‘ಸೌದಿ ಅರೇಬಿಯಾದಲ್ಲಿ ಮಸೀದಿಯ ಮೇಲಿನ ಬೊಂಗಾಗೆ ಪ್ರತಿಬಂಧ ! ಸೆಕ್ಯುಲರ್ ಭಾರತದಲ್ಲಿ ಯಾವಾಗ ?

ಹಿಂದೂ ಜನಜಾಗೃತಿ ಸಮಿತಿಯಿಂದ ಈ ವಿಷಯದ ಬಗ್ಗೆ ಆನ್‌ಲೈನ್ ವಿಶೇಷ ಸಂವಾದ !

‘ಭಾರತದಲ್ಲಿನ ಎಲ್ಲಾ ಬೊಂಗಾಗಳ ಮೇಲೆ ಕೇವಲ ಪ್ರತಿಬಂಧವಲ್ಲ, ನಿಷೇಧ ಹೇರಿ ! – ಮೇಜರ್ ಸರಸ ತ್ರಿಪಾಠಿ

ಶ್ರೀ. ಸರಸ್ ತ್ರಿಪಾಠಿ

ಮುಂಬೈ – ಸೌದಿ ಅರೇಬಿಯಾದಲ್ಲಿ ರಂಜಾನ ತಿಂಗಳಲ್ಲಿ ಮಸೀದಿ ಮೇಲಿನ ಭೋಂಗಾದ ಮೇಲೆ ಪ್ರತಿಬಂಧ ಹೇರಲಾಗಿದೆ. ದೊಡ್ಡ ಧ್ವನಿಯಲ್ಲಿ ಹಾಕುವ ಭೊಂಗಾದಿಂದ ಆಗುವ ತೊಂದರೆಗಳು ಕಟ್ಟರ್ ಇಸ್ಲಾಮಿ ದೇಶಗಳಿಗೂ ತಿಳಿಯುತ್ತಿದೆ. ಪರಿಸರದ ಮತ್ತು ಶಾಸ್ತ್ರೀಯ ದೃಷ್ಟಿಯಿಂದಲೂ ಅವರು ಯೋಚಿಸುತ್ತಿದ್ದಾರೆ. ಭಾರತದಲ್ಲಿ ಮಸೀದಿಗಳ ಬೊಂಗಾಗಳನ್ನು ನಿಷೇಧಿಸುವ ಕುರಿತು ಬೇಡಿಕೆ ಬಂದಾಗಲೆಲ್ಲ ಮುಲ್ಲಾ, ಮೌಲ್ವಿ ಮತ್ತು ಮುಸ್ಲಿಮ್ ಮುಖಂಡರು ಕೇಳುವುದಿಲ್ಲ. ನಾವು ಶೇಕಡಾ ೨೦ ರಷ್ಟು ಜನರು ಭಾರತದಲ್ಲಿನ ಶೇಕಡ ೮೦ ರಷ್ಟು ಜನರ ಮೇಲೆ ಪ್ರಭುತ್ವ ಸಾಧಿಸುತ್ತಿದ್ದೇವೆ, ಇದನ್ನು ತೋರಿಸುವ ಪ್ರಯತ್ನ ನಡೆಯುತ್ತದೆ ! ಅಜಾನ್ ಬೇರೆಯವರಿಗೆ ಬೊಂಗಾದ ಮೂಲಕ ಕೇಳಿಸಬೇಕು ಹೀಗೆ ಇಸ್ಲಾಮಿನ ಯಾವ ಗ್ರಂಥದಲ್ಲಿ ಬರೆದಿದ್ದಾರೆ ? ೯೦ ಡೆಸಿಬಲ್ ಮೇಲೆ ಯಾವುದೇ ಬೊಂಗಾದ ಧ್ವನಿ ಇರಬಾರದು, ಆದರೆ ಅನೇಕ ಮಸೀದಿಗಳ ಮೇಲಿನ ಬೊಂಗಾದ ಧ್ವನಿ ೧೨೦ ರಿಂದ ೧೩೦ ಡೆಸಿಬಲ್‌ಗಿಂತ ಹೆಚ್ಚಿರುತ್ತದೆ, ಅದು ಜನರನ್ನು ಕಿವುಡರನ್ನಾಗಿ ಮಾಡಬಹುದು. ಭಾರತದಲ್ಲಿನ ಎಲ್ಲಾ ಮಸೀದಿಗಳ ಮೇಲಿನ ಬೊಂಗಾಗಳ ಮೇಲೆ ಕೇವಲ ಪ್ರತಿಬಂಧ ಅಷ್ಟೇ ಅಲ್ಲದೆ ಅದನ್ನು ನಿಷೇಧಿಸಬೇಕೆಂದು ದೆಹಲಿಯ ನಿವೃತ್ತ ಮೇಜರ್ ಹಾಗೂ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ. ಸರಸ್ ತ್ರಿಪಾಠಿ ಇವರು ಒತ್ತಾಯಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯಿಂದ ‘ಸೌದಿ ಅರೇಬಿಯಾದಲ್ಲಿ ರಮಜಾನ್ ತಿಂಗಳಿನಲ್ಲಿ ಮಸೀದಿಗಳ ಬೋಂಗಾದ ಮೇಲೆ ಪ್ರತಿ ಬಂಧ, ಸೆಕ್ಯುಲರ್ ಭಾರತದಲ್ಲಿ ಯಾವಾಗ ? ಈ ವಿಷಯದ ಮೇಲಿನ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತ ಸರಕಾರದಿಂದ ಮಸೀದಿಗಳ ಬೊಂಗಾಗಳ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು ! – ನ್ಯಾಯವಾದಿ ಉಮೇಶ  ಶರ್ಮಾ, ಸರ್ವೋಚ್ಚ ನ್ಯಾಯಾಲಯ

ನ್ಯಾಯವಾದಿ ಉಮೇಶ  ಶರ್ಮಾ

ಇಸ್ಲಾಮಿನ ಕೇಂದ್ರವೆಂದೇ ಹೇಳಲಾಗುವ ಅರಬ್‌ನ ಮಸೀದಿಗಳ ಬೊಂಗಾ ನಿಷೇಧಿಸಿದ್ದಾರೆ. ಹಾಗಾದರೆ ಭಾರತಕ್ಕೆ ಅದು ಜಾರಿಯಾಗುವುದಿಲ್ಲವೇ ? ದಿನ ದಲ್ಲಿ ೫ ಬಾರಿ ದೊಡ್ಡದಾಗಿ ಅಜಾನ ಕೇಳುವಾಗ ಅನೇಕರಿಗೆ ಅದರ ತೊಂದರೆ ಆಗುತ್ತದೆ. ಜನರ ನಿದ್ದೆ ಹಾಳಾಗುತ್ತದೆ, ಹಿಂದೂಗಳು ಆ ಸಮಯದಲ್ಲಿ ಪೂಜೆ ಅರ್ಚನೆ ಅಥವಾ ಇತರ ಕೆಲಸ ಮಾಡುವಾಗ ಅದರಲ್ಲಿ ಅಡಚಣೆ ಬರುತ್ತದೆ, ಅನ್ಯ ಧರ್ಮಿಯರಿಗೂ ಈ ತೊಂದರೆ ಆಗುತ್ತದೆ ! ಸಂವಿಧಾನದ ಪ್ರಕಾರ ಎಲ್ಲಾ ಧರ್ಮ ಪಂಥಗಳು ಸಮಾನವಾಗಿವೆ. ಅಜಾನ್ ಇದು ಮುಸಲ್ಮಾನರಿಗಾಗಿ ಇದೆ, ಆದರೆ ಅದನ್ನು ಇತರರಿಗೂ ಕೇಳಿಸಲು ಪ್ರಯತ್ನಿಸಲಾಗುತ್ತಿದೆ. ಅದನ್ನು ಸ್ಥಳೀಯ ಸರಕಾರಗಳು ನಿಲ್ಲಿಸಬೇಕು. ಭಾರತ ಸರಕಾರದಿಂದ ಮಸೀದಿಗಳ ಬೊಂಗಾಗಳ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು, ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಸಹ ಇದಕ್ಕೆ ನೇತೃತ್ವ ವಹಿಸಬೇಕು.