ತೃಣಮೂಲ ಕಾಂಗ್ರೆಸ್ಸಿನ ಮುಸಲ್ಮಾನ ನಾಯಕ ಶಾಹನೂರ ಮಂಡಲನಿಂದ ದಾಳಿಯ ಮುಂದಾಳತ್ವ
(ಈ ಚಿತ್ರ ಯಾರ ಪ್ರಕಟಿಸುಉವದರ ಉದ್ದೇಶ ಭಾವನೆಗಳಿಗೂ ನೋವುಂಟು ಮಾಡುವುದಾಗಿರದೇ ಪರಿಸ್ಥಿತಿಯ ಗಂಭೀರತೆಯನ್ನು ಪ್ರದರ್ಶಿಸುವುದಾಗಿದೆ.)
ಬಶೀರಹಾಟ (ಬಂಗಾಲ) – ಬಶೀರಹಾಟ ನಗರದ ಶಂಖಚುರಾ ಮಾರುಕಟ್ಟೆಯಲ್ಲಿರುವ ಕಾಳಿಮಾತೆ ದೇವಸ್ಥಾನ ಮತ್ತು ಶ್ರೀ ಕಾಳಿ ಮಾತೆಯ ಮೂರ್ತಿಯನ್ನು ಮತಾಂಧ ಮುಸಲ್ಮಾನರು ಧ್ವಂಸಗೊಳಿಸಿದರು. ಮತಾಂಧ ಮುಸಲ್ಮಾನರ ಗುಂಪಿನ ಮುಂದಾಳತ್ವವನ್ನು ಸ್ಥಳೀಯ ತೃಣಮೂಲ ಕಾಂಗ್ರೆಸ ನಾಯಕ ಶಹನೂರ ಮಂಡಲ ವಹಿಸಿದ್ದನು.
1. ಭಾಜಪ ನಾಯಕ ದಿಲೀಪ ಘೋಷ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ ಮಾಡಿ, ಶ್ರೀ ಕಾಳಿ ಮಾತೆಯ ಮೂರ್ತಿಗೆ ಹಾನಿಯಾಗಿದೆ. ಈ ದಾಳಿಯನ್ನು ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಶಹನೂರ ಮಂಡಲ ಮಾಡಿದ್ದಾನೆ ಎಂದು ಹೇಳಿದ್ದಾರೆ.
2. ಭಾಜಪ ರಾಷ್ಟ್ರೀಯ ನಾಯಕ ಅಮಿತ ಮಾಳವೀಯ ಇವರೂ ಕೂಡ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಜಾದವಪುರದ ನಂತರ ಈಗ ಬಶೀರಹಾಟ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಂಖಚರಾ ಮಾರುಕಟ್ಟೆಯಲ್ಲಿ ಶ್ರೀ ಕಾಳಿ ಮಾತೆಯ ಮೂರ್ತಿಗೆ ಹಾನಿಯಾಗಿದೆ. ತೃಣಮೂಲ ಕಾಂಗ್ರೆಸ್ ಶಾಸಕರು ಇದನ್ನು ಭಾಜಪ ಷಡ್ಯಂತ್ರ ಎನ್ನಬಹುದು ಅಥವಾ ‘ಹಿಂದೂಗಳೇ ಇದನ್ನು ಮಾಡಿದ್ದಾರೆ’ ಎನ್ನಬಹುದು. ಕಳೆದ 5 ದಿನಗಳಿಂದ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯದ ಬಗ್ಗೆ ಮಮತಾ ಬ್ಯಾನರ್ಜಿ ಏಕೆ ಮೌನವಾಗಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
3. ಬಂಗಾಲದ ಭಾಜಪ ಪ್ರದೇಶಾಧ್ಯಕ್ಷ ಡಾ. ಸುಕಾಂತಾ ಮಜುಮದಾರ ಮಾತನಾಡಿ, ಸಕ್ಕಚುರೊ ಮಾರುಕಟ್ಟೆಯಲ್ಲಿರುವ ದೇವಸ್ಥಾನಕ್ಕೆ ನುಗ್ಗಿ, ಶ್ರೀ ಕಾಳಿ ಮಾತೆಯ ಮೂರ್ತಿಯ ಕೈ, ಕಾಲು ಮತ್ತು ತಲೆ ತುಂಡು ಮಾಡಿದ್ದಾರೆ. ಶಹನೂರ ಮಂಡಲನ ಮತಾಂಧ ಗುಂಪು ಹಿಂದೂಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ಪೊಲೀಸರು ಮೌನವಾಗಿದ್ದಾರೆ. ಮಮತಾ ಬ್ಯಾನರ್ಜಿಯವರೇ, ಈಗ ಸಾಕು. ಒಂದು ವೇಳೆ ನೀವು ಬಂಗಾಲವನ್ನು ‘ಗ್ರೇಟರ್ (ದೊಡ್ಡ) ಬಾಂಗ್ಲಾದೇಶ’ ಎಂದು ಪರಿಗಣಿಸಿದರೆ, ನೀವು ತಪ್ಪು ಮಾಡುತ್ತಿದ್ದೀರಿ. ನಾವು ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಲು ಬಿಡುವುದಿಲ್ಲ. ಭಾಜಪ ಇದಕ್ಕೆ ಉತ್ತರ ನೀಡುತ್ತದೆ, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|