‘ಗಾಂಧಿ ಇವರನ್ನು ಏನು ಮಾಡಬೇಕು ?

ರಾಹುಲ ಗಾಂಧಿ

ಭಾರತದ ಅರ್ಥವ್ಯವಸ್ಥೆಯು ೨೦೦೫ ರಲ್ಲಿ ೮೩೪ ಶತಕೋಟಿ ಡಾಲರ್ ಇತ್ತು. ಅದು ೨೦೧೪ ರಲ್ಲಿ ಬರುಬರುತ್ತಾ ೨ ಸಾವಿರ ಶತಕೋಟಿ ಡಾಲರ್ ವರೆಗೆ ತಲುಪಿತು. ಆ ಸಮಯದಲ್ಲಿ ೯ ನೇ ಸ್ಥಾನದಲ್ಲಿದ್ದ ಭಾರತದ ಅರ್ಥವ್ಯವಸ್ಥೆಯು ಇಂದು ೩ ಸಾವಿರದ ೪೭ ಶತಕೋಟಿ ಡಾಲರ್‌ನ ಹಂತವನ್ನು ತಲುಪಿದ್ದು ಅದು ಶೀಘ್ರವೇ ಜರ್ಮನಿ ಮತ್ತು ಜಪಾನ್‌ನ್ನು ಹಿಂದಿಕ್ಕಿ ಜಗತ್ತಿನ ಮೂರನೇ ಸ್ಥಾನಕ್ಕೆ ತಲುಪುವುದು. ‘ಅಂತರರಾಷ್ಟ್ರೀಯ ಹಣಕಾಸು ನಿಧಿಯ ಈ ವಾಸ್ತವಿಕ ಅಂಕಿಅಂಶಗಳನ್ನು ನೀಡುವುದರ ಹಿಂದೊಂದು ಕಾರಣವಿದೆ. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಸಾರ್ವಜನಿಕರನ್ನು ಅನೇಕ ಬಾರಿ ದಾರಿ ತಪ್ಪಿಸುತ್ತವೆ. ‘ದೇಶದ ಆರ್ಥಿಕ ಪ್ರಗತಿಯಾಗುತ್ತಿಲ್ಲ, ಇದು ಕೇವಲ ಒಂದು ಭ್ರಮೆಯಾಗಿದೆ, ಎಂದು ಸುಳ್ಳು ಹೇಳುತ್ತವೆ. ಕೊರೊನಾ ಮಹಾಮಾರಿಯ ಹಾಹಾಕಾರದ ೨ ವರ್ಷಗಳನ್ನು ಸಹಿಸಿಯೂ ಭಾರತ ಕಳೆದ ೮ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಮುದ್ರೆಯನ್ನೊತ್ತಿದೆ. ಸರಕಾರದ ಹಣಕಾಸಿನ ಸಹಾಯದ ಮೂಲಕ ಪ್ರತಿದಿನ ಪ್ರಾರಂಭಿಸುವ ಹೊಸ ವ್ಯವಹಾರಗಳ (‘ಸ್ಟಾರ್ಟ್‌ಅಪ್ಸ್ನ)ನ ಸಂಖ್ಯೆಯಲ್ಲಿ ಭಾರತವು ಮಂಚೂಣಿಯಲ್ಲಿದೆ. ಭಾರತದ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಪ್ರಧಾನಿ ಆಂಥನಿ ಅಲ್ಬಾನೀಸ್ ಇವರೂ ಭಾರತದ ಅಸಾಮಾನ್ಯ ಬೆಳವಣಿಗೆಯನ್ನು ಬೆಂಬಲಿಸಿದ್ದಾರೆ. ಹೀಗಿದ್ದರೂ ಕಾಂಗ್ರೆಸ್‌ನ ಯುವರಾಜ ರಾಹುಲ ಗಾಂಧಿ ಇವರು ಬ್ರಿಟನ್‌ಗೆ ಹೋಗಿ ಭಾರತದ ಇಲ್ಲಸಲ್ಲದ ದೈನ್ಯಾವಸ್ಥೆಯ ಜೊತೆಗೆ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ತಲೆಬುಡವಿಲ್ಲದ ಮಾತನಾಡುತ್ತಿದ್ದಾರೆ.

ಬಲಶಾಲಿಯೋ ಅಥವಾ ಬುದ್ಧಿಹೀನತೆಯೋ ?

ಬ್ರಿಟನ್ ಪ್ರವಾಸಕ್ಕೆ ತೆರಳುವ ಮುನ್ನ ರಾಹುಲ ಗಾಂಧಿಯವರು ೪ ಸಾವಿರ ಕಿ.ಮೀ.ನ ‘ಭಾರತ ಜೋಡೊ ಯಾತ್ರೆಯನ್ನು ಪೂರ್ಣಗೊಳಿಸಿದರು. ಮೂಲದಲ್ಲಿ ಓರ್ವ ನಾಯಕನು ತನ್ನ ದೇಹ ಮತ್ತು ಮನಸ್ಸಿಗಿಂತ ಬುದ್ಧಿಶಕ್ತಿಯಿಂದ ಜನರ ಮನಸ್ಸಿನಲ್ಲಿ ತನ್ನ ಮುದ್ರೆಯೊತ್ತುತ್ತಾನೆ. ಇದು ಬಲಿಷ್ಠ ಜನನಾಯಕನ ಸಂಕೇತವಾಗಿದೆ. ರಾಹುಲರ ಕಳೆದ ಎರಡು ದಶಕಗಳ ರಾಜಕೀಯ ಆಳ್ವಿಕೆಯ ಕಾಲವನ್ನು ಅವಲೋಕಿಸಿದರೆ ಅವರಿಗೆ ಜನರ ಮನಸ್ಸನ್ನು ಸೆಳೆಯಲು ಅಥವಾ ಬೌದ್ಧಿಕ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ಸಿನ ಅವನತಿಯೇ ಈ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಗಾಂಧಿಯವರ ಎರಡು ಇಂದ್ರಿಯಗಳ (ಮನಸ್ಸು ಮತ್ತು ಬುದ್ಧಿ) ಮಿತಿಯನ್ನು ಗುರುತಿಸಿ ‘ಕಾಂಗ್ರೆಸ್ ಅವರನ್ನು ಶಾರೀರಿಕ ದೃಷ್ಟಿಯಿಂದ ಸಕ್ಷಮಗೊಳಿಸಿದೆಯೇ ?, ಎಂಬ ಪ್ರಶ್ನೆ ‘ಭಾರತ ಜೊಡೊ ಯಾತ್ರೆಯ ಕಾಂಗ್ರೆಸ್ಸಿಗರ ಪ್ರಚಾರ-ಪ್ರಸಾರದಿಂದ ಗಮನಕ್ಕೆ ಬರುತ್ತದೆ. ಕಾಂಗ್ರೆಸ್ಸಿನ ಅನೇಕ ನಾಯಕರು ಪ್ರವಾಸದಲ್ಲಿರುವ ಗಾಂಧಿಯವರ ನಡೆ-ನುಡಿಗಳನ್ನು ಪ್ರಶಂಸಿಸಿ ಅವರು ಎಷ್ಟು ಉತ್ಸಾಹಿ, ಶಕ್ತಿಯುತ, ಬಲಿಷ್ಠರಾಗಿದ್ದಾರೆ ಎಂದು ಹೇಳಲು ಲೇಖನಗಳ ಮೇಲೆ ಲೇಖನಗಳನ್ನು ಬರೆದರು. ಜನನಾಯಕ ನಾಗಬೇಕೆಂಬ ಅಟ್ಟಹಾಸದಿಂದ ಶರೀರವನ್ನು ಮಾತ್ರ ಬಲಿಷ್ಠ ಮಾಡಲು ಗಮನವನ್ನು ಕೇಂದ್ರಿಕರಿಸಿದ ದೋಷಾರೋಪಣೆ ಈ ‘ಗ್ರ್ಯಾಂಡ್ ಓಲ್ಡ್ ಪಾರ್ಟಿಯ ನಾಯಕರ ಮೇಲೆ ಬಂದಿತು, ಇದರಲ್ಲಿಯೇ ಎಲ್ಲವೂ ಅಡಗಿದೆ. ಅಂದರೆ ಭಾರತ ಜೋಡೊ ಯಾತ್ರೆಯಿಂದ ಏನು ಸಾಧಿಸಿದಿರಿ ?

ಎಂಬುದನ್ನು ಕಾಂಗ್ರೆಸ್ ಗಣನೆಗೆ ತೆಗೆದುಕೊಳ್ಳುವುದೇ ? ಈ ಯಾತ್ರೆಯ ಮಾಧ್ಯಮದಿಂದ ರಾಹುಲ ಇವರು ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡಲು ಏನು ಮಾಡಿದರು ?

ಪಂಜಾಬ್‌ನಲ್ಲಿ ಖಲಿಸ್ತಾನವಾದವನ್ನು ಕೊನೆಗೊಳಿಸಿದ ನಂತರ ಅನೇಕ ರಾಜ್ಯಗಳಲ್ಲಿ ಹಬ್ಬಿದ ನಕ್ಸಲ್‌ವಾದವನ್ನು ನಿಯಂತ್ರಿಸಲು ಏನು ಮಾಡಿದರು ? ಇದರ ಉತ್ತರಗಳನ್ನು ರಾಹುಲ ಇವರು ಎಂದಿಗೂ ನೀಡಿಲ್ಲ. ಇದೆನ್ನೆಲ್ಲ ಬಿಟ್ಟು ರಾಹುಲ ಗಾಂಧಿಯವರು ಭಾರತದ ಶತ್ರುರಾಷ್ಟ್ರವಾಗಿರುವ ಬ್ರಿಟನ್‌ಗೆ ತಲುಪಿ ಅಲ್ಲಿ ಅವರು ಮತ್ತೊಮ್ಮೆ ತಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡಿದರು. ತಲೆಬುಡವಿಲ್ಲದ, ನಿರಾಧಾರ ಮತ್ತು ಹಾಸ್ಯಾಸ್ಪದ ಹೇಳಿಕೆಗಳು, ಹಾಗೆಯೇ ಭಾರತದ ಮೇಲೆ ನಿರಾಧಾರ ದೋಷಾ ರೋಪಣೆಯನ್ನು ಮಾಡಲು ಆರಂಭಿಸಿದರು. ದೇಶದ ಹಿತ ಕ್ಕಾಗಿ ರಾಜಕಾರಣ ಮಾಡುವುದು ಬಲಿಷ್ಠ ಪ್ರಜಾಪ್ರಭುತ್ವದ ದ್ಯೋತಕವಾಗಿದೆ. ವ್ಯಾವಹಾರಿಕ ಮಟ್ಟದ ಭಿನ್ನಾಭಿಪ್ರಾಯ ಗಳನ್ನು ಮನೆಯಲ್ಲಿಯೇ ಪರಿಹರಿಸುವ ಜಾಗತಿಕ ಪದ್ಧತಿ ಯಿರುವಾಗ ಗಾಂಧಿ ಮಹಾಶಯರು ಸಪ್ತಸಮುದ್ರಗಳಾಚೆ ಹೋಗಿ ಭಾರತವನ್ನು ಅವಮಾನಿಸಲು ಶ್ರಮಿಸುತ್ತಿದ್ದಾರೆ. ‘ಬಿಬಿಸಿ, ‘ಹಫಿಂಗ್ಟನ್ ಪೋಸ್ಟ್ ಇವುಗಳಂತಹ ಭಾರತದ್ವೇಷಿ ಪ್ರಸಾರಮಾಧ್ಯಮಗಳು ಗಾಂಧಿಯವರ ಈ ಹೇಳಿಕೆಗಳಿಗೆ ಬೆಲೆ ನೀಡಿ ಅದನ್ನು ಬಿಂಬಿಸುವ ಮೂಲಕ ಭಾರತದ ಅಪಕೀರ್ತಿ ಮಾಡುವ ಅವಕಾಶವನ್ನೂ ಬಿಡಲಿಲ್ಲ. ಇದು ಕಾಂಗ್ರೆಸ್‌ನ ದೊಡ್ಡ ಅಜೆಂಡಾದ ಪ್ರಯತ್ನವಾಗಿದ್ದರೂ ಇದರಿಂದ ಭಾರತ ಅಥವಾ ಪ್ರಧಾನಿ ಮೋದಿಯವರ ಅವಮಾನವಾಗದೇ ಸ್ವತಃ ರಾಹುಲ ಗಾಂಧಿಯವರ ಅವಮಾನವೇ ಆಗುತ್ತಿದೆ. ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತದಲ್ಲಿ ಸಮರ್ಥ ವಿರೋಧ ಪಕ್ಷ ನಾಯಕನಿಲ್ಲ. ಇದರಿಂದಾಗಿ ಭಾರತೀಯ ಪ್ರಜಾಪ್ರಭುತ್ವದ ಅವಮಾನವಾಗುತ್ತಿದೆ, ಇದು ಮಾತ್ರ ನಿಜ !

ವೈಚಾರಿಕ ಗೊಂದಲ !

‘ಚೀನಾದಿಂದ ಭಾರತಕ್ಕಿರುವ ಅಪಾಯದ ಬಗ್ಗೆ ಹೇಳಲು ಭಾರತೀಯ ಸಂಸತ್ತಿನಲ್ಲಿ ರಾಹುಲ ಮಹಾಶಯರನ್ನು ಪ್ರತಿ ಬಂಧಿಸಲಾಗುತ್ತದೆ, ಎಂದು ಒಂದೆಡೆ ಆರೋಪಿಸಿ ಅದೇ ಮತ್ತೊಂದೆಡೆ ಆ ಚೀನಾವನ್ನೇ ‘ಅಸ್ಪಾಯರಿಂಗ್ ಸುಪರ್‌ಪವರ್ (ಮಹಾತ್ವಾಕಾಂಕ್ಷಿ ಬಲಿಷ್ಠರಾಷ್ಟ್ರ) ಎಂದು ಹೊಗಳುವುದು ವೈಚಾರಿಕ ಗೊಂದಲವಲ್ಲದೇ, ಮತ್ತೇನು ? ಒಟ್ಟು ೫ ತಿಂಗಳು ನಡೆಸಲಾದ ‘ಭಾರತ ಜೊಡೊ ಯಾತ್ರೆಯನ್ನು ಭಾರತದಲ್ಲಿಯೇ ನಿರ್ವಿಘ್ನವಾಗಿ ನಡೆಸಿರುವಾಗ ಗಾಂಧಿಯವರ ಈ ದೇಶವಿರೋಧಿ ಹೇಳಿಕೆ ಸಿಂಬಳಬುರುಕನಿಗೂ ನಗೆ ತರಿಸುವುದು. ಗಾಂಧಿ ಇವರು ಬ್ರಿಟನ್‌ನ ಪ್ರವಾಸದಲ್ಲಿ ರಾ.ಸ್ವ. ಸಂಘದ ವಿರುದ್ಧ ಎಂದಿನಂತೆ ದ್ವೇಷ ವ್ಯಕ್ತಪಡಿಸುತ್ತಾ ಅದನ್ನು ‘ಮೂಲಭೂತವಾದಿ ಮತ್ತು ‘ಫ್ಯಸಿಸ್ಟ್ ಎಂದು ಹೇಳುತ್ತಾ ಇಜಿಪ್ತ್‌ನ ‘ಮುಸ್ಲಿಂ ಬ್ರದರಹುಡ್ ಈ ಮೂಲಭೂತ ಇಸ್ಲಾಮಿ ಸಂಘಟನೆಯೊಂದಿಗೆ ಅದರ ತುಲನೆ ಮಾಡಿದರು. ‘ಸೋನಿಯಾ ಗಾಂಧಿ ಇವರು ತಮ್ಮ ಮಗನನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಎಂಬ ಭಾಜಪದ ಪ್ರತಿಕ್ರಿಯೆಯಲ್ಲಿಯೇ ಎಲ್ಲವೂ ಬರುತ್ತದೆ.

ಸಾವರಕರ ಮತ್ತು ಗಾಂಧಿ !

ರಾಹುಲ ಗಾಂಧಿ ಇವರು ಬ್ರಿಟನ್‌ಗೆ ಹೋಗಿ ಮಾಡಿದ ದೇಶವಿರೋಧಿ ಹೇಳಿಕೆಯ ಈ ಸಂದರ್ಭದಲ್ಲಿ ೧೯೦೬ ರಲ್ಲಿ ಭಾರತವು ಪಾರತಂತ್ರ್ಯದಲ್ಲಿರುವಾಗ ಸ್ವಾತಂತ್ರ್ಯವೀರ ಸಾವರಕರ ಇವರು ಬ್ರಿಟನ್ ತಲುಪಿ ಅಲ್ಲಿ ತೋರಿದ ಅವರ ಸಾಮರ್ಥ್ಯದ ನೆನಪಾಗುತ್ತದೆ. ಅವರು ಶತ್ರುರಾಷ್ಟ್ರದ ಭದ್ರಕೋಟೆಯಿಂದಲೇ ಶತ್ರುಗಳ ವಿರುದ್ಧ ಕ್ರಾಂತಿಕಾರಿ ಯೋಜನೆಯನ್ನು ರಚಿಸಿ ಸ್ವಾತಂತ್ರ್ಯಸಮರಕ್ಕೆ ದೂರಗಾಮಿ ದಿಶೆಯನ್ನು ನೀಡಿದರು. ಜರ್ಮನಿಯ ಸ್ಟುಟಗಾರ್ಟ್‌ಗೆ ಮೇಡಮ್ ಕಾಮಾ ಇವರನ್ನು ಕಳುಹಿಸುವ ಮೂಲಕ ಸಾವರಕರ ಇವರು ಬ್ರಿಟನ್‌ನಲ್ಲಿದ್ದುಕೊಂಡೇ ಭಾರತದಲ್ಲಿನ ಬ್ರಿಟಿಷರ ದಬ್ಬಾಳಿಕೆಯನ್ನು ಜಾಗತಿಕ ಮಟ್ಟಕ್ಕೆ ತರುವ ಮಹತ್ವದ ಕೆಲಸವನ್ನು ಮಾಡಿದರು. ಈ ಹಿನ್ನೆಲೆಯಲ್ಲಿ ರಾಹುಲ ಗಾಂಧಿಯವರ ಅರ್ಹತೆ ಏನು ? ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆ ಇಲ್ಲ. ಸಾವರಕರ ಇರನ್ನು ‘ಮಾಫಿವೀರ ಎಂದು ಸಂಬೋಧಿಸಿ ಹೀಯಾಳಿಸುವ ಮತ್ತು ಅವರ ರಾಷ್ಟ್ರನಿಷ್ಠೆಯನ್ನು ಯಾವಾಗಲೂ ಪ್ರಶ್ನಿಸುವ ರಾಹುಲ ಗಾಂಧಿಯವರನ್ನು ನಿಜವಾಗಿಯೂ ಈ ಪ್ರಸಂಗದಲ್ಲಿ ದೇಶದ್ರೋಹಿ ಎಂದು ಏಕೆ ಕರೆಯಬಾರದು ? ಎಂದು ಯಾರಾದರೂ ಕೇಳಿದರೆ, ಅದರಲ್ಲಿ ತಪ್ಪೇನಿದೆ ?