ಭೂಮಿಪೂಜೆಯ ವಿಧಿಯಿಂದ ಪೂಜೆಯ ವಿಧಿಯಲ್ಲಿನ ಘಟಕಗಳ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮವಾಗುವುದು !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಭೂಮಿಯನ್ನು ಖರೀದಿಸಿದ ನಂತರ ‘ಭೂಮಿಯ ಶುದ್ದಿಯಾಗಿ ಸ್ಥಾನದೇವತೆಯ ಆಶೀರ್ವಾದ ಸಿಗಬೇಕು, ಎಂಬ ಉದ್ದೇಶದಿಂದ ಎಲ್ಲಕ್ಕಿಂತ ಮೊದಲು ಭೂಮಿಯ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯ ಸಮಯದಲ್ಲಿ ಪೃಥ್ವಿ, ವರಾಹ, ಕೂರ್ಮ ಮತ್ತು ಶೇಷ ಈ ದೇವತೆಗಳನ್ನು ಆಹ್ವಾನಿಸಿ ಅವರ ಪೂಜೆಯನ್ನು ಮಾಡಲಾಗುತ್ತದೆ. ಭೂಮಿಪೂಜೆಯನ್ನು ಮಾಡುವುದರಿಂದ ದೇವತೆಯ ಆಶೀರ್ವಾದದಿಂದ ಭೂಮಿಯಲ್ಲಿರುವ ದೋಷಗಳು ದೂರವಾಗಿ ಭೂಮಿಯು ಶುದ್ಧವಾಗುತ್ತದೆ. ಈ ವಿಧಿಯನ್ನು ಮಾಡುವುದರಿಂದ ಭೂಮಿಯ ಯಜಮಾನನಿಗೆ (ಮಾಲೀಕನಿಗೆ) ಭೂಮಿ ಅನುಕೂಲವಾಗುತ್ತದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೪.೫.೨೦೨೨ ರಂದು ಗೋವಾದಲ್ಲಿ ಒಂದು ಆಧ್ಯಾತ್ಮಿಕ ಸಂಸ್ಥೆಯ ಭೂಮಿಯ ಭೂಮಿಪೂಜೆಯನ್ನು ಮಾಡಲಾಯಿತು. ‘ಭೂಮಿ ಪೂಜೆಯ ವಿಧಿಯಿಂದ ಪೂಜೆಯ ಘಟಕಗಳ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವೈಜ್ಞಾನಿಕ ವಾಗಿ ಅಧ್ಯಯನವನ್ನು ಮಾಡಲು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ 

ಈ ಪರೀಕ್ಷಣೆಯಲ್ಲಿ ಭೂಮಿಪೂಜೆಯನ್ನು ಮಾಡುವ ಜಾಗ (ಪೂಜೆಗಾಗಿ ಪೂಜೆಯ ಸಾಹಿತ್ಯಗಳನ್ನು ಮಂಡಿಸಿದ ಜಾಗ), ಭೂಮಿಯ ಮೇಲಿನ ಮಣ್ಣು, ಪುರೋಹಿತರು ಮತ್ತು ಪೂಜೆಯ ಯಜಮಾನ ಇವರ ವಿಧಿಯ ಮೊದಲು ಮತ್ತು ವಿಧಿಯ ನಂತರ ‘ಯು.ಎ.ಎಸ್. ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು.

೧ ಅ. ಭೂಮಿಪೂಜೆಯ ವಿಧಿಯಿಂದ ಭೂಮಿ, ಪುರೋಹಿತರು ಮತ್ತು ಯಜಮಾನರು ಇವರ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು : ಭೂಮಿಪೂಜೆಯ ವಿಧಿಯ ನಂತರ ಆ ಜಾಗ ಮತ್ತು ಭೂಮಿಯ ಮೇಲಿನ ಮಣ್ಣಿನಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವುಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಮಾಣ ಬಹಳ ಹೆಚ್ಚಾಯಿತು. ಹಾಗೆಯೇ ಪುರೋಹಿತ ಮತ್ತು ಯಜಮಾನ ಇವರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆಯೂ ತುಂಬಾ ಹೆಚ್ಚಾಯಿತು. ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಭೂಮಿಪೂಜೆಯ ವಿಧಿಯಿಂದ ಭೂಮಿಯ ಶುದ್ಧಿಯಾಗುವುದು ಮತ್ತು ಅದರ ಸಾತ್ತ್ವಿಕತೆ ತುಂಬಾ ಹೆಚ್ಚಾಗುವುದು : ಭೂಮಿಪೂಜೆಯ ಮೊದಲು ಭೂಮಿಪೂಜನೆಯ ಜಾಗ ಮತ್ತು ಭೂಮಿಯ ಮಣ್ಣು ಇವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ತೊಂದರೆದಾಯಕ ಸ್ಪಂದನಗಳಿದ್ದವು. ಭೂಮಿಪೂಜನದ ವಿಧಿಯಿಂದ ಅಲ್ಲಿ ಚೈತನ್ಯ ನಿರ್ಮಾಣವಾಗಿ ಭೂಮಿಯಲ್ಲಿನ ತೊಂದರೆದಾಯಕ ಸ್ಪಂದನಗಳು ಇಲ್ಲವಾದವು ಮತ್ತು ಭೂಮಿಯ ಸಾತ್ತ್ವಿಕತೆಯು ಸಹ ತುಂಬಾ ಪ್ರಮಾಣದಲ್ಲಿ ಹೆಚ್ಚಾಯಿತು. ಇದರಿಂದ ಹಿಂದೂ ಧರ್ಮದಲ್ಲಿ ಹೇಳಲಾದ ಭೂಮಿ ಪೂಜೆ ಮುಂತಾದ ವಿಧಿಗಳನ್ನು ಮಾಡುವುದರ ಮಹತ್ವವು ಗಮನಕ್ಕೆ ಬರುತ್ತದೆ.

೨ ಆ. ಭೂಮಿಪೂಜೆಯ ವಿಧಿಯನ್ನು ಭಾವಪೂರ್ಣವಾಗಿ ಮಾಡಿದ್ದರಿಂದ ಪುರೋಹಿತರು ಮತ್ತು ಯಜಮಾನರಿಗೆ ಆಧ್ಯಾತ್ಮಿಕ ಸ್ತರದಲ್ಲಾದ ಲಾಭ : ಈ ಭೂಮಿಪೂಜೆ ವಿಧಿಯ ಯಜಮಾನರು ಸಂತ ಮಟ್ಟದವರಾಗಿದ್ದರಿಂದ ಅವರಲ್ಲಿ ವಿಧಿಯ ಮೊದಲೂ ತುಂಬಾ ಸಾತ್ತ್ವಿಕತೆ ಇದೆ ಎಂಬುದು ಪರೀಕ್ಷಣೆಯಿಂದ ಕಂಡು ಬಂದಿತು. ಯಜಮಾನರು ಈ ವಿಧಿಯನ್ನು ಅತ್ಯಂತ ಭಾವಪೂರ್ಣವಾಗಿ ಮಾಡಿದ್ದರಿಂದ ದೇವತೆಗಳ ತತ್ತ್ವಗಳು ಕಾರ್ಯನಿರತವಾದವು. ಇದರಿಂದ ವಿಧಿಯ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಚೈತನ್ಯವು ನಿರ್ಮಾಣವಾಯಿತು. ಪುರೋಹಿತರು ಮತ್ತು ಯಜಮಾನರು ವಿಧಿಯಲ್ಲಿನ ಚೈತನ್ಯವನ್ನು ಗ್ರಹಿಸಿದ್ದರಿಂದ ಅವರ ಸುತ್ತಲಿನ ತೊಂದರೆದಾಯಕ ಸ್ಪಂದನಗಳ ಆವರಣವು ತುಂಬಾ  ಪ್ರಮಾಣದಲ್ಲಿ ಕಡಿಮೆಯಾಗಿ ಅವರ ಸಾತ್ತ್ವಿಕತೆಯು ಸಹ ತುಂಬಾ ಹೆಚ್ಚಾಯಿತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೮.೨.೨೦೨೩) 

ವಿ-ಅಂಚೆ : [email protected]