ಮುಹಮ್ಮದ್ ಬಿನ್ ಖಾಸಿಂನ ದಾಳಿಯ ಮೊದಲು ದೇವಾಲಯಗಳ ಸ್ಥಿತಿಯನ್ನು ಪುನಃಸ್ಥಾಪಿಸಬೇಕು ! – ನ್ಯಾಯವಾದಿ ವಿಷ್ಣು ಶಂಕರ ಜೈನ

ನ್ಯಾಯವಾದಿ ವಿಷ್ಣು ಶಂಕರ ಜೈನ ಅವರ ಪೂಜಾ ಸ್ಥಳ (ಪ್ಲೇಸಸ್ ಆಫ್ ವರ್ಶಿಪ್) 1991 ಕಾನೂನಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ನ್ಯಾಯವಾದಿ ವಿಷ್ಣು ಶಂಕರ ಜೈನ್

ನವ ದೆಹಲಿ – 1991ರ ಪೂಜಾ ಸ್ಥಳ (ಪ್ಲೇಸಸ್ ಆಫ್ ವರ್ಶಿಪ್) ಕಾನೂನಿನ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು ಈ ಕಾನೂನಿನ ಸಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದರು. ಈ ಕಾನೂನಿನ ಬಗ್ಗೆ ಆಕ್ಷೇಪಿಸುತ್ತಾ, ‘ಈ ಕಾನೂನಿನಲ್ಲಿ ಆಗಸ್ಟ್ 15, 1947 ರನ್ನು “ಕಟ್ ಆಫ್ ಡೇಟ್ ” ಎಂದು ನಿರ್ಧರಿಸಲಾಗಿದೆ. ಇದು ಅಸಂವೈಧಾನಿಕವಾಗಿದೆ. ಈ ಕಟ್ ಆಫ್ ಡೇಟ 712 ಇರಬೇಕಾಗಿತ್ತು. ಏಕೆಂದರೆ ಆ ವರ್ಷ ಮಹಮ್ಮದ ಬಿನ್ ಕಾಸಿಂ ಭಾರತದ ಮೇಲೆ ದಾಳಿ ನಡೆಸಿ ಇಲ್ಲಿಯ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದ,’ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಕಾನೂನಿನ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಒಟ್ಟು 6 ಅರ್ಜಿಗಳನ್ನು ದಾಖಲಿಸಲಾಗಿದೆ. ಈ ಕುರಿತು ಒಟ್ಟಿಗೆ ವಿಚಾರಣೆ ಮಾಡಲಾಗುತ್ತಿದೆ.

ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು ಮಾತುಮುಂದುವರೆಸಿ,

1. ನಾವು ಪೂಜಾ ಸ್ಥಳ ಕಾನೂನಿನ 1991ರ ಸಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ. ನಾವು, ಜಮಿಯತ್-ಉಲ್-ಉಲಮಾ-ಎ-ಹಿಂದ್ ನೀಡಿದ ಈ ಕಾನೂನಿನ ಅರ್ಥ ಏನೆಂದರೆ, ಈ ಕಾನೂನಿನ ಪ್ರಕಾರ ವಿವಾದಿತ ಸ್ಥಳಗಳ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ನ್ಯಾಯಾಲಯದಲ್ಲಿ ಕುರಿತು ಯಾವುದೇ ಸನ್ನಿವೇಶದಲ್ಲಿ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ಶ್ರೀರಾಮಮಂದಿರ ಹೊರತು ಪಡಿಸಿ, ಇತರ ಪ್ರಕರಣಗಳನ್ನು ದಾಖಲಿಸುವುದು ಸಂವಿಧಾನ ವಿರೋಧಿ ಆಗಿದೆ.

2. ಜನರಿಗೆ ನ್ಯಾಯಾಲಯಕ್ಕೆ ಹೋಗುವ ಅಧಿಕಾರವನ್ನು ಕಸಿದುಕೊಳ್ಳುವ ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ. ಈ ಕಾನೂನು ಸಂವಿಧಾನದ ಮೂಲಭೂತ ರಚನೆ ಮತ್ತು ಕಲಂ 14, 15, 19, 21 ಅನ್ನು ಉಲ್ಲಂಘಿಸುತ್ತದೆ.

ಏನಿದು ಕಾನೂನು ?

1991 ರಲ್ಲಿ ಆಗಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ ಅವರ ಕಾಂಗ್ರೆಸ್ ಸರಕಾರ ಈ ಕಾನೂನು ತಂದಿತ್ತು. ಈ ಕಾನೂನಿನ ಪ್ರಕಾರ, ಆಗಸ್ಟ್ 15, 1947 ರಂದು ದೇಶದಲ್ಲಿನ ಧಾರ್ಮಿಕ ಸ್ಥಳಗಳು ಯಾವ ಸ್ಥಿತಿಯಿದೆಯೋ, ಅದೇ ಸ್ಥಿತಿಯನ್ನು ಹಾಗೆಯೇ ಉಳಿಸಲಾಯಿತು. ಇದು ಕೇವಲ ಆಯೋಧ್ಯೆಯ ಶ್ರೀರಾಮಮಂದಿರದ ಪ್ರಕರಣ ಅಪವಾದವಾಗಿದೆ. ಈ ಕಾನೂನಿನ ಪ್ರಕಾರ, ಯಾವುದೇ ಧರ್ಮದ ಪ್ರಾರ್ಥನಾ ಸ್ಥಳವನ್ನು ಪರಿವರ್ತಿಸುವುದನ್ನು ತಡೆಯಲಾಗುತ್ತದೆ. ಯಾರಾದರೂ ಈ ಕೆಲಸ ಮಾಡಿದರೆ, ಅವರಿಗೆ 3 ವರ್ಷಗಳ ತನಕ ಶಿಕ್ಷೆ ನೀಡಬಹುದು. ಈ ಕಾನೂನು ಹಿಂದೂ, ಜೈನ್, ಸಿಖ್ ಮತ್ತು ಬೌದ್ಧ ಧರ್ಮದ ಜನರನ್ನು ಅವರ ಸಂವಿಧಾನಿಕ ಹಕ್ಕುಗಳಿಂದ ವಂಚಿತಗೊಳಿಸುತ್ತದೆ.

900 ದೇವಸ್ಥಾನಗಳಿಗೆ ಲಾಭ!

ನ್ಯಾಯವಾದಿ ಜೈನ್ ಅವರ ಹೇಳಿಕೆಯ ಪ್ರಕಾರ, ದೇಶದಲ್ಲಿ, ಅವು 1192 ರಿಂದ 1947 ರ ಅವಧಿಯಲ್ಲಿ 900 ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಆ ಭೂಮಿಯನ್ನು ವಶಕ್ಕೆ ಪಡೆದು ಮಸೀದಿ ಅಥವಾ ಚರ್ಚ್‌ಗಳಾಗಿ ಪರಿವರ್ತಿಸಲಾಗಿದೆ. ಇದರಲ್ಲಿ 100 ದೇವಸ್ಥಾನಗಳು ನಮ್ಮ 18 ಮಹಾಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ಈ ಕಾನೂನು ರದ್ದುಮಾಡಿದರೆ ಅಥವಾ ಅದರ ದಿನಾಂಕವನ್ನು ಬದಲಾಯಿಸಿದರೆ, ಈ 900 ದೇವಸ್ಥಾನಗಳನ್ನು ಕಂಡುಹಿಡಿಯುವ ಅವಕಾಶ ದೊರೆಯಲಿದೆ.

ಸಂಪಾದಕೀಯ ನಿಲುವು

ಪೂಜಾ ಸ್ಥಳ ಕಾನೂನು ಸಂಸತ್ತಿನ ಸಭೆಯಲ್ಲಿ ಆಗಿನ ಕಾಂಗ್ರೆಸ್ ಸರಕಾರ ಅಂಗೀಕರಿಸಿದೆ. ಅದನ್ನು ಸಂಸತ್ತಿನ ಮೂಲಕ ರದ್ದುಗೊಳಿಸುವ ಆವಶ್ಯಕತೆಯಿದೆ. ಅದಕ್ಕಾಗಿ ಹಿಂದೂಗಳು ನ್ಯಾಯಾಲಯದ ಕದತಟ್ಟಬಾರದು ಅದಕ್ಕಾಗಿ ಕೇಂದ್ರ ಸರಕಾರ ತೀರ್ಮಾನವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಹಿಂದೂಗಳು ಸಂಘಟಿತರಾಗಿ ಇದಕ್ಕಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸಿ ಒತ್ತಡ ನಿರ್ಮಾಣ ಮಾಡುವುದು ಆವಶ್ಯಕವಾಗಿದೆ !