ಓಟಿಟಿ ಎಂದರೆ ‘ಓವರ್ ದಿ ಟಾಪ್, ಆಪ್ ಮೂಲಕ ಚಲನಚಿತ್ರ, ಧಾರಾವಾಹಿ ಇತ್ಯಾದಿ ಕಾರ್ಯಕ್ರಮಗಳನ್ನು ನೋಡುವುದು
೧. ಬಾಲಿವುಡ್‌ನ ರಹಸ್ಯ ತಂತ್ರ
ಭಾರತೀಯ ಚಲನಚಿತ್ರ ನಿರ್ಮಾಣದ ಜನಕ ದಾದಾಸಾಹೇಬ ಫಾಲ್ಕೆ ಇವರು ‘ದ ಲೈಫ್ ಆಫ್ ಕ್ರೈಸ್ತ್’ ಎಂಬ ಒಂದು ಚಲನಚಿತ್ರವನ್ನು ನೋಡಿದ್ದರು. ಅನಂತರ ಅವರ ಮನಸ್ಸಿನಲ್ಲಿ, ‘ಜೀಸಸ್ನ ಬಗ್ಗೆ ಚಲನಚಿತ್ರ ಮಾಡಲು ಸಾಧ್ಯವಿದ್ದರೆ, ನಮ್ಮ ದೇವಿ ದೇವತೆಗಳ ವಿಷಯದಲ್ಲಿ, ನಮ್ಮ ಐತಿಹಾಸಿಕ ಘಟನೆಗಳ ವಿಷಯದಲ್ಲಿ ಚಲನಚಿತ್ರ ತಯಾರಿಸಲು ಏಕೆ ಸಾಧ್ಯವಿಲ್ಲ ? ಎಂಬ ವಿಚಾರ ಬಂದಿತು.’ ಅದಕ್ಕನುಸಾರ ಭಾರತೀಯ ಚಲನಚಿತ್ರ ಸೃಷ್ಟಿಯಲ್ಲಿ ೧೯೧೩ ರಲ್ಲಿ ‘ರಾಜಾ ಹರಿಶ್ಚಂದ್ರ ಈ ಚಲನಚಿತ್ರವನ್ನು ಮೊದಲ ಬಾರಿ ತಯಾರಿಸಲಾಯಿತು; ಆದರೆ ೧೯೪೭ ರ ನಂತರ ಚಲನಚಿತ್ರಗಳ ಸ್ವರೂಪ ಸಂಪೂರ್ಣ ಬದಲಾಯಿತು. ಸಾಮ್ಯವಾದಿ ಗಳು, ಲಾಹೋರದಿಂದ ಬಂದಿರುವ ಕೆಲವು ಸಮೂಹ (ಗ್ರೂಪ್) ದವರು ಸಂಪೂರ್ಣ ಚಲನಚಿತ್ರಗಳ ‘ಥೀಮನ್ನೆ (ವಿಷಯ)
ಬದಲಾಯಿಸಿದರು.
ಸ್ವತಂತ್ರ ಭಾರತದಲ್ಲಿನ ಮೊದಲ ಬಣ್ಣದ ಚಲನಚಿತ್ರ ‘ಮೊಘಲ-ಎ-ಆಝಮ್ !
ಬಹುಸಂಖ್ಯಾತ ಹಿಂದೂಗಳ ಭಾರತ ದೇಶದಲ್ಲಿ ಸ್ವಾತಂತ್ರ್ಯದ ನಂತರದ ಮೊದಲ ಬಣ್ಣದ ಚಲನಚಿತ್ರ ‘ಮೊಘಲ-ಎ-ಆಝಮ್ ! ಇದರಿಂದ ಬಾಲಿವುಡ್‌ನ
ರಹಸ್ಯಮಯ ‘ಅಜೆಂಡಾ’ (ಕಾರ್ಯಸೂಚಿ) ತಿಳಿದುಬರುತ್ತದೆ.
೨. ಓಟಿಟಿ ಮತ್ತು ಬಾಲಿವುಡ್ ಏನು ಕೊಟ್ಟಿದೆ ? ಈ ಬಾಲಿವುಡ್ ಮತ್ತು ಓಟಿಟಿ ಇವು ನಮಗೆ ಏನು ಕೊಟ್ಟಿವೆ ?
೨ ಅ. ಹಿಂದೂ ಧರ್ಮ, ದೇವಿದೇವತೆಗಳನ್ನು ಅವಮಾನಿಸಲು ಆರಂಭಿಸಿದ್ದು ಬಾಲಿವುಡ್ !
೨ ಆ. ತಿಲಕ ಹಚ್ಚಿರುವ ವ್ಯಕ್ತಿ ಹಾಗೂ ಕೇಸರಿ ಬಟ್ಟೆ ಧರಿಸಿರುವ ವ್ಯಕ್ತಿ ಗೂಂಡಾ, ವ್ಯಭಿಚಾರಿ ಮತ್ತು ಅತ್ಯಾಚಾರಿಯೆಂದು ತೋರಿಸಲು ಆರಂಭಿಸಿದ್ದೇ ಬಾಲಿವುಡ್ !
೨ ಇ. ಅತ್ತಿಗೆ-ಮೈದುನ, ಅತ್ತೆ-ಅಳಿಯ, ಮಾವ-ಸೊಸೆ, ಮಗ-ಮಲತಾಯಿ, ಶಿಕ್ಷಕಿ-ವಿದ್ಯಾರ್ಥಿ, ಡಾಕ್ಟರ್-ರೋಗಿ ಇಂತಹ ವಿವಿಧ ಸಂಬಂಧಗಳಿಗೆ ಮಸಿ ಬಳಿಯುವ ಕೆಲಸ ಮಾಡಿರುವುದು ಇದೇ ಬಾಲಿವುಡ್ ಮತ್ತು ‘ಓಟಿಟಿ’. !
೨ ಈ. ‘ಲಿವ್ ಇನ್ ರಿಲೇಶನ್‌ಶಿಪ್ ಅಂದರೆ ವಿವಾಹವಾಗದೆ ಯುವಕ-ಯುವತಿ ಜೊತೆಯಾಗಿರುವುದನ್ನು ತೋರಿಸಿಕೊಟ್ಟಿದ್ದು ಇದೇ ಬಾಲಿವುಡ್ !
೨ ಉ. ‘ಮೀ ಟೂ’ (ಲೈಂಗಿಕ ಶೋಷಣೆಯ ವಿರುದ್ಧ ಯುವತಿ ಯರು ಆರಂಭಿಸಿದ ಚಳುವಳಿ) ಇದು ಆರಂಭವಾಗಿದ್ದು ಕೂಡ ‘ಬಾಲಿವುಡ್ನಿಂದಲೇ !
೨ ಉ. ‘ಲವ್ ಜಿಹಾದ್ಗೆ ಪ್ರೋತ್ಸಾಹ, ಪಾಶ್ಚಿಮಾತ್ಯ ಸಂಸ್ಕೃತಿಯ ವೈಭವೀಕರಣವೂ ಬಾಲಿವುಡ್‌ನ ಕೊಡುಗೆಯಾಗಿದೆ.
೨ ಎ. ಓಟಿಟಿ ಪ್ಲಾಟ್‌ಫಾರ್ಮ್’ ಆರಂಭವಾದಂದಿನಿಂದ ೭೦೦
‘ಆಪ್ಸ್’ ಆರಂಭವಾಗಿವೆ. ದೆಹಲಿ, ಮೀರತ್‌ನಲ್ಲಿ ಮುಖ್ಯ ಕೇಂದ್ರಗಳನ್ನು ನಿರ್ಮಿಸಿ ಹುಡುಗಿಯರನ್ನು ‘ಹಾಯರ್ (ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಕೊಡುವುದು) ಮಾಡಿ ಪ್ರತಿದಿನ ೩೦ ಅಶ್ಲೀಲ ಫಿಲ್ಮ್‌ಗಳನ್ನು ಪ್ರಸಾರ ಮಾಡಲಾಗುತ್ತದೆ. ಇಷ್ಟು ಗಂಭೀರ ಪರಿಸ್ಥಿತಿಯಿದೆ.
ಇವೆಲ್ಲವನ್ನೂ ಕೆಲವು ವಿದೇಶಿಗಳು, ಸಾಮ್ಯವಾದಿಗಳು ಮತ್ತು ದೇಶವಿರೋಧಿಗಳು ಮಾಡುತ್ತಿದ್ದಾರೆ; ಆದರೆ ಇದೆಲ್ಲವೂ ನಮ್ಮ ಮಕ್ಕಳ ಸಂಚಾರಿವಾಣಿಯಲ್ಲಿ ಬರುತ್ತಿದೆ.
೩. ಓಟಿಟಿ ಮತ್ತು ಬಾಲಿವುಡ್‌ನಿಂದಾಗುವ ದುಷ್ಪರಿಣಾಮ
ಅಶ್ಲೀಲ ವೆಬ್ ಸಿರೀಸ್‌ಗಳಿಂದಾಗಿ ಹುಡುಗಿಯರ-ಮಹಿಳೆಯರ ಮೇಲಾಗುವ ಅತ್ಯಾಚಾರಗಳು ಹೆಚ್ಚಾಗಿವೆ. ಗೃಹಹಿಂಸಾಚಾರ ಹೆಚ್ಚಾಗಿದೆ ಯುವಪೀಳಿಗೆ ಅಮಲು ಪದಾರ್ಥ, ಹಿಂಸಾಚಾರ, ಹತ್ಯೆ ಇತ್ಯಾದಿ ಗಳತ್ತ ಆಕರ್ಷಿಸಲ್ಪಡುತ್ತಿದೆ. ಕೆಲವು ತಿಂಗಳ ಹಿಂದೆ ಒಂದು ಶಾಲೆಯ ಆಚಾರ್ಯರು ೬ ಹುಡುಗಿಯರನ್ನು ಅತ್ಯಾಚಾರ ಮಾಡಿದರು. ಒಂದು ೫ ವರ್ಷದ ಹುಡುಗಿಯನ್ನು ೧೦ ಮತ್ತು ೧೨ ವರ್ಷ ವಯಸ್ಸಿನ ಹುಡುಗರು ಬಲಾತ್ಕಾರ ಮಾಡಿದರು. ಅವರ ವಿಚಾರಣೆ ಮಾಡಿದಾಗ ಅವರು, ‘ನಾವು ‘ವಿಡಿಯೋ’ ನೋಡಿ ಉತ್ತೇಜಿತರಾದೆವು’ ಎಂದು ಹೇಳಿದರು. ಒಬ್ಬ ಸಹೋದರನು ತನ್ನ ತಂಗಿಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಹತ್ಯೆ ಮಾಡಿದನು, ಆಗ ಅವನು ಕೂಡ ಅದೇ ರೀತಿಯ ಹೇಳಿಕೆಯನ್ನು ನೀಡಿದನು. ಇಂದು ಉದ್ಯಾನ, ಕೆಫೆ, ಮೆಟ್ರೋ ಇಂತಹ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ವಿಚಿತ್ರವಾಗಿ ವರ್ತಿಸುವ ಯುವಪೀಳಿಗೆ ಕಂಡು ಬರುತ್ತದೆ.
೪. ಅಶ್ಲೀಲತೆಯ ವಿರುದ್ಧ ಸಮಿತಿಯ ಕಾರ್ಯಕ್ಕೆ ಸಿಕ್ಕಿದ ಪ್ರೋತ್ಸಾಹ ಹಾಗೂ ಯಶಸ್ಸು
ಹಿಂದೂ ಜನಜಾಗೃತಿ ಸಮಿತಿ ಕಳೆದ ಅನೇಕ ವರ್ಷಗಳಿಂದ ಅಶ್ಲೀಲತೆಯ ವಿರುದ್ಧ ಕಾರ್ಯ ಮಾಡುತ್ತಿದೆ- ಅದು ಗೋವಾ ದಲ್ಲಿನ ಅಶ್ಲೀಲ ಹೋರ್ಡಿಂಗ್ ತೆಗೆಸುವುದಾಗಿರಲಿ ಅಥವಾ ಸನೀ ಲಿಯೋನಳ ವಿರುದ್ಧ ಭಾರತದಲ್ಲಿ ಮೊದಲ ಎಫ್.ಐ.ಆರ್. ದಾಖಲಿಸುವ ಪ್ರಕರಣವಾಗಿರಲಿ ! ಸಮಿತಿ ಸಂಸ್ಕೃತಿಹರಣದ ವಿರುದ್ಧ ನಿಯಮಿತವಾಗಿ ಕಾರ್ಯನಿರತವಾಗಿದೆ.
ಓಟಿಟಿ ಮತ್ತು ಬಾಲಿವುಡ್‌ನಲ್ಲಿನ ಅಶ್ಲೀಲತೆಯ ವಿರುದ್ಧ ‘ಸೇವ್ ಕಲ್ಚರ್ ಸೇವ್ ಭಾರತ’ (ಸಂಸ್ಕೃತಿ ಉಳಿಸಿರಿ ಭಾರತ ಉಳಿಸಿರಿ !)ದ ಸಂಸ್ಥಾಪಕರಾದ ಶ್ರೀ. ಉದಯ ಮಾಹೂರಕರ್ ಇವರು ಆಂದೋಲನವನ್ನು ಆರಂಭಿಸಿದ್ದಾರೆ. ‘ಈ ಆಂದೋಲನ ದೇಶದ ಮೂಲೆ ಮೂಲೆಗಳಿಗೆ ತಲುಪಬೇಕು ಹಾಗೂ ಮುಂಬಯಿ ಇದು ಚಲನಚಿತ್ರ ಸೃಷ್ಟಿಯ ಮುಖ್ಯ ಕೇಂದ್ರವಾಗಿದೆ. ಆದ್ದರಿಂದ ಇಂತಹ ಮಹತ್ವದ ವಿಷಯದಲ್ಲಿ ಮುಂಬಯಿಯಲ್ಲಿ ಆಂದೋಲನವಾಗಬೇಕು’, ಎಂಬ ಉದ್ದೇಶವನ್ನಿಟ್ಟು ‘ಸೇವ್ ಕಲ್ಚರ್ ಸೇವ್ ಭಾರತ’, ‘ಜೇಮ್ಸ್ ಆಫ್ ಬಾಲಿವುಡ್, ‘ಹಿಂದೂ ಜನಜಾಗೃತಿ ಸಮತಿ’ ಮತ್ತು ‘ಸೇವಾ ನ್ಯಾಯ ಉತ್ಥಾನ’ ಇವರು ಒಟ್ಟಾಗಿ ೨೫ ಫೆಬ್ರವರಿ ೨೦೨೪ ರಂದು ಮುಂಬಯಿಯಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು. ಮುಂಬಯಿಯಲ್ಲಿನ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ಸಿಕ್ಕಿತು. ಈ ಕಾರ್ಯಕ್ರಮಕ್ಕೆ ಮುಂಬಯಿಯ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಚಲನಚಿತ್ರಕ್ಷೇತ್ರಕ್ಕೆ ಸಂಬಂಧಿಸಿದ ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿಯ (ಸೆನ್ಸರ್ ಬೋರ್ಡ್’ನ) ಅಧಿಕಾರಿಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಪ್ರತಿನಿಧಿಗಳು (ಸೋಶಲ್ ಮಿಡಿಯಾ ಇನ್ಫ್ಯೂಎನ್ಸರ್ಸ್) ಹಾಗೂ ಪಾಲಕ-ಯುವ ವರ್ಗವೂ ದೊಡ್ಡ ಪ್ರಮಾಣದಲ್ಲಿ ಬಂದಿದ್ದರು. ಈ ಆಂದೋಲನವನ್ನು ಎಲ್ಲರೂ ತುಂಬಾ ಪ್ರಶಂಸಿಸಿದರು ಹಾಗೂ ಎಲ್ಲ ರೀತಿಯ ಸಹಾಯ ಮಾಡುವ ಹಾಗೂ ಆಂದೋಲನದಲ್ಲಿ ಭಾಗವಹಿಸುವ ಆಶ್ವಾಸನೆ ನೀಡಿದರು.
ಈ ಕಾರ್ಯಕ್ರಮದ ೨೦ ದಿನಗಳ ನಂತರ ಒಳ್ಳೆಯ ವಾರ್ತೆ ಸಿಕ್ಕಿತು, ಅದೇನೆಂದರೆ, ೧೮ ಅಶ್ಲೀಲ ‘ಓಟಿಟಿ ಫ್ಲಾಟ್‌ಫಾರ್ಮ್‌ಸ್ಗಳ ಮೇಲೆ ಇಡೀ ಭಾರತದಲ್ಲಿ ನಿಷೇಧ ಹೇರಲ್ಪಟ್ಟಿತು ಹಾಗೂ ಈ ‘ಓಟಿಟಿ ಫ್ಲಾಟ್ ಫಾರ್ಮ್‌ಸ್ ಗಳಿಗೆ ಸಹಾಯ ಮಾಡುವ ೧೯ ಜಾಲತಾಣಗಳು, ೧೦ ಆಪ್ಸ್, ೫೭ ಸಾಮಾಜಿಕ ಮಾಧ್ಯಮ ಗಳ (ಸೋಶಲ್ ಮಿಡಿಯಾ ಹ್ಯಾಂಡಲ್ಸ್) ಮೇಲೆ ಕೂಡ ಸರಕಾರ ನಿರ್ಬಂಧ ಹೇರಿತು. ಈ ಯಶಸ್ಸು ಸಮಿತಿಯ ಕಾರ್ಯದಿಂದಾಗಿ ಸಿಕ್ಕಿದೆ. ಇದರ ಹೊರತು ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್ ಇವರ ‘ಅಲ್ಟ್ ಬಾಲಾಜಿ’ಯ ಒಂದು ವೆಬ್ ಸಿರೀಸ್‌ನಲ್ಲಿ ‘ಒಬ್ಬ ಹಿಂದೂ ಪುರುಷನನ್ನು ಪೂಜೆಯ ಹರಿವಾಣ ಹಿಡಿದು ಸ್ವಾಗತಿಸು ತ್ತಾರೆ, ಆ ಪುರುಷ ಆ ಮನೆಯ ಅಜ್ಜಿ, ತಾಯಿ, ಅತ್ತಿಗೆ ಮತ್ತು ಸಹೋದರಿ ಇವರೊಂದಿಗೆ ಸಂಬಂಧವನ್ನಿಡುತ್ತಾನೆ’, ಎನ್ನುವ ಹಾಗೆ ತೋರಿಸಲಾಗಿತ್ತು. ಈ ದೃಶ್ಯವನ್ನೂ ಆ ವೆಬ್ ಸಿರೀಸ್‌ನಿಂದ ತೆಗೆದು ಹಾಕಲಾಯಿತು.
೫. ಮುಂದಿನ ದಿಶೆ
ಇಂದು ಸಾಮ್ಯವಾದಿಗಳು ಶಾಲೆ-ಮಹಾವಿದ್ಯಾಲಯಗಳಿಗೆ ಹೋಗಿ ವಿದ್ಯಾರ್ಥಿಗಳ ‘ಬ್ರೈನ್ ವಾಶ್ (ಬುದ್ಧಿಭ್ರಷ್ಟ) ಮಾಡು ವುದನ್ನು ನಾವು ನೋಡುತ್ತಿದ್ದೇವೆ. ಮುಂಬಯಿಯಲ್ಲಿ ನಡೆದಿರುವ ಕಾರ್ಯಕ್ರಮದ ನಿಮಿತ್ತದಲ್ಲಿ ನಾವು ಮುಂಬಯಿ ಯಲ್ಲಿನ ಪ್ರಖ್ಯಾತ ಮಹಾವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರು ಮತ್ತು
ಆಚಾರ್ಯರನ್ನು ಭೇಟಿಯಾದಾಗ ಎಲ್ಲರಿಂದ ತುಂಬಾ ಸಕಾರಾತ್ಮಕ ಪ್ರೋತ್ಸಾಹ ಸಿಕ್ಕಿತು. ಅನೇಕ ಜನರು ‘ನಾವು ನಿಮಗೆ ಈ ವಿಷಯವನ್ನು ನಮ್ಮ ಮಹಾವಿದ್ಯಾಲಯದಲ್ಲಿ ಮಂಡಿಸಲು ವೇದಿಕೆಯನ್ನು ಉಪಲಬ್ಧ ಮಾಡಿ ಕೊಡುವೆವು. ಈ ವಿಷಯವನ್ನು ನಾವು ವಿದ್ಯಾಪೀಠದ ವರೆಗೆ ತಲುಪಿಸೋಣ ಹಾಗೂ ಈ ವಿಷಯದಲ್ಲಿ ಒಂದು ಪಠ್ಯಕ್ರಮ ಅಥವಾ ‘ಪರಿಸಂವಾದ’ ಇಡಲು ಪ್ರಯತ್ನಿಸೋಣ’, ಎಂದು ಕೂಡ ಹೇಳಿದರು.
ಎಲ್ಲ ಹಿಂದುತ್ವನಿಷ್ಠರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ, ಇದರ ಮೂಲಕ ನಾವು ಮಹಾವಿದ್ಯಾಲಯಗಳಿಗೆ ಹೋಗಿ ಯುವಕರ ಸಂಘಟನೆ ಮಾಡಬಹುದು, ಅವರನ್ನು ಕ್ರಮೇಣ ರಾಷ್ಟ್ರ-ಧರ್ಮದ ಕಾರ್ಯದಲ್ಲಿ ಜೋಡಿಸಿಕೊಳ್ಳಬಹುದು. ಈ ವಿಷಯವನ್ನು ಮುಂದಕ್ಕೊಯ್ಯಲು ನಾವು ಒಂದು ನಿಯೋಗವನ್ನು ಸಿದ್ಧಪಡಿಸಿದ್ದೇವೆ. ಅದು ಈ ವಿಷಯಕ್ಕನುಸಾರ ಪಠ್ಯಕ್ರಮವನ್ನು ಸಿದ್ಧಪಡಿಸುವುದು ಹಾಗೂ ಆ ವಿಷಯವನ್ನು ತೆಗೆದುಕೊಂಡು ಮಹಾವಿದ್ಯಾಲಯಗಳಿಗೆ ಹೋಗಿ ಜಾಗೃತಿ ಹಾಗೂ ಯುವಕರ ಸಂಘಟನೆ ಮಾಡುವುದು. ಈ ಆಂದೋಲನದಲ್ಲಿ ಭಾಗವಹಿಸಲು ಇಚ್ಛಿಸುವವರು ಅಥವಾ ಈ ಆಂದೋಲನವನ್ನು ತಮ್ಮ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲು ಇಚ್ಛಿಸುವವರು ನಮ್ಮನ್ನು ಸಂಪರ್ಕಿಸಬೇಕು ಅಥವಾ ತಮ್ಮ ಕ್ಷೇತ್ರದ ಸ್ಥಳೀಯ ಸಮಿತಿಸೇವಕರನ್ನು ಸಂಪರ್ಕಿಸಬಹುದು.
೬. ಮುಕ್ತಾಯ
ಕೊನೆಗೆ ಎಲ್ಲರಿಗೂ ಹೇಳುವುದೇನೆಂದರೆ, ಇಂದು ಸಂಚಾರಿವಾಣಿ, ಟಿವಿ, ಇವು ‘ಸ್ಮಾರ್ಟ್’ ಆಗಿವೆ; ಆದರೆ ಅವುಗಳನ್ನು ನೋಡುವವರು ‘ಸ್ಮಾರ್ಟ್’ (ಹುಶಾರ್) ಆಗಿದ್ದಾರೆಯೇ ? ನಮ್ಮ ಇಂದಿನ ಯುವ ಪೀಳಿಗೆ ‘ಸ್ಮಾರ್ಟ್’ ಆಗಿದೆಯೇ ? ನಾವು ಕೂಡ ಈಗ ‘ಸ್ಮಾರ್ಟ್’ ಆಗಬೇಕು. ಏನು ನೋಡಬೇಕು ಏನು ನೋಡಬಾರದು, ಎಂಬುದನ್ನು ನಿರ್ಧರಿಸಬೇಕು, ಈ ವಿಷಯದಲ್ಲಿ ಪ್ರಬೋಧನೆ ಮಾಡಬೇಕಾಗಿದೆ. ಇಂದು ಯುವಕರ ಮುಂದೆ ಯಾರ ಆದರ್ಶವನ್ನಿಡಲಾಗುತ್ತದೆ ?, ನಟ ಶಾಹರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ! ಇವರು ನಮ್ಮ ಯುವಪೀಳಿಗೆಯ ಆದರ್ಶರಾಗಿದ್ದಾರೆ ! ಆದರೆ ನಮ್ಮ ಆದರ್ಶ ಯಾರಾಗಿರಬೇಕು, ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ, ಸ್ವಾತಂತ್ರ್ಯವೀರ ಸಾವರ್ಕರ್, ರಾಣಿ ಚೆನ್ನಮ್ಮ, ಮಾತೃಭೂಮಿಗಾಗಿ ಬಲಿದಾನ ನೀಡಿರುವ ಕ್ರಾಂತಿಕಾರಿಗಳು, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೈನ್ಯವನ್ನು ಧೂಳೀಪಟ ಮಾಡಿದ ಪರಮವೀರ ಚಕ್ರ ಈ ಸನ್ಮಾನ ಪಡೆದ ಕ್ಯಾಪ್ಟನ್ ವಿಕ್ರಮ ಬತ್ರಾ, ಇವರ ಆದರ್ಶವನ್ನು ಯುವಕರ ಮುಂದಿಡಬೇಕು. ನಮ್ಮಲ್ಲಿನ ಮಹಾವಿದ್ಯಾಲಯಗಳು ‘ಜವಾಹರಲಾಲ ನೆಹರು ವಿದ್ಯಾಪೀಠ’, ‘ಅಲೀಗಡ ಮುಸ್ಲಿಮ್ ವಿದ್ಯಾಪೀಠ’ ಆಗಬಾರದೆಂದು ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸುವ ಅವಶ್ಯಕತೆಯಿದೆ.
– ಶ್ರೀ. ಹರ್ಷದ ಖಾನವಿಲ್ಕರ್, ಯುವಾ ಸಂಘಟಕ, ಹಿಂದೂ ಜನಜಾಗೃತಿ ಸಮಿತಿ.