Beef Consumption Banned Assam: ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂನ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ !

ಗೌಹತಿ (ಅಸ್ಸಾಂ) – ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಅಸ್ಸಾಂ ಸಚಿವ ಸಂಪುಟವು ರಾಜ್ಯದಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ನಿಷೇಧಿಸುವ ನಿರ್ಣಯ ತೆಗೆದುಕೊಂಡಿದೆ. ಗೋಮಾಂಸ ನಿಷೇಧದ ನಿರ್ಧಾರದ ನಂತರ ಅಸ್ಸಾಂನ ಸಚಿವ ಪಿಯೂಷ್ ಹಜಾರಿಕಾ ಅವರು ಮಾತನಾಡಿ, ‘ಗೋಮಾಂಸ ನಿಷೇಧವನ್ನು ಸ್ವಾಗತಿಸಲಿ ಅಥವಾ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ’ ಎಂದು ಅಸ್ಸಾಂನಲ್ಲಿರುವ ಕಾಂಗ್ರೆಸ್‌ಗೆ ನಾನು ಆಹ್ವಾನ ನೀಡುತ್ತೇನೆ ಎಂದು ಹೇಳಿದ್ದಾರೆ.(ಗೋಮಾಂಸದ ಮೇಲೆ ನಿಷೇಧ ಹೇರುವ ನಿರ್ಧಾರ ತೆಗೆದುಕೊಂಡಿರುವ ಅಸ್ಸಾಂನ ಸಚಿವ ಸಂಪುಟಕ್ಕೆ ಅಭಿನಂದನೆಗಳು ! – ಸಂಪಾದಕರು)

1. ಅಸ್ಸಾಂನ ಕಾಂಗ್ರೆಸ್ಸಿನ ಸಂಸದ ರಕೀಬುಲ್ ಹುಸೇನ್ ಅವರು ಭಾಜಪ ಮೇಲೆ ನಾಗಾಂವ್ ಜಿಲ್ಲೆಯ ಸಮ್ಗುರಿ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರನ್ನು ಆಕರ್ಷಿಸಲು ‘ಗೋಮಾಂಸ ಪಾರ್ಟಿ’ ಆಯೋಜಿಸಿದೆ ಎಂದು ಆರೋಪಿಸಿದ್ದರು.

2. ಹುಸೇನ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸರಮಾ ಹೇಳಿದ್ದರು. ಅವರು ಮಾತನಾಡಿ, ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಗೋಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸುವೆವು. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಎಲ್ಲರೂ ಗೋಮಾಂಸ ತಿನ್ನುವುದನ್ನು ಬಿಡಬೇಕು. ಇದರಿಂದ ಎಲ್ಲಾ ಸಮಸ್ಯೆಗಳು ಪರಿಹಾರ ಆಗುವುದು ಎಂದು ಹೇಳಿದರು.