|
ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಭಾಜಪ ಸರಕಾರದ ಮಂತ್ರಿ ಮಂಡಳವು ರಾಜ್ಯದಲ್ಲಿರುವ ದೇವಾಲಯಗಳ ಭೂಮಿಯನ್ನು ಜಿಲ್ಲಾಧಿಕಾರಿ ಅಲ್ಲ, ದೇವಾಲಯದ ಅರ್ಚಕರಿಂದ ಹರಾಜು ಮಾಡಬಹುದು ಎಂದು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ದೇವಸ್ಥಾನಗಳ ಅರ್ಚಕರಿಗೂ ಗೌರವಧನ ನೀಡುವುದಾಗಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಏಪ್ರಿಲ್ ತಿಂಗಳಲ್ಲಿ ಈ ಬಗ್ಗೆ ಘೋಷಿಸಿದ್ದರು. ತದನಂತರ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಸರಕಾರವು ಕೈಗೊಂಡಿರುವ ನಿರ್ಧಾರದ ಪ್ರಕಾರ ೧೦ ಎಕರೆವರೆಗೆ ಇರುವ ಕೃಷಿ ಭೂಮಿ ಅರ್ಚಕರಿಗೆ ಆದಾಯದ ಮೂಲವಾಗಲಿದೆ. ಇದಲ್ಲದೇ ಜಮೀನು ಹರಾಜು ಮಾಡಲಾಗುವುದು. ಇದರಿಂದ ಬಂದ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಲು ಸರಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಕೃಷಿ ಭೂಮಿ ಇಲ್ಲದ ದೇವಸ್ಥಾನಗಳ ಅರ್ಚಕರಿಗೆ ಸರಕಾರ ತಿಂಗಳಿಗೆ ೫ ಸಾವಿರ ರೂಪಾಯಿ ಗೌರವ ಧನ ನೀಡುತ್ತಿದೆ. ಹಾಗೇಯೆ ಯಾರ ಕಡೆ ೫ ಎಕರೆ ಕೃಷಿಭೂಮಿ ಇದೆಯೋ ಆ ದೇವಸ್ಥಾನಗಳ ಅರ್ಚಕರಿಗೆ ೨೫೦೦ ರೂಪಾಯಿಗಳ ಗೌರವಧನ ನೀಡಲಾಗುವುದು ಎಂದು ಹೇಳಿದರು.
ಸಂಪಾದಕರ ನಿಲುವುಮಧ್ಯಪ್ರದೇಶದ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ ! |