ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರ ಆಸನದ ಕೆಳಗೆ ನೋಟುಗಳ ಕಂತೆ ಪತ್ತೆ

ಸಭಾಂಗಣದಲ್ಲಿ ವಿರೋಧ ಪಕ್ಷಗಳಿಂದ ಗದ್ದಲ

ನವ ದೆಹಲಿ – ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 5ರಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಭಿಷೇಕ ಮನು ಸಿಂಘ್ವಿ ಅವರ ಆಸನದಲ್ಲಿ ನೋಟುಗಳ ಕಂತೆ ಕಂಡುಬಂದಿದೆಯೆಂದು ಸಭಾಪತಿ ಜಗದೀಪ್ ಧನಖಡ ಡಿಸೆಂಬರ್ 6 ರಂದು ಮಾಹಿತಿ ನೀಡಿದರು. ಈ ಮಾಹಿತಿಯನ್ನು ಭದ್ರತಾ ಅಧಿಕಾರಿಗಳು ನೀಡಿದರೆಂದು ಧನಖಡ ಹೇಳಿದರು. ‘ಈ ಪ್ರಕರಣದ ತನಿಖೆ ನಿಯಮಾನುಸಾರ ನಡೆಯಬೇಕು ಮತ್ತು ಅದು ನಡೆಯುತ್ತಿದೆ’ ಎಂದೂ ಧನಖಡ ಹೇಳಿದರು. ಅದರ ನಂತರ ಸಭಾಂಗಣದಲ್ಲಿ ಗದ್ದಲವಾಯಿತು. ಆರೋಪಗಳ ಕುರಿತು ಸಿಂಘ್ವಿ ಮಾತನಾಡಿ, ‘ನಾನು ರಾಜ್ಯಸಭೆಗೆ ಹೋಗುವಾಗ ನನ್ನ ಬಳಿ ಕೇವಲ 500 ರೂಪಾಯಿ ನೋಟು ಮಾತ್ರ ಇರುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ತನಿಖೆ ಪೂರ್ಣಗೊಳ್ಳುವ ವರೆಗೆ ಮತ್ತು ಘಟನೆಯ ಸತ್ಯತೆ ಹೊರಗೆ ಬರುವವರೆಗೆ ಯಾವುದೇ ಸದಸ್ಯರ ಹೆಸರನ್ನು ತೆಗೆದುಕೊಳ್ಳಬಾರದು.’ ಎಂದು ನಾನು ವಿನಂತಿ ಮಾಡುತ್ತೇನೆ. ಇಂತಹ ಕೆಸರೆರಚಾಟ ನಡೆಸಿ ದೇಶವನ್ನು ಅಗೌರವಿಸಲಾಗುತ್ತಿದೆಯೆಂದು ಹೇಳಿದರು.

ಗದ್ದಲದ ಕಾರಣದಿಂದಾಗಿ ಲೋಕಸಭೆಯ ಕಾರ್ಯಕಲಾಪ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು

ಲೋಕಸಭೆಯ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರಿಂದ ಘೋಷಣೆಗಳು ಪ್ರಾರಂಭವಾದವು. ಇದಕ್ಕೆ ಅಧ್ಯಕ್ಷ ಓಂ ಬಿರ್ಲಾ ಮಾತನಾಡಿ, `ನೀವು ಲೋಕಸಭೆಯ ಕಲಾಪ ಮಾಡಲು ಇಚ್ಛಿಸುವುದಿಲ್ಲವೇ? ಪ್ರಶ್ನೋತ್ತರ ಅವಧಿಯನ್ನು ಮುಂದುವರಿಸಲು ಇಚ್ಛಿಸುವುದಿಲ್ಲವೇ?’ ಎಂದು ಕೇಳಿದನಂತರ ವಿರೋಧ ಪಕ್ಷದ ಸದಸ್ಯರು ವಾದ ನಡೆಸಿದರು. ಇದರಿಂದ ಬಿರ್ಲಾ ಅವರು ಸಭಾಗೃಹದ ಕಲಾಪವನ್ನು ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದರು. (ಇಂತಹವರಿಂದ ಸಭಾಗೃಹ ನಡೆಸಲು ಆಗುವ ವೆಚ್ಚವನ್ನು ಯಾವಾಗ ವಸೂಲಿ ಮಾಡುವಿರೋ ಅಥವಾ ವರ್ಷಗಟ್ಟಲೆ ಹೀಗೆಯೇ ಮುಂದುವರಿಸುವಿರೋ ? ಪ್ರಜಾಪ್ರಭುತ್ವವನ್ನು ರಕ್ಷಿಸುವ ತಥಾಕಥಿತ ಹೇಳಿಕೆ ನೀಡುವವರು ಈ ರೀತಿಯಲ್ಲಿ ಪ್ರತಿದಿನ ಅವಹೇಳನ ಮಾಡುತ್ತಿರುವಾಗ ಅವರಿಗೆ ಯಾವುದೇ ರೀತಿಯ ಶಿಕ್ಷೆಯಾಗದೇ ಇರುವುದು ಜನತೆ ಅಪೇಕ್ಷಿತವಿಲ್ಲ ! – ಸಂಪಾದಕರು)