ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ಕಳೆದ ವಾರದ ಲೇಖನದಲ್ಲಿ ನಾವು ‘ಕೊಲಿಜಿಯಂ’ ಮತ್ತು ಸರ್ವೋಚ್ಚ ನ್ಯಾಯಾಲಯದ ಬದಲಾಗುತ್ತಿರುವ ಪಾತ್ರ, ಕೊಲಿಜಿಯಂ ವಿಷಯದಲ್ಲಿ ಏಳುವ ಮತ್ತಷ್ಟು ಪ್ರಶ್ನೆ ಮುಂತಾದ ಅಂಶ ತಿಳಿದುಕೊಂಡೆವು ಈ ವಾರ ಅದರ ಕೊನೆಯ ಭಾಗ ನೋಡೋಣ.

ಈ ಲೇಖನದಲ್ಲಿ ನ್ಯಾಯದೇವತೆ ಎಂದು ಯಾರ ಉಲ್ಲೇಖವಿದೆಯೋ, ಅದು ಹಿಂದೂ ಧರ್ಮದಲ್ಲಿರುವ ನ್ಯಾಯಕ್ಕೆ ಸಂಬಂಧಿಸಿರುವ ದೇವತೆಗಳ ಉದಾ, ಯಮನಿಗೆ ಸಂಬಂಧಿಸಿರದೇ ವಿದೇಶದಿಂದ ಆಮದು ಮಾಡಿಕೊಂಡಿರುವ ನ್ಯಾಯ ಸಂಕಲ್ಪನೆ ಯಲ್ಲಿ ಕುರುಡು, ಕೈಯಲ್ಲಿ ತಕ್ಕಡಿ ಮತ್ತು ಖಡ್ಗವನ್ನು ಹಿಡಿದು ಕೊಂಡು ನಿಂತಿರುವ ಕಾಲ್ಪನಿಕ ದೇವತೆ ‘ಜಸ್ಟೀಸಿಯಾ (ಲೇಡಿ ಜಸ್ಟಿಸ)’ ಇವಳದ್ದಾಗಿದೆ, ಯಾರನ್ನೂ ಅವಮಾನಿಸುವುದು ಈ ಲೇಖನ ಉದ್ದೇಶವಲ್ಲ – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/85168.html
ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

೮. ಕೇಂದ್ರದ ಕಾರಣಗಳನ್ನು ಮುದ್ರಿಸುತ್ತೀರಿ ಹಾಗಾದರೆ ನಿಮ್ಮ ಕಾರಣಗಳ ಬಗ್ಗೆ ?

ಇದೆಲ್ಲವೂ ನಿನಗೆ ತಾತ್ವಿಕವೆನಿಸಬಹುದು. ಈಗಿನ ಹೊಸ ಪ್ರಶ್ನೆ ಏನೆಂದರೆ, ಕೊಲಿಜಿಯಂ ಕೆಲವು ನ್ಯಾಯಮೂರ್ತಿಗಳ ನೇಮಕಾತಿಯ ಶಿಫಾರಸ್ಸು ಮಾಡಿತು. ಅದಕ್ಕೆ ಕೇಂದ್ರಸರಕಾರ ವಿರೋಧಿಸಿತು. ಅದರ ಹೆಸರಿನೊಂದಿಗೆ ಪ್ರಕಟವಾಗಿರುವ ಸುದ್ದಿ ಹೀಗಿದೆ.

ಇದರಿಂದ ಬಹಳ ದೊಡ್ಡ ಕೋಲಾಹಲ ಎದ್ದಿತು. ಸರ್ವೋಚ್ಚ ನ್ಯಾಯಾಲಯವು ಅತ್ಯಂತ ಧೈರ್ಯಶಾಲಿ ಮತ್ತು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿದೆಯೆಂದು ಇಂದು ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ. ಕೊನೆಯಪಕ್ಷ ಸದ್ಯದ ಸರಕಾರವನ್ನು ವಿರೋಧಿಸುವವರಾದರೂ ಹೀಗೆ ಹೇಳುತ್ತಿದ್ದಾರೆ. ಇದು ನಿಜವಾಗಿರಲೂ ಬಹುದು; ಆದರೆ ಇದರಿಂದ ನನ್ನ ಗಮನಕ್ಕೆ ಬಂದಿರುವ ವಿಷಯ ಕೆಳಗಿನಂತಿದೆ.

೯. ಕಡಿಮೆಪಕ್ಷ ರಾಮಜನ್ಮಭೂಮಿಯ ತೀರ್ಪು ಸರಿಯಾಗಿತ್ತು ಎನ್ನುವುದು ಸಿದ್ಧವಾಗಿದೆ.

ಅ. ಒಂದು ವೇಳೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡರು ನಿಜವಾಗಿಯೂ ನಿ:ಸ್ಪ್ರಹ ಮತ್ತು ನ್ಯಾಯಬುದ್ಧಿಯನ್ನು ಹೊಂದಿದ್ದರೆ, ಅವರು ಇದನ್ನು ಒಪ್ಪಿಕೊಳ್ಳಲೇ ಬೇಕು, ೨೦೧೯ ರಲ್ಲಿ ಸರ್ವೋಚ್ಚ ನ್ಯಾಯಾಲಯದ ರಾಮಜನ್ಮಭೂಮಿ ವಿಷಯದಲ್ಲಿ ಯಾವ ತೀರ್ಪು ನೀಡಿದೆಯೋ, ಅದರಲ್ಲಿ ‘ಮಂದಿರವಾಗಬೇಕು’ ಎನ್ನುವುದು ಈಗಿನ ನ್ಯಾಯಮೂರ್ತಿ ಚಂದ್ರಚೂಡರ ಪಾತ್ರವೂ ಇತ್ತು. ಇದರಿಂದಲೇ ಆ ತೀರ್ಪು ವಿವಾದಾಸ್ಪದವಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇದರಿಂದಲೇ ಈಗ ನ್ಯಾಯಮೂರ್ತಿ ಚಂದ್ರಚೂಡರ ಅಭಿಪ್ರಾಯವನ್ನು ಸ್ವಾಗತಿಸುವವರು ರಾಮಮಂದಿರವನ್ನೂ ಸ್ವಾಗತಿಸಬೇಕು; ಕಾರಣ ಆ ನ್ಯಾಯಮೂರ್ತಿವೃಂದದಲ್ಲಿ ನ್ಯಾಯಮೂರ್ತಿ ಚಂದ್ರಚೂಡರೂ ಇದ್ದರು.

ಆ. ಮೇಲೆ ನಮೂದಿಸಿರುವ ವ್ಯಕ್ತಿಗಳ ವಿಷಯದಲ್ಲಿ ಕೇಂದ್ರದ ಅಭಿಪ್ರಾಯ ಏಕೆ ಅಯೋಗ್ಯವಾಗಿದೆ ? ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯ ಜನತೆಯೆದುರಿಗೆ ಮಂಡಿಸುತ್ತದೆ; ಆದರೆ, ಇವರ ನಿಯುಕ್ತಿಯಾಗುವ ಹಿಂದೆ ಅವರ ಪಾತ್ರತೆ ಏನಿದೆ ? ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯ ಹೇಳುತ್ತಿಲ್ಲ. ಇದು ಏಕೆಂದು ತಿಳಿಯುವುದಿಲ್ಲ ?

ಇ. ಸರ್ವೋಚ್ಚ ನ್ಯಾಯಾಲಯವು ಜನತೆಯೆದುರಿಗೆ ಇಂತಹ ವಿಷಯಗಳನ್ನು ಇಟ್ಟು ಕೇಂದ್ರದ ತೇಜೋವಧೆ ಮಾಡುತ್ತಿದ್ದರೆ, ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿಗಳ ವಿಷಯದಲ್ಲಿ ಯಾವ ದೂರುಗಳು ಬಂದಿವೆ ? ಎನ್ನುವುದನ್ನು ಕೇಂದ್ರಸರಕಾರ ಜನತೆಯೆದುರಿಗೆ ಏಕೆ ಮಂಡಿಸುವುದಿಲ್ಲ ?

೧೦. ಇಂದಿರಾ ಗಾಂಧಿ ತಪ್ಪಿದ್ದಾರೆ ಎನ್ನುವುದನ್ನು ಒಪ್ಪದ ಕಾಂಗ್ರೆಸ್ಸಿನವರು

ಈ ನಿಮಿತ್ತದಿಂದ ಕಾಂಗ್ರೆಸ್ಸಿನವರು ಕೇಶವಾನಂದ ಭಾರತಿ ಪ್ರಕರಣವನ್ನು ಅವರ ಮಾನಹಾನಿ ಮತ್ತು ಸೋಲು ಎಂದು ತಿಳಿದಿದ್ದರು, ಅವರೀಗ ಅಪ್ರತ್ಯಕ್ಷವಾಗಿ ಪುನಃ ಆ ತೀರ್ಪಿನ ಬುಡವನ್ನು  ಮೇಲಕ್ಕೆ ಎತ್ತುತ್ತಿದ್ದಾರೆ; ಆದರೆ ‘ನಾವು ತಪ್ಪಿದ್ದೆವು’ ಎಂದೇಕೆ ಒಪ್ಪಿಕೊಳ್ಳುವುದಿಲ್ಲ ? ‘ಇಂಡಿ ಯನ ಎಕ್ಸಪ್ರೆಸ್ನಲ್ಲಿ ಇತ್ತೀಚೆಗೆ ಕಾಂಗ್ರೆಸ್ಸಿನ ನಾಯಕ ಪಿ. ಚಿದಂಬರಮ್ ಇವರ ಲೇಖನ ಇದನ್ನೇ ಸ್ಪಷ್ಟಪಡಿಸುತ್ತದೆ. ಹಾಗೆಯೇ ದೈನಿಕ ‘ಲೋಕಸತ್ತಾ’ದಲ್ಲಿ ಕೆಲವು ದಿನಗಳ ಹಿಂದೆ ಬಂದಿದ್ದ ಒಂದು ಸಂಪಾದಕೀಯದಲ್ಲಿ ‘ಸರ್ವೋಚ್ಚ ನ್ಯಾಯಾಲಯದ ಪಾರದರ್ಶಕತೆ’ ಇದನ್ನು ಎತ್ತಿ ಹಿಡಿಯುತ್ತದೆ; ಏಕೆಂದರೆ ಅವರು ಕೇಂದ್ರದ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ; ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಕಾರಣಗಳು ಎಲ್ಲಿವೆ ? ಅಂದರೆ ‘ನಾವು ಏನು ಮಾಡಿದ್ದೇವೆಯೋ, ಅದು ಸರಿಯಾಗಿದೆ, ಈಗ ನೀವು ಅದನ್ನು ಮಾಡಬಾರದು’ ಎಂದಾಗಿದೆಯೇ ?

೧೧. ಹಾಗಿದ್ದರೆ ದೇಶವನ್ನು ಯಾರು ಮುನ್ನಡೆಸುತ್ತಾರೆ ?

ಇರಲಿ ಸಾಮಾನ್ಯ ಜನರು ಎಂದಿನಂತೆ ಸರಳ ಮತ್ತು ಮುಗ್ಧರಾಗಿದ್ದಾರೆ. ಅವರಿಗೆ ‘ದೇಶವು ಲಿಖಿತ ಕಾನೂನಿನಂತೆ ನಡೆಯುತ್ತದೆ’  ಎಂದೆನಿಸುತ್ತದೆ. ಅಂದರೆ ‘ರೂಲ ಆಫ್ ಲಾ’ ಕಾರಣ ಹಾಗೆ ಬರೆಯಲಾಗಿದೆ ಮತ್ತು ಅದನ್ನೇ ಕಲಿಸಲಾಗುತ್ತದೆ. ಇದು ಜನತೆಯ ಅನುಭವದಿಂದ ಒಂದು ಗಾದೆ ಮಾತು ಬಳಕೆಗೆ ಬಂದಿದೆ. ‘ಕಾನೂನು ಕತ್ತೆಯಾಗಿದೆ’ ನ್ಯಾಯದೇವತೆಯೇ, ಈಗ ನನ್ನನ್ನು ತೊಂದರೆಯಲ್ಲಿ ಸಿಲುಕಿಸಬೇಡ. ‘ಕಾನೂನಿನಂತೆ ದೇಶ ಮುನ್ನಡೆಯುತ್ತದೆ’ ಮತ್ತು ‘ಕಾನೂನು ಕತ್ತೆಯಾಗಿದೆ’ ಈ ಎರಡೂ ವಾಕ್ಯಗಳನ್ನು ಒಟ್ಟಿಗೆ ಓದಿದರೆ, ನ್ಯಾಯದೇವತೆಯೇ, ‘ಈ ದೇಶವನ್ನು ಕತ್ತೆ ನಡೆಸುತ್ತದೆ’ ಎಂದು ಅರ್ಥವಾಗುತ್ತದೆ. ನಾನು ಖಂಡಿತವಾಗಿಯೂ ಹೀಗೆ ಹೇಳುತ್ತಿಲ್ಲ. ನಾನು ಕೇವಲ ಜನರು ಏನು ಹೇಳುತ್ತಿದ್ದಾರೆ ? ಎನ್ನುವುದನ್ನು ನಿನಗೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ಇದು ನಿನ್ನ-ನನ್ನ ಮಟ್ಟಿಗೆ ಮಾತ್ರ ಇದೆ. ನಿನ್ನ, ಸಂವಿಧಾನದ, ಜನತೆಯ ಅಥವಾ ಜನತೆಯ ಪ್ರತಿನಿಧಿಗಳ ಅಥವಾ ನಿನ್ನ ಪ್ರತಿನಿಧಿಗಳ ಅಂದರೆ ನ್ಯಾಯಮೂರ್ತಿಗಳ ಅಪಮಾನ ಮಾಡುವ ಯಾವುದೇ ಇಚ್ಛೆಯಿಲ್ಲ. ಈ ಕಾರಣದಿಂದ ನನಗೆ ಯಾವುದೇ ಪ್ರಸಿದ್ಧಿಯೂ ಬೇಡ ಮತ್ತು ಕಾರಾಗೃಹವೂ ಬೇಡ. ನಾನು ನನ್ನ ಅನಿಸಿಕೆಯನ್ನು ನಿನಗೆ ಹೇಳಲು ಇಚ್ಛಿಸುತ್ತೇನೆ.

೧೨. ಸಾರ್ವಜನಿಕರ ಮನಸ್ಸಿನಲ್ಲಿ ಹಿಂದೂ ರಾಷ್ಟ್ರದ ಆಸೆ ಮೂಡಿದ್ದಲ್ಲಿ ತಪ್ಪೇನಿದೆ ?

ನ್ಯಾಯದೇವತೆಯೇ, ನನ್ನ ಅಥವಾ ನನಗೆ ಕೇಳಿರುವ ಪ್ರಶ್ನೆಯನ್ನು ಕೇಳಿದ ಬಳಿಕ ಒಂದು ವೇಳೆ ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯಬೇಕು ಮತ್ತು ಎರಡೂ ಕೈಗಳನ್ನು ಉಪಯೋಗಿಸಿ ಕೆಲವು ಕೃತಿಗಳನ್ನು ಮಾಡಬೇಕು ಎಂದು ನಿನಗೆ ಅನಿಸ ಬಹುದು ಅಥವಾ ಅನಿಸದಿರಲೂಬಹುದು; ಕಾರಣ ರೋಮನ ಸಂಸ್ಕೃತಿಯಲ್ಲಿ ನಿನ್ನ ಉತ್ಪತ್ತಿಯಾಗಿದ್ದು, ನಿನ್ನ ದೇಶದಲ್ಲಿ ಹೀಗೆಯೇ ನಡೆಯುತ್ತಿರಬಹುದು; ಆದರೆ ಭಾರತದ ಸಂಸ್ಕೃತಿ ವಿಭಿನ್ನವಾಗಿತ್ತು ಮತ್ತು ಇದೆ. ಆದುದರಿಂದ ಪ್ರಶ್ನೆಯೇಳುತ್ತದೆ. ಪ್ರಶ್ನೆ ಎರಡೂ ಬದಿಗಳಿಂದ ಇದೆ. ಉತ್ತರಗಳು ಮಾತ್ರಸಿಗುತ್ತಿಲ್ಲ. ಯಾರು ನಿಜ ? ಯಾರು ಸುಳ್ಳು ? ಏನೂ ತಿಳಿಯುವುದಿಲ್ಲ. ಇದಂತೂ ಕಾಣಿಸುತ್ತದೆ. ಒಟ್ಟಾರೆ ಒಂದು ಬದಲಾವಣೆಯ ಆವಶ್ಯಕತೆಯಿದೆ, ಎಂದು ಅನಿಸುತ್ತದೆ.

ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲವೆಂದು ಕಾಣಿಸುತ್ತಿದೆ. ‘ಅಂತಿಮ ಮಾತು ಯಾರದು ?’ ಎನ್ನುವುದರ ಮೇಲೆ ವಿವಾದಗಳೆದ್ದಿವೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಆದರೆ ಇದೂ ಕೂಡ ಸತ್ಯವಾಗಿದೆ. ‘ನಮಗೇ ತಿಳಿಯುತ್ತದೆ’,  ‘ನಮ್ಮ ಶಬ್ದಗಳೇ ಅಂತಿಮ’ ಎನ್ನುವ ಅಹಂಕಾರದ ಹೋರಾಟವಾಗಿದೆಯೇ ?’ ಕೆಲವು ಆಡಳಿತವರ್ಗದ ಮತ್ತು ಕೆಲವು ಜನರ ಅಹಂಕಾರ ಇಲ್ಲಿ ಅಡಗಿದೆಯೇ ? ಎಲ್ಲಿ ಅಹಂಕಾರ ಅಡ್ಡ ಬರುತ್ತದೆಯೋ ಅಲ್ಲಿ ವಿನಾಶವೇ ಇರುತ್ತದೆ ಇದು ಮಾತ್ರ ಸತ್ಯ. ಅವಿರತವಾಗಿ ಸಮಾಜವ್ಯವಸ್ಥೆಯನ್ನು ರಚಿಸಲು ನ್ಯಾಯದೇವತೆ ನಮ್ಮ ಬಳಿ ಏನಾದರೂ ಪರ್ಯಾಯವಿದೆಯೇ ? ಕೋಟ್ಯವಧಿ ಮೊಕದ್ದಮೆಗಳು ತೀರ್ಪಿಗೆ ಕಾಯುತ್ತಿರುವಾಗ ಮತ್ತು ನ್ಯಾಯ ಪಡೆಯಲು ಸರತಿಸಾಲು ಇರುವಾಗ ಕೆಲವರಿಗೆ ಬೇಗನೆ ನ್ಯಾಯ ದೊರಕಿರುವ ಚಿತ್ರ ಒಂದೆಡೆ, ಇನ್ನೊಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿರುವುದು, ಪ್ರೌಢತ್ವ ಹೊಂದಿಲ್ಲದ ಮುಖಂಡರ ಸ್ಥಿತಿ. ಸಾಮಾನ್ಯ ಜನರು ಯಾರ ಬಳಿಗೆ ಹೋಗಬೇಕು ? ನ್ಯಾಯದೇವತೆಯೇ ಜನರ ಮನಸ್ಸಿನಲ್ಲಿ ಹಿಂದೂ ರಾಷ್ಟ್ರದ ಆಸೆ ಮತ್ತು ಇಚ್ಛೆ ಚಿಗುರುತ್ತಿದೆ. ಅದರಲ್ಲಿ ಯಾರ ತಪ್ಪು ?

– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು (೨೬.೧.೨೦೨೩)