೧. ವಿದೇಶದಲ್ಲಿನ ಖಾಲಿಸ್ತಾನಿಗಳ ಉಪಟಳವನ್ನು ಹತ್ತಿಕ್ಕಿ !
ಲಂಡನ್ ಮತ್ತು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಖಲಿಸ್ತಾನಿಗಳು ಭಾರತೀಯ ರಾಯಭಾರಿ ಕಚೇರಿಯಲ್ಲಿ ದಾಂಧಲೆ ನಡೆಸಿ ಹಾನಿಗೈದರು. ಲಂಡನ್‌ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ತೆಗೆದು ಖಲಿಸ್ತಾನದ ಧ್ವಜವನ್ನು ಹಾಕಲು ಪ್ರಯತ್ನಿಸಿದರು.
೨. ವಾಸನಾಂಧ ಪಾದ್ರಿಗಳಿಗೆ ಕಠಿಣ ಶಿಕ್ಷೆಯಾಗಬೇಕು !
ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಸಿರೋ ಮಲಂ ಕಾರಾ ಕ್ಯಾಥೋಲಿಕ್ ಚರ್ಚನ ಪಾದ್ರಿ ಬೆನೆಡಿಕ್ಟ್ ಆಂಟೊ ಇವನನ್ನು ನಾಗರ್‌ಕೋಯಿಲ್ ನಲ್ಲಿರುವ ಅವನ ತೋಟದ ಮನೆಯಿಂದ ಬಂಧಿಸಿದ್ದಾರೆ.
೩. ವಿಶ್ವ ಸಂಸ್ಥೆಯ ಇಂತಹ ಪಟ್ಟಿಯನ್ನು ಯಾರು ನಂಬುತ್ತಾರೆ ?
ವಿಶ್ವ ಸಂಸ್ಥೆಯ ವಿಶ್ವದಲ್ಲಿನ ಅತ್ಯಂತ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನು ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ, ಶ್ರೀಲಂಕಾ ಸಹಿತ ಬಾಂಗ್ಲಾದೇಶಕ್ಕಿಂತಲೂ ಕೆಳಗಿದೆ ಎಂದು ನಮೂದಿಸಲಾಗಿದೆ.
೪. ಸ್ವಾ. ಸಾವರಕರರಿಗಾದ ಅವಹೇಳನಕ್ಕೂ ಶಿಕ್ಷೆಯಾಗಬೇಕು !
೨೦೧೯ ರಲ್ಲಿ ಸಭೆಯೊಂದರಲ್ಲಿ ಎಲ್ಲಾ ಕಳ್ಳರಿಗೆ ‘ಮೋದಿ’ ಎಂದು ಏಕೆ ಹೆಸರಿಸಲಾಗಿದೆ ? ಎಂಬ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯವರಿಗೆ ಸೂರತ್ ಜಿಲ್ಲಾ ನ್ಯಾಯಾಲಯವು ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
೫. ಸಂಬಂಧಿತ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆಯೇ ಬೇಕು !
ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಮಹಮ್ಮದ ಅರ್ಮಾನ್ ಮತ್ತು ಅಬ್ದುಲ್ ಅಮೀನ್ ಎಂಬ ಇಬ್ಬರು ರೋಹಿಂಗ್ಯಾಗಳನ್ನು ಬಂಧಿಸಿದೆ. ಅವರಿಂದ ೩ ಭಾರತೀಯ ಪಾಸ್‌ಪೋರ್ಟ್‌ಗಳು ಮತ್ತು ಇತರ ಗುರುತಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಗೆ ಇಜಹಾರುಲ್ ಎಂಬ ಸ್ಥಳೀಯ ನಾಗರಿಕನು ಸಹಾಯ ಮಾಡಿದ್ದನು.
೬. ಮದರಸಾಗಳನ್ನು ಮುಚ್ಚುವ ನಿರ್ಣಯ ಅಂಗೀಕರಿಸಿ !
ಮುಸಲ್ಮಾನ ಸಮುದಾಯದ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಮದರಸಾಗಳ ಆಧುನೀಕರಣಕ್ಕೆ ವಿಶೇಷ ಹಣದ ಬೇಡಿಕೆಯ ಪ್ರಸ್ತಾಪವನ್ನು ರಾಜ್ಯಸಭೆ ತಿರಸ್ಕರಿಸಿತು. ಅ.ಭಾ. ಮುಸ್ಲಿಂ ಲೀಗ್ ಸದಸ್ಯ ಅಬ್ದುಲ್ ವಹಾಬ್ ಈ ಪ್ರಸ್ತಾವನೆಯನ್ನು ಮಂಡಿಸಿದರು.
೭. ಬಿಹಾರದ ಹಿಂದೂದ್ವೇಷಿ ಜನತಾ ದಳ (ಸಂಯುಕ್ತ)ದ ಸರಕಾರ !
ಶ್ರೀರಾಮ ನವಮಿ ಮತ್ತು ಛಟ್‌ಪೂಜಾ ಉತ್ಸವಗಳಲ್ಲಿ ಧ್ವನಿವರ್ಧಕಗಳ ಧ್ವನಿಯ ಮಟ್ಟ ೭೫ ಡೆಸಿಬಲ್‌ನ್ನು ಮೀರಿದರೆ ಕಾರ್ಯಕ್ರಮವನ್ನು ನಿರ್ಬಂಧಿಸಲಾಗುವುದು ಎಂದು ದರ್ಭಾಂಗ (ಬಿಹಾರ) ಜಿಲ್ಲಾಡಳಿತ ಆದೇಶ ಹೊರಡಿಸಿದೆ.