‘ಮಾತೃಸಂಸ್ಕೃತಿಯ ರಕ್ಷಣೆಯು ನಮ್ಮೆಲ್ಲರ ಕರ್ತವ್ಯ – ಗಣರಾಜ ಭಟ್ಟ, ಕೆದಿಲ, ಹಿಂದೂ ಜಾಗರಣ ವೇದಿಕೆ

ಮುರ (ದಕ್ಷಿಣ ಕನ್ನಡ ಜಿಲ್ಲೆ) ಭಾರತಮಾತಾ ಪೂಜನ ಮತ್ತು ಹಿಂದೂ ಜನಜಾಗೃತಿ ಸಭೆ

ಗಣರಾಜ ಭಟ್ಟ

‘ಇಂದು ದೇಶದ ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಮನೆಯಲ್ಲಿ ಹೆತ್ತವರಿಗೆ ಧಾರಾವಾಹಿ ನೋಡಲು ಮತ್ತು ಅದರ ಬಗ್ಗೆ ಇತರರಲ್ಲಿ ಚರ್ಚೆ ಮಾಡಲು ಸಮಯ ಇರುತ್ತದೆ ಆದರೆ ತನ್ನ ಹದಿಹರೆಯದ ಮಗಳ ಚಲನವಲನಗಳನ್ನು ಗಮನಿಸಲು ಅವಳ ಬಗ್ಗೆ ಕಾಳಜಿ ವಹಿಸಲು ಸಮಯ ಇರುವುದಿಲ್ಲ, ಈ ಬಗ್ಗೆ ಹೆತ್ತವರಲ್ಲಿ ಮತ್ತು ಲವ ಜಿಹಾದ್ ಬಗ್ಗೆ ಯುವತಿಯರಲ್ಲಿ ಜನಜಾಗೃತಿ ಮೂಡಿಸಬೇಕಾಗಿದೆ. ಈ ಮೂಲಕ ಮಾತೃ ಸಂಸ್ಕೃತಿಯ ರಕ್ಷಣೆ ಮಾಡಬೇಕಾಗಿದೆ, ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯ ಮಾತೃಸುರಕ್ಷಾ ಪ್ರಮುಖರಾದ ಶ್ರೀ. ಗಣರಾಜ ಭಟ್ ಕೆದಿಲ ಇವರು ಕರೆ ನೀಡಿದರು. ಅವರು ಬೆಳ್ತಂಗಡಿ ತಾಲೂಕಿನ ರಾಮನಗರ ಬುಳೇರಿ ಮೊಗ್ರು, ಮುರ ಇಲ್ಲಿನ ಶ್ರೀ ರಾಮ ಭಜನಾ ಮಂದಿರ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳು ಸೇರಿ ಆಯೋಜಿಸಿದ್ದ ಹಿಂದೂ ಜನಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಭಾಜಪದ ಶಾಸಕರಾದ ಶ್ರೀ. ಹರೀಶ ಪೂಂಜ ಇವರು ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಶ್ರೀ. ಚಂದ್ರ ಮೊಗವೀರ ಇವರೂ ಮಾರ್ಗದರ್ಶನ ಮಾಡಿದರು

೩ ಮಾರ್ಚ್ ೨೦೨೩ ರಂದು ಮುರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ನೆರವೇರಿತ್ತು. ಸಭೆಯ ನಂತರ ಅಲ್ಲಿಯ ಎಸ್‌ಡಿಪಿಐ ಮುಖಂಡರು ‘ಈ ಕಾರ್ಯಕ್ರಮ ಸಂವಿಧಾನವಿರೋಧಿಯಾಗಿದೆ ಮತ್ತು ಆಯೋಜಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಮುರ ಗ್ರಾಮದ ಗ್ರಾಮಸ್ಥರು ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಇದೇ ಸಭೆಯನ್ನು ಪುನಃ ಮಾಡಬೇಕೆಂದು ನಿಶ್ಚಿಯಿಸಿ ಕೇವಲ ೪ ದಿನಗಳಲ್ಲಿ ೪೫೦ ಕ್ಕಿಂತಲೂ ಹೆಚ್ಚು ಹಿಂದುಗಳು ಒಟ್ಟಿಗೆ ಸೇರಿ ಹಿಂದೂ ಜನಜಾಗೃತಿ ಸಭೆಯನ್ನು ಮಾಡಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. (ಈ ರೀತಿಯಲ್ಲಿ ಸಂಘಟಿತವಾಗಿ ಜಿಹಾದಿಗಳಿಗೆ ಪಾಠ ಕಲಿಸಿದ ಮುರ ಗ್ರಾಮಸ್ಥರಿಗೆ ಅಭಿನಂದನೆಗಳು – ಸಂಪಾದಕರು)