ಶ್ರೀರಾಮರು ಇಡೀ ಹಿಂದೂ ಸಮಾಜದ ಆರಾಧ್ಯ ದೇವತೆಯಾಗಿದ್ದಾರೆ; ಆದ್ದರಿಂದ ಸ್ವಾತಂತ್ರ್ಯವೀರ ಸಾವರಕರರು ಹೇಳುತ್ತಾರೆ, “ಯಾವ ದಿನ ಹಿಂದೂ ಸಮಾಜವು ಪ್ರಭು ಶ್ರೀರಾಮರನ್ನು ಮರೆಯುತ್ತದೆಯೋ, ಆ ದಿನ ಹಿಂದೂಸ್ಥಾನಕ್ಕೆ ‘ರಾಮ ಎನ್ನಬೇಕಾಗುವುದು. ಇದರ ಅರ್ಥ ಯಾವ ದಿನ ಹಿಂದೂ ಸಮಾಜಕ್ಕೆ ಶ್ರೀರಾಮರ ವಿಸ್ಮರಣೆ ಆಗುವುದೋ ಆ ದಿನ ಹಿಂದೂಸ್ಥಾನ ‘ರಾಷ್ಟ್ರವೆಂದು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರುವುದಿಲ್ಲ. ರಾಮರಾಜ್ಯ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಎಲ್ಲಕ್ಕಿಂತ ‘ಆದರ್ಶ ರಾಜ್ಯವ್ಯವಸ್ಥೆ ಇರುವ ರಾಜ್ಯವೆಂದು ಮನ್ನಣೆಯನ್ನು ಪಡೆದಿದೆ. ಈ ರಾಜ್ಯದಲ್ಲಿ ಮಾನವ ಸಮಾಜ ಸ್ವ-ಆಡಳಿತ ಸಮಾಜವಾಗಿತ್ತು. ಶ್ರೀರಾಮರು ನ್ಯಾಯನಿಷ್ಠ, ಧರ್ಮನಿಷ್ಠ, ಸಂಸ್ಕೃತನಿಷ್ಠ ಹಾಗೂ ನೀತಿವಂತ ಮರ್ಯಾದಾ ಪುರುಷೋತ್ತಮರೆಂದು ಎಲ್ಲರಿಗೂ ವಂದನೀಯರಾಗಿದ್ದಾರೆ. ನೈತಿಕತೆ ಉದಯವಾಯಿತೆಂದರೆ, ವಿಕೃತಿಯು ಅಸ್ತವಾಗಿ ಸಂಸ್ಕೃತಿಯ ದೀಪಾವಳಿ ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ಪ್ರಭು ಶ್ರೀರಾಮರ ಸ್ಮರಣೆಯಿದ್ದರೆ, ಹಿಂದೂ ಸಮಾಜ ರಾಜಕೀಯ ಪಾರತಂತ್ರ್ಯದಲ್ಲಿ ಹೋದರೂ ಅದು ‘ಹಿಂದೂ ರಾಷ್ಟ್ರವೆಂದು ಜೀವಂತವಿರುತ್ತದೆ. ಶ್ರೀರಾಮರ ಪರಾಕ್ರಮದ ವಂಶಾಧಿಕಾರವನ್ನು ಕಾಪಾಡಿದರೆ ದೃಢವಾದ ಹಾಗೂ ಪ್ರತಿಕಾರನಿಷ್ಠ ಸಮಾಜವು ಆ ಪಾರತಂತ್ರ್ಯದ ಕತ್ತಲೆ ಯಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಬಹುದು. ಈ ದೃಷ್ಟಿಯಿಂದ ನೋಡಿದರೆ ಹಿಂದೂ ಸಮಾಜದ ರಾಷ್ಟ್ರೀಯ ಜೀವನದಲ್ಲಿ ಪ್ರಭು ಶ್ರೀರಾಮರಿಗೆ ಅಸಾಧಾರಣ ಮಹತ್ವವಿದೆ.
ನಮ್ಮ ದೇಶದ ಸಂಸ್ಕೃತಿಯು ಶಾಂತಿ, ಸಹಿಷ್ಣುತೆ ಹಾಗೂ ಮಾನವತೆಯನ್ನು ಪುರಸ್ಕರಿಸುತ್ತದೆ. ಮಾನವನ ಜೀವನ ಉನ್ನತವಾಗಬೇಕೆಂದು ನಮ್ಮ ದೇಶದ ಋಷಿಮುನಿಗಳು ಹಾಗೂ ಪುಣ್ಯವಂತ ರಾಜರು ತಮ್ಮ ಸಂಪೂರ್ಣ ಜೀವನವನ್ನು ಸವೆಸಿದರು. ಆ ಕಾಲದಲ್ಲಿ ರಾಕ್ಷಸಿ ಪ್ರವೃತ್ತಿಯು ಸಂಪೂರ್ಣ ಮಾನವ ಸಮಾಜವನ್ನು ತೊಂದರೆಗೀಡು ಮಾಡಿತ್ತು. ಅನೈತಿಕತೆ ಮತ್ತು ಅತ್ಯಾಚಾರಗಳು ಮಿತಿ ಮೀರಿದ್ದವು. ಹೀಗಿರುವಾಗ ಕೈಯಲ್ಲಿ ಶಸ್ತ್ರ ಹಿಡಿದು ರಾಕ್ಷಸಿ ಪ್ರವೃತ್ತಿಯನ್ನು ನಾಶ ಮಾಡಲು ಅನೇಕ ರಾಜರು ತಮ್ಮ ಪರಾಕ್ರಮವನ್ನು ತೋರಿಸಲು ಮುಂದಾದರು. ಅವರೆಲ್ಲರಿಗೂ ಶ್ರೀರಾಮರು ಆದರ್ಶವಾಗಿದ್ದರು !
೧. ಇಸ್ಲಾಮ್ ಎಂದರೆ ಅರಬೀ ಸಾಮ್ರಾಜ್ಯದ ಅತೃಪ್ತ ಬಯಕೆಗಳ ಕ್ರೂರ ಆವಿಷ್ಕಾರ !
ನಮ್ಮ ದೇಶದ ಮೇಲೆ ಮಹಮ್ಮದ ಬಿನ್ ಕಾಸಿಮ್ ಮೊದಲು ಇಸ್ಲಾಮೀ ಆಕ್ರಮಣ ಮಾಡಿದನು ! ನಮ್ಮಲ್ಲಿನ ಸಾಧುಸಂತರ ಪಂಥಗಳಂತೆಯೇ ಇಸ್ಲಾಮ್ ಕೂಡ ಒಂದು ಧಾರ್ಮಿಕ ಪಂಥವಾಗಿದೆ, ಎಂದು ಆ ಕಾಲದ ಜನರು ತಿಳಿದಿದ್ದರು. ‘ಸಂತರು ಮತ್ತು ಅವರ ಅನುಯಾಯಿಗಳು ಕೊಲೆ, ಬಲಾತ್ಕಾರ, ಅತ್ಯಾಚಾರ, ಹಿಂಸೆ, ಮತಾಂತರ ಮುಂತಾದವುಗಳನ್ನು ಮಾಡುವುದಿಲ್ಲ, ಜನರ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವುದು, ಲೂಟಿ ಇತ್ಯಾದಿಗಳನ್ನು ಮಾಡುವುದಿಲ್ಲ, ಎಂಬುದು ನಮ್ಮ ಆ ಕಾಲದ ಸಮಾಜದ ದೃಢಶ್ರದ್ಧೆಯಾಗಿತ್ತು. ಈ ಶ್ರದ್ಧೆಯನ್ನು ಇಸ್ಲಾಂನ ಆಕ್ರಮಣವು ನಾಶ ಮಾಡಿತು. ಮೂರ್ತಿಪೂಜೆ ಆರ್ಯ ಮತ್ತು ಬ್ರಾಹ್ಮೋ ಸಮಾಜಕ್ಕೂ ಒಪ್ಪಿಗೆಯಿರಲಿಲ್ಲ; ಆದರೆ ಇವೆರಡೂ ಸಮಾಜಗಳು ಯಾವತ್ತೂ ದೇವಸ್ಥಾನಗಳ ಮೇಲೆ ಆಘಾತ ಮಾಡಿ ದೇವಸ್ಥಾನಗಳ ಮೂರ್ತಿಗಳನ್ನು ಭಗ್ನಗೊಳಿಸಲಿಲ್ಲ ಅಥವಾ ದೇವಸ್ಥಾನಗಳನ್ನು ಧ್ವಂಸಗೊಳಿಸಲಿಲ್ಲ. ಆದರೆ ಇಸ್ಲಾಮ್ ಮೂರ್ತಿ ಪೂಜೆಯನ್ನು ವಿರೋಧಿಸುವಾಗ ಹಿಂದೂಗಳ ಅಗಣಿತ ದೇವಸ್ಥಾನಗಳನ್ನು ಧ್ವಂಸಗೊಳಿಸಿತು. ಹಿಂದೂ ದೇವಿದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವುದರಲ್ಲಿ ಇಸ್ಲಾಮ್ ಪಂಥೀಯರಿಗೆ ಪೌರುಷವೆನಿಸುತ್ತಿತ್ತು. ವಾಸ್ತವಿಕತೆಯನ್ನು ನೋಡಿದರೆ ಇಸ್ಲಾಮ್‌ವು ಧರ್ಮ ಅಥವಾ ಪಂಥ ಆಗಿರದೆ ಅರಬೀ ಸಾಮ್ರಾಜ್ಯದ ಅತೃಪ್ತ ಬಯಕೆಗಳ ಕ್ರೂರವೃತ್ತಿಯ ಆವಿಷ್ಕಾರವಾಗಿದೆ.
೨. ಪ್ರಭು ಶ್ರೀರಾಮರಿಂದಾಗಿ ಹಿಂದೂಸ್ಥಾನ ಇಸ್ಲಾಮೀ ರಾಷ್ಟ್ರವಾಗದಿರುವುದು
ಇಸ್ಲಾಮೀ ಆಕ್ರಮಣಕಾರರು ಜಗತ್ತಿನಲ್ಲಿನ ಅಲ್ಜೇರಿಯಾ, ಮೊರಕ್ಕೋ, ಸೂದಾನ್, ಇಜಿಪ್ತ್, ಜಾರ್ಡನ್, ಇರಾನ್, ಇರಾಕ್, ಅಫ್ಘಾನಿಸ್ತಾನ, ಮಲೇಶಿಯಾ, ಇಂಡೋನೇಶಿಯಾ ಮುಂತಾದ ದೇಶಗಳ ಮೇಲೆ ಆಕ್ರಮಣ ಮಾಡಿ ಆ ದೇಶಗಳನ್ನು ಇಸ್ಲಾಮೀ ರಾಷ್ಟ್ರಗಳನ್ನಾಗಿ ಮಾಡಿದರು. ನಮ್ಮ ದೇಶದ ಮೇಲೆ ಇಸ್ಲಾಮ್‌ನ ಅನುಯಾಯಿಗಳು ಆಕ್ರಮಣ ಮಾಡಿದರು. ತಮ್ಮ ಆಡಳಿತವನ್ನು ಸ್ಥಾಪಿಸಿದರು. ನಮ್ಮ ದೇಶದಲ್ಲಿನ ಅನೇಕ ದೇವಸ್ಥಾನಗಳನ್ನು ನಾಶ ಮಾಡಿದರು; ಆದರೆ ಅವರಿಗೆ ಹಿಂದೂಸ್ಥಾನವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ; ಏಕೆಂದರೆ ಇಲ್ಲಿನ ಸಮಾಜ ಹಾಗೂ ಆಡಳಿತಗಾರರ ಹೃದಯದಲ್ಲಿ ಪ್ರಭು ಶ್ರೀರಾಮರ ಬಗ್ಗೆ ಶ್ರದ್ಧೆ ಜಾಗೃತವಿತ್ತು. ರಾಮಾಯಣದ ಸಂಸ್ಕಾರದಿಂದ ನಿರ್ಮಾಣವಾದ ಹೋರಾಡುವ ವೃತ್ತಿ ಹಾಗೂ ಪ್ರತಿಕಾರನಿಷ್ಠೆ ಸಹಜವಾಗಿ ನಾಶವಾಗುವುದಾಗಿರಲಿಲ್ಲ. ಇಂದು ಕೂಡ ಆ ಪ್ರಖರ ನಿಷ್ಠೆ ಜನರ ಹೃದಯದಲ್ಲಿ ಹಾಗೆಯೆ ಜಾಗೃತವಾಗಿದೆ.
೩. ಹಿಂದೂಗಳು ಪ್ರಭು ಶ್ರೀರಾಮರ ಇತಿಹಾಸವನ್ನು ಮರೆಯಬೇಕೆಂದು ಮಾಡುತ್ತಿರುವ ಷಡ್ಯಂತ್ರ !
ನಮ್ಮ ಸಾವಿರಾರು ವರ್ಷಗಳ ಪರಾಭವದ ಪರಂಪರೆಯನ್ನು ನಾಶಗೊಳಿಸಿ ವಿಜಯದ ಪರಂಪರೆಯನ್ನು ನಿರ್ಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಮೇಲೆ ಅವರ ತಾಯಿ ಜೀಜಾಬಾಯಿಯವರು ರಾಮಾಯಣ ಹಾಗೂ ಮಹಾಭಾರತದ ಸಂಸ್ಕಾರ ಗಳನ್ನು ಮಾಡಿದ್ದರು. ಇದನ್ನು ದುರ್ಲಕ್ಷಿಸುವಂತಿಲ್ಲ. ಶ್ರೀರಾಮರ ನಾಮದ ಮಹಿಮೆ ಎಷ್ಟಿದೆ ಎಂದರೆ, ಸೀತಾಮಾತೆಯನ್ನು ಅಪಹರಿಸಿದ ರಾವಣನ ಸಹೋದರ ವಿಭೀಷಣನು ಪ್ರಭು ಶ್ರೀರಾಮರ ಭಕ್ತನಾಗಿದ್ದನು. ರಾವಣನ ವಿರುದ್ಧ ಶ್ರೀರಾಮರ ಪರ ನಿಂತ ವಿಭೀಷಣ ಸಾತ್ತ್ವಿಕತೆ, ಸತ್ಯ ಹಾಗೂ ನ್ಯಾಯವನ್ನು ಪುರಸ್ಕರಿಸುವ ಸಂಸ್ಕೃತಿನಿಷ್ಠನಾಗಿದ್ದನು. ಪ್ರತಿಕೂಲ ಸಮಯ ದಲ್ಲಿಯೂ ವಿಭೀಷಣನು ಶ್ರೀರಾಮರ ಮಾರ್ಗವನ್ನು ಅನುಸರಿಸಿ ದನು. ಆ ಪರಂಪರೆಯನ್ನು ಇಂದಿಗೂ ಕಾಪಾಡಲಾಗುತ್ತಿದೆ. ‘ಪ್ರಭು ಶ್ರೀರಾಮರ ಈ ವಂಶಪರಂಪರೆಯನ್ನು ಎಲ್ಲಿಯವರೆಗೆ ಹಿಂದೂ ಸಮಾಜ ಮರೆಯುವುದಿಲ್ಲವೋ, ಅಲ್ಲಿಯವರೆಗೆ ಈ ದೇಶದಲ್ಲಿ ಇಸ್ಲಾಮೀ ಆಡಳಿತವನ್ನು ಸ್ಥಾಪಿಸಲು ಸಾಧ್ಯವಿಲ್ಲ, ಎಂದು ಹಿಂದೂಸ್ಥಾನದ ಇತಿಹಾಸವು ಜಗತ್ತಿಗೆ ಸಂದೇಶವನ್ನು ನೀಡುತ್ತದೆ. ಅದಕ್ಕಾಗಿಯೆ ಈಗ ಶ್ರೀರಾಮರ ಚರಿತ್ರೆಯನ್ನು ಕಳಂಕಿಸುವ ಪ್ರಯತ್ನ ನಡೆಯುತ್ತಿದೆ. ‘ಶ್ರೀರಾಮರು ಜನ್ಮತಾಳಿಯೇ ಇಲ್ಲ, ರಾಮಾಯಣವು ಒಂದು ಕಾಲ್ಪನಿಕ ಕಥೆಯಾಗಿದೆ. ಅದು ಇತಿಹಾಸವಾಗಿಲ್ಲ, ಈ ರೀತಿ ಏನೆಲ್ಲ ಹೇಳಲಾಗುತ್ತದೆಯೋ, ಅದರ ಹಿಂದಿನ ಉದ್ದೇಶ, ಹಿಂದೂ ಸಮಾಜಕ್ಕೆ ಶ್ರೀರಾಮರ ವಿಸ್ಮರಣೆಯಾಗಬೇಕೆಂಬುದೇ ಆಗಿದೆ.
೪. ಹಿಂದೂ ಧರ್ಮ ಮತ್ತು ರಾಷ್ಟ್ರವನ್ನು ಜೀವಂತವಿಡಲು ಸಮರ್ಥರು ‘ದಾಸಬೋಧದಲ್ಲಿ ಮಾಡಿದ ಮಾರ್ಗದರ್ಶನ
ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಪ್ರಭು ಶ್ರೀರಾಮರ ನೆನಪನ್ನು ಹೆಚ್ಚು ಪ್ರಕಾಶಮಾನ ಮಾಡಿದವರು ಸಮರ್ಥ ರಾಮದಾಸಸ್ವಾಮಿಗಳು ! ಆ ಸಮಯದಲ್ಲಿ ಆದಿಲಶಾಹಿ, ನಿಜಾಮಶಾಹಿ, ಕುತುಬಶಾಹಿ ಇಂತಹ ಇಸ್ಲಾಮೀ ಆಡಳಿತದ ವರ್ಚಸ್ಸಿತ್ತು. ಅದೇ ಸಮಯದಲ್ಲಿ ಸಮರ್ಥ ರಾಮದಾಸಸ್ವಾಮಿಗಳು ನಮ್ಮ ಸಂಪೂರ್ಣ ಸಮಾಜಕ್ಕೆ ಪ್ರಭು ಶ್ರೀರಾಮರ ವಿಸ್ಮರಣೆಯಾಗಬಾರದೆಂದು ಕಾಳಜಿ ವಹಿಸಿದರು. ಅವರು ‘ದಾಸಬೋಧದ ೧೧ ನೆಯ ದಶಕದ ೫ ನೇ ಶ್ಲೋಕ ಹಾಗೂ ೧೯ ನೇ ದಶಕದ ೯ ನೇ ಶ್ಲೋಕದಿಂದ ನ್ಯಾಯನಿಷ್ಠ ಮತ್ತು ಬುದ್ಧಿನಿಷ್ಠ ನಿಲುವಿನಿಂದ ಸಮಾಜಕ್ಕೆ ಮಾಡಿದ ಬೋಧನೆಗೆ ಸ್ಥಳಕಾಲದ ಮಿತಿಯಿಲ್ಲ.
ಪರಕೀಯ ಆಕ್ರಮಣಕಾರರ, ಮಾನವರ ಅತ್ಯಾಚಾರದ ಹಾಗೂ ರಾಜ್ಯಕಾರಬಾರದ ಕಾಲದಲ್ಲಿ ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ರಾಷ್ಟ್ರವನ್ನು ಜೀವಂತವಾಗಿಡಲು ಏನು ಮಾಡಬೇಕು ? ಈ ವಿಷಯದಲ್ಲಿ ಅತ್ಯಂತ ಪ್ರಭಾವಪೂರ್ಣ ಶಬ್ದಗಳಲ್ಲಿ ‘ದಾಸಬೋಧ ಈ ಗ್ರಂಥದ ಮೂಲಕ ಸಮರ್ಥ ರಾಮದಾಸಸ್ವಾಮಿಗಳು ಮಾರ್ಗದರ್ಶನ ಮಾಡಿದ್ದಾರೆ. ಧರ್ಮರಕ್ಷಣೆಗಾಗಿ ಹಾಗೂ ಧರ್ಮದ ಸಂಸ್ಥಾಪನೆಗಾಗಿ ದೇವರನ್ನು ಶ್ರೇಷ್ಠವೆಂದು ಒಪ್ಪಿಕೊಂಡು ಅವನ ಜಯಜಯಕಾರ ಮಾಡಬೇಕು ಮತ್ತು ಇಡೀ ಪ್ರಾಂತವನ್ನು ನುಚ್ಚುನೂರು ಮಾಡಬೇಕು ದುಷ್ಟರ ಸಂಹಾರ ಮಾಡುತ್ತಾ ಮಾಡುತ್ತಾ ಮರಣ ಬಂದರೆ ಒಳ್ಳೆಯ ಗತಿ ಪ್ರಾಪ್ತವಾಗುವುದು. ಜೀವಂತ ಉಳಿದರೆ ಸ್ವರಾಜ್ಯವನ್ನು ಉಪಭೋಗಿಸುವ ಮಹದ್ಭಾಗ್ಯವು ಪ್ರಾಪ್ತವಾಗುವುದು. ಬಲಿಷ್ಠನಿಗೆ ಮತ್ತೊಬ್ಬ ಬಲಿಷ್ಠನನ್ನು ಯೋಜಿಸಬೇಕು. ಸೊಕ್ಕಿನ ಮನುಷ್ಯನಿಗೆ ಮತ್ತೊಬ್ಬ ಸೊಕ್ಕಿನ ಮನುಷ್ಯನನ್ನೇ ಯೋಜಿಸಬೇಕು. ಧೂರ್ತನಿದ್ದರೆ ಅವನ ಮುಂದೆ ಇನ್ನೊಬ್ಬ ಧೂರ್ತನನ್ನೇ ನಿಲ್ಲಿಸಬೇಕು. ಈ ರೀತಿ ‘ತಕ್ಕ ಪ್ರತ್ಯುತ್ತರಕ್ಕಾಗಿ ಆವಶ್ಯ ಯೋಜಿಸಬೇಕು. – ದಾಸಬೋಧ, ದಶಕ ೧೯, ಸಮಾಸ ೯, ಶ್ಲೋಕ ೩೦ ರಾಜಕಾರಣದ ವಿಷಯಗಳು ಜನಸಾಮಾನ್ಯರಿಗೆ ತಿಳಿಯಲಾರವು. ಯುದ್ಧಭೂಮಿಯಲ್ಲಿ ಸ್ತ್ರೀಯರು ಹಾಗೂ ಮಕ್ಕಳಿಗೆ ಯಾವುದೇ ಕೆಲಸ ಇಲ್ಲ. – ಶ್ರೀಸಮರ್ಥರ ಗಾಥಾ, ಪದ ೧೫೩೦ ಬಹಳಷ್ಟು ಜನರನ್ನು ಸಂಘಟಿಸಬೇಕು. ಅವರನ್ನು (ಧರ್ಮಸಂಸ್ಥಾಪನೆಯ) ಒಂದೇ ವಿಚಾರದಿಂದ ಪ್ರೇರೇಪಿಸ ಬೇಕು. ಅದಕ್ಕಾಗಿ ತುಂಬಾ ಶ್ರಮಪಡಬೇಕು ಹಾಗೂ ನಂತರ ಶತ್ರುಗಳ ಮೇಲೆ ದಂಡೆತ್ತಿ ಹೋಗಬೇಕು.
೫. ಆಗಿನ ಭಯಭೀತ ಸಮಾಜಕ್ಕೆ ರಾಮನಾಮವನ್ನು ಹೇಳಿ ಸಮರ್ಥರು ಅವರಿಗೆ ಸಮಾಧಾನ ಹೇಳಿದರು !
ಮುಸಲ್ಮಾನರ ಆಡಳಿತದಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡ ಲಾಗುತ್ತಿತ್ತು. ದೇವರ ಮೂರ್ತಿಗಳನ್ನು ಒಡೆಯಲಾಗುತ್ತಿತ್ತು. ದೇವ ಸ್ಥಾನಗಳನ್ನು ನಾಶಗೊಳಿಸಲಾಗುತ್ತಿತ್ತು. ಇಂತಹ ಸಮಯ ದಲ್ಲಿ ಧರ್ಮ ಹಾಗೂ ಸಂಸ್ಕೃತಿ ಉಳಿಯಬೇಕು ಹಾಗೂ ಅದರ ಜೊತೆಗೆ ಸಮಾಜ ಭಯಪಡಬಾರದು ಎಂದು ಸಮರ್ಥರು ೧೧ ಮಾರುತಿ ಮಂದಿರಗಳನ್ನು ಸ್ಥಾಪಿಸಿದರು. ಇವೆಲ್ಲ ೧೧ ಮಂದಿರಗಳು ಪ್ರಭು ಶ್ರೀರಾಮರ ದಾಸ – ವೀರಮಾರುತಿ ದೇವರದ್ದಾಗಿತ್ತು. ಹೆದರಿದ ಸಮಾಜಕ್ಕೆ ಸಮರ್ಥರು ‘ಶ್ರೀರಾಮ ಜಯ ರಾಮ ಜಯ ಜಯ ರಾಮ, ಈ ೧೩ ಅಕ್ಷರಗಳ ಮಹಾಮಂತ್ರ ವನ್ನು ನೀಡಿದರು. ಇದಕ್ಕೆ ‘ತ್ರಯೋದಶಾಕ್ಷರೀ ಮಂತ್ರ ಎನ್ನುತ್ತಾರೆ.
– ದುರ್ಗೇಶ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು
(ಮುಂದುವರಿಯುವುದು)