ್ಲಿ ಕೇವಲ ಭಗವಾನ ಶ್ರೀಕೃಷ್ಣನಿದ್ದನು. ಶ್ರೀಕೃಷ್ಣನು ‘ಪೂರ್ಣಾವತಾರ ಮತ್ತು ‘ಸರ್ವಶಕ್ತಿವಂತ ಇದ್ದುದರಿಂದ ಅವನ ಕೃಪೆಯಿಂದ ಪಾಂಡವರು ಯುದ್ಧದಲ್ಲಿ ಗೆದ್ದರು, ಅದೇ ರೀತಿ ಈಗಲೂ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಘಟಿಸಲಿದೆ.
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೫.೨೦೨೩)