೧. ಭಾರತ ಖಲಿಸ್ತಾನಿಯರನ್ನು ಯಾವಾಗ ಕೊನೆಗಾಣಿಸಲಿದೆ ?
ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ಎರಡು ಹಿಂದೂ ದೇವಾಲಯಗಳಿಗೆ ಬಂದ ೪ ಅಜ್ಞಾತ ಮುಸುಕುಧಾರಿಗಳು ಶಿವಲಿಂಗ ಮತ್ತು ಶಿವನ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಬೆಲೆಬಾಳುವ ವಸ್ತುಗಳನ್ನೂ ಕಳವು ಮಾಡಿದ್ದಾರೆ. ಇದರ ಹಿಂದೆ ಖಲಿಸ್ತಾನಿಗಳ ಕೈವಾಡವಿದೆ ಎನ್ನಲಾಗುತ್ತಿದೆ.
೨. ಮೀರಾ ರೋಡ್ ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿಯೋ ?
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮೀರಾ ರೋಡ್ನಲ್ಲಿ ತಮ್ಮ ಮನೆಯ ಬಳಿ ಪಟಾಕಿ ಸಿಡಿಸುತ್ತಿದ್ದ ಹಿಂದೂ ಯುವಕರ ಮೇಲೆ ೧೦ ರಿಂದ ೧೨ ಮುಸಲ್ಮಾನರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ೫ ಹಿಂದೂ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
೩. ಬಾಂಗ್ಲಾದೇಶದ ಹಿಂದೂಗಳ ಸ್ಥಿತಿಯಂತಾದ ಭಾರತೀಯ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !
ನವಿಮುಂಬೈಯ ತಳೋಜಾ ಸೆಕ್ಟರ್ ೯ ನಲ್ಲಿರುವ ಪಂಚಾನಂದ್ ಕಟ್ಟಡದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಮಹಿಳೆಯರು ವಿದ್ಯುತ್ ದೀಪಾಲಂಕಾರ ಮಾಡುತ್ತಿರುವಾಗ ಮುಸಲ್ಮಾನ ಪುರುಷರು ಜಗಳವಾಡಿ ದೀಪ ಹಚ್ಚುವುದನ್ನು ತೀವ್ರವಾಗಿ ವಿರೋಧಿಸಿದರು. ಈ ವೇಳೆ ಮುಸಲ್ಮಾನ ಪುರುಷರು ಮಹಿಳೆಯರ ವಿರುದ್ಧ ಅಶ್ಲೀಲ ಮಾತುಗಳನ್ನಾಡಿದ್ದಾರೆ.
೪. ವಕ್ಫ್ ಬೋರ್ಡ್ ನ್ನು ರದ್ದುಗೊಳಿಸಿ !
ಸಿಂದಗಿ ನಗರದಲ್ಲಿರುವ ವಿರಕ್ತ ಮಠದ ಆಸ್ತಿಯು ಈಗ ವಕ್ಫ್ ಆಸ್ತಿಯಾಗಿ ಮಾರ್ಪಟ್ಟಿದೆ. ‘ಪಹಣಿ ಸಂಖ್ಯೆ ೧೦೨೦’ರಲ್ಲಿರುವ ಆಸ್ತಿಯನ್ನು ‘ವಕ್ಫ್ ಬೋರ್ಡ್’ ಕಬರಸ್ತಾನ ಎಂದು ನೋಂದಾಯಿಸಿದೆ. ಮೂಲತಃ ಈ ಮಠವನ್ನು ೧೩ ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ.
೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಅಮೇರಿಕದ ‘ಪ್ಯೂ ರಿಸರ್ಚ್ ಸೆಂಟರ್’ ನಡೆಸಿದ ಸಮೀಕ್ಷೆಯ ಪ್ರಕಾರ ೨೦೫೦ ರ ವೇಳೆಗೆ ಭಾರತದಲ್ಲಿ ಮುಸಲ್ಮಾನರ ಸಂಖ್ಯೆ ೩೧ ಕೋಟಿ ಮೀರಲಿದೆ. ಹಾಗಾಗಿ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮುಸಲ್ಮಾನರಿರುವ ದೇಶವಾಗಲಿದೆ. ಅದೇ ಹಿಂದೂಗಳ ಜನಸಂಖ್ಯೆಯು ಶೇಕಡಾ ೧ ರಷ್ಟು ಕಡಿಮೆಯಾಗಲಿದೆ.
೬. ಕ್ರೈಸ್ತ ಮಿಶನರಿಗಳ ಕುತಂತ್ರಗಳನ್ನು ತಿಳಿಯಿರಿ !
ಛತ್ತೀಸಗಡದ ಪಾಥರಿ ಗ್ರಾಮದಲ್ಲಿ ಕ್ರೈಸ್ತ ಧರ್ಮದ ಪ್ರಚಾರದ ವಾಹನಗಳ ಮೇಲೆ ಕೇಸರಿ ಧ್ವಜಗಳನ್ನು ಹಾಕುವ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಹಿಂದೂ ಯುವಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
೭. ಸನಾತನ ಧರ್ಮದ ರಕ್ಷಣೆಗಾಗಿ ಇದು ಶ್ಲಾಘನೀಯ ಕ್ರಮ !
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷದಲ್ಲಿ ‘ನರಸಿಂಹ ವಾರಾಹಿ ಬ್ರಿಗೇಡ್’ ರಚಿಸುವುದಾಗಿ ಘೋಷಿಸಿದ್ದಾರೆ. ಸನಾತನ ಧರ್ಮದ ರಕ್ಷಣೆಯೇ ಈ ದಳದ ಮುಖ್ಯ ಉದ್ದೇಶವಾಗಲಿದೆ ಎಂದು ಅವರು ಸ್ಪಷ್ಟ ಪಡಿಸಿದರು.