ಕಳೆದ ವಾರದ ಲೇಖನದಲ್ಲಿ ನಾವು ಅಧಿಕಾರಗಳ ವಿಭಜನೆ ಮತ್ತು ಸಂಸತ್ತು ನ್ಯಾಯಾಲಯದ ಅಧಿಕಾರಗಳ ಮೇಲೆ ಹೇರಿರುವ ಮಿತಿ, ಸಂವಿಧಾನದಲ್ಲಿ ಎಷ್ಟು ಬದಲಾವಣೆ ಸಾಧ್ಯ ?, ಮತ್ತು ಸರ್ವೋಚ್ಚ ನ್ಯಾಯಾಲಯ ಮತ್ತು ಸಂಸತ್ತಿನ ನಡುವಿನ ಮುಸುಕಿನ ಗುದ್ದಾಟ ಪ್ರಾರಂಭ, ಸಂವಿಧಾನದಲ್ಲಿ ಬದಲಾವಣೆ; ಇದೊಂದು ಬಿಡಿಸಲಾಗದ ಪ್ರಶ್ನೆಗಳ ಮಾಲಿಕೆ ? ಮುಂತಾದ ಅಂಶ ತಿಳಿದುಕೊಂಡೆವು ಈ ವಾರ ಅದರ ಮುಂದಿನ ಭಾಗ ನೋಡೋಣ
ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/84302.html |
ಈ ಲೇಖನದಲ್ಲಿ ನ್ಯಾಯದೇವತೆ ಎಂದು ಯಾರ ಉಲ್ಲೇಖವಿದೆಯೋ, ಅದು ಹಿಂದೂ ಧರ್ಮದಲ್ಲಿರುವ ನ್ಯಾಯಕ್ಕೆ ಸಂಬಂಧಿಸಿರುವ ದೇವತೆಗಳ ಉದಾ, ಯಮನಿಗೆ ಸಂಬಂಧಿಸಿರದೇ ವಿದೇಶದಿಂದ ಆಮದು ಮಾಡಿಕೊಂಡಿರುವ ನ್ಯಾಯ ಸಂಕಲ್ಪನೆ ಯಲ್ಲಿ ಕುರುಡು, ಕೈಯಲ್ಲಿ ತಕ್ಕಡಿ ಮತ್ತು ಖಡ್ಗವನ್ನು ಹಿಡಿದು ಕೊಂಡು ನಿಂತಿರುವ ಕಾಲ್ಪನಿಕ ದೇವತೆ ‘ಜಸ್ಟೀಸಿಯಾ (ಲೇಡಿ ಜಸ್ಟಿಸ)’ ಇವಳದ್ದಾಗಿದೆ, ಯಾರನ್ನೂ ಅವಮಾನಿಸುವುದು ಈ ಲೇಖನ ಉದ್ದೇಶವಲ್ಲ – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ |
೪. ಈ ನ್ಯಾಯಮೂರ್ತಿವೃಂದ ಎಲ್ಲಿತ್ತು ?
ಈ ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ; ಏಕೆಂದರೆ ಈಗ ವಾದ ಕೇವಲ ಕೇಶವಾನಂದ ಭಾರತಿ ತೀರ್ಪಿನ ಬಗ್ಗೆ ನಡೆಯುತ್ತಿಲ್ಲ ಅದರೂ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಅರ್ಥಾತ್ ನ್ಯಾಯಮೂರ್ತಿವೃಂದದ (ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ನ್ಯಾಯಮೂರ್ತಿಗಳ ಮಂಡಳಿ) ಬಗ್ಗೆ ಆಗಿದೆ. ಈ ನ್ಯಾಯಮೂರ್ತಿವೃಂದ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವ ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡಬೇಕೆಂದು ನಿರ್ಧರಿಸುತ್ತದೆ. ಆಗ ಆ ನ್ಯಾಯಮೂರ್ತಿ ಮೊದಲು ವಕೀಲಿ ಮಾಡುತ್ತಿರಬಹುದು ಅಥವಾ ನ್ಯಾಯಾಂಗದ ಆಡಳಿತ ವಿಭಾಗದಲ್ಲಿ ಸೇವೆ ಮಾಡುತ್ತಿರಬಹುದು ಅಥವಾ ಕನಿಷ್ಠ ನ್ಯಾಯಾಲಯದಲ್ಲಿ ನ್ಯಾಯಧೀಶರೆಂದು ಕಾರ್ಯನಿರ್ವಹಿಸಿರ ಬಹುದು. ಅವರನ್ನು ನೇಮಕಾತಿ ಮಾಡುವ ಪ್ರಕ್ರಿಯೆ ಯಾವುದಿದೆಯೋ, ಅದರಲ್ಲಿ ಯಾರನ್ನು ನೇಮಕಾತಿ ಮಾಡುವುದು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸುತ್ತದೆ. ತದನಂತರ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಆ ಪಟ್ಟಿಯನ್ನು ಕಳುಹಿಸುತ್ತದೆ ಮತ್ತು ಸರಕಾರವು ಆ ಪಟ್ಟಿಗೆ ಒಪ್ಪಿಗೆ ಸೂಚಿಸಬೇಕು, ಎನ್ನುವುದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿವೃಂದದ ಅಪೇಕ್ಷೆಯಾಗಿರುತ್ತದೆ. ಸದ್ಯ ವಿವಾದ ಇಲ್ಲಿ ಪ್ರಾರಂಭವಾಗಿದೆ. ಈ ವಾದಕ್ಕೆ ಅನೇಕ ಮಜಲುಗಳಿವೆ. ನ್ಯಾಯದೇವತೆ, ಸಾಮಾನ್ಯ ಜನರಿಗೆ ಇದು ತಿಳಿಯುವುದಿಲ್ಲ. ಅದು ನಿನಗೆ ತಲುಪಿದೆಯೇ ? ಎನ್ನುವುದು ನನಗೆ ಗೊತ್ತಿಲ್ಲ. ಆ ಪ್ರಶ್ನೆಗಳು ಕೆಳಗಿನಂತಿವೆ.
೫. ‘ಕೊಲಿಜಿಯಂ’ ಮತ್ತು ಸರ್ವೋಚ್ಚ ನ್ಯಾಯಾಲಯದ ಬದಲಾಗುತ್ತಿರುವ ಪಾತ್ರ
ಜನತೆಗೆ ಪ್ರಶ್ನೆಗಳೇಳುತ್ತವೆ ಮತ್ತು ಅದು ಅಲ್ಲಿಯೇ ಮರೆತು ಹೋಗುತ್ತದೆ, ಇದು ನಿನಗೂ (ನ್ಯಾಯದೇವತೆಗೂ) ರೂಢಿ ಆಗಿರಬೇಕು; ಆದರೆ ಈಗ ಯಾವ ಕೊಲಿಜಿಯಂ ಅಂದರೆ ನ್ಯಾಯಮೂರ್ತಿಗಳ ವೃಂದದ ಪ್ರಶ್ನೆ ಬಂದಿದೆಯೋ, ಅದೂ ಸಂವಿಧಾನದಲ್ಲಿ ಇಲ್ಲ. ಡಾ. ಆಂಬೇಡ್ಕರರು ಕೊಲಿಜಿಯಂ ರಚಿಸಿಲ್ಲ, ನೆಹರೂ ರಚಿಸಿಲ್ಲ, ಈ ವಿಷಯದಲ್ಲಿ ಗಾಂಧಿಯವರು ಯಾವತ್ತೂ ಹೇಳಿಲ್ಲ, ಹೀಗಿರುವಾಗ ಇದು ಈಗ ಹೇಗೆ ನಡೆಯುತ್ತದೆ ? ಎನ್ನುವ ಒಂದು ಪ್ರಶ್ನೆಯಂತೂ ಇದೆ. ಇಲ್ಲಿಯವರೆಗೆ ಈ ವಿಷಯದ ಮೇಲೆ ಸರ್ವೋಚ್ಚ ನ್ಯಾಯಾಲಯವು ೩ ಸಲ ಚರ್ಚೆ ನಡೆಸಿದೆ. ಮೊದಲ ಪ್ರಕರಣದಲ್ಲಿ ಅಂದರೆ ಸ್ವರಾಜ ಪ್ರಕಾಶ ಗುಪ್ತಾ ವಿರುದ್ಧ ಕೇಂದ್ರ ಸರಕಾರ (೧೯೮೧) ಈ ಪ್ರಕರಣದಲ್ಲಿ ನ್ಯಾಯಾಲಯವು ‘ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡುವ ಅಧಿಕಾರ ಸರಕಾರಕ್ಕೇ ಇದೆ. ಇದು ಸಂವಿಧಾನಕ್ಕೆ ಅನುಗುಣವಾಗಿಯೇ ನಡೆಯುತ್ತದೆ” ಎಂದು ಹೇಳಿದೆ.
ಹೀಗಿರುವಾಗ ನ್ಯಾಯದೇವತೆ, ಮುಂದಿನ ಎರಡು ಪ್ರಕರಣಗಳಲ್ಲಿ ಯಾರಿಗೆ (ಸರ್ವೋಚ್ಚ ನ್ಯಾಯಾಲಯದ ನೊಂದಣೀಕೃತ ನ್ಯಾಯವಾದಿಯ ವಿರುದ್ಧ ಕೇಂದ್ರ ಸರಕಾರ (ಸುಪ್ರೀಂ ಕೋರ್ಟ ಅಡ್ವೊಕೇಟ್ಸ್ ಅಂಡ್ ರೆಕಾರ್ಡ ವಿರುದ್ಧ ಯೂನಿಯನ್ ಇಂಡಿಯಾ) ಇದರಲ್ಲಿ ಮಾತ್ರ ಸಂವಿಧಾನದಲ್ಲಿರುವ ಶಬ್ದದ ಅರ್ಥವನ್ನು ಸರ್ವೋಚ್ಚ ನ್ಯಾಯಾಲಯವು ಬೇರೆ ರೀತಿಯಲ್ಲಿ ಅರ್ಥೈಸಿತು. ನ್ಯಾಯದೇವತೆ, ನಿನಗೆ ಇದು ತಿಳಿದಿದೆಯೇ, ‘ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡುವಾಗ ರಾಷ್ಟ್ರಪತಿಗಳು ಮುಖ್ಯ ನ್ಯಾಯಮೂರ್ತಿಗಳೊಂದಿಗೆ ‘ಕನ್ಸಲ್ಟೇಶನ್(ಚರ್ಚೆ) ಮಾಡಬೇಕು’ ಎನ್ನುವ ಶಬ್ದ ಸಂವಿಧಾನದಲ್ಲಿದೆ. ‘ಕನ್ಸಲ್ಟೇಶನ್ ಈ ಮೂಲ ಶಬ್ದ ಹೇಗಿದೆಯೋ ಹಾಗೆಯೇ ನಿನಗೆ ಹೇಳುತ್ತಿದ್ದೇನೆ.
ಕನ್ನಡದಲ್ಲಿ ಆ ಶಬ್ದದ ಅರ್ಥ ಚರ್ಚೆ ಅಥವಾ ಸಲಹೆ ಎಂದಾಗಬಹುದು. ಆಂಗ್ಲ ಭಾಷೆಯನ್ನು ಭಾರತವು ಕಂಡು ಹಿಡಿದಿಲ್ಲ. ಹಾಗಾಗಿ ಆಂಗ್ಲ ಭಾಷೆಯ ಬಗ್ಗೆ ಆಂಗ್ಲರು ನೀಡಿದ ಅರ್ಥವನ್ನೇ ನಾನು ಅರ್ಥೈಸುತ್ತೇನೆ. ಕನ್ಸಲ್ಟೇಶನ್ ಎಂದರೆ ಚರ್ಚೆ ಹೀಗೆಂದರೆ ತದನಂತರ ನೀಡಿರುವ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಅದರ ಅರ್ಥವನ್ನು ‘ಅಂತಿಮ ಅಭಿಪ್ರಾಯ’ ಎನ್ನುವ ರೀತಿಯಲ್ಲಿ ಮತ್ತು ಅದೂ ಕೇವಲ ಮುಖ್ಯ ನ್ಯಾಯಮೂರ್ತಿಗಳಷ್ಟೇ ಅಲ್ಲ, ಅವರೊಂದಿಗೆ ಅವರ ಕೆಳಗಿನ ಹಿರಿಯ ಮೂವರು ನ್ಯಾಯಮೂರ್ತಿಗಳು ಇವರೆಲ್ಲರ ಅಭಿಪ್ರಾಯವಾಗಿದೆ. ಇನ್ನೂ ಮುಂದುವರಿದು ಕೇಂದ್ರ ಸರಕಾರವು ಸಂದರ್ಭವನ್ನು (ರೆಫರೆನ್ಸ ಇನ್ ಇಯರ ೧೯೯೮) ಕೋರಿತ್ತು. ಅದರಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಅವರ ಕೆಳಗಿನ ಹಿರಿಯ ೫ ನ್ಯಾಯಮೂರ್ತಿಗಳು ಬಂದರು. ಈ ರೀತಿ ಕೊಲಿಜಿಯಂ, ಅಂದರೆ ನ್ಯಾಯಮೂರ್ತಿವೃಂದ ರಚನೆಯಾಗಿದೆ, ಅಂದರೆ ನ್ಯಾಯಮೂರ್ತಿವೃಂದ. ಅಂದರೆ ೧೯೮೧ ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಮುಂದಿನ ಎರಡು ತೀರ್ಪುಗಳು ಬಂದವು ಮತ್ತು ‘ನ್ಯಾಯಮೂರ್ತಿಗಳ ವೃಂದದವರು ಯಾರನ್ನು ನೇಮಕಾತಿ ಮಾಡುವುದು ? ಎನ್ನುವುದನ್ನು ನಿರ್ಧರಿಸಿ ಅವರನ್ನು ಆಯ್ಕೆ ಮಾಡುತ್ತಾರೆ’ ಎನ್ನುವ ಪದ್ಧತಿ ಬಂದಿತು. ನ್ಯಾಯ ದೇವತೆಯೇ, ಈ ಪದ್ಧತಿ ನಮಗೆ ಸಂವಿಧಾನದಲ್ಲಿ ಸಿಗುವುದಿಲ್ಲ. ಹಾಗಾಗಿ ಸತ್ಯ ಏನಿದೆ ? ಎನ್ನುವುದು ಜನತೆಯ ಪ್ರಶ್ನೆಯಾಗಿದೆ.
೬. ಕೊಲಿಜಿಯಂ ವಿಷಯದಲ್ಲಿ ಏಳುವ ಮತ್ತಷ್ಟು ಪ್ರಶ್ನೆ
ಈಗ ನ್ಯಾಯದೇವತೆ, ಈ ನ್ಯಾಯವೃಂದದ ವಿಷಯದಲ್ಲಿ ಅಂದರೆ ಕೊಲಿಜಿಯಂ ವಿಷಯದಲ್ಲಿ ಮತ್ತೆ ಪ್ರಶ್ನೆಯಿದೆ.
ಅ. ಇದು ಸಂವಿಧಾನದಲ್ಲಿ ಇಲ್ಲದಿದ್ದರೆ, ಹೇಗೆ ನಡೆಯುತ್ತದೆ ?
ಆ. ಯಾವುದು ಸಂವಿಧಾನದಲ್ಲಿ ಇಲ್ಲವೋ, ಅದು ಮೂಲ ರೂಪದಲ್ಲಿ (ಬೇಸಿಕ್ ಸ್ಟ್ರಕ್ಚರ್) ಹೇಗೆ ಬರುತ್ತದೆ ?
ಇ. ಒಂದು ವೇಳೆ ಬರುತ್ತಿದ್ದರೆ, ಆಂಬೇಡ್ಕರವಾದಿ ಮುಖಂಡರು ಇದನ್ನು ಏಕೆ ವಿರೋಧಿಸುವುದಿಲ್ಲ ?
ಈ. ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?
ಉ. ಹೀಗೂ ಇಲ್ಲ, ಈ ಕೊಲಿಜಿಯಮ್ ಅನ್ನು ಮೋದಿಯವರು (ಪ್ರಧಾನಮಂತ್ರಿ ಮೋದಿಯವರು) ರಚಿಸಿದ್ದಲ್ಲ ? ಅಥವಾ ಹಿಂದುತ್ವ ವಿರೋಧಕರ ಅಥವಾ ಜಾತ್ಯತೀತವಾದಿಗಳ ದೃಷ್ಟಿ ಯಿಂದ ನೋಡುವುದಾದರೆ, ಇದು ಮೋದಿಭಕ್ತರು ರಚಿಸಿದರು ಎನ್ನುವಂತೆಯೂ ಇಲ್ಲ. ಈ ಪ್ರಕ್ರಿಯೆಯು ಎಲ್ಲ ಕಡೆಯಲ್ಲಿ ಕಾಂಗ್ರೆಸ್ ಇದ್ದಾಗಲೂ ನಡೆದಿತ್ತು. ಇದು ಹೇಗೆ ನಡೆಯುತ್ತದೆ ?
ಊ. ಹೇಗಿದೆಯೆಂದರೆ, ಕೊಲಿಜಿಯಂ ಸದಸ್ಯರು (ನ್ಯಾಯಮೂರ್ತಿ ವೃಂದ) ಏನೂ ಪ್ರಜಾಪ್ರಭುತ್ವದಿಂದ ಚುನಾಯಿತರಾಗುವುದಿಲ್ಲ. ಕೆಲವೇ ಜನರು ಕೆಲವು ಜನರನ್ನು ಆಯ್ಕೆ ಮಾಡುತ್ತಾರೆ ಮತ್ತು ಹೀಗೆ ಆಯ್ಕೆ ಮಾಡಿರುವ ‘ಕೆಲವರು’ ಮುಂದಿನ ಕೆಲವರ ಆಯ್ಕೆ ಮಾಡುತ್ತಾರೆ. ಈ ಪ್ರಕ್ರಿಯೆ ಪ್ರಜಾಪ್ರಭುತ್ವದಲ್ಲಿ ಚೌಕಟ್ಟಿನಲ್ಲಿ ಎಲ್ಲಿ ಕುಳಿತುಕೊಳ್ಳುತ್ತದೆ ? ಆದಾಗ್ಯೂ ಇಂತಹ ಕೆಲವರು ಆಯ್ಕೆ ಮಾಡಿದ ಕೆಲವು ಜನರು ಸಂವಿಧಾನವನ್ನು ಹೇಗೆ ಅರ್ಥೈಸುತ್ತಾರೆ ? ಕಾರಣ ಪುನಃ ಮೂಲರೂಪದ (ಬೇಸಿಕ ಸ್ಟ್ರಕ್ಚರ) ಪ್ರಶ್ನೆ ಬರುತ್ತದೆ.
ಎ. ಈ ಕೆಲವು ಜನರು ಸಂವಿಧಾನದ ಅರ್ಥೈಸುವರು ಎಂದರೂ ಅದೇ ಅರ್ಥ ೧೯೫೦ ರಲ್ಲಿ ಸಂವಿಧಾನ ಬರೆಯಲು ಕುಳಿತಿರುವ ಎಲ್ಲ ಮನಸ್ಸಿನಲ್ಲಿ ಅಂದರೆ ನೆಹರೂ, ಪಟೇಲ, ಆಂಬೇಡಕರ ಮನಸ್ಸಿನಲ್ಲಿತ್ತೋ ? ಎಂದು ಯಾರು ಖಚಿತ ಪಡಿಸುವರು ?
ಏ. ‘ವರ್ಷ ೧೯೫೦ ರಲ್ಲಿ ಏನು ಬರೆಯಲಾಗಿದೆಯೋ, ಆ ತತ್ತ್ವಗಳು ಮತ್ತು ಮಾರ್ಗದರ್ಶನವನ್ನು ನೆಹರೂ, ಪಟೇಲ, ಆಂಬೇಡ್ಕರ ಮತ್ತು ರಾಜೇಂದ್ರಪ್ರಸಾದ ಮುಂತಾದವರು ಒಪ್ಪಿಕೊಂಡಿರುವ ಮಾರ್ಗದಲ್ಲಿಯೇ ಹೋಗುತ್ತಿರಬೇಕು’, ಎಂದು ಒಪ್ಪಿಕೊಳ್ಳುವ ಒಂದು ದೊಡ್ಡ ವರ್ಗ ದೇಶದಲ್ಲಿದೆ; ಏಕೆಂದರೆ ಅವರು ಸಂವಿಧಾನದ ರಾಜ್ಯವಾಗಿದ್ದು, ಸಂವಿಧಾನದಂತೆಯೇ ಮುನ್ನಡೆಯಬೇಕು ಎಂದು ಹೇಳುತ್ತಾರೆ. ನ್ಯಾಯದೇವತೆ, ನನಗೆ ಇದು ಖಂಡಿತವಾಗಿಯೂ ಒಪ್ಪಿಗೆಯಿದೆ; ಆದರೆ ಕೊನೆಯ ಪಕ್ಷ ಪ್ರಶ್ನೆಯನ್ನೂ ಕೇಳಬಾರದೇ ? ಇಷ್ಟು ವರ್ಷಗಳಲ್ಲಿ ಜಗತ್ತು ಬದಲಾಗಿದೆ, ಸಂವಿಧಾನ ಮತ್ತು ಅದರ ದಿಕ್ಕನ್ನು ಬದಲಾಯಿಸುವ ವಿಚಾರವನ್ನು ನಾವೇಕೆ ಮಾಡಬಾರದು ? (ಕಾರಣ ಇಷ್ಟೆಲ್ಲ ಬದಲಾವಣೆಯಂತೂ ಸಂವಿಧಾನದಲ್ಲಿ ಇಲ್ಲದಿರುವಾಗ ಬಂದಿದೆ. ಸ್ವತಃ ಸಂವಿಧಾನದಲ್ಲಿ ೧೦೦ ಕ್ಕೂ ಹೆಚ್ಚು ಸುಧಾರಣೆಗಳಾಗಿವೆ.)
೭. ಹಾಗಿದ್ದರೆ ದೇಶದ್ರೋಹಿ ಎಂದು ಹೇಳುತ್ತಾರೆಯೇ ?
ದೇಶದ ಶಾಸಕಾಂಗ ಸಂವಿಧಾನ ಅಂದರೆ ಸಂಸತ್ತು ದಾರಿ ತಪ್ಪಿದೆ; ಎಂದು ಸರ್ವೋಚ್ಚ ನ್ಯಾಯಾಲಯವು ಈ ನಿರ್ಣಯ ತೆಗೆದುಕೊಂಡಿದೆ ಎನ್ನುವುದೇ ? ಆದರೆ ನ್ಯಾಯಾಲಯವೂ ತಮ್ಮ ನಿರ್ಣಯವನ್ನು ಬದಲಾಯಿಸುತ್ತವೆ, ತಿರುವುಮರುವು ಮಾಡುತ್ತವೆ ಅದಕ್ಕೇನು ಹೇಳುವುದು ? ನ್ಯಾಯದೇವತೆಯೇ, ನನಗೆ ಭಯವೆನಿಸುತ್ತಿದೆ, ಈ ರೀತಿ ಪ್ರಶ್ನೆಗಳನ್ನು ನಾನು ಕೇಳಿದರೆ, ನನ್ನನ್ನು ಯಾರಾದರೂ ‘ದೇಶದ್ರೋಹಿ’ ಎನ್ನಬಹುದು. ಆದ್ದರಿಂದ ಈ ವಿಚಾರವನ್ನು ನಾನು ನನ್ನ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತೇನೆ; ಏಕೆಂದರೆ, ನಾನು ಸಜ್ಜನನಾಗಿದ್ದೇನೆ ಮತ್ತು ನನಗೆ ಸಂವಿಧಾನದ ವಿಷಯದಲ್ಲಿ ಪ್ರಶ್ನೆಗಳು ಮೂಡಿದರೆ, ಅದು ಸರಿಯಲ್ಲ. ‘ನನಗೆ ಧರ್ಮದ ವಿಷಯದಲ್ಲಿ ಪ್ರಶ್ನೆ ಮೂಡಿದರೆ, ಬಹುತೇಕವಾಗಿ ನಾನು ಪ್ರಗತಿಪರನಾಗಿರಬಹುದು; ಆದರೆ ನಾನು ಸಂವಿಧಾನದ ವಿಷಯದಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಮಾತ್ರ ನಾನು ಹಿಂದುಳಿದ ವಿಚಾರಸರಣಿಯವನಾಗಿರುತ್ತೇನೆ; ಎಂದು ತಿಳಿಯಬೇಕು ಎನ್ನುವ ಪದ್ಧತಿ ಈ ದೇಶದಲ್ಲಿದೆಯೇ ?
– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು (೨೬.೧.೨೦೨೩)
(ಮುಂದುವರಿಯುವುದು)