ಭಾರತದ ಹಿಂದೂಗಳ ಸ್ಥಿತಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳಂತೆಯೇ ಇದೆ ! 

೧. ಪಾಕಿಸ್ತಾನ ಕೊಟ್ಟ ಮೇಲೂ ಭಾರತದಲ್ಲಿ ಹಿಂದೂಗಳು ಅಸುರಕ್ಷಿತ !

ಉನ್ನಾವ (ಉತ್ತರಪ್ರದೇಶ) ಎಂಬಲ್ಲಿನ ಮುಸಲ್ಮಾನ ಬಹುಸಂಖ್ಯಾತ ರಾಣಿಪುರ ಗ್ರಾಮದಲ್ಲಿರುವ ಶಿವನ ದೇವಸ್ಥಾನದ ಛಾವಣಿಯ ಕಟ್ಟಡ ಕಾಮಗಾರಿಯನ್ನು ತಡೆಯಲು ಇಸ್ಲಾಮಿಕ್‌ ಮೂಲಭೂತವಾದಿಗಳು ಪ್ರಯತ್ನಿಸಿದರು. ಇದಕ್ಕೆ ಪಕ್ಕದಲ್ಲಿರುವ ಮಸೀದಿಯಲ್ಲಿ ನಮಾಜುಪಠಣದ ಸಮಯದಲ್ಲಿ ಅಡ್ಡಿಯಾಗುವುದೆಂದು ಕಾರಣ ನೀಡಿದರು.

೨. ರೌಡಿಗಳಂತೆ ವರ್ತಿಸುವ ತೃಣಮೂಲ ಪಕ್ಷದ ಸಂಸದರು 

ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್‌ ಸಂಸದರ ನಡುವೆ ವಾಗ್ವಾದ ನಡೆಯಿತು. ತೃಣಮೂಲ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ಮೇಜಿನ ಮೇಲಿದ್ದ ಗಾಜಿನ ಬಾಟಲಿ ಒಡೆದು ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್‌ ಮೇಲೆ ಎಸೆದರು.

೩. ಇದು ದೇಶದ ಬಹುಸಂಖ್ಯಾತ ಹಿಂದೂಗಳಿಗೆ ಲಜ್ಜಾಸ್ಪದ ಸಂಗತಿ !

ನವ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್‌ ೨೨ ರಂದು, ಹಿಂದೂ ವಿದ್ಯಾರ್ಥಿಗಳು ದೀಪಾವಳಿಯನ್ನು ಆಚರಿಸುತ್ತಿದ್ದಾಗ, ಮುಸಲ್ಮಾನ ವಿದ್ಯಾರ್ಥಿಗಳು ಅದನ್ನು ವಿರೋಧಿಸಿ ಅಲ್ಲಿ ಹಚ್ಚಿದ್ದ ದೀಪಗಳನ್ನು ಕಾಲಿನಿಂದ ಒದ್ದು ಬಿಸಾಕಿದರು ಮತ್ತು ರಂಗೋಲಿಯನ್ನು ಒರೆಸಿದರು.

೪. ಇಂತಹ ರಾಷ್ಟ್ರವಿರೋಧಿ ಪಕ್ಷವನ್ನು ನಿಷೇಧಿಸಬೇಕು !

ತಮಿಳುನಾಡಿನ ಆಡಳಿತಾರೂಢ ‘ದ್ರವಿಡ್‌ ಮುನ್ನೇತ್ರ ಕಳಘಂ’ (ದ್ರಮುಕ) ಪಕ್ಷದ ಅನಿವಾಸಿ ಭಾರತೀಯ ಶಾಖೆಯು ‘ಎಕ್ಸ್‌’ನಲ್ಲಿ ಮಾಡಿದ ‘ಪೋಸ್ಟ್‌’ನಲ್ಲಿ, ಭಾರತದ ನಕಾಶೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಪಾಕಿಸ್ತಾನದಲ್ಲಿ ತೋರಿಸಿದೆ. ಇದರಿಂದ ದ್ರಮುಕ ಪಕ್ಷವನ್ನು ಟೀಕಿಸಲಾಗುತ್ತಿದೆ.

೫. ಅಕ್ರಮ ಕಟ್ಟಡಗಳನ್ನು ತೆಗೆದುಹಾಕುವಂತೆ ಏಕೆ ಒತ್ತಾಯಿಸಬೇಕಾಗುತ್ತದೆ ?

ಉತ್ತರಕಾಶಿಯಲ್ಲಿ (ಉತ್ತರಾಖಂಡ) ಅಕ್ರಮ ಮಸೀದಿಗಳನ್ನು ತೆಗೆದುಹಾಕುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಬೀದಿಗಿಳಿದಿವೆ. ಈ ವೇಳೆ ಕಲ್ಲು ತೂರಾಟ ನಡೆದ ಬಳಿಕ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದರು. ಇದರಲ್ಲಿ ೨೭ ಜನರು ಗಾಯಗೊಂಡಿದ್ದಾರೆ.

೬. ಭಾರತದ ಹಿಂದೂಗಳ ಸ್ಥಿತಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳಂತೆಯೇ ಇದೆ ! 

ಭಿಲವಾಡಾದಲ್ಲಿ (ರಾಜಸ್ಥಾನ) ಪಟಾಕಿಗಳನ್ನು ಹಾರಿಸಿದ್ದರಿಂದ ಮತಾಂಧ ಮಸಲ್ಮಾನರು ಭಾಜಪ ನಾಯಕ ದೇವೇಂದ್ರ ಸಿಂಗ್‌ ಹಾಡಾ ಅವರನ್ನು ಚಾಕುವಿನಿಂದ ಇರಿದು, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದರು.

೭. ಬಾಂಗ್ಲಾದೇಶದ ಹಿಂದೂಗಳಿಂದ ಕಲಿಯಿರಿ !

 ಅಲ್ಪಸಂಖ್ಯಾತರ ರಕ್ಷಣೆ ಮತ್ತು ಹಕ್ಕುಗಳಿಗಾಗಿ ಸಾವಿರಾರು ಹಿಂದೂಗಳು ಚಿತ್ತಗಾಂವನಲ್ಲಿ (ಬಾಂಗ್ಲಾದೇಶ) ಬೃಹತ್‌ ಮೆರವಣಿಗೆ ನಡೆಸಿ ೮ ಬೇಡಿಕೆಗಳನ್ನು ಮುಂದಿಟ್ಟರು ಮತ್ತು ಬಾಂಗ್ಲಾ ಸರಕಾರವು ಬೇಡಿಕೆಗಳನ್ನು ಈಡೇರಿಸುವವರೆಗೂ ಆಂದೋಲನವನ್ನು ಮುಂದುವರಿಸಲಾಗುವುದಾಗಿ ಘೋಷಿಸಿದರು.