ಮಗಳಿಗೆ ಅವಳ ಪತಿಯನ್ನು ಆಯ್ಕೆ ಮಾಡುವ, ಅವನಿಗೆ ವಿವಿಧ ಪ್ರಶ್ನೆಗಳನ್ನು ಕೇಳುವ ಅಧಿಕಾರ ಇರಬೇಕು, ಇದಕ್ಕೆ ಎರಡು ಮಾತಿಲ್ಲ; ಆದರೆ ಕೆಲವು ಯುವತಿಯರು ವಿವಾಹದ ಮೊದಲೇ ಯುವಕನಿಗೆ ಅವನ ತಂದೆ-ತಾಯಿಯರಿಂದ ವಿಭಕ್ತವಾಗಿರಲು ಷರತ್ತು ಹಾಕುತ್ತಾರೆ, ಮನೆಯಲ್ಲಿ ಎಷ್ಟು ‘ಕಸದ ಬುಟ್ಟಿಗಳು’ (ಡಸ್ಟಬಿನ್ಸ್) ಅಂದರೆ ವೃದ್ಧ ತಂದೆ-ತಾಯಿ ಅಥವಾ ಆಪ್ತೇಷ್ಟರಿದ್ದಾರೆಯೇ, ಎಂದು ಕೇಳುತ್ತಾರೆ. ಇಷ್ಟೊಂದು ನಿರ್ಲಜ್ಜತನ ಮತ್ತು ಸಂಸ್ಕಾರಶೂನ್ಯತೆ ಈ ಯುವತಿಯರಲ್ಲಿ ಎಲ್ಲಿಂದ ಬಂದಿತು ? ಅವರ ತಂದೆ-ತಾಯಿ ಆ ಮಕ್ಕಳ ಮೇಲೆ ಯಾವುದೇ ಸುಸಂಸ್ಕಾರಗಳನ್ನು ಮಾಡಿಯೇ ಇಲ್ಲವೇನು ? ತಂದೆ-ತಾಯಿ ಅನೇಕ ಸಂಕಟಗಳನ್ನು ಸಹಿಸಿ ಮಗನನ್ನು ಚಿಕ್ಕಂದಿನಿಂದ ದೊಡ್ಡವನನ್ನಾಗಿ ಮಾಡಿರುತ್ತಾರೆ, ಉಚ್ಚ ಶಿಕ್ಷಣವನ್ನು ನೀಡಲು ಸಾಲ ಮಾಡಿರುತ್ತಾರೆ ಅಂತಹ ತಂದೆ-ತಾಯಿಯರ ಋಣವನ್ನು ಏಳು ಜನ್ಮಗಳಲ್ಲಿಯೂ ತೀರಿಸಲು ಸಾಧ್ಯವಿಲ್ಲ, ಅಂತಹ ಮಗನ ತಂದೆ-ತಾಯಿಯ ಕುರಿತು ಇಷ್ಟೊಂದು ಕೀಳುಭಾವನೆಯನ್ನು ಬಹಿರಂಗವಾಗಿ ತೋರಿಸುವ ಹುಡುಗಿಯು ಮುಂದೆ ಏನೆಲ್ಲ ಮಾಡಬಹುದು ? ಒಂದು ಕುಟುಂಬಕ್ಕಾಗಿ ಸವೆಯಲು ಇಚ್ಛಿಸದವಳು ಸಮಾಜಕ್ಕಾಗಿ, ದೇಶಕ್ಕಾಗಿ ಯಾವ ತ್ಯಾಗವನ್ನು ಮಾಡಬಹುದು ?