ಸಂಭಲ(ಉತ್ತರಪ್ರದೇಶ) ಇಲ್ಲಿ ಪತ್ತೆಯಾದ ಶಿವ ಮಂದಿರದ ಹತ್ತಿರದ ಬಾವಿ ಅಗೆಯುವಾಗ ಮೂರು ಭಗ್ನ ಮೂರ್ತಿಗಳು ಪತ್ತೆ

ಸಂಭಲ(ಉತ್ತರಪ್ರದೇಶ) – ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ದೊರೆತಿರುವ ಶಿವ ದೇವಸ್ಥಾನದ ಪರಿಸರದಲ್ಲಿರುವ ಪ್ರಾಚೀನ ಬಾವಿಯ ಉತ್ಖನನದ ಸಮಯದಲ್ಲಿ ಶಿವ, ಗಣೇಶ ಮತ್ತು ಮಾತಾ ಪಾರ್ವತಿಯ ಭಗ್ನ ಮೂರ್ತಿಗಳು ದೊರೆತಿವೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾವಿಯಲ್ಲಿನ ಮಣ್ಣು ಮತ್ತು ಮಣ್ಣಿನ ರಾಶಿಯಲ್ಲಿ ಈ ಮೂರ್ತಿಗಳು ದೊರೆತಿವೆ. ಮಣ್ಣು ಅಗೆಯುವ ಕಾರ್ಯ ಮುಂದುವರೆದಿದೆ. ೪೬ ವರ್ಷಗಳಿಂದ ಮುಚ್ಚಿರುವ ಪ್ರಾಚೀನ ಶಿವ ಮಂದಿರದಲ್ಲಿ ದರ್ಶನ ಮತ್ತು ಪೂಜೆ ಮಾಡಲು ಜನರು ಬರುತ್ತಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಪೊಲೀಸ ಬಂದೋಬಸ್ತು ಮಾಡಲಾಗಿದೆ. ಸ್ಥಳಿಯರು ದೇವಸ್ಥಾನ ೨೦೦ ವರ್ಷಕ್ಕಿಂತಲೂ ಹಳೆಯದೆಂದು ನಂಬಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಆಡಳಿತ ಮತ್ತು ಭಕ್ತರು ಮುಂದಾಳತ್ವ ವಹಿಸಿದ್ದಾರೆ. ಆಚಾರ್ಯ ವಿನೋದ ಶುಕ್ಲಾ ಇವರು, ಪ್ರಸ್ತುತ ತತ್ಕಾಲಿಕ ಪೂಜೆ ನಡೆಸಲಾಗುತ್ತಿದೆ; ಆದರೆ ಆದಷ್ಟು ಬೇಗನೆ ಶಾಶ್ವತ ಅರ್ಚಕರ ನೇಮಕ ಮಾಡಲಾಗುವುದು ಅದಕ್ಕಾಗಿ ಆಡಳಿತದಿಂದ ಪ್ರಯತ್ನ ಮಾಡಲಾಗುತ್ತಿದೆ’, ಎಂದು ಹೇಳಿದರು.