ಹೌದು, ನಾವು (ಕಾಂಗ್ರೆಸ್ಸಿಗರು) ಅಲ್ಪಸಂಖ್ಯಾತರ ಪರ ಇದ್ದೇವೆ ! – ಗೃಹ ಸಚಿವ ಜಿ. ಪರಮೇಶ್ವರ್

ಹಾಸನ – ಹೌದು, ನಾವು ಅಲ್ಪಸಂಖ್ಯಾತರ ಪರ ಇದ್ದೇವೆ, ಅದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಇವರು ಕಾಂಗ್ರೆಸ್ ನ ಒಂದು ಸಭೆಯಲ್ಲಿ ಹೇಳಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
‘ವಕ್ಫ್’ಗಾಗಿ ಸಾವಿರಾರು ಕೋಟಿ ರೂಪಾಯಿಗಳ ಭೂಮಿಯನ್ನು ಭಾಜಪ ಅಧಿಕಾರಾವಧಿಯಲ್ಲಿ ನೋಟಿಫೈ ಮಾಡಲಾಗಿತ್ತು; ಆದರೆ ಈಗ ರೈತರ ಭೂಮಿಯನ್ನು ಕಾಂಗ್ರೆಸ್ ಕಿತ್ತುಕೊಂಡಿದೆ ಎಂದು ಆರೋಪಿಸುತ್ತಿದ್ದಾರೆ’ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು. ಅಲ್ಪಸಂಖ್ಯಾತರೂ ಈ ದೇಶದಲ್ಲಿ ಹುಟ್ಟಿ, ಬೆಳೆದು ಸಾಯುತ್ತಾರೆ. ಅವರಿಗೂ ಈ ದೇಶದ ಮೇಲೆ ಹಕ್ಕಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. (‘ಭಾರತದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು’ ಎಂದು ಹೇಳುವ ಕಾಂಗ್ರೆಸ್ಸಿಗರಿಂದ ಇನ್ನೇನು ನಿರೀಕ್ಷಿಸಬಹುದು ? – ಸಂಪಾದಕರು)